ಮರಳು-ಮದ್ಯಪಾನ ಮಾಫಿಯಾ ವರದಿ ಮಾಡಿದಕ್ಕೆ ಪತ್ರಕರ್ತನ ಕೊಲೆ

ಪಾಟ್ನ: ಬೇಗುಸರಾಯ್ ಜಿಲ್ಲೆಯ ಬಕ್ರಿ ಠಾಣೆ ವ್ಯಾಪ್ತಿಗೆ ಬರುವ ಸಖೋ ಗ್ರಾಮದಲ್ಲಿ ಪತ್ರಕರ್ತ ಸುಭಾಷ್‌ ಕುಮಾರ್‌ ಮಹ್ತೊ ನನ್ನು ಗುಂಡಿಕ್ಕಿ ಕೊಲ್ಲ‌ಲಾಗಿದೆ.  ಗೆಳೆಯನ ವಿವಾಹ ಕಾರ್ಯಕ್ರಮ ಮುಗಿಸಿಕೊಂಡು ತಂದೆ ಹಾಗೂ ಸಂಭಂಧಿಕರೊಡನೆ ಬರುವ ವೇಳೆ ದಾಳಿಕೋರರು ತಲೆಗೆ ಗುಂಡು ಹಾರಿಸಿ ಕೊಂದಿದ್ದಾರೆ.

ಪತ್ರಕರ್ತನ ತಂದೆ ಮತ್ತು ಸಂಬಧಿಕರು ಮುಂದೆ ಚಲಿಸುತ್ತಿದ್ದರು, ಈ ಸಂದರ್ಭದಲ್ಲಿ ದಾಳಿಕೋರರು ಸುಲಭವಾಗಿ ತಲೆಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಮೃತ ಪತ್ರಕರ್ತನ ಗೆಳೆಯ ಪತ್ರಕರ್ತ ಅಮಿತ್ ಪೊದ್ದಾರ್ ತಿಳಿಸಿದರು.

ಸುಭಾಷ್‌ ಕುಮಾರ್‌ ಮಹ್ತೊ(26) 4 ವರ್ಷಗಳಿಂದ ಹಿಂದಿ ಭಾಷೆಯ ವರದಿಗಾರ ಮತ್ತು ಕೆಲವು ಸ್ಥಳೀಯ ಹಿಂದಿ ಪತ್ರಿಕೆಗಳಲ್ಲಿ ಸ್ಟ್ರಿಂಜರ್ ಆಗಿ ಕೆಲಸ ಮಾಡಿದರು. ಅವರು ಪ್ರಸ್ತುತ ಸಾರ್ವಜನಿಕ ಅಪ್ಲಿಕೇಶನ್ ಪ್ಲಾಟ್‌ಫಾರ್ಮ್ ಜೊತೆಗೆ ಬೇಗುಸರಾಯ್‌ನ ಸ್ಥಳೀಯ ಕೇಬಲ್ ಚಾನೆಲ್ ಸಿಟಿ ನ್ಯೂಸ್‌ನಲ್ಲಿ ಮುಖ್ಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಸುಭಾಷ್‌ ಕುಮಾರ್‌ ಮಹ್ತೋ ಮದ್ಯಪಾನದ ಮಾಫಿಯಾ ಮತ್ತು ಮರಳು ಮಾಫಿಯಾ ಕುರಿತು ಸುದ್ದಿ ಮಾಡಿದ್ದಾರು. ಇವೆಲ್ಲವು ದಾಳಿಕೋರರು ಕೊಲೆ ಮಾಡಲು ಕಾರಣ ಎಂದು ರಾಷ್ಟ್ರೀಯ ವಾಹಿನಿ ಮತ್ತು ಬೇಗುಸರಾಯ್‌ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮಾಹಿತಿ ನೀಡಿದರು.

ಸೌರಭ್ ಎಂಬುವವರು, “ನಾನು ಅವನನ್ನು ಹತ್ತಿರದಿಂದ ತಿಳಿದಿದ್ದೇನೆ. ತನ್ನ ವೃತ್ತಿಯ ಬಗ್ಗೆ ಕಟ್ಟುನಿಟ್ಟಾಗಿ ಪ್ರಾಮಾಣಿಕರಾಗಿದ್ದನು. ಇದರಿಂದಾಗಿ ಜನರು ಅವನ ಕೆಲಸಗಳ ಬಗ್ಗೆ ಆಸಕ್ತಿಯನ್ನು ವಹಿಸಿದ್ದರು.

ಕೊಲೆ ಪ್ರಕರಣದಲ್ಲಿ ನಾಲ್ಕೈದು ಮಂದಿ ಭಾಗಿಯಾಗಿರುವ ಬಗ್ಗೆ ಪೊಲೀಸರ ಮೂಲಕ ಮಾಹಿತಿ ಸಿಕ್ಕಿದೆ. ಕೊಲೆಗೆ ಪ್ರಮುಖನಾದ ವ್ಯಕ್ತಿ ಈಗಾಗಲೇ ಇತರೆ ಪ್ರಕರಣಗಳಲ್ಲಿಯೂ ಆರೋಪಿತನಾಗಿದ್ದಾನೆ. ಸುಭಾಷ್‌ ಕುಮಾರ್‌ ಮಹ್ತೊನ ವರದಿಗಳಿಂದ ಕೋಪಗೊಂಡ ಕೆಲವು ಮಂದಿ ದಾಳಿಕೋರರನ್ನು ನೇಮಿಸಿಕೊಂಡು ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.

ಸುಭಾಷ್‌ ಕುಮಾರ್‌ ಮಹ್ತೊ ಕೊಲೆಯಾದ ನಂತರ, ಸ್ಥಳೀಯ ಪತ್ರಕರ್ತರು ಬೇಗುಸರಾಯ್ ಎಸ್‌ಪಿ ಯೋಗೇಂದ್ರ ಕುಮಾರ್ ಅವರನ್ನು ಭೇಟಿ ಮಾಡಿ, ಮೂರು ಬೇಡಿಕೆಗಳನ್ನು ಮಂಡಿಸಿದರು. ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು. ಅಪರಾಧಿಗಳ ಬಂಧನ ಮತ್ತು ತ್ವರಿತ ವಿಚಾರಣೆ ಮಾಡಬೇಕು ಹಾಗೂ ಮಹ್ತೊ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಮನವಿ ಸಲ್ಲಿಸಿದ್ದಾರೆ.

ಕೊಲೆಗೆ ಕಾರಣವಾದ ಪ್ರಕರಣಗಳು

ಮದುವೆ ಸಮಯವೊಂದರಲ್ಲಿ ನೃತ್ಯ ಮಾಡುತ್ತಿದ್ದ ವೇಳೆ ಪಕ್ಕದಲ್ಲೆ ಇದ್ದ, ಕೆಲವು ಯುವಕರು, ಸ್ಥಳೀಯ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದರು. ಸುಭಾಷ್‌ ಕುಮಾರ್‌ ಮಹ್ತೋ ಇದನ್ನು ವಿರೋಧಿಸಿದ್ದ. ಆದರೂ ಸಹ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವುದನ್ನು ಅವರು ನಿಲ್ಲಿಸಲಿಲ್ಲ. ಸುಭಾಷ್‌ ಕುಮಾರ್‌ ಮಹ್ತೊ ಯುವಕರ ಅಸಭ್ಯ ವರ್ತನೆಗಳ ಬಗ್ಗೆ ವೀಡಿಯೊ ಮಾಡಿಕೊಳ್ಳಲು ಮುಂದಾದರು. ಗುಂಪಿನಲ್ಲೊಬ್ಬರು ಇದನ್ನು ನೋಡಿ ಏನು ಮಾಡುತ್ತೀರಿ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಹ್ತೊ ಅದನ್ನು ಡಿಎಸ್‌ಪಿಗೆ ಕಳುಹಿಸುವುದಾಗಿ ತಿಳಿಸಿದರು. ನಂತರ ಗುಂಪು ಸ್ಥಳದಿಂದ ತೆರಳಿತು. ಎಂದು ಪೊಲೀಸ್‌ ಅಧಿಕಾರಿಗಳ ವಾದವಾಗಿದೆ. ಆದರೆ, ಮದ್ಯದ ಮಾಫಿಯಾ ಮತ್ತು ಪಂಚಾಯತಿ ಚುನಾವಣೆಗಳ ಕುರಿತು ಮಾಡಿದ ವರದಿಯ ಪಾತ್ರವನ್ನು ಪೊಲೀಸರು ತಳ್ಳಿಹಾಕಿದ್ದಾರೆ ಎನ್ನಲಾಗಿದೆ.

ಭಾರತದಲ್ಲಿ ಇತ್ತೀಚೆಗೆ ಪತ್ರಕರ್ತರ ಮೇಲಿನ‌ ದಾಳಿಗಳು ಹೆಚ್ಚಾಗುತ್ತಿವೆ. ಪತ್ರಕರ್ತರ ಸ್ವಾತಂತ್ರ್ಯವನ್ನು‌ ಹರಣ ಮಾಡಲಾಗುತ್ತಿದೆ. ಪತ್ರಕರ್ತರನ್ನು ರಕ್ಷಿಸುವ ಕೆಲಸ ಆಗಬೇಕು ಎಂದು ಹಲವು ಪತ್ರಕರ್ತರು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *