ನವದೆಹಲಿ: ಹಿಂದಿಯನ್ನು ಹೇರುವ ನಿಮ್ಮ ನೀಚ ಬುದ್ದಿ ಈ ದೇಶವನ್ನು ಹಾಳು ಮಾಡಲಿದೆ. ಐಐಟಿಯಲ್ಲಿ ಪರೀಕ್ಷೆಗಳನ್ನು ಹಿಂದಿಯಲ್ಲಿ ಬರೆಯಬೇಕಾಗಿದ್ದಲ್ಲಿ ಇಂದು ಸುಂದರ್ ಪಿಚ್ಚೆ ಅವರನ್ನು ಗೂಗಲ್ ಮುಖ್ಯಸ್ಥರಾಗಿ ನೋಡಲು ಸಾಧ್ಯವಾಗುತ್ತಿರಲಿಲ್ಲ. ಎಂದು ಕೈರಾಳಿ ಟಿವಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ತಮ್ಮ ವಿಡಿಯೋ ಸಂದೇಶದೊಂದಿಗೆ ಕನ್ನಡದಲ್ಲಿ ಟ್ವೀಟ್ ಮಾಡಿರುವ ಅವರು, ಹಿಂದಿಯನ್ನು ಹೇರುವ ನಿಮ್ಮ ದುಷ್ಟ ಯತ್ನ ಈ ದೇಶವನ್ನು ಹಾಳುಗೆಡುವಲಿದೆ. ಸುಂದರ್ ಪಿಚೈಯ್ ಹಿಂದಿಯಲ್ಲಿ ಐಐಟಿ ಬರೆಯಬೇಕಾಗಿದ್ದಲ್ಲಿ ಇಂದು ಗೂಗಲ್ ನ ಮುಖ್ಯಸ್ಥರಾಗುತ್ತಿದ್ದರೆ? ಎಂದು ಬರೆದಿದ್ದಾರೆ.
ಇದನ್ನು ಓದಿ: ಪಶ್ಚಿಮ ಬಂಗಾಳದಲ್ಲಿ ಹಿಂದಿ ಹೇರಿಕೆ ವಿರುದ್ಧ ನಡೆದ ಹೋರಾಟದಲ್ಲಿ ‘ಕುವೆಂಪು’
ಅಲ್ಲದೆ, ಈ ಟ್ವೀಟ್ ಅನ್ನು, ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್ ನಾಯಕ ಹೆಚ್ ಡಿ ದೇವೇಗೌಡ, ಹೆಚ್ ಡಿ ಕುಮಾರಸ್ವಾಮಿ, ಚಲನಚಿತ್ರ ರಂಗದವರಾದ ಪುನೀತ್ ರಾಜ್‌ಕುಮಾರ್, ಸುದೀಪ್, ರಿಷಬ್ ಶೆಟ್ಟಿ, ಕೆ ಎಂ ಚೈತನ್ಯ, ಕೆನಡಾ ಪಾರ್ಲಿಮೆಂಟ್ ಸಂಸದ ಕನ್ನಡಗಿ ಚಂದ್ರ ಆರ್ಯ, ಹೋರಾಟಗಾರ ಗಣೇಶ್ ಚೇತನ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಹಿಂದಿಯನ್ನು ಹೇರುವ ನಿಮ್ಮ ದುಷ್ಟ ಯತ್ನ ಈ ದೇಶವನ್ನು ಹಾಳುಗೆಡುವಲಿದೆ.ಸುಂದರ್ ಪಿಚೈಯ್ ಹಿಂದಿಯಲ್ಲಿ ಐಐಟಿ ಬರೆಯಬೇಕಾಗಿದ್ದಲ್ಲಿ ಇಂದು ಗೂಗಲ್ ನ ಮುಖ್ಯಸ್ಥರಾಗುತ್ತಿದ್ದರೆ?@siddaramaiah @PuneethRajkumar @kharge @hd_kumaraswamy @shetty_rishab @H_D_Devegowda @KicchaSudeep @AryaCanada @ganeshchetan @kmchaitanya pic.twitter.com/QXqLHxgy7r
— John Brittas (@JohnBrittas) December 26, 2022
ಇಷ್ಟೇ ಅಲ್ಲದೆ, ತೆಲುಗು ಹಾಗೂ ತಮಿಳಿನಲ್ಲಿಯೂ ಟ್ವೀಟ್ ಮಾಡಿರುವ ಜಾನ್ ಬ್ರಿಟ್ಟಾಸ್ ಅವರು, ಹಿಂದಿ ಹೇರಿಕೆ ವಿರುದ್ಧದ ಸಂಬಂಧಿಸಿದ ತಮ್ಮ ಸಂದೇಶವನ್ನು ಹಂಚಿಕೊಂಡಿದ್ದಾರೆ. ಸಂದೇಶದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಸದನವನ್ನು ಉದ್ದೇಶಿಸಿ ಮಾತನಾಡಿರುವ ಜಾನ್ ಬ್ರಿಟ್ಟಾಸ್, ಗೌರವಾನ್ವಿತ ಪ್ರಧಾನಿಯವರು ನನ್ನ ಮಾತನ್ನು ಕೇಳುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಹಿಂದಿಯನ್ನು ದೇಶದ ಏಕೈಕ ರಾಷ್ಟ್ರೀಯ ಭಾಷೆಯಾಗಿ ಉನ್ನತೀಕರಿಸಲು ವಿನಾಶಕಾರಿ ಮತ್ತು ಕೆಟ್ಟ ಯೋಜನೆಗಳು, ಒತ್ತಾಯ ಪೂರ್ವಕವಾಗಿ ಮತ್ತು ರಹಸ್ಯ ಪ್ರಯತ್ನಗಳ ಮೂಲಕ ಹಿಂದೆಂದಿಗಿಂತಲೂ ಪ್ರಬಲವಾಗಿವೆ ಅಳವಡಿಸಲಾಗುತ್ತಿದೆ ಎಂದಿದ್ದಾರೆ.
ಇದನ್ನು ಓದಿ: ಹಿಂದಿಯ ಏಕಪಕ್ಷೀಯ ಹೇರಿಕೆ ಅಪಾಯಕಾರಿ-ಅಖಿಲ ಭಾರತ ಕಿಸಾನ್ ಸಭಾ
ʻʻಸರ್, ಬೆಂಗಳೂರು, ಚೆನ್ನೈ, ಮಂಗಳೂರು, ಕೇರಳದಂತಹ ದಕ್ಷಿಣ ಭಾರತದಲ್ಲಿ ಉತ್ತರ ಭಾರತದ ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಒಂದು ವೇಳೆ ಉತ್ತರ ಭಾರತದ ವಿದ್ಯಾರ್ಥಿಗಳಿಗೆ ತಮ್ಮ ಪಠ್ಯಕ್ರಮವನ್ನು ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಕಲಿಯಬೇಕೆಂದು ನೀವು ನಿರೀಕ್ಷಿಸುತ್ತೀರಾ? ದಕ್ಷಿಣ ಭಾರತದ ರಾಜ್ಯಗಳೇನಾದರು ಒತ್ತಾಯಿಸಿದರೆ, ಉತ್ತರ ಭಾರತದ ಹೆಚ್ಚಿನ ವಿದ್ಯಾರ್ಥಿಗಳು ಹಿಂತಿರುಗಬೇಕಾಗುತ್ತದೆʼʼ ಎಂದು ಹೇಳಿದ್ದಾರೆ.
ಜಾನ್ ಬ್ರಿಟ್ಟಾಸ್ ಅವರು ಮಾಡಿರುವ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಮಿಳು ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರು, ಕೇರಳ ಕೂಡ ಅದನ್ನೇ ಪ್ರತಿಪಾದಿಸುತ್ತಿದೆ ಅದು ಭಾರತದ ಅರ್ಧದಷ್ಟು ಮಾತನಾಡುತ್ತಿರುವ ಜನರ ಅಭಿಪ್ರಾಯವೂ ಇದೇ ಆಗಿದೆ. ಪೊಂಗಲ್ ಬರುತ್ತಲಿದೆ. ಓಹ್! ಕ್ಷಮಿಸಿ, ನಿಮ್ಮ ತಿಳುವಳಿಕೆಗಾಗಿ ‘ಜಾಗ್ತೇ ರಹೋ’ ಎಂದು ಟ್ವೀಟ್ ಮಾಡಿದ್ದಾರೆ. ಹಿಂದಿ ಹೇರಿಕೆ ವಿರೋಧಿ ಆಂದೋಲನವು ಪೊಂಗಲ್‌ನೊಂದಿಗೆ ಹೊಸ ಹುರುಪು ಪಡೆಯಲಿದೆ ಎಂಬ ಅಂಶವನ್ನು ತಮ್ಮ ಟ್ವೀಟ್‌ನಲ್ಲಿ ವ್ಯಕ್ತಪಡಿಸಿದ್ದಾರೆ.
ಮಾತೃಭಾಷೆ ನಮ್ಮ ಜನ್ಮಸಿದ್ಧ ಹಕ್ಕು. ಇತರ ಭಾಷೆಗಳನ್ನು ಕಲಿಯುವುದು ಮತ್ತು ಬಳಸುವುದು ವೈಯಕ್ತಿಕ ಆಯ್ಕೆ. ಇದು 75 ವರ್ಷಗಳಿಂದ ದಕ್ಷಿಣ ಭಾರತದ ಹಕ್ಕು ಎಂದು ತಿಳಿಸಿರುವ ಕಮಲ್ ಹಾಸನ್, ಈಶಾನ್ಯ ರಾಜ್ಯಗಳೂ ಕೂಡ ಅದೇ ಪ್ರತಿಬಿಂಬಿಸುತ್ತದೆ. ಹಿಂದಿಯನ್ನು ಇತರರ ಮೇಲೆ ಹೇರುವ ಮೂಲಕ ಅದನ್ನು ಅಭಿವೃದ್ಧಿಪಡಿಸುವುದು ಅವೈಜ್ಞಾನಿಕವಾಗಿದ್ದು, ಹೇರಿಕೆಯನ್ನು ವಿರೋಧಿಸಲಾಗುವುದು ಎಂದಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಕೇಂದ್ರ ಶಿಕ್ಷಣ ಸಚಿವಾಲಯ 2020ರಲ್ಲಿ ಪ್ರತಿ ಐಐಟಿ ಮತ್ತು ಎನ್‌ಐಟಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಜೊತೆಗೆ ಪರ್ಯಾಯ ಬೋಧನಾ ಮಾಧ್ಯಮವಾಗಿ ಇರುವ ರಾಜ್ಯದ ಪ್ರಧಾನ ಭಾಷೆಯನ್ನು ಪರಿಚಯಿಸಲು ಶಿಫಾರಸ್ಸು ಮಾಡಿದೆ. ಕಳೆದ ಅಕ್ಟೋಬರ್‌ನಲ್ಲಿ, ಅಧಿಕೃತ ಭಾಷಾ ಸಂಸದೀಯ ಸಮಿತಿ ಇದೇ ಧಾಟಿಯಲ್ಲಿ, ಹಿಂದಿ ಮಾತನಾಡುವ ರಾಜ್ಯಗಳಲ್ಲಿ ನೆಲೆಗೊಂಡಿರುವ ಐಐಟಿಗಳು ಹಿಂದಿಯನ್ನು ಬೋಧನಾ ಮಾಧ್ಯಮವಾಗಿ ಪರಿಚಯಿಸುವಂತೆ ಸೂಚಿಸಿತು.