ನವದೆಹಲಿ: ಏಪ್ರಿಲ್ 25 ಶುಕ್ರವಾರದಂದು ನಡೆದಿದ್ದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (ಜೆಎನ್ಯುಎಸ್ಯು) ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದೂ, ಎಡ ಮೈತ್ರಿಕೂಟ ಪಕ್ಷವು 4 ಉನ್ನತ ಹುದ್ದೆಗಳಲ್ಲಿ 3 ಸ್ಥಾನಗಳನ್ನು ಆಕ್ರಮಿಸುವ ಮೂಲಕ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡರೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ದೊಡ್ಡ ಲಾಭ ಗಳಿಸಿದೆ. ಚುನಾವಣೆ
ನಿತೀಶ್ ಕುಮಾರ್ (ಎಐಎಸ್‌ಎ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮನೀಷಾ (ಡಿಎಸ್‌ಎಫ್) ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಮುಂಟೆಹಾ ಫಾತಿಮಾ (ಡಿಎಸ್‌ಎಫ್) ಎಬಿವಿಪಿ ವೈಭವ್ ಮೀನಾ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಎಬಿವಿಪಿಯು ಒಂದು ಸ್ಥಾನ ಗಳಿಸಿಕೊಂಡಿದ್ದು, 9 ವರ್ಷಗಳ ಬರವನ್ನು ನೀಗಿಸಿಕೊಂಡಿದೆ.
ಇದನ್ನೂ ಓದಿ: ಸಹಾಯಕ ನಿಯಂತ್ರಕ ಹುದ್ದೆಗಳಿಗೆ ಅರ್ಜಿ: ಕಂದಾಯ ಇಲಾಖೆ ಆಹ್ವಾನ
ಜೆಎನ್‌ಯು ವಿದ್ಯಾರ್ಥಿ ಸಂಘದ ಚುನಾವಣಾ ಆಯೋಗ ಸೋಮವಾರ ಫಲಿತಾಂಶ ಪ್ರಕಟಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಐಎಸ್‌ಎನ ನಿತೀಶ್ ಕುಮಾರ್ 1,702 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರ ಹತ್ತಿರದ ಪ್ರತಿಸ್ಪರ್ಧಿ ಎಬಿವಿಪಿಯ ಶಿಖಾ ಸ್ವರಾಜ್ 1,430 ಮತಗಳನ್ನು ಪಡೆದರೆ, ಎಸ್‌ಎಫ್‌ಐ ಬೆಂಬಲಿತ ತಯಾಬ್ಬಾ ಅಹ್ಮದ್ 918 ಮತಗಳನ್ನು ಪಡೆದರು.
ಡಿಎಸ್‌ಎಫ್‌ನ ಮುಂಟೆಹಾ ಫಾತಿಮಾ 1,520 ಮತಗಳನ್ನು ಪಡೆದು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರೆ, ಎಬಿವಿಪಿಯ ಕುನಾಲ್ ರೈ 1,406 ಮತಗಳನ್ನು ಪಡೆದುಕೊಂಡಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಡಿಎಸ್‌ಎಫ್‌ನ ಮನೀಷಾ 1,150 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಎಬಿವಿಪಿಯ ನಿಟ್ಟು ಗೌತಮ್ 1,116 ಮತಗಳನ್ನು, ಸಂತೋಷ್ ಕುಮಾರ್ 740 ಮತ ಪಡೆದುಕೊಂಡಿದ್ದಾರೆ.
ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಬಿವಿಪಿಯ ವೈಭವ್ ಮೀನಾ 1,518 ಮತಗಳನ್ನು ಪಡೆದು ಜಯ ಸಾಧಿಸಿದ್ದರೆ, ಎಐಎಸ್‌ಎನ ನರೇಶ್ ಕುಮಾರ್ 1,433 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಪಿಎಸ್‌ಎನ ನಿಗಮ್ ಕುಮಾರಿ ಕೂಡ 1,256 ಮತಗಳು ಪಡೆದು ಸೋತಿದ್ದಾರೆ.
ಇದನ್ನೂ ನೋಡಿ: ನಿಶಿಕಾಂತ್ ದುಬೆ, ಧನ್ಕರ್ ಅವರ ಸುಪ್ರೀಂಕೋರ್ಟ್ ವಿರುದ್ಧ ಮಾತುಗಳು ನ್ಯಾಯಾಂಗ ನಿಂದನೆಯಲ್ಲವೇ? Janashakthi Media