ನವದೆಹಲಿ | ನವೆಂಬರ್ 4ರಂದು JNU ವಿದ್ಯಾರ್ಥಿ ಒಕ್ಕೂಟದ ಚುನುವಾಣೆ

ನವದೆಹಲಿ: 2025–26ನೇ ಸಾಲಿನ   ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಚುನಾವಣಾ ವೇಳಾಪಟ್ಟಿ ಬಿಡುಗಡೆಯಾಗಿದೆ. ವಿದ್ಯಾರ್ಥಿ

ಇದನ್ನೂ ಓದಿ : ಶಿವಮೊಗ್ಗ | ₹ 3,000 ಕೋಟಿ ವೆಚ್ಚದಲ್ಲಿ 800 ಕರ್ನಾಟಕ ‍ಪಬ್ಲಿಕ್ ಶಾಲೆ ಗೆ ಮುಖ್ಯಮಂತ್ರಿ ಚಾಲನೆ 

ನವೆಂಬರ್‌ 4ರಂದು ಮತದಾನ ನಡೆಯಲಿದ್ದು, ಎರಡು ದಿನಗಳ ಬಳಿಕ (ನವೆಂಬರ್ 6ರಂದು) ಫಲಿತಾಂಶ ಪ್ರಕಟವಾಗಲಿದೆ. ನವದೆಹಲಿ

ಚುನಾವಣಾ ಪ್ರಕ್ರಿಯೆಗಳು ಅಕ್ಟೋಬರ್‌ 24ರಂದು ಪ್ರಾರಂಭವಾಗಲಿವೆ. ಅಂದು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ತಾತ್ಕಾಲಿಕ ಮತದಾರರ ಪಟ್ಟಿಯ ಪ್ರದರ್ಶನ ಮಾಡಲಾಗುವುದು ಮತ್ತು ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಸಮಿತಿ ತಿಳಿಸಿದೆ.

ಪರಿಶೀಲನೆ ಬಳಿಕ ಅಕ್ಟೋಬರ್‌ 28ರಂದು ಮಾನ್ಯ ನಾಮಪತ್ರಗಳನ್ನು ಪ್ರದರ್ಶಿಸಲಾಗುವುದು. ಅದೇ ದಿನ ಸಂಜೆಯೊಳಗೆ ಕಣದಿಂದ ಹಿಂದೆ ಸರಿಯಲು ಅವಕಾಶವಿದೆ. ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ರಾತ್ರಿ 7ಕ್ಕೆ ಪ್ರಕಟಿಸಲಾಗುವುದು. ನಾಮಪತ್ರದ ಅರ್ಜಿಗಳನ್ನು ಅಕ್ಟೋಬರ್‌ 25ರಂದು ಮಧ್ಯಾಹ್ನ 2ರಿಂದ 5ರವರೆಗೆ ವಿತರಿಸಲಾಗುವುದು. ಅಭ್ಯರ್ಥಿಗಳು ಅಕ್ಟೋಬರ್ 27 ರಂದು ನಾಮಪತ್ರ ಸಲ್ಲಿಸಬಹುದು.

ಇದನ್ನೂ ನೋಡಿ : ನಿರಂಜನ | ಶತಮಾನದ ಮರುಓದು” – ಅಕ್ಟೋಬರ್ 31 ಸಮಾರೋಪ ಕಾರ್ಯಕ್ರಮ Janashakthi Media 

Donate Janashakthi Media

Leave a Reply

Your email address will not be published. Required fields are marked *