ಆಹಾರ ಗೋದಾಮು ಮುಂದೆ ಪ್ರತಿಭಟನೆ ನಡೆಸಿದ ಜನವಾದಿ ಮಹಿಳಾ ಸಂಘಟನೆ
ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ತಾನು ಗೆದ್ದು ಬರಲಿಲ್ಲ ಎಂಬ ಕಾರಣಕ್ಕಾಗಿ ಬಿಜೆಪಿ ಬಡವರ ಅನ್ನ ಕಸಿದುಕೊಳ್ಳುತ್ತಿದೆ. ಈ ನಡೆ ನೀಚತನದ ಪರಮಾವಧಿ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ಆಕ್ರೋಶ ಬುಧವಾರ ವ್ಯಕ್ತಪಡಿಸಿದೆ.
ರಾಜ್ಯ ಸರ್ಕಾರದ ಯೋಜನೆಗಳಿಗೆ ಅಕ್ಕಿ ನೀಡಲು ನಿರಾಕರಿಸುತ್ತಿರುವ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ವಿರುದ್ಧ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ಬೆಂಗಳೂರಿನ ವಿಜಿನಾಪುರದಲ್ಲಿರುವ ಆಹಾರ ಗೋದಾಮು ಮುಂದೆ ಪ್ರತಿಭಟನೆ ನಡೆಸಿತು.
“ಯಾರಿಗೆಲ್ಲಾ ಅಗತ್ಯತೆ ಮತ್ತು ಅವಶ್ಯಕತೆಯಿದೆಯೊ ಅವರಿಗೆಲ್ಲಾ NFSA ಅಡಿಯಲ್ಲಿ ಪಡಿತರ ವಿತರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ 2013ರಲ್ಲಿ ಸುಪ್ರೀಂಕೋರ್ಟ್ ಸೂಚಿಸಿದೆ. ಆದರೆ ಬಿಜೆಪಿ ಇದನ್ನು ಉಲ್ಲಂಘಿಸಿದ್ದು ಅಕ್ಕಿ ಕೊಡಲು ನಿರಾಕರಿಸಿ ಜನವಿರೋಧಿ ಧೋರಣೆ ತೋರುತ್ತಿದೆ” ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಕೆ.ಎಸ್. ಲಕ್ಷ್ಮೀ, ಗೌರಮ್ಮ, ಮುಖಂಡರಾದ ಲಲಿತ ಶಣೈ, ಗೀತ, ವನಿತ, ಗಾಯತ್ರಿ, ಮಂಗಳಮ್ಮ, ಸೇರಿದಂತೆ ನೂರಾರು ಮಂದಿ ಇದ್ದರು.
ಇದನ್ನೂ ಓದಿ: ‘ಅನ್ನಭಾಗ್ಯ’ : ಅಕ್ಕಿ ಬದಲು ಹಣ – ಸಂಪುಟದ ಮಹತ್ವದ ತೀರ್ಮಾನ