ಚಂದನವನಕ್ಕೆ ಆಗಮಿಸುತ್ತಿರುವ ಶಾರುಖ್‌ ಖಾನ್‌: ಮೊದಲ ಚಿತ್ರ ʼಜವಾನ್‌ʼ

ʻಜವಾನ್‌ʼ ಚಿತ್ರದ ಮೂಲಕ ಚಂದನವನಕ್ಕೆ ಆಗಮಿಸುತ್ತಿರುವ ಹಿಂದಿ ಚಿತ್ರರಂಗದ ಖ್ಯಾತ ನಟ ಶಾರುಖ್ ಖಾನ್ ಕನ್ನಡ ಚಿತ್ರದಲ್ಲಿ ಅಬ್ಬರಿಸಲು ಸಜ್ಜಾಗುತ್ತಿದ್ದಾರೆ. 2018 ರಲ್ಲಿ ಬಿಡುಗಡೆಯಾದ ‘ಝೀರೋ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಹಿಟ್​ ಆಗಿರಲಿಲ್ಲ. ಈ ಸಿನಿಮಾದ ಬಳಿಕ ಶಾರುಖ್ ಖಾನ್ ಇತ್ತೀಚೆಗೆ ‘ಪಠಾಣ್’ ಮತ್ತು ‘ಡಂಕಿ’ ಚಿತ್ರಗಳಲ್ಲಿ ನಟಿಸುತ್ತಿರುವುದಾಗಿ  ಘೋಷಿಸಿದ್ದರು.

ಶಾರುಖ್ ಮತ್ತು ತಮಿಳು ನಿರ್ದೇಶಕ ಅಟ್ಲೀ ಕಾಂಬಿನೇಷನ್‌ನ ಬಹುನಿರೀಕ್ಷೆಯ ಸಿನಿಮಾದ ಟೀಸರ್ ಮತ್ತು ಟೈಟಲ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಿನಿಮಾದ ಟೈಟಲ್ ಮತ್ತು ಶಾರುಖ್ ಲುಕ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಇಂದು (ಜೂನ್ 3) ಟೀಸರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆಯಲಾಗಿದೆ.

ಅಟ್ಲೀ ನಿರ್ದೇಶನದ, ಶಾರುಖ್ ಖಾನ್‌ ನಟನೆಯ ʻಜವಾನ್’ ಸಿನಿಮಾ ಮುಂದಿನ ವರ್ಷ್‌ ಜೂನ್‌ನಲ್ಲಿ ಬಿಡುಗಡೆಯಾಗಲಿದ್ದು, ಈ ಸಿನಿಮಾ ಹಿಂದಿ, ತಮಿಳು, ತೆಲುಗು, ಸೇರಿದಂತೆ ಕನ್ನಡದಲ್ಲೂ ತೆರೆ ಕಾಣಲಿದೆ. ಟೀಸರ್ ಮೂಲಕ ಶಾರುಖ್ ಲುಕ್ ಕೂಡ ರಿವೀಲ್ ಮಾಡಲಾಗಿದೆ.

ಈ ಸಿನಿಮಾದಲ್ಲಿ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ನಯನತಾರಾ ತನಿಖಾಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರಂತೆ. ಶಾರುಖ್ ಖಾನ್ ಒಂದು ಪಾತ್ರದಲ್ಲಿ ಗ್ಯಾಂಗ್‌ಸ್ಟರ್ ಮಗನ ಪಾತ್ರದಲ್ಲಿ ಕಾಣಿಸಿಕೊಂಡರೆ ಮತ್ತೊಂದು ಪಾತ್ರದಲ್ಲಿ ತಂದೆಯ ಪಾತ್ರ ಎಂದು ಹೇಳಲಾಗುತ್ತಿದೆ. ಇನ್ನು ನಟಿ ಸಾನ್ಯ ಮಲ್ಹೋತ್ರ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಇದ್ಯಾವುದರ ಬಗ್ಗೆಯೂ ಜವಾನ್ ಸಿನಿಮಾದ ಟೀಸರ್ ಸುಳಿವು ನೀಡಿಲ್ಲ.

ಸದ್ಯ ಶಾರುಖ್‌ ಖಾನ್ ಪಠಾಣ್ ಸಿನಿಮಾದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಜೊತೆ ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಬಳಿಕ ರಾಜ್ ಕುಮಾರ್ ಹಿರಾನಿ ಮತ್ತು ಅಟ್ಲೀ ಜೊತೆ ಸಿನಿಮಾ ಮಾಡುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *