ಕೋಲಾರ : ದೇವರ ಕೋಲು ಮುಟ್ಟಿದ ಎಂಬ ಕಾರಣಕ್ಕೆ ಬಹಿಷ್ಕಾರಕ್ಕೆ ಒಳಗಾದ ಕುಟುಂಬವನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ನಿಯೋಗ ಬೇಟಿ ಮಾಡಿದೆ. ಕುಟುಂಬಕ್ಕೆ ಸಾಂತ್ವಾನ ನೀಡಿದ್ದು, ಅಪರಾಧಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದೆ.
ಸಂಘಟನೆಯ ರಾಜ್ಯಾ ಉಪಾಧ್ಯಕ್ಷೆ ಗೌರಮ್ಮ. ಕೋಲಾರ ಜಿಲ್ಲಾ ಕಾರ್ಯದರ್ಶಿ ಆಂಜಮ್ಮ. ಜಿಲ್ಲಾ ಖಜಾಂಚಿ ರೇಣುಕಾ. ಜಿಲ್ಲಾ ಸಮಿತಿ ಸದಸ್ಯರಾದ ಸುಜಾತ. ಶಿಲ್ಪ ರವರಿದ್ದ ನಿಯೋಗವು, ಮಾಲೂರು ತಾಲ್ಲೂಕಿನ ಟೇಕಲ್ ನ ಉಳೇರಹಳ್ಳಿಗೆ ಭೇಟಿ ನೀಡಿತ್ತು, ಇತ್ತೀಚೆಗೆ ದಲಿತ ಬಾಲಕನೊಬ್ಬ ದೇವರ ಕೋಲು ಮುಟ್ಟಿದನೆಂದು ಆತನ ಕುಟುಂಬಕ್ಕೆ ದಂಡ ಹಾಗೂ ಬಹಿಷ್ಕಾರ ಹಾಕಿದ್ದ ಪ್ರಕರಣಕ್ಕೆ ರಾಜ್ಯವ್ಯಾಪಿ ಖಂಡನೆ ವ್ಯಕ್ತವಾಗಿತ್ತು. ಈ ಬಹಿಷ್ಕಾರಕ್ಕೆ ಒಳಗಾದ ಕುಟುಂಬವನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ನಿಯೋಗ ಬೇಟಿ ಮಾಡಿ ಘಟನೆಯ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿತು.
ಇದನ್ನೂ ಓದಿ : ದಲಿತ ಬಾಲಕನಿಗೆ ದಂಡ ಪ್ರಕರಣ: ವಿವಿಧ ಪ್ರಗತಿಪರ ಸಂಘಟನೆಗಳಿಂದ ‘ಉಳ್ಳೇರಹಳ್ಳಿ ಚಲೋ’
ಭೇಟಿ ನಂತರ ಗೌರಮ್ಮ ಅವರು ಜನಶಕ್ತಿ ಮೀಡಿಯಾಗೆ ಪ್ರತಿಕ್ರಿಯಿಸಿದ್ದು, ಹುಡುಗನ ತಾಯಿ ಶೋಭರವರು ಬೆಂಗಳೂರಿನ ಹೂಡಿ ಹತ್ತಿರವಿರುವ ಶಾಂತಿನಿಕೇತನದ ಅಪಾರ್ಟ್ ಮೆಂಟ್ ನಲ್ಲಿ ಹೌಸ್ ಕಿಪಿಂಗ್ ಕೆಲಸ ಮಾಡುತ್ತಿದ್ದರು. 13 ಸಾವಿರ ಸಂಬಳ ಬರುತ್ತಿತು. ಈ ಘಟನೆ ನಡೆದ ಬಳಿಕ ಕೆಲಸಕ್ಕೆ ಹೋಗುವಾಗ ಬೆದರಿಕೆಗಳು ಬಂದ ಕಾರಣ ಪೋಲಿಸರಿಗೆ ದೂರು ನೀಡಿ ರಕ್ಷಣೆ ಕೋರಿದ್ದಾರೆ, ʻನಾವು ಹೋದಾಗ ಮನೆ ಮುಂದೆ ಒಂದು ಪೋಲಿಸ್ ಬಸ್ ಇದೆ. ಒಬ್ಬ ASI ಸೇರಿದಂತೆ 8.10 ಜನ ಪೋಲಿಸ್ ನವರು ಇದ್ದಾರೆ. ಮಗ ಶಾಲೆಗೆ ಹೋಗುತ್ತಿದ್ದಾನೆ ಅಲ್ಲಿ ಯಾವ ಸಮಸ್ಯೆಯೂ ಇಲ್ಲ. ಆದರೆ ಈ ಕುಟುಂಬ ಊರಿನ ಪಕ್ಕ 500 ರಿಂದ 600 ಮೀಟರ್ ದೂರದಲ್ಲಿ ಪ್ರತ್ಯೇಕ ಮನೆಯಲ್ಲಿದ್ದಾರೆ. ಗಂಡ ಕಟ್ಟಡ ಕಾರ್ಮಿಕನಾಗಿದ್ದು ಬಿದ್ದು ಏಟಾಗಿ ಎಲ್ಲಿಯೂ ಹೋಗುತ್ತಿಲ್ಲ. ಶೋಭ ದುಡಿಮೆಯಲ್ಲಿಯೇ ಅವರ ಅತ್ತೆ ಸೇರಿ 4 ಜನರ ಹೊಟ್ಟೆ ತುಂಬ ಬೇಕಿದೆ.
ಶೋಭರವರ ಕುಟುಂಬಕ್ಕೆ ಒಂದು ನಿವೇಶನ ನೀಡುವುದಾಗಿ ಜಾಗ ತೋರಿಸಿ ನಂಬರ್ 9 ಮತ್ತು 10 ನಮೂನೆ ನೀಡಿರುತ್ತಾರೆ. ಅವರಿಗೆ ಗುತ್ತಿಗೆ ಕೆಲಸ ನೀಡುವುದಾಗಿ ಹೇಳಲಾಗಿತು ಇನ್ನೂ ಏನು ಆಗಿಲ್ಲ. ಮೊನ್ನೆ ಈ ಕೇಸ್ ಸಂಬಂದ ಈ ಕುಟುಂಬ ಕೋರ್ಟ್ ಗೆ ಹೋಗಿದಾಗ ಆರೋಪಿಯ ತಮ್ಮ ಕೇಸ್ ವಾಪಸ್ ತೆಗೆದುಕೊ, ಇಲ್ಲದಿದ್ದರೆ ಪರಿಣಾಮ ನೆಟ್ಟಗಿರೋಲಾ ಅಂತ ಬೆದರಿಕೆ ಹಾಕಿದ್ದಾರೆ. ಈ ಕುರಿತು ದೂರು ದಾಖಲಾಗಿ ಆತನನ್ನು ಅರೆಸ್ಟ್ ಮಾಡಲಾಗಿದೆ. ಆದರೆ ಶೋಭಾ ಕುಟುಂಬಕ್ಕೆ ಪರಿಹಾರ ಹಾಗೂ ಸೂಕ್ತ ರಕ್ಷಣೆ ನೀಡುವಲ್ಲಿ ಜಿಲ್ಲಾಡಳಿತ ವಿಫಲವಾಗುತ್ತಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.