ಬೆಂಗಳೂರು : ದೇಶದ ಪ್ರಧಾನಿಯಾಗಿರುವವರು ಹೀಗೆ ಹೆಣ್ಣುಮಕ್ಕಳ ಮಾಂಗಲ್ಯದ ಬಗ್ಗೆ ಮಾತನಾಡಿ,ದೇಶದ ಜನರಲ್ಲಿ ಕೋಮುಭಾವನೆಯ ದ್ವೇಷದ ವಿಷಬೀಜ ಬಿತ್ತುವುದು ಅಕ್ಷಮ್ಯ ಅಪರಾಧವಾಗಿದ್ದು, ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಆಯೋಗ ಕ್ರಮಕೈಗೊಳ್ಳಬೇಕೆಂದು “ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ- ಕರ್ನಾಟಕ ರಾಜ್ಯ ಸಮಿತಿ” ಆಗ್ರಹಿಸಿದೆ.
ಈ ಕುರಿತು ಚುನವಣಾ ಆಯೋಗಕ್ಕೆ ದೂರು ನೀಡಿರುವ ಜನವಾದಿ ಮಹಿಳಾ ಸಂಘಟನೆ, ಬಹುತೇಕ ಎಲ್ಲ ಧರ್ಮದ ಮಹಿಳೆಯರು ಮಂಗಳಸೂತ್ರದ ಕುರಿತು ಪವಿತ್ರ ಭಾವನೆಗಳನ್ನು ಇಟ್ಟುಕೊಂಡಿರುವಾಗ ದೇಶದ ಪ್ರಧಾನ ಮಂತ್ರಿಯಾದವರೇ ಹೀಗೆ ಅವರ ಸ್ವಾರ್ಥಕ್ಕಾಗಿ ತಾಳಿಯ ಹೆಸರಿನಲ್ಲಿ ಮಹಿಳೆಯರನ್ನು ಪ್ರಚೋದಿಸುವುದು ಸರಿಯಲ್ಲ.
ಇದನ್ನು ಓದಿ : ಕೇರಳ ಇನ್ನೊಂದು ಟ್ರೆಂಡ್ ಮುರಿಯುವುದೇ?
ಭಾವನಾತ್ಮಕವಾಗಿ ಮಾತನಾಡಿ ಜನರ ದಿಕ್ಕು ತಪ್ಪಿಸುವ ಕೆಲಸನವನು ಪ್ರಧಾನಿ ಮೋದಿ ಮಾಡಿದ್ದಾರೆ. ಬಿಜೆಪಿಯ ನೀಚತನ ಮೆರೆಯಲು ಮಹಿಳೆಯರ ಹೆಣ, ತಾಳಿ ಅಂತಹ ಪಾತಿವ್ರತ್ಯದಂಥ ಅಂಶಗಳೇ ಇವರಿಗೆ ಬೇಕೇ? ಎಂದು ಪ್ರಶ್ನಿಸಿ ಪ್ರಧಾನ ಮಂತ್ರಿಗಳ ಈ ಮಹಿಳಾ ವಿರೋಧಿ ಮಾತುಗಳನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತೀವ್ರವಾಗಿ ಖಂಡಿಸುವುದಾಗಿ ಸಂಘಟನೆಯ ರಾಜ್ಯಾಧ್ಯಕ್ಷೆ ಮೀನಾಕ್ಷಿ ಬಾಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದ್ದಾರೆ.
ಇದನ್ನು ನೋಡಿ : ಸುಳ್ಳಿನಾ ಸರದಾರಾ ಮೋದಿಯ ಸರಕಾರ Janashakthi Media