ಮಂಗಳೂರು: ಪ್ರಸಕ್ತ ಕಾಲಘಟ್ಟದಲ್ಲಿ ಯುವಜನರ ಆಸಕ್ತಿಗೆ ಅನುಗುಣವಾಗಿ ವೇದಿಕೆಗಳನ್ನು ಕಲ್ಪಿಸುವ ಬದಲಾಗಿ ಮತೀಯ ದ್ರುವೀಕರಣದ ರಾಜಕಾರಣದಲ್ಲಿ ದೈಹಿಕವಾಗಿ ಬಳಸಿ ಬೀಸಾಡುವ ಪ್ರವೃತ್ತಿಯ ನಡುವೆ ಯುವಜನರು ಶಾರೀರಿಕವಾಗಿ ಬಲಿಷ್ಟರಾಗಿಸುವ ಜೊತೆ ಮಾನಸಿಕವಾಗಿಯೂ ಬದುಕು ಕಟ್ಟಿಕೊಳ್ಳುವ ವಿಚಾರಧಾರೆಗಳನ್ನು ನೀಡಿ ಬೆಳೆಸುವಲ್ಲಿ ಜನತಾ ವ್ಯಾಯಾಮ ಶಾಲೆ ಈ ಜಿಲ್ಲೆಗೆ ಮಾದರಿ ಎಂದು ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಜೈ ಹನುಮಾನ್ ಕ್ರೀಡಾ ಮಂಡಳಿ ಮುಖಂಡರಾದ ಮಹಾಬಲ ಟಿ ದೆಪ್ಪೆಲಿಮಾರ್ ಹೇಳಿದರು
ಮಾರ್ಚ್ 1ರಂದು ಜನತಾ ವ್ಯಾಯಮ ಶಾಲೆಯ 58ನೇ ವರುಷದ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಇದನ್ನೂ ಓದಿ: ಫೈನಾನ್ಸ್ ಸಿಬ್ಬಂದಿಗಳಿಂದ ಮನೆ ಸೀಜ್: ಮಗುವಿನ ಸಮೇತ ಬೀದಿಗೆ ಬಿದ್ದ ಕುಟುಂಬ
ಈ ಸಂಸ್ಥೆ ಬಜಾಲ್ ಪರಿಸರದಲ್ಲಿ ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಜನರ ನಡುವೆ ಅಪಾರ ಪ್ರೀತಿ ವಿಶ್ವಾಸ ಗಳಿಸಿದೆ. ಈ ಸಂಸ್ಥೆಯಲ್ಲಿ ಬೆಳೆದ ಕಾರ್ಯಕರ್ತರು ಇಂದು ಜಿಲ್ಲೆಯ ಜನರ ನೈಜ್ಯ ಪ್ರಶ್ನೆಗಳಿಗೆ ಸ್ಪಂದಿಸುವ ಸಂಘಟನೆಗಳಿಗೆ, ಚಳುವಳಿಗೆ ನಾಯಕತ್ವ ನೀಡುವ ಮಟ್ಟಕ್ಕೆ ಬೆಳೆಸಲು ಸಾದ್ಯವಾಗಿದೆ ಎಂದರೆ ಅದರ ಕೊಡುಗೆ ಜನತಾ ವ್ಯಾಯಾಮ ಶಾಲೆಗೆ ಸಲ್ಲುತ್ತದೆ ಎಂದರು.
ಬಜಾಲ್ ಪರಿಸರದಲ್ಲಿ ಇನ್ನಷ್ಟು ಯುವಜನರನ್ನು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಬೆಳೆಸುವಲ್ಲಿ ಈ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸುತ್ತೇನೆ.

ವೇದಿಕೆಯಲ್ಲಿ ಜನತಾ ವ್ಯಾಯಾಮ ಶಾಲೆಯ ಶಾರೀರಿಕ ಶಿಕ್ಷಕರಾದ ಅಶೋಕ್ ಸಾಲ್ಯಾನ್, ಕೇಶವ ಭಂಡಾರಿ, ಸುರೇಶ್ ಬಜಾಲ್, ಸಭೆಯ ಅಧ್ಯಕ್ಷತೆಯನ್ನು ಜನತಾ ವ್ಯಾಯಾಮ ಶಾಲೆಯ ಅಧ್ಯಕ್ಷರಾದ ದೀಪಕ್ ಬಜಾಲ್ ವಹಿಸಿದ್ದರು. ಕಾರ್ಯದರ್ಶಿ ಅಶೋಕ್ ಎನೆಲ್ಮಾರ್ ಕಾರ್ಯಕ್ರಮ ನಿರೂಪಿಸಿದರು.
ಇದನ್ನೂ ನೋಡಿ: ಪಿಚ್ಚರ್ ಪಯಣ – 168 | ವಯಸ್ಕರಿಗೂ ಪ್ರಿಯವಾಗುವ ಮಕ್ಕಳ ಕಿರುಚಿತ್ರ `ದಿ ರೆಡ್ ಬಲೂನ್’ | ಮ ಶ್ರಿ ಮುರಳಿ ಕೃಷ್ಣ
