ಬೆಂಗಳೂರು: ದ್ವೇಷದ ವಿರುದ್ಧ ಪ್ರೀತಿಯ ಸಮಾವೇಶವಾಗಿ, ಜೀವಪ್ರೀತಿ ಹೊಂದಿರುವವರೆಲ್ಲರೂ ಒಟ್ಟಾಗಿ ಸೇರಿ ಸಮಾಗಮನವಾಗುವಂತ ಜನಸಾಹಿತ್ಯ ಸಮ್ಮೇಳನ ಜರುಗುತ್ತಿದ್ದು, ಕಾರ್ಯಕ್ರಮ ಒಟ್ಟು ಸ್ವರೂಪದ ಬಗ್ಗೆ ಆಹ್ವಾನ ಪತ್ರಿಕೆ ಬಿಡುಗಡೆಗೊಂಡಿದೆ.
ಹಾವೇರಿಯಲ್ಲಿ ಮೂರು ದಿನಗಳು ಹಮ್ಮಿಕೊಂಡಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿರೋಧವಾಗಿ ರೂಪುಗೊಂಡಿರುವ ಜನಸಾಹಿತ್ಯ ಸಮ್ಮೇಳನ ಭಾರೀ ಪ್ರಚಾರವನ್ನು ಪಡೆದುಕೊಳ್ಳುತ್ತಿದೆ. ಜಾತಿ, ಮತ, ಧರ್ಮ, ಲಿಂಗ, ಬಣ್ಣ, ಪ್ರಾಂತಗಳನ್ನು ಮೀರಿ ನಡೆಯುತ್ತಿರುವ ಜನಸಾಹಿತ್ಯ ಸಮ್ಮೇಳನಕ್ಕೆ ನೂರಾರು ಜನರು ಸ್ವಯಂ ಪ್ರೇರಿತರಾಗಿ ಈ ಭಾಗವಹಿಸಲು ಉತ್ಸುಕರಾಗಿದ್ದಾರೆ.
ಇದನ್ನು ಓದಿ: ಜನ ಸಾಹಿತ್ಯ ಸಮ್ಮೇಳನಕ್ಕೆ ಬೆಂಬಲ ಸೂಚಿಸಿದ ಜಾಗೃತ ನಾಗರಿಕರು ಕರ್ನಾಟಕ
2023ರ ಜನವರಿ 08ರಂದು ಜನಸಾಹಿತ್ಯ ಸಮ್ಮೇಳನ ಅಲುಮ್ನಿ ಅಸೋಸಿಯೇಷನ್ ಆವರಣ, ಕೆ ಅರ್ ಸರ್ಕಲ್, ಬೆಂಗಳೂರು ಇಲ್ಲಿ ಜರುಗುತ್ತಿದ್ದು, ವಿವಿಧ ಗೋಷ್ಟಿಗಳನ್ನು ಏರ್ಪಡಿಸಲಾಗಿದೆ.
ಹಿರಿಯ ಪತ್ರಕರ್ತ, ಲೇಖಕ ಕಾಮರೂಪಿ(ಎಂ.ಎಸ್.ಪ್ರಭಾಕರ್) ದ್ವಾರ ನಿರ್ಮಿಸಲಾಗಿದ್ದು, ಸಂತ ಶಿಶುನಾಳ ಶರೀಫ ಮತ್ತು ಗುರು ಗೋವಿಂದ ಭಟ್ಟ ಸಭಾಂಗಣ ನಿರ್ಮಿಸಲಾಗಿದೆ. ಹಿರಿಯ ಸಾಹಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಚಂಪಾ(ಚಂದ್ರಶೇಖರ ಪಾಟೀಲ) ವೇದಿಕೆಯಲ್ಲಿ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ವಿದ್ವತ್‌ಪೂರ್ಣ ವಿಚಾರಗಳನ್ನು ಮಂಡಿಸುವ ಮೂಲಕ ಅರ್ಥಪೂರ್ಣವಾದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ.
ಕಾರ್ಯಕ್ರಮದ ವಿವರಗಳು ಹೀಗಿವೆ;
ಬೆಳಿಗ್ಗೆ 9:00ಕ್ಕೆ – ಕನ್ನಡ ಧ್ವಜಾರೋಹಣ, ಮುಖ್ಯ ಅತಿಥಿಗಳಾಗಿ: ವಾಟಾಳ್ ನಾಗರಾಜ್, ಶಿವರಾಮೇಗೌಡ, ಜಗದೀಶ ಬಿ ಎನ್ ಭಾಗವಹಿಸಿದ್ದು, ಕಾರ್ಯಕ್ರಮದ ನಿರೂಪಣೆಯನ್ನು ರಾ ಚಿಂತನ್ ಅವರು ನಡೆಸಿ ಕೊಡಲಿದ್ದಾರೆ.
ಬೆಳಿಗ್ಗೆ 9:30ಕ್ಕೆ – ಬಂಡಾಯದ ಗೆರೆಗಳು: ವ್ಯಂಗ್ಯಚಿತ್ರ ಮತ್ತು ಪೋಸ್ಟರ್‌ಗಳ ಪ್ರದರ್ಶನ
ಉದ್ಘಾಟನೆಯನ್ನು ರಘುನಂದನ ಅವರು ಮಾಡಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಪಿ ಮಹಮ್ಮದ್, ದಿನೇಶ್ ಕಕ್ಕುಜಡ್ಕ, ಸತೀಶ್ ಆಚಾರ್ಯ, ಪಂಜುಗಂಗೊಳ್ಳಿ, ಬಾದಾಲ್ ನಂಜುಂಡಸ್ವಾಮಿ, ಚಂದ್ರಶೇಖರ್ ಶೆಟ್ಟಿ, ಚೇತನ್ ಪುತ್ತೂರು, ಸರೋವರ್ ಬೆಂಕಿಕೆರೆ, ಉದಯ ಗಾಂವ್ಕರ್, ನವೀನ್ ಹಾಸನ, ವಿಶ್ವವಿನ್ಯಾಸ, ಸುನೈಫ್, ರೂಮೀ ಹರೀಶ್, ರೂಪಶ್ರೀ ಕಲ್ಲಿಗನೂರು, ಚರಿತಾ ಮೈಸೂರು, ನಭಾ ಒಕ್ಕುಂದ, ಸನತ್ ಕುಮಾರ್, ರಾಜೇಂದ್ರ ಪ್ರಸಾದ್, ಸಾತ್ವಿಕ್ ನೆಲ್ಲಿತೀರ್ಥ ಭಾಗಿಯಾಗಲಿದ್ದಾರೆ. ನಿರೂಪಣೆಯನ್ನು ವಿಜಯಕುಮಾರಿ ನೆರವೇರಿಸಿಕೊಡಲಿದ್ದಾರೆ.
ಇದನ್ನೂ ಓದಿ : “ಧೀರ ಟಿಪ್ಪುವಿನ ಲಾವಣಿಗಳು” ಜನವರಿ 8 ರಂದು ‘ಜನಸಾಹಿತ್ಯ ಸಮ್ಮೇಳನ’ದಲ್ಲಿ ಬಿಡುಗಡೆಯಾಗಲಿದೆ.
ಚಂಪಾ ವೇದಿಕೆ – ಬೆಳಿಗ್ಗೆ 10 ರಿಂದ 12.00: ಜನಸಾಹಿತ್ಯ ಸಮ್ಮೇಳನದ ಉದ್ಘಾಟನೆ
ಉದ್ಘಾಟನೆ: ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರು ಮಾಡಿದ್ದಾರೆ. ಅಧ್ಯಕ್ಷತೆಯನ್ನು ಬಾನು ಮುಶ್ತಾಕ್ ಅವರು ವಹಿಸಿ ನಡೆಸಿಕೊಡಲಿದ್ದಾರೆ. ದಿಕ್ಸೂಚಿ ಭಾಷಣವನ್ನು ಪುರುಷೋತ್ತಮ ಬಿಳಿಮಲೆ ಮಾಡಲಿದ್ದಾರೆ. ಮುಖ್ಯ ಅತಿಥಿ: ಪ್ರೊ ಎಸ್ ಜಾಫೆಟ್, ಜಾಣಗೆರೆ ವೆಂಕಟರಾಮಯ್ಯ,, ಜೆನ್ನಿ (ಜನಾರ್ಧನ್), ಅಗ್ನಿಶೀಧರ್, ಅಕ್ಕೈ ಪದ್ಮಶಾಲಿ, ವಡ್ಡರೆಗೆ ನಾಗರಾಜಯ್ಯ ಭಾಗವಹಿಸಿ ಮಾತನಾಡಲಿದ್ದಾರೆ. ಪ್ರಾಸ್ತಾವಿಕ ಮಾತುಗಳನ್ನು ಬೈರಪ್ಪ ಹರೀಶ್ ಕುಮಾರ್, ನಿರೂಪಣೆಯನ್ನು ಶಮೀಮ ಮುಜೀಬ್ ಅವರು ನಡೆಸಿಕೊಡಲಿದ್ದಾರೆ.
ಮಧ್ಯಾಹ್ನ 12.30 ರಿಂದ 1.30 – ವಿಚಾರ ಗೋಷ್ಠಿ – ಸಾಹಿತ್ಯ, ಪ್ರಭುತ್ವ ಮತ್ತು ಬಹುತ್ವ
ವಿಷಯ ಮಂಡನೆ: ಡಾ. ಮಹಮ್ಮದ್ ಮುಸ್ತಾಫಾ ಮಾಡಿಕೊಡಲಿದ್ದಾರೆ. ಪ್ರತಿಕ್ರಿಯೆಯನ್ನು ಅಕ್ಷತಾ ಕೆ ಸಿ ಅವರು ಮಾಡಲಿದ್ದಾರೆ.
ಕನ್ನಡ ನಾಡು ನುಡಿ – ಟಿಪ್ಪು ಕೊಡುಗೆಗಳು – ವಿಷಯ ಮಂಡನೆ: ಟಿ ಗುರುರಾಜ್, ಪ್ರತಿಕ್ರಿಯೆಯನ್ನು ಕಲೀಂ ಪಾಷಾ ಮಾಡಿಕೊಡಲಿದ್ದಾರೆ.
ಲಿಂಗದೇವರು ಹಳೆಮನೆ ಸಂಪಾದಕ್ವತದ ʻಧೀರ ಟಿಪ್ಪು ಲಾವಣಿಗಳುʼ ಮತ್ತು ಟಿ ಗುರುರಾಜ್ ಬರೆದಿರುವ ʻನಮ್ಮ ಟಿಪ್ಪು- ವದಂತಿ ಮತ್ತು ಸತ್ಯ ಸಂಗತಿʼ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಧ್ಯಕ್ಷತೆ: ನಾ ದಿವಾಕರ್ ವಹಿಸಿಕೊಡಲಿದ್ದಾರೆ. ನಿರೂಪಣೆ: ರಾಮಕ್ಕ ಮಾಡಲಿದ್ದಾರೆ.
ಇದನ್ನೂ ಓದಿ : ಸಾಹಿತ್ಯ ಸಮ್ಮೇಳನದಲ್ಲಿ ತಾರತಮ್ಯ : ಕವಿಗೋಷ್ಠಿಯಿಂದ ಹಿಂದೆ ಸರಿದ ಕವಿಗಳು
ಮಧ್ಯಾಹ್ನ 1.30 ರಿಂದ 2.00 – ಆಹಾರ ಗೋಷ್ಟಿ – ಆಹಾರದ ಮೇಲಿನ ರಾಜಕಾರಣ ಮತ್ತು ದೌರ್ಜನ್ಯ
ವಿಷಯ ಮಂಡನೆ: ರಂಗನಾಥ ಕಂಟನಕುಂಟೆ ಹಾಗೂ ಪಲ್ಲವಿ ಇಡೂರ್ ಅವರಿಂದ, ಕೌಂಟರ್‌ನಲ್ಲಿ: ಉಪ್ಪಿನಕಾಯಿ, ತರಕಾರಿ ಪಲ್ಯ, ಅನ್ನ, ಮೀನು ಸಾರು, ತರಕಾರಿ ಸಾಂಬಾರ್, ಗೀ ರೈಸ್, ದಾಲ್, ಚಿಕನ್ ಕಬಾಬ್, ಪಾಯಸ, ಇರಲಿದೆ. ನಿರೂಪಣೆಯನ್ನು ರಮೇಶ್ ಹಾಸನ ಮಾಡಿಕೊಡಲಿದ್ದಾರೆ.
ಮಧ್ಯಾಹ್ನ 2:00 ರಿಂದ 3:00 – ಕವಿಗೋಷ್ಠಿ
ಕವಿಗೋಷ್ಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರದ ಅಧ್ಯಕ್ಷತೆ: ಬಂಜಗೆರೆ ಜಯಪ್ರಕಾಶ್ ವಹಿಸಿ ನಡೆಸಿಕೊಡಲಿದ್ದು, ಆಶಯ ಮಾತುಗಳನ್ನು ಎಚ್ ಆರ್ ಸುಜಾತ ಅವರು ಆಡಲಿದ್ದಾರೆ. ಕಾರ್ಯಕ್ರಮದಲ್ಲಿ ದೀಪದ ಮಲ್ಲಿ, ದಾದಾಪೀರ್ ಜೈಮನ್, ಚಾಂದ್ ಪಾಷಾ, ಪ್ರಕಾಶ್ ಮಂಟೇದಾ, ಟೀನಾ ಶಶಿಕಾಂತ್, ಸಿರಾಜ್ ಬಿಸ್ರಳ್ಳಿ, ಫಾತಿಮಾ ರಾಲಿಯಾ, ಹಾಜಿರ ಖಾನಂ, ಚಾಂದಿನಿ, ಶಿವರಾಜ್ ಮೋತಿ, ಪಂಚಮಿ ಎಸ್, ಸಂಘಮಿತ್ರೆ, ಮಂಜುನಾಥ್ ಮಾಗೊದಿ, ಪುನೀತ್, ಧನಂಜಯ ದೇವರಹಳ್ಳಿ, ವಿಕಾಸ್ ಮೌರ್ಯ, ರೂಮಿ ಹರೀಶ್, ಪ್ರವೀಣ್ ಬಿ ಎಂ ಇವರುಗಳು ಭಾಗವಹಿಸಿ ಮಾತನಾಡಲಿದ್ದಾರೆ. ನಿರೂಪಣೆಯನ್ನು ರವಿ ಈಚಲಮರ ಮಾಡಿಕೊಡಲಿದ್ದಾರೆ.
ಇದನ್ನು ಓದಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಲೇಖಕರ ಕಡೆಗಣನೆ-ಪರ್ಯಾಯ ಸಮ್ಮೇಳನಕ್ಕೆ ಚಿಂತನೆ
ಮಧ್ಯಾಹ್ನ 3:00 ರಿಂದ 4:00 – ಸೌಹಾರ್ದತೆ ಮತ್ತು ಕನ್ನಡತನ
ವಿಷಯ ಮಂಡನೆ: ರಾಜೇಂದ್ರ ಚೆನ್ನಿ ಮಾಡಿಕೊಡಲಿದ್ದಾರೆ. ಅಲ್ಪಸಂಖ್ಯಾತರು ಮತ್ತು ದಲಿತರ ಮೇಲಿನ ದಾಳಿ : ಸಾಹಿತ್ಯ ಲೋಕದ ಜವಾಬ್ದಾರಿಗಳು ಎಂಬ ವಿಚಾರದ ಕುರಿತು ಮಾವಳ್ಳಿ ಶಂಕರ್ ಹಾಗೂ ಮುನೀರ್ ಕಾಟಿಪಳ್ಳ ವಿಷಯವನ್ನು ಮಂಡಿಸಲಿದ್ದಾರೆ.
ಕನ್ನಡವನ್ನು ಬೆಳಗಿಸಿದ ಕ್ರೈಸ್ತ ಮಿಷನರಿಗಳು
ವಿಷಯ ಮಂಡನೆ: ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ, ಪ್ರತಿಕ್ರಿಯೆ: ಪ್ರಿಯಾಂಕ ಮಾವಿನ್ಕರ್ ಗುಲ್ಬರ್ಗ, ನಿರೂಪಣೆ: ಮಂಜುಳಾ ತೆಳಗಡೆ.
ಸಂಜೆ 5:00 ಗಂಟೆ – ಸಮಾರೋಪ ಸಮಾರಂಭ
ಅಧ್ಯಕ್ಷತೆ : ಡಾ ಜಿ ರಾಮಕೃಷ್ಣ, ಸಮಾರೋಪ ಭಾಷಣ: ಡಾ ಕೆ ಮರುಳಸಿದ್ದಪ್ಪ, ಮುಖ್ಯ ಅತಿಥಿಗಳು: ಸಿ ಬಸವಲಿಂಗಯ್ಯ, ಪಿಚ್ಚಳ್ಳಿ ಶ್ರೀನಿವಾಸ್, ದು ಸರಸ್ವತಿ, ಯು ಟಿ ಫರ್ಜಾನ, ವಸಂತರಾಜ್, ಅನಂತ್ ನಾಯಕ್, ರವಿಕುಮಾರ್ ಟೆಲೆಕ್ಸ್, ನಿರೂಪಣೆ: ಬಸವರಾಜ್ ಪೂಜಾರ್, ವಂದನಾರ್ಪಣೆ: ಪುರುಷೋತ್ತಮ ಒಡೆಯರ್ ಮಾಡಲಿದ್ದಾರೆ.
ಬೀದಿಗೆ ಬರಲಿ ಕಲೆ-ಸಾಹಿತ್ಯ – ಸಮುದಾಯ ಬೆಂಗಳೂರು ಬೀದಿ ನಾಟಕ
ಪ್ರಸ್ತಾವನೆ : ಗುಂಡಣ್ಣ ಚಿಕ್ಕಮಗಳೂರು, ನಿರೂಪಣೆ: ಮನೋಜ್ ವಾಮಂಜೂರು.
ಕವಿ ಡಾ ಸಿದ್ದಲಿಂಗಯ್ಯ ಪುಸ್ತಕ ಮಳಿಗೆ
ರಾಜ್ಯದ ಪ್ರಮುಖ ಪ್ರಕಾಶನ ಸಂಸ್ಥೆಗಳಿಂದ ಬಹುಮುಖ್ಯ ಸಾಹಿತ್ಯ ಕೃತಿಗಳ ಮಾರಾಟ ವ್ಯವಸ್ಥೆಯನ್ನು ಮಾಡಲಾಗಿದೆ.