ಒಬುಲಾಪುರಂ ಮೈನಿಂಗ್ ಕಂಪನಿಯ (OMC) ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆಗೆ ಗುರಿಯಾದ ಮಾಜಿ ಸಚಿವ ಹಾಗೂ ಶಾಸಕರಾದ ಗಾಲಿ ಜನಾರ್ದನ ರೆಡ್ಡಿಯನ್ನು ಚಂಚಲಗೂಡ ಜೈಲಿನಿಂದ ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.
ಇದನ್ನು ಓದಿ :-ಐಪಿಎಲ್ 2025: ಪ್ಲೇಆಫ್‌ಗಳಲ್ಲಿ ಟಾಪ್-2 ಸ್ಥಾನಕ್ಕಾಗಿ ಆರ್‌ಸಿಬಿಗೆ ಅರ್ಹತೆ ಸಿಗುತ್ತಾ?
ಮೇ 27ರಂದು ಹೈದರಾಬಾದ್‌ನ ನಾಂಪಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ಆದೇಶದಂತೆ, ಬಾಡಿ ವಾರಂಟ್ ಆಧಾರದ ಮೇಲೆ ರೆಡ್ಡಿಯನ್ನು ಹೈದರಾಬಾದ್ ಪೊಲೀಸರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು ರೆಡ್ಡಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸುವಂತೆ ಆದೇಶ ನೀಡಿ, ಮುಂದಿನ ವಿಚಾರಣೆಯನ್ನು ಜೂನ್ 2ಕ್ಕೆ ಮುಂದೂಡಿದರು.
ಈ ಪ್ರಕರಣದಲ್ಲಿ ರೆಡ್ಡಿಯ ಜೊತೆಗೆ, ಒಎಂಸಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಶ್ರೀನಿವಾಸ ರೆಡ್ಡಿ, ರೆಡ್ಡಿಯ ಆಪ್ತ ಎಂ. ಅಲಿಖಾನ್ ಮತ್ತು ಗಣಿ ಇಲಾಖೆಯ ಮಾಜಿ ಅಧಿಕಾರಿ ವಿ.ಡಿ. ರಾಜಗೋಪಾಲ್ ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ನ್ಯಾಯಾಲಯವು ಪ್ರತಿಯೊಬ್ಬ ಆರೋಪಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ ₹10 ಲಕ್ಷ ದಂಡ ವಿಧಿಸಿದೆ. ಇದಕ್ಕೂ ಹೆಚ್ಚಾಗಿ, ಒಎಂಸಿ ಕಂಪನಿಗೆ ₹2 ಲಕ್ಷ ದಂಡ ವಿಧಿಸಲಾಗಿದೆ.
ಇದನ್ನು ಓದಿ :-ಅತಿದೊಡ್ಡ ಸಂಚಾರ ಉಲ್ಲಂಘನೆ ಮಾಡುವವರು ದ್ವಿ ಚಕ್ರ ವಾಹನ ಸವಾರರಲ್ಲ ; ಸರ್ಕಾರಗಳು ಮತ್ತು ಭ್ರಷ್ಟ ರಸ್ತೆ ನಿರ್ಮಾಣದ ಕಂಪನಿಗಳು
ಈ ತೀರ್ಪಿನೊಂದಿಗೆ, ಸುಮಾರು 10 ವರ್ಷಗಳ ಬಳಿಕ ಜನಾರ್ದನ ರೆಡ್ಡಿ ಮತ್ತೆ ಜೈಲುಪಾಲಾಗಿದ್ದಾರೆ. ಈ ಪ್ರಕರಣವು ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗದಲ್ಲಿರುವ ಬಳ್ಳಾರಿ ರಿಸರ್ವ್ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದೆ.