ಜನಮಾನಸದಲ್ಲಿ ಇಂದಿಗೂ ಚಿರಸ್ಥಾಯಿಯಾಗಿ ಉಳಿಯುವ ನಟ ಶಂಕರ್‌ನಾಗ್‌

ಭಾರತೀಯ ಚಿತ್ರರಂಗದಲ್ಲಿ ಹಲವು ಪ್ರಯೋಗಗಳ ಮೂಲಕ ಹೊಸತನ ಸೃಷ್ಟಿಸಿದ ನಟ ಶಂಕರ್​ ನಾಗ್ ಅವರ ಸಾಧನೆ ಅಜರಾಮರ. ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದ ಅವರು ಬದುಕಿದ್ದದ್ದು ಕೇವಲ 35 ವರ್ಷ.

ಶಂಕರ್‌ನಾಗ್‌ ಮಾಡಿದ ಕೆಲಸಗಳು ಹಲವು ವರ್ಷಗಳ ಕಾಲ ನೆನಪಿನಲ್ಲಿ ಉಳಿಯುವಂಥವು. ‘ಮಿಂಚಿನ ಓಟ’ ಶಂಕರ್‌ನಾಗ್‌ ಅವರ ಅತ್ಯುತ್ತಮ ಚಿತ್ರಗಳಲ್ಲೊಂದು. ಈ ಚಿತ್ರದ ಶೀರ್ಷಿಕೆ ಅವರ ಬದುಕಿಗೂ ಅನ್ವಯ ಆಗುವಾಗಿದ್ದವು. ದಣಿವರಿಯದಂತೆ ಕಂಡ ಕನಸುಗಳನ್ನು ಒಂದೊಂದಾಗಿ ಸಾಕಾರಗೊಳಿಸುತ್ತ ಅಪಾರ ಭರವಸೆ ಮೂಡಿಸುತ್ತ ಸಾಗಿದ್ದ ಅವರು 1990 ಸೆಪ್ಟಂಬರ್‌ 30ರಂದು ಕಾರು ಅಪಘಾತದಲ್ಲಿ ನಿಧನರಾದರು.

ನವೆಂಬರ್ 9, 1954ರಂದು ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್‌ನಾಗ್ ಹುಟ್ಟಿದರು. ತಂದೆ ಹೊನ್ನಾವರದ ನಾಗರಕಟ್ಟೆಯ ಸದಾನಂದ, ಬಾಲ್ಯದಲ್ಲಿ ಪ್ರೀತಿಯಿಂದ ಮಗನನ್ನು ಕರೆಯುತಿದ್ದ ಹೆಸರು ಭವಾನಿ ಶಂಕರ್. ಶಂಕರ್‌ನಾಗ್ ತನ್ನ ವಿದ್ಯಾಭ್ಯಾಸದ ನಂತರ ಮುಂಬೈಗೆ ತೆರಳಿದರು.

ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರಲೋಕದಲ್ಲಿ ‘ಒಂದಾನೊಂದು ಕಾಲದಲ್ಲಿ’ ಎಂಬ ಸಿನಿಮಾ ತೆರೆದುಕೊಂಡಿದ್ದು, ಅದಾಗಲೇ ಹೊಸ ಅಲೆಯ ಚಿತ್ರಗಳ ಸಾಲಿಗೆ ಹೆಸರು ಮಾಡಿತ್ತು. ರಾಷ್ಟ್ರಮಟ್ಟದಲ್ಲೂ ಹೆಚ್ಚು ಖ್ಯಾತಿ ಗಳಿಸಿದ್ದ ಈ ಚಿತ್ರವನ್ನು ಗಿರೀಶ ಕಾರ್ನಾಡರು ನಿರ್ದೇಶಿಸಿದ್ದರು. ಶಂಕರ್‌ನಾಗ್‌ ಅವರದು ಕನ್ನಡದ ಮೊದಲ ಚಲನಚಿತ್ರ. ಮೊದಲು ಚಿತ್ರದ ಅಭಿನಯಕ್ಕಾಗಿ ಹಲವು ಪುರಸ್ಕಾರಗಳನ್ನು ಪಡೆದ ಶಂಕರ್‌ನಾಗ್‌, ಕಲಾತ್ಮಕ ಚಿತ್ರಗಳಲ್ಲಿ ಮತ್ತೆ ಅಭಿನಯಿಸಲು ಹೊಸ ಅಲೆ ಚಿತ್ರಗಳೇ ಹೆಚ್ಚಾಗಿ ಬರಲಿಲ್ಲ.

ಉತ್ತರ ಕನ್ನಡ ಜಿಲ್ಲೆಯ ಪುಟ್ಟ ಹಳ್ಳಿಯಿಂದ ಅಣ್ಣ ಅನಂತನಾಗ್ ಅವರೊಂದಿಗೆ ಬದುಕು ಕಟ್ಟಿಕೊಳ್ಳಲು ಮುಂಬೈ ಮಹಾನಗರಕ್ಕೆ ಗುಳೆ ಹೋಗಿದ್ದ ಶಂಕರ್‌, ಹೊಟ್ಟೆಪಾಡಿಗಾಗಿ ಸೇರಿದ್ದು ಬ್ಯಾಂಕ್‌ ನೌಕರಿಗೆ. ಇದರೊಂದಿಗೆ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಅಣ್ಣ-ತಮ್ಮ ಇಬ್ಬರೂ ಚಿತ್ರರಂಗದಲ್ಲಿ ತಮ್ಮ ಆದ ಖ್ಯಾತಿಯನ್ನು ಗಳಿಸಿಕೊಂಡರು.

ಶಂಕರ್‌ನಾಗ್‌ ತಮಗರಿವಿಲ್ಲದಂತೆ ಮರಾಠಿ ರಂಗಭೂಮಿ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಾ ಮರಾಠಿ ರಂಗಭೂಮಿಯಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದರು. ತಮ್ಮ ಗೆಳೆಯರೊಂದಿಗೆ ಅವರು ಚಿತ್ರಕತೆ ರಚಿಸಿದ ಮರಾಠಿ ಚಿತ್ರ ’22 ಜೂನ್ 1897’ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿತ್ತು.

ಅಣ್ಣ ತಮ್ಮಂದಿರಿಬ್ಬರೂ ಮುಂಬೈ ತೊರೆದು ಕರ್ನಾಟಕದಲ್ಲಿಯೇ ನೆಲೆ ನಿಂತು ಚಿತ್ರರಂಗದಲ್ಲಿಯೇ ಅದೃಷ್ಟ ಪರೀಕ್ಷೆಗಿಳಿದರು. ಇಬ್ಬರೂ ಯಶಸ್ಸು ಕಂಡರು. ಅನಂತ್‌–ಶಂಕರ್‌ ಇಬ್ಬರೂ ರಂಗಭೂಮಿ ಬುನಾದಿ ಇದ್ದ ಕಲಾವಿದರು.

ಕಮರ್ಷಿಯಲ್‌ ಚಿತ್ರಗಳ ನಾಯಕರಾಗಿ ಶಂಕರ್‌ನಾಗ್‌ ಜನಪ್ರಿಯತೆಗಳಿಸಿದ್ದರಿಂದ, ಅಂತಹ ಚಿತ್ರಗಳು ಸಾಲುಸಾಲಾಗಿ ಬಂದವು. ಕೇವಲ 11 ವರ್ಷಗಳಲ್ಲಿ ಅವರು ನಟಿಸಿದ್ದು 95ಕ್ಕೂ ಹೆಚ್ಚು ಚಿತ್ರಗಳಲ್ಲಿ. ಅಲ್ಲದೆ, ಓರಗೆಯ ಹುಡುಗರನ್ನು ಒಟ್ಟು ಮಾಡಿಕೊಂಡ ಶಂಕರ್‌ನಾಗ್‌ ‘ಸಂಕೇತ್’ ತಂಡ ಕಟ್ಟಿ ರಂಗಭೂಮಿಯಲ್ಲಿ ಸಕ್ರಿಯರಾದರು. ಭಿನ್ನಬಗೆಯ ನಾಟಕಗಳಿಂದ ಕನ್ನಡ ರಂಗಭೂಮಿಗೆ ಚೈತನ್ಯ ತಂದರು. ಕನ್ನಡ ಚಿತ್ರೋದ್ಯಮಕ್ಕೆ ಕಂಪ್ಯೂಟರ್ ಚಾಲಿತ ಶಬ್ದಗ್ರಹಣ ತಂತ್ರಜ್ಞಾನವನ್ನು ಕೊಡುಗೆಯಾಗಿತ್ತ ಸಂಕೇತ್ ಸ್ಟುಡಿಯೋ ಶಂಕರ್‌ನಾಗ್ ಅವರ ಮತ್ತೊಂದು ಕಲಾ ಕೊಡುಗೆಯಾಗಿತ್ತು.

ಶಂಕರ್‌ನಾಗ್‌ 1984ರಲ್ಲಿ ಅಭಿನಯಿಸಿದ 14 ಚಲನಚಿತ್ರಗಳು ಬಿಡುಗಡೆಗೊಂಡಿರುವುದು ದಾಖಲೆಯಾಗಿದೆ. 1990ರಲ್ಲಿ 10 ಚಲನಚಿತ್ರಗಳು ಹಾಗೂ ನಂತರದ 1991ರಲ್ಲಿ ನಾಲ್ಕು ಚಿತ್ರಗಳು ಬಿಡುಗಡೆಗೊಂಡಿದ್ದವು. ಅವರು ಅವರು ಅಭಿನಯಸಿದಿ ಕೊನೆಯ ಚಿತ್ರ ಪ್ರಾಣ ಸ್ನೇಹಿತ.

ಭಾರತದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಿರುತೆರೆಯತ್ತಲೂ ಮುಖ ಮಾಡಿದ ಶಂಕರ್‌ನಾಗ್‌ ರಾಷ್ಟ್ರೀಯ–ಅಂತರರಾಷ್ಟ್ರೀಯ ವಲಯಗಳಲ್ಲಿ ಅವರ ರೂಪಿಸಿದ ‘ಮಾಲ್ಗುಡಿ ಡೇಸ್‌’ ಖ್ಯಾತಿ ಪಡೆಯಿತು. ಕರ್ನಾಟಕದ ನಿಸರ್ಗ ಸೌಂದರ್ಯವನ್ನು ‘ಮಾಲ್ಗುಡಿ ಡೇಸ್’ ಮೂಲಕ ಜಗತ್ತಿಗೆ ಪರಿಚಯಿಸಿದರು.

ಎಷ್ಟು ಕೆಲಸ ಮಾಡಿದರೂ ಅವರಿಗೆ ತೃಪ್ತಿ ಎಂಬುದು ಇರಲೇ ಇಲ್ಲ. ಹೊಸ ಪರಿಕಲ್ಪನೆಯ ‘ಕಂಟ್ರಿ ಕ್ಲಬ್‌’ ಶುರು ಮಾಡಿದರು. ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಲು ಯೋಜನೆಯೊಂದನ್ನು ರೂಪಿಸಿದ್ದರು. ನಂದಿ ಬೆಟ್ಟಕ್ಕೆ ರೋಪ್‌ವೇ ಹಾಕುವ ನೂತನ ಯೋಜನೆಯೊಂದು ಶಂಕರ್‌ನಾಗ್‌ ತಲೆಯಲ್ಲಿ ಬಂದು, ಅದಕ್ಕೆ ಸಂಬಂಧಿಸಿದ ದೇಶ ವಿದೇಶಗಳ ಕಂಪೆನಿಗಳನ್ನು ಸಂಪರ್ಕಿಸಿದ್ದರು. ಬೆಂಗಳೂರಿನ ಸುಗಮ ಸಂಚಾರಕ್ಕೆ ‘ಮೆಟ್ರೊ’ ಆರಂಭಿಸುವ ಯೋಚನೆ ಮೊದಲು ಹೊಳೆದದ್ದು ಶಂಕರ್‌ನಾಗ್‌ಗೆ‌ ಅವರಿಗೆ ಎಂಬುದು ವಿಶೇಷತೆಗಳಲ್ಲಿ ಒಂದಾಗಿದೆ.

ಶಂಕರ್‌ನಾಗ್ ಅವರ ಪತ್ನಿ ಅರುಂಧತಿ ನಾಗ್‌. ಕಲಾವಿದೆಯಾಗಿದ್ದ ಅವರನ್ನು ಇಷ್ಟ ಪಟ್ಟ ನಂತರ ಮದುವೆಯಾದರು. ಮಗಳು ಕಾವ್ಯ.

1990ರ ಸೆಪ್ಟೆಂಬರ್‌ 30ರಂದು ದಾವಣಗೆರೆಯ ಹಳ್ಳಿಯೊಂದಾದ ಅನಗೋಡು ಹಳ್ಳಿಯಲ್ಲಿ ಜೋಕುರಸ್ವಾಮಿ ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಸಂದರ್ಭವದು ಧಾರವಾಡದಿಂದ ತೆರಳುತ್ತಿದ್ದ ಶಂಕರ್‌ನಾಗ್ ಅವರು ಕಾರು ಅಪಘಾತದಲ್ಲಿ ನಿಧನರಾದರು.

Donate Janashakthi Media

Leave a Reply

Your email address will not be published. Required fields are marked *