ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಅವರ ಹೋರಾಟಗಳ ಐಕ್ಯತೆಯನ್ನು ಸಾರುವ ದಿನವಾಗಿ ಈ ವರ್ಷವೂ ಜಗದಗಲದಲ್ಲೂ ಮೇ ದಿನವನ್ನು ಆಚರಿಸಲಾಯಿತು.
ಯು.ಎಸ್ ನಲ್ಲಿ ನ್ಯೂಯಾರ್ಕ್ ಸೇರಿದಂತೆ ಎಲ್ಲೆಡೆ ಈ ವರ್ಷದ ಮೇ ದಿನದಲ್ಲಿ ಕಾರ್ಮಿಕರ ಯೂನಿಯನ್ ಕಟ್ಟಿಕೊಳ್ಳುವ ಹಕ್ಕಿನ ಬಗ್ಗೆ ಹೆಚ್ಚಿನ ಒತ್ತು ಇತ್ತು. ಅಮೆಜಾನ್ ಮತ್ತು ಸ್ಟಾರ್ ಬಕ್ಸ್ ಕೆಲವು ಘಟಕಗಳಲ್ಲಿ ಯೂನಿಯನ್ ಕಟ್ಟುವುದರಲ್ಲಿ ಸಫಲತೆ, ಇತರ ಘಟಕಗಳಲ್ಲಿ ಇದಕ್ಕೆ ಕಂಪನಿಯ ದಮನ-ಪ್ರತಿರೋಧಗಳ ಉತ್ತರಗಳ ಹಿನ್ನೆಲೆಯಲ್ಲಿ ಯೂನಿಯನ್ ಹಕ್ಕುಗಳ ಕುರಿತು ನಡೆಯುತ್ತಿರುವ ರಾಷ್ಟ್ರೀಯ ಅಭಿಯಾನದ ಭಾಗವಾಗಿತ್ತು. ಹೆಚ್ಚಿನ ನಗರಗಳಲ್ಲಿ ಕಾರ್ಮಿಕರ ಮೆರವಣಿಗೆ ಅಮೆಜಾನ್ ಮತ್ತು ಸ್ಟಾರ್ ಬಕ್ಸ್ ಕೆಲವು ಘಟಕಗಳ ಮುಂದೆ ಹಾದು ಹೋಗಿ ಆಯಾ ಕಂಪನಿ ನಿರ್ವಾಹಕ ಮಂಡಳಿಗಳ ಧೋರಣೆಗಳ ವಿರುದ್ಧ ಘೋಷಣೆ ಕೂಗಲಾಯಿತು. ವಲಸೆ ಕಾರ್ಮಿಕರ ಹಕ್ಕಿನ ಮೇಲೂ ಹೆಚ್ಚಿನ ಮೆರವಣಿಗೆ-ಸಭೆಗಳಲ್ಲಿ ಒತ್ತು ಇತ್ತು.
ಫ್ರಾನ್ಸ್ ನಲ್ಲಿ ಹೊಸದಾಗಿ ಚುನಾಯಿತರಾದ ಅಧ‍್ಯಕ್ಷ ಮ್ಯಾಕ್ರಾನ್ ಕಾರ್ಮಿಕ ನೀತಿಗಳನ್ನು ಹಿಂತೆಗೆದುಕೊಳ್ಳಬೇಕು. ಜೂನ್ ನಲ್ಲಿ ಬರಲಿರುವ ಪಾರ್ಲಿಮೆಂಟರಿ ಚುನಾವಣೆಗಳಲ್ಲಿ ಮ್ಯಾಕ್ರಾನ್ ಅವರ ಮತ್ತು ನವನಾಝಿ ಪಕ್ಷಗಳೆರಡನ್ನೂ ಸೋಲಿಸಬೇಕು. ಇದನ್ನು ಸಾಧಿಸಲು ರಚಿಸಲಾಗಿರುವ ಕಮ್ಯುನಿಸ್ಟ್-ಗ್ರೀನ್ ಎಡಕೂಟವನ್ನು ಬೆಂಬಲಿಸಬೇಕು ಎನ್ನುವುದು ಸಾಮಾನ್ಯ ವಿಷಯವಾಗಿತ್ತು.
ಶ‍್ರೀಲಂಕಾ ಮತ್ತು ಟರ್ಕಿಗಳಲ್ಲಿ ಮೇ ದಿನದ ಮೆರವಣಿಗೆಗೆ ಇದ್ದ ನಿಷೇಧ ಉಲ್ಲಂಘಿಸಿ ಮೇ ದಿನಾಚರಣೆ ಮಾಡಿದ ವರದಿಗಳು ಬಂದಿವೆ. ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್ ನಲ್ಲಿ ಎಂದಿನಂತೆ ಕಾರ್ಮಿಕರ ಭಾರೀ ಮೆರವಣಿಗೆ ರ‍್ಯಾಲಿ ನಡೆದಿದೆ.
ಗ್ರೀಸ್ ನ ಅಥೆನ್ಸ್ ಸೇರಿದಂತೆ ಎಲ್ಲ ಯುರೋಪಿಯನ್ ದೇಶಗಳಲ್ಲಿ, ಪನಾಮಾ ಸೇರಿದಂತೆ ಎಲ್ಲ ಲ್ಯಾಟಿನ್ ಅಮೆರಿಕನ್ ದೇಶಗಳಲ್ಲಿ ಮೇ ದಿನಾಚರಣೆ ನಡೆದಿದೆ. ಕ್ಯೂಬಾ ರಾಜಧಾನಿ ಹವಾನಾದಲ್ಲಿ ಎಂದಿನಂತೆ ಬಹುಶಃ ಜಗತ್ತಿನ ಅತ್ಯಂತ ದೊಡ್ಡ







