ರೈತ ಹುತಾತ್ಮ ದಿನಾಚರಣೆ : ರೈತರು ಸಂಘಟಿತರಾಗಬೇಕಿದೆ – ಡಾ.ವಿಜೂ ಕೃಷ್ಣನ್

ವರದಿ : ದಾವಲಸಾಬ್‌ ತಾಳಿಕೋಟೆ

ನರಗುಂದ : ರೈತ ವಿರೋಧಿ ನೀತಿಗಳನ್ನು ಹೆಮ್ಮೆಟ್ಟಿಸಲು ರೈತರು ಸಂಘಟಿತರಾಗಬೇಕು ಎಂದು ಅಖಿಲ ಭಾರತ ಕಿಸಾನ ಸಭಾದ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ವಿಜು ಕೃಷ್ಣನ್ ಕರೆ ನೀಡಿದರು.

ಗಜೇಂದ್ರಗಡ ಸೇವಾಲಾಲ ಕಲ್ಯಾಣ ಮಂಟಪದಲ್ಲಿ ನಡೆದ ರೈತ ಹುತಾತ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ಸರ್ಕಾರದ ರೈತ ವಿರೋಧಿ ನೀತಿಯಿಂದ ಕಬ್ಬು ಬೆಳೆಗಾರರಿಗೆ 4000 ಸಾವಿರ ಕೋಟಿ ವರ್ಷಕ್ಕೆ ಆಗುತ್ತಿದೆ ಈ ದೇಶದ ಬಂಡವಾಳಶಾಹಿಗಳು ಬೆಲೆ ನಿಗದಿಪಡಿಸುತ್ತಾರೆ. ಆದರೆ ರೈತರು ಬೆಳೆದ ಬೆಳೆಗೆ ನಿಜವಾದ ಬೆಲೆ ಸಿಗಬೇಕಾದ್ರೆ ಸಂಘಟಿತರಾಗಿ ಸರ್ಕಾರದ ಈ ನೀತಿಯ ವಿರುದ್ದ ಬೀದಿಗಿಳಿಯಬೇಕು. ದೊಡ್ಡದೊಡ್ಡ ಕಂಪನಿಗಳ ಮಾಲೀಕರ ಲಕ್ಷಗಟ್ಟಲೆ ಸಾಲವನ್ನು ಮನ್ನ ಮಾಡಿದ್ದಾರೆ. ಆದರೆ ರೈತರ ಸಾಲವನ್ನು ಮನ್ನಾ ಮಾಡಲು ಇವರಿಂದ ಸಾಧ್ಯವಾಗಿಲ್ಲ. ಹಾಗಾದ್ರೆ ಇವರು ಯಾರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಇದನ್ನೂಓದಿ:ರೈತ ಹುತಾತ್ಮ ದಿನ: ನರಗುಂದದಲ್ಲಿ ಭಾರಿ ಸಮಾವೇಶಕ್ಕೆ ಸಿದ್ಧತೆ- ರಾಕೇಶ್‌ ಟಿಕಾಯತ್‌ ಭಾಗವಹಿಸುವ ನಿರೀಕ್ಷೆ

 

ಕೇರಳದ ಎಡ ಸರ್ಕಾರ ನಿಜವಾಗಿಯೂ ರೈತರ ಹಿತಾಸಕ್ತಿ ಕಾಪಾಡುವಲ್ಲಿ ಸದಾ ಮುಂದಿದೆ. ದುಡಿಯುವ ಜನರ ಮೇಲೆ ಕೂಡಾ ೪ ಬಿಲ್ ಗಳನ್ನು ಪಾಸ್ ಮಾಡುವ ಮೂಲಕ ಕಾರ್ಮಿಕ ವಿರೋಧಿ ನೀತಿಯನ್ನು, ಹಿಗೇ ಒಂದಲ್ಲಾ ಒಂದು ಸಮುದಾಯದ ಮೇಲೆ ಪ್ರಭುತ್ವ ತನ್ನ ಸರ್ವಾಧಿಕಾರಿ ಧೋರಣೆಯನ್ನು ಮಾಡುತ್ತಲೇ ಬಂದಿದೆ ಎಂದರು. ಬಿಜೆಪಿಯ ಸಂಘ ಪರಿವಾರ ಐಕ್ಯತೆಯನ್ನು ಒಡೆಯಲು ಪ್ರಯತ್ನ ಮಾಡುತ್ತಿದ್ದು ಇದನ್ನು ನಿಯಂತ್ರಣ ಮಾಡುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಹಿರಿಯ ರೈತ ಮುಖಂಡ ಕೂಡ್ಲೇಪ್ಪ ಗುಡಿಮನಿ ವಹಿಸಿದ್ದರು. ಜಿಲ್ಲಾ ಸಂಚಾಲಕ ಎಂ ಎಸ್ ಹಡಪದ ಪ್ರಾಸ್ತಾವಿಕವಾಗಿ ಮಾತನಾಡಿದರು, ನರಗುಂದ ನವಲಗುಂದ ರೈತ ಬಂಡಾಯದ ರುವಾರಿ ಬಿ.ಎಸ್ ಸೊಪ್ಪಿನ ಅವರು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜಿ. ನಾಗರಾಜ, ರವೀಂದ್ರ, ಹೊನವಾಡ ಮಹೇಶ ಪತ್ತಾರ, ಶರಣು ಪೂಜಾರ, ಬಸವರಾಜ ಮಂತೂರ, ಫಯಾಜ್ ತೋಟದ, ಮಹೇಶ ಹಿರೇಮಠ, ಬಾಲು ರಾಠೋಡ, ಪೀರು ರಾಠೋಡ, ವೇದಿಕೆ ಮೇಲಿದ್ದರು ನೂರಾರು ರೈತ, ಕಾರ್ಮಿಕರು ಸಮಾರಂಭದಲ್ಲಿ ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *