ಇಸ್ರೋದಿಂದ ಬ್ರೆಜಿಲ್‌ನ ಉಪಗ್ರಹ ಯಶಸ್ವಿ ಉಡಾವಣೆ

ಪಿಟಿಐ ನ್ಯೂಸ್‌

ಶ್ರೀಹರಿಕೋಟ : ಇಲ್ಲಿನ ಸತೀಶ್‌ ಧವನ್‌ ಬಾಹ್ಯಕಾಶ ಕೇಂದ್ರದಿಂದ 2021ನೇ ಸಾಲಿನಲ್ಲಿ ಮೊದಲ ಬಾರಿಗೆ ದೇಶೀಯ ನಿರ್ಮಿತ ಪಿಎಸ್ಎಲ್ ವಿ-ಸಿ 51 ರಾಕೆಟ್ ನಿಂದ ಬ್ರೆಜಿಲ್‌ನ 637 ಕೆ.ಜಿ. ತೂಕದ ಅಮೆಜೋನಿಯಾ-1, 18 ಸಹ ಉಪಗ್ರಹಗಳನ್ನು ಇಂದು ಬಾಹ್ಯಕಾಶಕ್ಕೆ ಎರಡು ತಾಸಿನಲ್ಲಿ ಯಶಸ್ವಿಯಾಗಿ ಉಡಾವಣೆಯಾಗಿದೆ.

ಬೆಳಿಗ್ಗೆ 10.24ಕ್ಕೆ ಸರಿಯಾಗಿ ಹವಾಮಾನಕ್ಕೆ ಅನುಗುಣವಾಗಿ ಸರಿಯಾಗಿ ಉಪಗ್ರಹವನ್ನು ಉಡಾವಣೆ ಮಾಡಲಾಯಿತು. 22.5 ತಾಸಿನ ಇಳಿ ಎಣಿಕೆ ನಂತರ 44.4 ಮೀಟರ್ ಎತ್ತರದ ಪಿಎಸ್ಎಲ್ –ಸಿ51 ಕಕ್ಷೆಯ ಕಡೆಗೆ ಹೊರಟಿತು. ರಾಕೆಟ್‌ ಉಡಾವಣೆಯಾಗಿ 5 ನಿಮಿಷಗಳಲ್ಲಿ ಮೂರನೇ ಹಂತವನ್ನು ಯಶಸ್ವಿಯಾಗಿ ಪೂರೈಸಿತು.

ಅಮೆಜಾನಿಯಾ-1 ಉಪಗ್ರಹವು ಅಮೆಜಾನ್‌ ಪ್ರದೇಶದಲ್ಲಿ ಕಾಡು ನಾಶದ ಬಗ್ಗೆ ನಿಗಾವಹಿಸಲು ಹಾಗೂ ಕೃಷಿಗೆ ಸಂಬಂಧಿಸಿದಂತೆ ಪರಿಶೀಲನೆಗೆ ನೆರವಾಗಲಿದೆ.

ಇಸ್ರೊ ಪಿಎಸ್‌ಎಲ್‌ವಿ ರಾಕೆಟ್‌ನ 53ನೇ ಮಿಷನ್‌ ಇದಾಗಿದ್ದು, ಪಿಎಸ್‌ಎಲ್‌ವಿ-ಸಿ51 ರಾಕೆಟ್‌ ಅಮೆಜಾನಿಯಾ-1 ಉಪಗ್ರಹದ ಜೊತೆಗೆ ಇತರೆ 18 ಉಪಗ್ರಹಗಳನ್ನು ಕಕ್ಷೆಗೆ ಸೇರಿದೆ. ಚೆನ್ನೈ ಮೂಲದ ಸ್ಪೇಟ್‌ ಕಿಡ್ಜ್‌ ಇಂಡಿಯಾದ (ಎಸ್‌ಕೆಐ) ಸತೀಶ್‌ ಧವನ್‌ ಸ್ಯಾಟ್‌ (ಎಸ್‌ಡಿ ಸ್ಯಾಟ್)‌, ಭಾರತದ ಶೈಕ್ಷಣಿಕ ಸಂಸ್ಥೆಗಳಿಂದ ಮೂರು ಯೂನಿಟಿಸ್ಯಾಟ್‌ಗಳು (UNITYsats) ಹಾಗೂ ಇಸ್ರೊದ ನ್ಯೂಸ್ಪೇಟ್‌ ಇಂಡಿಯಾ ಲಿಮಿಟೆಡ್‌ನ (ಎನ್‌ಎಸ್‌ಐಎಲ್‌) 14 ಉಪಗ್ರಹಗಳನ್ನು ಒಳಗೊಂಡಿದೆ.

ಎನ್‌ಎಸ್‌ಐಎಲ್‌ನ ಮೊದಲ ವಾಣಿಜ್ಯ ಉದ್ದೇಶಿತ ಯೋಜನೆ ಇದಾಗಿದ್ದು, ಇಸ್ರೊ ವೆಬ್‌ಸೈಟ್‌, ಯೂಟ್ಯೂಬ್‌, ಫೇಸ್‌ಬುಕ್‌ ಹಾಗೂ ಟ್ವಿಟ್ಟರ್‌ ಖಾತೆಗಳ ಮೂಲಕ ಉಪಗ್ರಹ ಉಡಾವಣೆಯ ನೇರ ಪ್ರಸಾರ ಮಾಡಲಾಯಿತು.

ಎನ್‌ಎಸ್‌ಐಎಲ್‌ನ ಮುಖ್ಯಸ್ಥ ಜಿ.ನಾರಾಯಣನ್‌ ರವರು ʻಬ್ರೆಜಿಲಿಯನ್‌ ನಿರ್ಮಿತ ಮೊದಲ ಉಪಗ್ರಹವನ್ನು ಉಡಾವಣೆ ಮಾಡುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆʼ ಎಂದು ಹೇಳಿದರು.

ಉಪಗ್ರಹ ಉಡಾವಣೆಯ ವಿಡಿಯೋವನ್ನು ನೋಡಲು ಕ್ಲಿಕ್‌ ಮಾಡಿರಿ

 

 

 

 

Donate Janashakthi Media

Leave a Reply

Your email address will not be published. Required fields are marked *