ಬೆಂಗಳೂರು: ಇಸ್ರೊದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ದಕ್ಷಿಣ ದ್ರುವ ಸೇರಿದೆ. ಲ್ಯಾಂಡರ್‌ನಿಂದ ಹೊರಬಂದ ರೋವರ್ ತನ್ನ ಕಾರ್ಯ ಆರಂಭಿಸಿದೆ.
ಇದನ್ನೂ ಓದಿ:ಚಂದ್ರಯಾನ-3 ಲ್ಯಾಂಡರ್‌ನಿಂದ ಹೊರಬಂದ ರೋವರ್, ಚಂದ್ರನ ಮೇಲೆ ಚಲನೆ ಆರಂಭ
ವಿಕ್ರಮ್ ಲ್ಯಾಂಡರ್‌ನಿಂದ ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈ ಚಲನೆ ಆರಂಭಿಸಿದೆ ಎಂದು ಇಸ್ರೋ ಮಾಹಿತಿ ನೀಡಿತ್ತು. ಇದೀಗ ಲ್ಯಾಂಡರ್‌ನಿಂದ ಪ್ರಗ್ಯಾನ್ ರೋವರ್ ಯಾವ ರೀತಿ ಹೊರಗಡೆ ಬಂದಿದೆ ಎನ್ನುವುದರ ವಿಡಿಯೊವನ್ನು ಇಸ್ರೊ ಎಕ್ಸ್‌ನ ಖಾತೆಯಲ್ಲಿ ಹಂಚಿಕೊಂಡಿದೆ.
ಚಂದ್ರಯಾನ-3 ರೋವರ್ ಲ್ಯಾಂಡರ್‌ನಿಂದ ಚಂದ್ರನ ಮೇಲ್ಮೈನಲ್ಲಿ ಹೊರಬಂದು ಹೇಗೆ ರಾಂಪ್ ಮಾಡಿತು ಎಂಬುದು ಇಲ್ಲಿದೆ ಎಂದು ವಿಡಿಯೊಗೆ ಕ್ಯಾಪ್ಷನ್ ನೀಡಿದೆ. ಲ್ಯಾಂಡರ್‌ನಿಂದ ರೋವರ್ ಹೊರಬರುವ ದೃಶ್ಯ ಅಚ್ಚರಿ ಮೂಡಿಸುವಂತಿದೆ.
… … and here is how the Chandrayaan-3 Rover ramped down from the Lander to the Lunar surface. pic.twitter.com/nEU8s1At0W
— ISRO (@isro) August 25, 2023
ಚಂದ್ರಯಾನ-3 ಬುಧವಾರ ಸಂಜೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಅನ್ನು ಯಶಸ್ವಿಯಾಗಿ ನಡೆಸಿತು. ಭಾರತ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿರುವ 4ನೇ ದೇಶವಾಗಿದೆ. ಮಾತ್ರವಲ್ಲದೇ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿರುವ ಮೊದಲ ನೌಕೆಯಾಗಿದೆ.
ಇದನ್ನೂ ಓದಿ : ‘ಚಂದ್ರಯಾನ-3’ ಸಕ್ಸಸ್, ಇತಿಹಾಸ ಬರೆದ ಭಾರತ!
ವಿಕ್ರಮ್ ಲ್ಯಾಂಡರ್ನಿಂದ ಬೇರ್ಪಟ್ಟ ಪ್ರಜ್ಞಾನ್ | ಚಂದ್ರನ ಮೇಲ್ಮೈ ಅಧ್ಯಯನ ಆರಂಭ