ಇಸ್ರೇಲ್ ನೊಂದಿಗೆ ಯು.ಎ.ಇ ಮತ್ತು ಬಹ್ರೇನ್ ಒಪ್ಪಂದ : ಪ್ಯಾಲೇಸ್ಟಿನಿಯನ್ ಪ್ರತಿಭಟನೆ

– ನಾಗರಾಜ ನಂಜುಂಡಯ್ಯ

ಇಸ್ರೇಲ್ ನೊಂದಿಗೆ ಯುನೈಟೆಡ್  ಅರಬ್ಬೀ ಎಮಿರೇಟ್ಸ್ (ಯು.ಎ.ಇ) ಮತ್ತು ಬಹ್ರೇನ್ ದೇಶಗಳು, ತಮ್ಮ ಸಂಬಂಧಗಳನ್ನು “ಸಾಮಾನ್ಯೀಕರಿಸುವ” ಒಪ್ಪಂದಕ್ಕೆ ಇಸ್ರೇಲ್ ನೊಂದಿಗೆ ಸಹಿ ಮಾಡಿವೆ.  ಯು.ಎಸ್ ನ ಮಧ್ಯಸ್ತಿಕೆಯಿಂದ ಈ ಎರಡು ದೇಶಗಳು ‘ಅಬ್ರಹಾಂ ಒಪ್ಪಂದ’ ಎಂದು ಕರೆಯಲಾಗುವ ಈ ಒಪ್ಪಂದಕ್ಕೆ ಸಹಿ ಹಾಕಿವೆ. ಇದರ ವಿರುದ್ದ ಇಸ್ರೇಲ್ ಆಕ್ರಮಿತ ಭೂ ಪ್ರದೇಶಗಳಲ್ಲಿ ನೂರಾರು ಪ್ಯಾಲೇಸ್ಟಿನಿಯನ್ ರು ಪ್ರತಿಭಟನೆ ನಡೆಸಿದ್ದಾರೆ.

ಪ್ಯಾಲೇಸ್ಟಿನಿಯನ್ ಭೂ ಪ್ರದೇಶಗಳನ್ನು ಅತಿಕ್ರಮಣ ಮಾಡಿ ಕೊಂಡಿರುವ ಇಸ್ರೇಲಿನ ಜತೆ, ಈ ಸಮಸ್ಯೆ ಬಗೆಹರಿಸುವವರೆಗೆ ಸಂಬಂಧ ಇಟ್ಟುಕೊಳ್ಳದಿರುವ ಅರಬ್ ದೇಶಗಳ ಸಾಮಾನ್ಯ ನೀತಿಯನ್ನು ಇದು ಉಲ್ಲಂಘಿಸಿದೆ ಎಂಬುದು ಅವರ ಆಪಾದನೆ. ಜೋರ್ಡಾನ್ ಮತ್ತು ಈಜಿಪ್ಟ್ ಬಿಟ್ಟರೆ ಎಲ್ಲ ಅರಬ್ ದೇಶಗಳು ಇಸ್ರೇಲಿನ ಜತೆ ಸಂಬಂಧ ಇಟ್ಟುಕೊಂಡಿಲ್ಲ.

ಇದೊಂದು ನಾಚಿಕೆಗೇಡಿನ ಒಪ್ಪಂದ ಎಂದಿರುವ ಪ್ಯಾಲೇಸ್ಟಿನಿಯನ್ ಪ್ರತಿಭಟನಾಕಾರರು. ಅಮೆರಿಕಾದ ಅಧ್ಯಕ್ಷರ ಶ್ವೇತ ಭವನದ ಮುಂದೆ ಒಪ್ಪಂದದ ವಿರುದ್ದ ಪ್ರತಿಭಟನೆ ನೆಡೆಸಿದ್ದಾರೆ.  ‘ನಿಜವಾದ ಯಹೂದಿಗಳು ನೋಡಿ ನಾವು ಇಲ್ಲಿದ್ದೇವೆ’ ‘ಇಸ್ರೇಲ್ ನಮ್ಮನ್ನು ಪ್ರತಿನಿಧಿಸುವುದನ್ನು ನಾವೆಂದು ಒಪ್ಪುವುದಿಲ್ಲ’ ‘ನಾವೆಲ್ಲಾ ಪ್ಯಾಲೇಸ್ಟಿನಿಯನ್ ರು’, ‘ನಮ್ಮನ್ನು ಯು.ಎ.ಇ ಮತ್ತು ಬಹ್ರೇನ್ ಒಪ್ಪಂದಕ್ಕೆ ಸೇರಿಸುವುದನ್ನು ನಾವು ವಿರೋದಿಸುತ್ತೇವೆ’ (No To Normalisation) ಎಂದಿದ್ದಾರೆ ಅವರು.

ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆ ಮತ್ತು ಗಾಜಾದ ಪ್ರಮುಖ ನಗರಗಳಾದ ರಮಲ್ಲಾ, ನಬ್ಲುಸ್ ಮತ್ತು ಹೆಬ್ರಾನ್ ಗಳಲ್ಲಿ ಪ್ರತಿಭಟನಾಕಾರರು ದೊಡ್ಡ ಸಂಖ್ಯೆಯಲ್ಲಿ ಒಟ್ಟುಗೂಡಿದ್ದರು. ಅವರ ಪ್ರಮುಖ ಘೋಷಣೆ “ಪ್ಯಾಲೇಸ್ಟಿನಿಯಾದ ಧ್ವಜಗಳನ್ನು ಮತ್ತು ಬ್ಯಾನರ್ ಗಳನ್ನು ಇಸ್ರೇಲ್ ಆಕ್ರಮಣಕಾರರೊಂದಿಗೆ ಸಾಮಾನ್ಯೀಕರಣ ಮಾಡಬೇಡಿ” ಎಂಬುದಾಗಿತ್ತು.  ಅವುಗಳಲ್ಲಿ ಕೆಲವು ಬ್ಯಾನರುಗಳು “ಯುಎಇ ಮತ್ತು ಬಹ್ರೇನ್ ಸಹಿ ಮಾಡಿದ್ದ ಒಪ್ಪಂದಗಳನ್ನು” ಅವಮಾನದ ಮತ್ತು ನಾಚಿಕೆಗೇಡಿನ ಒಪ್ಪಂದ “ಗಳು ಮತ್ತು ಇವು “ದೇಶದ್ರೋಹ”ದ ಒಪ್ಪಂದಗಳು ಎಂಬುದಾಗಿ ಬ್ಯಾನರ್ ಗಳ ಮೇಲೆ  ಬರೆದಿತ್ತು

ಕೇಂದ್ರ ಪ್ರದೇಶವಾದ ರಮಲ್ಲಾ” ನಗರದ ಇಸ್ರೇಲ್ ಆಕ್ರಮಿತ ಪ್ರದೇಶದಲ್ಲಿ ಅಯೋಜಿಸಿದ್ದ ಪ್ರಮುಖ ಪ್ರತಿಭಟನೆಯಲ್ಲಿ  ಕೋವಿಡ್-19 ಪ್ರಕರಣಗಳು ಹೆಚ್ಚಾಗಿದ್ದರೂ ಸಹಾ, ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳಿಂದ ಹೊರ ಬಂದು ಒಪ್ಪಂದದ ವಿರುದ್ದ ಪ್ರತಿಭಟನೆ ವ್ಯಕ್ತ ಪಡಿಸಿದರು. ಸೆಪ್ಟೆಂಬರ್ 15 ರಂದು, ಪಶ್ಚಿಮ ದಂಡೆ ಮತ್ತು ಪೂರ್ವ ಜೆರುಸಲೆಂ ನಲ್ಲಿ 1118 ಕ್ಕೂ ಹೆಚ್ಚು ಕೋವಿಡ್-19 ಸೊಂಕುಗಳು ದಾಖಲಾಗಿವೆ. ಈ ಎರಡು ಪ್ರಾಂತ್ಯಗಳಲ್ಲಿ ಒಟ್ಟು ಕೋವಿಡ್-19 ಸೋಂಕಿತರ ಸಂಖ್ಯೆ 2,5 ಲಕ್ಷಕ್ಕೂ ಹೆಚ್ಚು, ಇದರಲ್ಲಿ 40 ಸಾವಿರಕ್ಕಿಂತ ಹೆಚ್ಚು ಸಾವುಗಳು ಸಂಭವಿಸಿವೆ.  ಪ್ರತಿಭಟನೆಯಲ್ಲಿ ಭಾಗವಹಿಸಲು, ಇವರನ್ನು ಕೋವಿಡ್-19 ಸೋಂಕು ಹರಡುವಿಕೆಯ ಅಪಾಯ ಸ್ವಲ್ಪವು ಎದೆಗುಂದಿಸಲಿಲ್ಲ. ಇಸ್ರೇಲ್ ಆಕ್ರಮಣದ ವಿರುದ್ಧ ಮತ್ತು ಪ್ಯಾಲೇಸ್ಟಿನಿಯನ್ ರ ಹಕ್ಕುಗಳಿಗಾಗಿ ಮತ್ತು ಸಾರ್ವಭೌಮತ್ವದ ರಕ್ಷಣೆಗಾಗಿ ಹೋರಾಡುವ ಸಂಕಲ್ಪವನ್ನು ಇವರು ವ್ಯಕ್ತಪಡಿಸಿದ ಪರಿ ಗಮನಾರ್ಹವಾದದ್ದು.

ಈ ಒಪ್ಪಂದಕ್ಕೆ ಸಹಿ ಹಾಕಲು ಅರಬ್ ದೇಶಗಳ ಮೇಲೆ ಯು.ಎಸ್ ಅಧ್ಯಕ್ಷ ಟ್ರಂಪ್ ಸಾಕಷ್ಟು ಒತ್ತಡ ಹಾಕಿದ್ದರು. ಆದರೂ ಈ ಎರಡು ಸಣ್ಣ ದೇಶಗಳು ಮಾತ್ರ ಸಹಿ ಹಾಕಿವೆ. ಈ ಒಪ್ಪಂದ ಟ್ರಂಪ್ ಅವರ ‘ವಿದೇಶಾಂಗ ನೀತಿಯ ವಿಜಯ’ ಎಂದು ಬಿಸಿ ಏರುತ್ತಿರುವ ಯು.ಎಸ್ ಅಧ್ಯಕ್ಷೀಯ ಚುನಾವಣಾ ಪ್ರಚಾರದಲ್ಲಿ ಬಿಂಬಿಸಲು ಅವರು ಕಾತುರರಾಗಿದ್ದಾರೆ. ಅದಕ್ಕಾಗಿ ಈ ಒಪ್ಪಂದಕ್ಕೆ ಸಹಿ ಹಾಕುವ ಸಮಾರಂಭದಲ್ಲಿ ಅವರು ಸ್ವತಃ ಹಾಜರಿದ್ದರು. ಇದನ್ನು ಅವರು ಈ (ಪಶ್ಚಿಮ ಏಶ್ಯಾ) ಪ್ರದೇಶದಲ್ಲಿ ಹಾಗಬಿಸ್ರೇಲ್ ಮತ್ತು ಅರಬ್ ದೇಶಗಳ ನಡುವೆ ಶಾಂತಿ ತರುವ ಒಪ್ಪಂದ ಎಂದು ಬಣ್ಣಿಸಿದ್ದರು. ಇದು ಅತಿಶಯೋಕ್ತಿ ಎಂಬುದು ಸ್ವಯಂವಿದಿತ. ಏಕೆಂದರೆ ಇಸ್ರೇಲಿನ ಜತೆ ಗಡಿ ಹಂಚಿಕೊಂಡಿರುವ ಅರಬ್ ದೇಶಗಳು ಯಾವುದೂ ಇಂತಹ ಒಪ್ಪಂದ ಮಾಡಿಕೊಂಡಿಲ್ಲ. ಆದ್ದರಿಂದ ಪ್ಯಾಲೆಸ್ಟೀನ್ ಸಮಸ್ಯೆ ಬಗೆಹರಿಸುವ ವರೆಗೆ ಈ ಪ್ರದೇಶದಲ್ಲಿ ಶಾಂತಿ ನೆಲೆಸುವ ಸಂಭವ ಇಲ್ಲ.  ಮಾತ್ರವಲ್ಲ, ಯೆಮೆನ್, ಸಿರಿಯಾ ಗಳಲ್ಲಿ ಘರ್ಷಣೆ ಮುಂದುವರೆದಿದೆ. ಮಾತ್ರವಲ್ಲ, ಇಡೀ ಪ್ರದೇಶದಲ್ಲಿ ಸುನ್ನಿ-ಶಿಯಾ ಘರ್ಷಣೆ ಹೆಚ್ಚಿದೆ.

ಆದರೆ ಇದರರ್ಥ ಇದು ಈ ಪ್ರದೇಶದ ಮಿಲಿಟರಿ ವ್ಯೂಹಾತ್ಮಕ ಮತ್ತು ರಾಜಕೀಯ ದೃಷ್ಟಿಯಿಂದ ಅಮುಖ್ಯ ಒಪ್ಪಂದವೇನಲ್ಲ. ಈ ಪ್ರದೇಶದಲ್ಲಿ ಅಮೆರಿಕದ ಪ್ರಭಾವ ಯಜಮಾನಿಕೆ ಕಡಿಮೆಯಾಗುತ್ತಿದ್ಧಂತೆ, ತುರ್ಕಿ ಮತ್ತು ಇರಾನ್ ಪ್ರಾದೇಶಿಕ ಶಕ್ತಿಕೇಂದ್ರಗಳಾಗಿ ಬೆಳೆಯುತ್ತಿದ್ದಂತೆ, ಅಮೆರಿಕದ ಮಿಲಿಟರಿ-ಆರ್ಥಿಕ ಬಲದ ಮೇಲೆ ಇರುವ ಸುನ್ನಿ ಅರಬ್ ದೇಶಗಳು ಅಮೆರಿಕ ಬೆಂಬಲಿತ ಇಸ್ರೇಲ್ ಜತೆ ಒಪ್ಪಂದ ಮಾಡಿಕೊಂಡು ಮೂರನೇ ಗುಂಪಾಗಿ ಈ ಪ್ರದೇಶದಲ್ಲಿ ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿವೆ. ಇದಕ್ಕಾಗಿ 2002 ರಲ್ಲಿ ಅರಬ್ ದೇಶಗಳು ಮಾಡಿಕೊಂಡಿದ್ದ  ಪ್ಯಾಲೆಸ್ಟೀನ್ ಕುರಿತ ಒಪ್ಪಂದವನ್ನು ನಿರ್ಲಕ್ಷ ಮಾಡಲು ತಯಾರಾಗುತ್ತಿವೆ. ಈ ಒಪ್ಪಂದ ಅಂತಹ ಟ್ರೆಂಡ್ ನ್ನು ತೋರಿಸುತ್ತಿದೆ. ಒಮನ್, ಕತಾರ್ ಮುಂತಾದ ಇತರ ಕೊಲ್ಲಿ ಪ್ರದೇಶದ ಸಣ್ಣ ಅರಬ್ ದೇಶಗಳು ಇದನ್ನು ಅನುಸರಿಸಬಹುದು.

ಯು.ಎಸ್ ಗೆ ಜೂಲಿಯನ್ ಅಸ್ಸಾಂಜೆ ಹಸ್ತಾಂತರಕ್ಕೆ ವಿರೋಧ

ಜುಲಿಯನ್ ಪೌಲ್ ಅಸ್ಸಾಂಜೆ  ಆಸ್ಟೇಲಿಯಾದ ಒಬ್ಬ ಪ್ರಜೆ, 2006 ರಲ್ಲಿ ವಿಕಿಲೀಕ್ಸ್‍ನ ಅನ್ನು ಸಂಸ್ಥಾಪನೆ ಮಾಡಿದವರು, ಇವರೊಬ್ಬ ಸಂಪಾದಕರು, ಪತ್ರಕರ್ತರು ಹಾಗೂ ಸಕ್ರೀಯ ಪ್ರಸಾರಕರು. 2010 ರಲ್ಲಿ ಯು.ಎಸ್ ಸೈನ್ಯ ದ ಗುಪ್ತಚರ ವಿಶ್ಲೇಷಕ ಚೆಲ್ಸಿಯಾ ಮ್ಯಾನಿಂಗ್ ರವರು ಒದಗಿಸಿದ ಸರಣಿ ವರದಿಗಳನ್ನು ತಮ್ಮ ವಿಕಿಲೀಕ್ಸ್ ಮೂಲಕ ಸೋರಿಕೆ ಮಾಡಿದ ಎಂಬ ಆರೋಪದ ಮೇಲೆ ಅಸ್ಸಾಂಜೆ ಬಂಧನಕ್ಕೆ ಒಳಪಟ್ಟಿದ್ದಾರೆ.

ಇದು  “ವಿಕಿಲೀಕ್ಸ್ ಫೈಲ್ಸ್” ಎಂದೇ ಪ್ರಸಿದ್ಧಿಯಾಗಿದೆ. ಇದರಲ್ಲಿ ಪ್ರಮುಖವಾಗಿ ಸಾಮ್ರಾಜ್ಯಶಾಹಿ ಯು.ಎಸ್ ತನ್ನ ಯಜಮಾನಿಕೆಯ ಹೆಸರಿನಲ್ಲಿ ಮತ್ತು ತನ್ನ ಮಿಲಿಟರಿ ಬಲವನ್ನು ಬಳಸಿಕೊಂಡು ಹಲವಾರು ದೇಶಗಳ ಮೇಲೆ ಎಸಗಿದ ಯುದ್ದಗಳ ಹಿಂದಿರುವ ವ್ಯೂಹವನ್ನು ತನ್ನ ವಿಕಿಲೀಕ್ಸ್ ಫೈಲ್ಸ್ ನಲ್ಲಿ ಕ್ರೋಡಿಕರಿಸಿ ಪ್ರಸಾರ ಮಾಡಿದ್ದರು. ಯುಎಸ್ ನ ಅಮಾನವೀಯ ಯುದ್ದಗಳ ದುರುದ್ದೇಶಗಳನ್ನು ಬಯಲಿಗೆಳೆದಿದ್ದರು. ಈ ಕಾರಣಗಳಿಂದಾಗಿಯೇ ಅಸ್ಸಾಂಜೆ ಬಂಧನದಲ್ಲಿ ಇರುವುದು. ಇದರೊಂದಿಗೆ ಇನ್ನೂ 18 ಆರೋಪಗಳನ್ನು ಎದುರಿಸುತ್ತಿದ್ದಾರೆ. ಅವುಗಳಲ್ಲಿ 17 ಬೇಹುಗಾರಿಕೆ ಕಾಯಿದೆಯಡಿಯಲ್ಲಿ ದಾಖಲಾಗಿವೆ.

ಇದೀಗ ಲಂಡನ್ನಿನ ಸೆರೆಮನೆಯ ವಾಸದಲ್ಕಿ ಅಸ್ಸಾಂಜೆ ಇದ್ದಾರೆ. ವಿಚಾರಣೆಗಾಗಿ ಯು.ಎಸ್ ಗೆ ಹಸ್ತಾಂತರ ಮಾಡಬೇಕೆಂದು ಯು.ಎಸ್ ಸರಕಾರ ಒತ್ತಾಯಿಸುತ್ತಿದೆ. ಯು.ಎಸ್ ನ ಹಸ್ತಾಂತರದ ಕೋರಿಕೆಯನ್ನು ಅಸ್ಸಾಂಜೆ ನಿರಾಕರಿಸಿದ್ದಾರೆ. ಇವರ ಬಂಧನವನ್ನು ಮತ್ತು ವಿಚಾರಣೆಯ ಹಸ್ತಾಂತರವನ್ನು ಜಗತ್ತಿನ ಪತ್ರಿಕಾ ಉದ್ಯಮ ಬಲವಾಗಿ ಟೀಕಿಸಿದೆ.  ಇದು ಪತ್ರಿಕಾ ಸ್ವಾತಂತ್ರ್ಯದ ಹರಣವೆಂದು ಹಲವರು ಕರೆದಿದ್ದಾರೆ. ಮಾನವ ಹಕ್ಕುಗಳ ಉಲಂಘನೆಯೆಂದು ಅನೇಕರು ದೂಷಿಸಿದ್ದಾರೆ.

ಫ್ಯಾಷನ್ ಡಿಸೈನರ್ ವಿವಿಯನ್ ವೆಸ್ಟ್ ವುಡ್ ಮತ್ತು ಅಸ್ಸಾಂಜೆ ಯ ಪಾಲುದಾರ ಸ್ಟೆಲ್ಲಾ ಮೋರಿಸ್ ಸೇರಿದಂತೆ ಹಲವಾರು ಡಜನ್ ಬೆಂಬಲಿಗರು ನ್ಯಾಯಾಲಯದ ಹೊರಗಡೆ ಜಮಾಯಿಸಿ, ಪ್ರತಿಭಟಿಸಿದ್ದಾರೆ.  ಹಸ್ತಾತಂತರ ವಿಚಾರಣೆಯ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಕ್ಕೆ ನೀಡುತ್ತಿರುವ ಬೆದರಿಕೆ  ಮತ್ತು ಕಿರುಕುಳವೆಂದು ಅಪಾದಿಸಿದ್ದಾರೆ.

ಜೂಲಿಯನ್ ಅಸ್ಸಾಂಜೆ ಒಬ್ಬ ಪತ್ರಿಕಾ ಸಂಪಾದಕ ಹಾಗೂ ಪ್ರಸಾರಕ, ಅವರು ವಿಶ್ವದ ಎಲ್ಲಾ ಭ್ರಷ್ಟಾಚಾರ ಮತ್ತು ಯುಎಸ್ ನ ಯುದ್ದಗಳ ಹಿಂದಿರುವ ಸಂಚು ಮತ್ತು ದುರುದ್ದೇಶಗಳ ಮೇಲೆ ಬೆಳಕು ಚೆಲ್ಲುತ್ತಿದ್ದಾರೆ ಎಂದು ಪ್ರತಿಭಟನೆಕಾರರಲ್ಲಿ ಪ್ರಮುಖರಾದ  ವೆಸ್ಟ್ ವುಡ್ ಹೇಳಿದ್ದಾರೆ.

ಆದರೆ, ಯು.ಎಸ್ ನ ಪ್ರಾಸಿಕ್ಯೂಟರ್ ಗಳು 49 ವರ್ಷದ ಅಸ್ಸಾಂಜೆಯ ವಿರುದ್ದ ಇದಕ್ಕೆ ವ್ಯತಿರಿಕ್ತವಾದ ಆರೋಪಗಳನ್ನು ಮಂಡಿಸಿದ್ದಾರೆ.  ಗೂಢಚರ್ಯೆ ಮತ್ತು ಕಂಪ್ಯೂಟರ್ ದುರುಪಯೋಗ  ಹಾಗೂ  ದಶಕದ ಹಿಂದೆ ವಿಕಿಲೀಕ್ಸ್  ಯುಎಸ್ ನ ರಹಸ್ಯ ಮಿಲಿಟರಿ ದಾಖಲೆಗಳನ್ನು ಪ್ರಕಟಿಸಿದ್ದು  ಅಪರಾಧ ಎಂದಿದ್ದಾರೆ.

ಪೆಂಟಗನ್ ಕಂಪ್ಯೂಟರ್ ಅನ್ನು ಹ್ಯಾಕ್ ಮಾಡಿ ಮತ್ತು ಇರಾಕ್ ಮತ್ತು ಅಫ್ಘಾನಿಸ್ತಾನ ಯುದ್ದಗಳ ಬಗ್ಗೆ ಲಕ್ಷಾಂತರ ರಹಸ್ಯ ರಾಜತಾಂತ್ರಿಕ ಕೇಬಲ್ ಗಳನ್ನು ಮತ್ತು ಮಿಲಿಟರಿ ಫೈಲ್ ಗಳನ್ನು ಬಿಡುಗಡೆ ಮಾಡಲು ಅಸ್ಸಾಂಜೆ ಯುಎಸ್ ಸೈನ್ಯ ಗುಪ್ತಚರ ವಿಶ್ಲೇಷಕ ಚೆಲ್ಸಿಯಾ ಮ್ಯಾನಿಂಗ್ ಅವರೊಂದಿಗೆ ಸಂಚು ಹೂಡಿದ್ದಾರೆ ಎಂದು  ಯು.ಎಸ್ ನ ಪ್ರಾಸಿಕ್ಯೂಟರ್ ಗಳು ಅಸ್ಸಾಂಜೆ ಮೇಲೆ ಆರೋಪಗಳನ್ನು ಹೊರಿಸಿದ್ದಾರೆ. ಈ ಆರೋಪಗಳು ಸಾಬೀತಾದರೆ, ಅಸ್ಸಾಂಜೆ ಯವರಿಗೆ 175 ವರ್ಷಗಳ ಕಾಲ ಶಿಕ್ಷೆ ವಿಧಿಸಲಾಗುತ್ತದೆ.

ಪ್ರಾಸಿಕ್ಯೂಸನ್ ಆರೋಪಗಳು ರಾಜಕೀಯ ಪ್ರೇರಿತ ಮತ್ತು ಅಧಿಕಾರ ದುರುಪಯೋಗವಾಗಿದೆ ಎಂದು ಅಸ್ಸಾಂಜೆ ಯ ಪರ ವಕೀಲರು ವಾದಿಸಿದ್ದಾರೆ. ಅಸ್ಸಾಂಜೆಯವರ  ವಿಕಿಲೀಕ್ಸ್ ಪ್ರಕಟಣೆ ಮತ್ತು ಪ್ರಸಾರಗಳು ಪತ್ರಿಕಾ ಸ್ವಾತಂತ್ರ್ಯ ವನ್ನು ಗಟ್ಟಿಗೊಳಿಸುತ್ತವೆಯೇ ಹೊರೆತು, ಇವುಗಳು ಆರೋಪವಾಗಲಾರವು ಎಂದು ವಕೀಲರು ವಾದಿಸಿದ್ದಾರೆ.. ವಿಕಿಲೀಕ್ಸ್ ಮೂಲಕ ಸೋರಿಕೆಯಾದ ಗೂಢಚರ್ಯೆ ದಾಖಲೆಗಳು ಯುಎಸ್ ಮಿಲಿಟರಿ ತೆಗೆದುಕೊಂಡ ತಪ್ಪು ನಿರ್ಧಾರಗಳನ್ನು ಬಹಿರಂಗ ಪಡಿಸಿವೆ.  ಇದರಲ್ಲಿ ಪತ್ರಿಕಾ ಸ್ವಾತಂತ್ರ್ಯ ಅಡಗಿದೆ. ವಿಕಿಲೀಕ್ಸ್ ಬಿಡುಗಡೆ ಮಾಡಿದ ವಿಡಿಯೋ ಚಿತ್ತಗಳ  ಫೈಲ್ ಗಳಲ್ಲಿ 2007 ರಲ್ಲಿ ಬಾಗ್ದಾದ್ ನಲ್ಲಿ ಅಮೆರಿಕದ ಪಡೆಗಳು ನಡೆಸಿದ ಹೆಲಿಕಾಪ್ಟರ್ ದಾಳಿಯಲ್ಲಿ ಇಬ್ಬರು ರಾಯಿಟರ್ಸ್ ಪತ್ರಕರ್ತರು ಸೇರಿದಂತೆ 11 ಜನರು ಕೊಲ್ಲಲ್ಪಟ್ಟರು.

ಹಾಗಾಗಿ, ಅಸ್ಸಾಂಜೆ ಯವರ ಬಂಧನ  ಕಾನೂನು ಬಾಹಿರ. ಪತ್ರಿಕಾ ಸ್ವಾತಂತ್ರ್ಯ ಕ್ಕೆ ಅಪಾಯದ ಸೂಚನೆ. ಆದ್ದರಿಂದ ಇವರನ್ನು ಬಿಡುಗಡೆ ಗೊಳಿಸಬೇಕೆಂದು ಇವರ ಪರ ವಕೀಲ ಜೆನ್ನಿಫರ್ ರಾಬಿನ್ಸನ್ ವಿಚಾರಣೆಯಲ್ಲಿ ಕೇಳಿ ಕೊಂಡಿದ್ದಾರೆ. ಜೈಲು ಶಿಕ್ಷೆ ಇವರನ್ಮು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹಾನಿ ಮಾಡಿದೆ. ಇದರಿಂದಾಗಿ, ಖಿನ್ನತೆ ಹಲ್ಲಿನ ತೊಂದರೆ ಮತ್ತು ಭುಜಗಳ ಗಂಭೀರ ಕಾಯಿಲೆಗಳು ಹೆಚ್ಚಾಗಿವೆ.

ಈ ಹಸ್ತಾಂತರ ಪ್ರಕ್ರಿಯೆಯು ಫೆಬ್ರವರಿ ತಿಂಗಳಲ್ಲಿ ಆರಂಭವಾಯಿತು. ಆದರೆ, ಕರೋನಾ ವೈರಸ್ ಹರಡುವುದನ್ನು ತಡೆಹಿಡಿಯಲು, ಮಾರ್ಚ್ ನಲ್ಲಿ ಲಾಕ್ ಡೌನ್  ಮಾಡಿದ ಪರಿಣಾಮ ವಿಚಾರಣೆಯನ್ಮು ಮುಂದೂಡಲಾಗಿತ್ತು. ಮತ್ತೆ ವಿಚಾರಣೆ ಸೆಪ್ಟೆಂಬರ್ 6 ರಿಂದ ಶುರುವಾಗಿದೆ. ಈ ಪ್ರಕ್ರಿಯೆ ಅಕ್ಟೋಬರ್ ವರೆಗೆ ನಡೆಯಲಿದೆ. ಜಿಲ್ಲಾ ನ್ಯಾಯಾಧೀಶರಾದ ವನೆಸ್ಸಾ ಬ್ಯಾರಿಸ್ಟರ್ ಅವರು ತೀರ್ಪನ್ನು ಪರಿಗಣಿಸಲು ವಾರಗಳು ಅಥವಾ ತಿಂಗಳುಗಳ ಕಾಲ ತೆಗೆದು ಕೊಳ್ಳುವ ನಿರೀಕ್ಷೆಯಿದೆ. ಸೋತ ಕಡೆಯವರು ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.

Donate Janashakthi Media

Leave a Reply

Your email address will not be published. Required fields are marked *