ಭಾರತ-ಅಮೆರಿಕ 2+2 ಸಚಿವರ ಸಂವಾದದಲ್ಲಿ ತಕ್ಷಣದ ಕದನ ವಿರಾಮದ ಜಾಗತಿಕ ಕರೆಗೆ ಸೇರಲು ನಿರಾಕರಿಸಿದ್ದಕ್ಕಾಗಿ ಎಡಪಕ್ಷಗಳು ಮೋದಿ ಸರ್ಕಾರವನ್ನು ಐದು ಎಡಪಕ್ಷಗಳು – ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್), ಎಐಎಫ್‌ಬಿ ಮತ್ತು ಆರ್‌ಎಸ್‌ಪಿ- ಬಲವಾಗಿ ಟೀಕಿಸಿವೆ.
ಅಮೆರಿಕ-ಇಸ್ರೇಲಿ ನರಮೇಧವನ್ನು ಅನುಮೋದಿಸುವುದನ್ನು ನಿಲ್ಲಿಸುವಂತೆ ಎಡಪಕ್ಷಗಳು ಈ ಹಿಂದೆ ಮೋದಿ ಸರಕಾರವನ್ನು ಒತ್ತಾಯಿಸಿದ್ದವು. 2+2 ಸಂವಾದದಲ್ಲಿ, ಭಾರತವು 2-ಪ್ರಭುತ್ವ ಪರಿಹಾರವನ್ನು ಪುನರುಚ್ಚರಿಸುವುದರೊಂದಿಗೆ “ಮಾನವೀಯ ತಡೆ”ಗೆ ಕರೆ ನೀಡಲಾಯಿತು. ‘ಕದನ ವಿರಾಮ’ಕ್ಕಲ್ಲ, ಕೇವಲ ‘ತಡೆ’ ಗಾಗಿ ಕರೆ ಈ ಹಂತದಲ್ಲಿ, ನಡೆಯುತ್ತಿರುವ ಈ ಇಸ್ರೇಲಿ ನರಮೇಧವನ್ನು ನ್ಯಾಯಬದ್ಧಗೊಳಿಸುತ್ತದಷ್ಟೇ ಎಂದು ಎಡಪಕ್ಷಗಳು ಹೇಳಿವೆ.
ಇಸ್ರೇಲಿ ನರಮೇಧದ ಪ್ರಹಾರವು ಪ್ಯಾಲೆಸ್ಟೀನಿಯನ್ನರಿಗೆ ತಮ್ಮ ಸ್ವಂತ ದೇಶದಲ್ಲಿ ಬದುಕಲು ಯಾವುದೇ ಭೂಮಿಯನ್ನು ಬಿಡುತ್ತಿಲ್ಲ. ಈ ಬರ್ಬರ ಮತ್ತು ರಾಕ್ಷಸೀ ದಾಳಿಗಳಲ್ಲಿ 10,000 ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ, ಅವರಲ್ಲಿ ಅರ್ಧದಷ್ಟು ಮಕ್ಕಳು, ಮತ್ತು ಆಸ್ಪತ್ರೆಗಳು ಬಾಂಬ್ ದಾಳಿಗೊಳಗಾಗಿವೆ.
ಪ್ಯಾಲೆಸ್ತೀನಿಯರ ಮೇಲೆ ಈ ಇಸ್ರೇಲಿ ನರಮೇಧ ಕೂಡಲೇ ನಿಲ್ಲಬೇಕು, ಆಗ ಮಾತ್ರ ಒಂದು ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಈ ಐದು ಎಡಪಕ್ಷಗಳ ಪ್ರಧಾನ ಕಾರ್ಯದರ್ಶಿಗಳು ನೀಡಿರುವ ಜಂಟಿ ಹೇಳಿಕೆ ಆಗ್ರಹಿಸಿದೆ.