ನಾರಾಯಣ ಗುರುಗಳು ಸನಾತನ ಧರ್ಮದ ಭಾಗವೇ?

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಪುರುಷರು ದೇವಾಲಯಗಳಿಗೆ ಪ್ರವೇಶಿಸುವ ಮೊದಲು ತಮ್ಮ ಅಂಗಿಗಳನ್ನು ತೆಗೆಯುವ ಪದ್ದತಿಯನ್ನು ನಿಲ್ಲಿಸಬೇಕೆಂಬ ಸ್ವಾಮಿ ಸಚ್ಚಿದಾನಂದ ಅವರ ಪ್ರಸ್ತಾಪವನ್ನು ಸಮರ್ಥಿಸಿದರು. ನಾರಾಯಣ ಗುರುಗಳು ಸನಾತನ ಧರ್ಮದ ಭಾಗವಾಗಿದ್ದಾರೆ ಎಂದು ಪ್ರಚಾರ ಮಾಡುವ ಪ್ರಯತ್ನಗಳು ನಡೆದಿವೆ, ಆದರೆ ಅವರು “ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು” ಎಂದು ಪ್ರಚಾರ ಮಾಡಿದ್ದರಿಂದ ಅವರು ಸನಾತನ ಧರ್ಮದಿಂದ ದೂರವಾಗಿದ್ದರು, ಜಾತಿ, ಧರ್ಮವನ್ನು ಲೆಕ್ಕಿಸದ ಈ ಸಮಾನತೆಯು ಸನಾತನ ಧರ್ಮದಿಂದ  ತುಂಬಾ ದೂರವಿದೆ ಎಂದು ವಿಜಯನ್ ಹೇಳಿದರು.

ರಾಮ್ ಪುನಿಯಾನಿ

ಅನು: ಸಿಚಿ

-ಕೃಪೆ: ನ್ಯೂಸ್‌ಕ್ಲಿಕ್

2024ರ ಡಿಸೆಂಬರ್ 31 ರಂದು ಶಿವಗಿರಿ ಮಠ ಯಾತ್ರೆಯ ಭಾಗವಾಗಿ ಒಂದು ಸಭೆಯನ್ನು ಉದ್ಘಾಟಿಸುತ್ತ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಪುರುಷರು ದೇವಾಲಯಗಳಿಗೆ ಪ್ರವೇಶಿಸುವ ಮೊದಲು ತಮ್ಮ ಅಂಗಿಗಳನ್ನು ತೆಗೆಯುವ ಪದ್ದತಿಯನ್ನು ನಿಲ್ಲಿಸಬೇಕೆಂಬ ಸ್ವಾಮಿ ಸಚ್ಚಿದಾನಂದ ಅವರ ಪ್ರಸ್ತಾಪವನ್ನು ಸಮರ್ಥಿಸಿದರು. ಜನಿವಾರ ಧರಿಸುವವರನ್ನು ಗುರುತಿಸುವುದಕ್ಕಾಗಿ ಈ ಪದ್ಧತಿ ಅಸ್ತಿತ್ವಕ್ಕೆ ಬಂದಿದೆ, ಕೇವಲ ಮೇಲ್ಜಾತಿಗೆ ಸೇರಿದವರು ಮಾತ್ರವೇ ಇದನ್ನು ಧರಿಸುತ್ತಾರೆ ಎಂದು ನಂಬಿರುತ್ತಾರೆ. ದೇಹ ತೋರಿಸಿಕೊಳ್ಳಲು ಬೇರೆ ಯಾವುದೇ ಕಾರಣವಿರಲು ಸಾಧ್ಯವಿಲ್ಲ ಎಂದು ಕೆಲವರು ಅನುಮಾನಿಸುತ್ತಿದ್ದಾರೆ. ಜನಿವಾರ ಧರಿಸದೇ ಇರುವರನ್ನು ದೇವಾಲಯದೊಳಗೆ ಪ್ರವೇಶಿಸುವುದನ್ನು ನಿಷೇಧಿಸಬೇಕಾಗಿತ್ತು.

ನಾರಾಯಣ ಗುರುಗಳು ಸನಾತನ ಧರ್ಮದ ಭಾಗವಾಗಿದ್ದಾರೆ ಎಂದು ಪ್ರಚಾರ ಮಾಡುವ ಪ್ರಯತ್ನಗಳು ನಡೆದಿವೆ, ಆದರೆ ಅವರು “ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು” ಎಂದು ಪ್ರಚಾರ ಮಾಡಿದ್ದರಿಂದ ಅವರು ಸನಾತನ ಧರ್ಮದಿಂದ ದೂರವಾಗಿದ್ದರು ಎಂದು ವಿಜಯನ್ ಹೇಳಿದರು. ಜಾತಿ, ಧರ್ಮವನ್ನು ಲೆಕ್ಕಿಸದ ಈ ಸಮಾನತೆಯು ಸನಾತನ ಧರ್ಮದಿಂದ  ತುಂಬಾ ದೂರವಿದೆ. ಇಂದು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮೂಲಕ ಹಿಂಸಾಚಾರ ನಡೆಸುತ್ತಿರುವ ಕಾರಣದಿಂದಾಗಿ ಗುರುಗಳ ಬದುಕು ಮತ್ತು ಅವರ ಕೆಸಲಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ವಿಜಯನ್ ಹೇಳಿದರು.

ನಾರಾಯಣ ಗುರುಗಳು ಒಂದು ಧರ್ಮದ ಗುರುಗಳು ಮಾತ್ರವಲ್ಲ, ಮಹಾನ್ ಮಾನವತಾವಾದಿಯೂ ಆಗಿದ್ದರು. ವಿಜಯನ್ ಮುಖ್ಯಮಂತ್ರಿಯಾಗಿರುವ ಅವಧಿಯಲ್ಲಿ ಹಿಂದೂಗಳೆಲ್ಲಾ ತೊಂದರೆಗಳಿಗೆ ಒಳಗಾಗುತ್ತಿದ್ದಾರೆ ಎಂದು ವಿಜಯನ್ ಟೀಕಾಕಾರರು ಟೀಕಿಸುತ್ತಿದ್ದಾರೆ. ಅವರು ಶಬರಿಮಲೆಯನ್ನು ಉದಾಹರಿಸುತ್ತಾರೆ. ಮುಟ್ಟಿನ ವಯಸ್ಸಿನ  ಮಹಿಳೆಯರು ಅಲ್ಲಿನ ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡುವ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಎತ್ತಿಹಿಡಿಯಲು ಆಡಳಿತ ಪಕ್ಷ ನಿರ್ಧರಿಸಿತು. ಈ ವಿಷಯದಲ್ಲಿ ಭಾರತೀಯ ಜನತಾ ಪಕ್ಷದ ಅಧಿಕೃತ ಪ್ರತಿನಿಧಿಗಳೆಲ್ಲಾ ವಿಜಯನ್ ವಿರುದ್ಧವಾಗಿ ತಿರುಗಿಬಿದ್ದರು.

ಇದನ್ನೂ ಓದಿ: ದೇಶದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ : ಪತ್ನಿಯನ್ನು ಕೊಂದು ಕುಕ್ಕರ್ ನಲ್ಲಿ ಬೇಯಿಸಿ ಕೆರೆಗೆ ಎಸೆದ ಮಾಜಿ ಸೈನಿಕ

ನಾರಾಯಣ ಗುರುಗಳ ಸ್ತಬ್ಧ ಚಿತ್ರದ ರಚನೆಯನ್ನು ಒಪ್ಪಿಕೊಳ್ಳಲಿಲ್ಲ

ಸನಾತನ ಧರ್ಮದ ಸುತ್ತಲೂ ನಡೆಯುತ್ತಿರುವ ಚರ್ಚೆ ಎರಡನೇ ಬಾರಿಗೆ ಮುನ್ನೆಲೆಗೆ ಬಂದಿರುವಂತೆ ಕಾಣುತ್ತಿದೆ. ಮೊದಲ ಬಾರಿಗೆ, ಆ ಚರ್ಚೆ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ವಿರುದ್ಧ ಮಾತನಾಡಿದಾಗ ಹುಟ್ಟಿಕೊಂಡಿತು. ಬಿಜೆಪಿ ಮತ್ತು ಆರ್‌ಎಸ್‌ಎಸ್ ಸನಾತನ ಧರ್ಮವನ್ನು ಕೇವಲ ಜಾತಿ ಮತ್ತು ಧರ್ಮದ ಸ್ಥಾನದ  ಮಟ್ಟಕ್ಕೆ ಇಳಿಸಲು ಸಾಧ್ಯವಿಲ್ಲ ಎಂದು ಘೋಷಿಸುತ್ತಿವೆ.

ಕಾಕತಾಳೀಯವೆಂದರೆ, 2022ರಲ್ಲಿ, ನವದೆಹಲಿಯಲ್ಲಿ ಗಣರಾಜ್ಯೋತ್ಸವ ದಿನದಂದು ನಡೆದ ಪ್ರದರ್ಶನದಲ್ಲಿ ಕೇರಳ ಸಿದ್ದಪಡಿಸಿದ ನಾರಾಯಣ ಗುರುಗಳ ಚಿತ್ರವಿದ್ದ ಸ್ತಬ್ಧಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತು. ಕೇಂದ್ರ ರಕ್ಷಣಾ ಸಚಿವಾಲಯಕ್ಕೆ ಸೇರಿದ ತೀರ್ಪುಗಾರರ ಸದಸ್ಯರು, ಕೇರಳದ ಸ್ತಬ್ಧಚಿತ್ರ ನಾರಾಯಣ ಗುರುಗಳಿಗಿಂತ ಶಂಕರಾಚಾರ್ಯರನ್ನು ಹೆಚ್ಚು ಪ್ರದರ್ಶಿಸಬೇಕೆಂದು ಹೇಳಿದರು. ಇದೇ ಆ ಕೇರಳದ ಸ್ತಬ್ಧಚಿತ್ರವನ್ನು ತಿರಸ್ಕರಿಸಲು ಒಂದು ಪ್ರಮುಖವಾದ ಕಾರಣ.

ಬ್ರಾಹ್ಮಣವಾದ ಮತ್ತು ಶ್ರಮಿಕವಾದ

ಶಾಶ್ವತತೆಯನ್ನು ಪ್ರತಿನಿಧಿಸುವ ಸನಾತನ ಧರ್ಮವನ್ನು ಬೌದ್ಧ, ಜೈನ ಹಿಂದೂ ಧರ್ಮಗಳಿಗಾಗಿ ಬಳಸುತ್ತಿದ್ದಾರೆ. ಒಬ್ಬನೇ ಪ್ರವಾದಿ ಅಥವಾ ಒಂದೇ ಪವಿತ್ರ ಗ್ರಂಥವನ್ನು ಹೊಂದಿರದ ಧರ್ಮ ಹಿಂದೂ ಧರ್ಮವಾಗಿದೆ. ಹಿಂದೂ ಧರ್ಮದ ಪವಿತ್ರ ಗ್ರಂಥಗಳಲ್ಲಿ ಎಲ್ಲಿಯೂ “ಹಿಂದೂ” ಎಂಬ ಪದವನ್ನು ಉಲ್ಲೇಖಿಸಲಾಗಿಲ್ಲ. ಇದಕ್ಕೆ ಎರಡು ಮುಖ್ಯ ಧಾರೆಗಳಿವೆ – ಬ್ರಾಹ್ಮಣವಾದ ಮತ್ತು ಶ್ರಮಿಕವಾದ. ಬ್ರಾಹ್ಮಣವಾದವು, ಶ್ರೇಣೀಕೃತ ಅಸಮಾನತೆ ಮತ್ತು ಪಿತೃಪ್ರಧಾನ ಮೌಲ್ಯಗಳ ಮೇಲೆ ಆಧರಿಸಿದೆ. ಹಿಂದೂ ಧರ್ಮದ ಮೇಲೆ ಬ್ರಾಹ್ಮಣ್ಯ ಮೌಲ್ಯಗಳು ಆಧಿಪತ್ಯ ಚಲಾಯಿಸುತ್ತಿವೆ ಎಂದು ಭಾವಿಸಿದ್ದರಿಂದ ಅಂಬೇಡ್ಕರ್ ಹಿಂದೂ ಧರ್ಮವನ್ನು ತ್ಯಜಿಸಿದರು. ಶ್ರಮದಾಯಕ ಸಂಪ್ರದಾಯಗಳಲ್ಲಿ, ಅಸಮಾನತೆಯ ಮೌಲ್ಯಗಳಿಂದ ದೂರದಲ್ಲಿರುವ ಭಕ್ತಿ ಸಂಪ್ರದಾಯಗಳಿವೆ.

ಹಿಂದೂ ಧರ್ಮವು ಒಂದು ಧರ್ಮವಲ್ಲ, ಬದಲಾಗಿ ಧರ್ಮ ಆಧರಿಸಿದ ಒಂದು ಜೀವನ ವಿಧಾನ ಎಂದು ಕೆಲವರು ಹೇಳುತ್ತಾರೆ. ಅದೇ ರೀತಿ, ಸನಾತನ ಧರ್ಮವು ಮುಖ್ಯವಾಗಿ ವರ್ಣ ವ್ಯವಸ್ಥೆ, ಜಾತಿ ಅಸಮಾನತೆಗಳು, ಅವುಗಳ ಸಂಪ್ರದಾಯಗಳಿಗೆ ಬದ್ಧವಾಗಿದೆ. ಧರ್ಮ ಎನ್ನುವುದು ಧಾರ್ಮಿಕವಾಗಿ ವಿಧಿಸಲಾದ ಕರ್ತವ್ಯವೆಂದು ಅರ್ಥೈಸಿಕೊಳ್ಳಬಹುದು. ಅಸಮಾನತೆಯ ಆಧಾರದ ಮೇಲೆ ಒಂದು ಧರ್ಮವನ್ನು ಪ್ರತಿಪಾದಿಸುವುದನ್ನು ಸಮಾಜ ಸುಧಾರಕರು ವಿರೋಧಿಸುತ್ತಾರೆ.

ಬುದ್ಧ, ಕಬೀರ್, ಜ್ಯೋತಿರಾವ್ ಫುಲೆ ಅವರನ್ನು ತಮ್ಮ ಗುರುಗಳೆಂದು ಪರಿಗಣಿಸಿದ್ದ ಅಂಬೇಡ್ಕರ್ ಅವರ ಉದಾಹರಣೆಯನ್ನು ತೆಗೆದುಕೊಳ್ಳೋಣ. ಅವರಿಗೆ ಜಾತಿ, ಲಿಂಗ ಅಸಮಾನತೆಗಳನ್ನು ತಿರಸ್ಕರಿಸುವುದು ಮುಖ್ಯವಾಗಿತ್ತು. ಮಧ್ಯಕಾಲೀನ ಯುಗದ ಅಂದಿನ ಭಾರತದಲ್ಲಿ ಕಬೀರ್, ತುಕಾರಾಮ್, ನಾಮದೇವ ಮತ್ತು ನರಸಿ ಮೆಹ್ತಾರಂತಹ ಸಂತರು, ಅವರ ಹಿತಾಸಕ್ತಿಗಳು ಯಾವಾಗಲೂ ಜಾತಿ ವ್ಯವಸ್ಥೆಯ ವಿರುದ್ಧವಾಗಿದ್ದವು ಮತ್ತು ಅವರಲ್ಲಿ ಕೆಲವರು ಮೇಲ್ಜಾತಿಯ ಆಡಳಿತಗಾರರ ದಾಳಿಯನ್ನು ಸಹ ಎದುರಿಸಬೇಕಾಯಿತು. ನಾರಾಯಣ ಗುರುಗಳು ಜಾತಿ ವ್ಯವಸ್ಥೆಯ ವಿರುದ್ಧ ಮಹಾನ್ ಸಮಾಜ ಸುಧಾರಕರಾಗಿ ಹೊರಹೊಮ್ಮಿ, ಧಾರ್ಮಿಕ ವಿಭಜನೆಗಳನ್ನು ಜಯಿಸಿದರು. ಬ್ರಾಹ್ಮಣ್ಯದ ಹಿಂದೂ ಧರ್ಮದಿಂದ ಮಾರ್ಗದರ್ಶಿಸಲ್ಪಟ್ಟ ಪ್ರಸ್ತುತ ಆಳುವ ವರ್ಗವು, ಕೇರಳದಿಂದ ನಾರಾಯಣ ಗುರು ಸ್ತಬ್ಧಚಿತ್ರದ ರಚನೆಯನ್ನು ಒಪ್ಪಿಕೊಳ್ಳದಿರುವುದು ಆಶ್ಚರ್ಯವೇನಿಲ್ಲ. ನಾರಾಯಣ ಗುರುಗಳು ಮಾನವೀಯತೆಯ ವ್ಯಕ್ತಿ.

ಬ್ರಾಹ್ಮಣೇತರ ಶಿವನ ವಿಗ್ರಹ ಪ್ರತಿಷ್ಠಾಪಿಸಿದರು

ಅರುವಿಪ್ಪುರಂ ಭಾರತದ ಕೇರಳದ ತಿರುವನಂತಪುರಂನ ದಕ್ಷಿಣ ಜಿಲ್ಲೆಯಲ್ಲಿರುವ ಒಂದು ಹಳ್ಳಿ. ಇದು ನಾರಾಯಣ ಗುರುಗಳಿಂದ ಸ್ಥಾಪಿಸಲ್ಪಟ್ಟ ಶಿವ ದೇವಾಲಯಕ್ಕೆ ಪ್ರಸಿದ್ಧವಾಗಿದೆ. 1888 ರಲ್ಲಿ ಕೇರಳ ಸಮಾಜದಲ್ಲಿ ಹಾಗೆ ಮಾಡಿದ ಮೊದಲ ಬ್ರಾಹ್ಮಣೇತರ ಶಿವನ ವಿಗ್ರಹವನ್ನು ಗುರುಗಳು ಪ್ರತಿಷ್ಠಾಪಿಸಿದರು. ಅವರ ಬೆಳೆಯುತ್ತಿರುವ ದಿನಗಳಲ್ಲಿ ಅವರು ಆಧ್ಯಾತ್ಮಿಕತೆ ಮತ್ತು ಯೋಗಾಭ್ಯಾಸದಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದರು. 1888 ರಲ್ಲಿ, ತಮ್ಮ ತಾತ್ವಿಕ ಪ್ರಯಾಣದ ಸಮಯದಲ್ಲಿ ಅರುವಿಪ್ಪುರಂಗೆ ಭೇಟಿ ನೀಡಿ, ಅಲ್ಲಿ ಧ್ಯಾನಕ್ಕೆ ಹೋದರು. ಅಲ್ಲಿರುವ ಸಮಯದಲ್ಲಿಯೇ ಅವರು ನದಿಯಿಂದ ಒಂದು ಕಲ್ಲನ್ನು ತೆಗೆದುಕೊಂಡು, ಅದನ್ನು ಪ್ರತಿಷ್ಠಾಪಿಸಿ, ಅದಕ್ಕೆ ಶಿವನ ವಿಗ್ರಹ ಎಂದು ಹೆಸರಿಟ್ಟರು.

ಅಂದಿನಿಂದ, ಈ ಸ್ಥಳವು ಅರುವಿಪ್ಪುರಂ ಶಿವ ದೇವಾಲಯವೆಂದು ಪ್ರಸಿದ್ಧವಾಗಿದೆ. ಅದಾದ ನಂತರ ಅರುವಿಪ್ಪುರಂ ಪ್ರತಿಷ್ಟಿತ ಸ್ಥಳವಾಗಿ ಪ್ರಖ್ಯಾತ ಹೊಂದಿದೆ. ಇದು ಒಂದು ದೊಡ್ಡ ಸಾಮಾಜಿಕ ಕೋಲಾಹಲವನ್ನು ಸೃಷ್ಟಿಸಿತು, ವಿಶೇಷವಾಗಿ ಮೇಲ್ಜಾತಿಯವರಿಂದ ವಿರೋಧವನ್ನು ಸೃಷ್ಟಿಸಿತು. ಬ್ರಾಹ್ಮಣರು ನಾರಾಯಣ ಗುರುಗಳು ಕೈಇಟ್ಟ ವಿಗ್ರಹ ಪ್ರತಿಷ್ಠಾಪನೆಯನ್ನು ಸ್ವೀಕರಿಸಲಿಲ್ಲ. “ಇದು ಬ್ರಾಹ್ಮಣ ಶಿವನಲ್ಲ, ಆದರೆ ಈಳವ ಶಿವ” ಎಂದು ಅವರಿಗೆ ಉತ್ತರಿಸಿದರು. ಈ ಉಲ್ಲೇಖವು ನಂತರದ ಕಾಲದಲ್ಲಿ ಪ್ರಸಿದ್ಧವಾಗಿ, ಜಾತಿತಾರತಮ್ಯದ ವಿರುದ್ಧವಾಗಿ ಬಳಸಲ್ಪಟ್ಟಿತು.

ಅವರು ತಮ್ಮ ಜೀವನವನ್ನು ಜಾತಿತಾರತಮ್ಯದ ವಿರುದ್ಧದ ಹೋರಾಟಕ್ಕೆ ಮುಡಿಪಾಗಿಟ್ಟರು. ಬೇರುಬಿಟ್ಟ ಜಾತಿ ವ್ಯವಸ್ಥೆಯನ್ನು ಪ್ರಶ್ನಿಸುವಲ್ಲಿ ಅವರ ಕಾರ್ಯಾಚರಣೆಯು ಪ್ರಮುಖ ಪ್ರಾಯೋಗಿಕ ಸಾಧನವಾಗಿದೆ. ನಾರಾಯಣ ಗುರುಗಳ ಕ್ರಾಂತಿಕಾರಿ ಘೋಷಣೆ “ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು”. ನಾರಾಯಣ ಗುರುಗಳು ಜಾತಿ, ಧರ್ಮಗಳ ಭೇದಗಳನ್ನು ಮೀರಿ ಒಂದು ಮಾನವೀಯತೆಯನ್ನು ಘೋಷಿಸಿದರು. ನಂತರದ ಕಾಲದಲ್ಲಿ ಅವರು, ಮಹಾರಾಷ್ಟ್ರದ ಜ್ಯೋತಿರಾವ್ ಫುಲೆಯವರಂತೆ ಕೆಳಜಾತಿಯವರಿಗಾಗಿಯೂ ಶಾಲೆಗಳನ್ನು ಪ್ರಾರಂಭಿಸಿದರು. ಅಂಬೇಡ್ಕರ್ ಕಲಾರಾಮ್ ದೇವಾಲಯ ಪ್ರವೇಶ ಚಳವಳಿಯ ತತ್ವಗಳ ಪ್ರಕಾರ, ಅವರು ಎಲ್ಲಾ ಜಾತಿಗಳಿಗೆ ಸೇರಿದವರಿಗಾಗಿ ದೇವಾಲಯಗಳನ್ನು ನಿರ್ಮಿಸಿದರು.

ಸ್ತನಗಳನ್ನು ಮುಚ್ಚಿಕೊಳ್ಳುವ ಮಹಿಳೆಯರು ತೆರಿಗೆ ಕೊಡಬೇಕಿತ್ತು

ಪಿಣರಾಯ್ ವಿಜಯನ್ ಸಮರ್ಥಿಸಿದ ಸ್ವಾಮಿ ಸಚ್ಚಿದಾನಂದ ಅವರ ಸಲಹೆಯು ಕೂಡಾ, ಪುರುಷರು ತಮ್ಮ ದೇಹದ ಮೇಲ್ಬಾಗವನ್ನು ತೋರ್ಪಡಿಸುವ ರೀತಿಯಲ್ಲಿ ಶರ್ಟ್‌ಗಳನ್ನು ಬಿಚ್ಚುವುದರಿಂದ ಆರೋಗ್ಯದ ಮೇಲೂ ಪರಿಣಾಮ ಉಂಟಾಗುತ್ತದೆ ಎಂದು ಹೇಳುತ್ತದೆ. ಏಕೆಂದರೆ ಅದು ದೇಹದಾದ್ಯಂತ ರೋಗಗಳನ್ನು ಹರಡುತ್ತದೆ. ಕಾಲಕ್ಕೆ ಅನುಗುಣವಾಗಿ ಹಲವು ಪದ್ಧತಿಗಳು ಬದಲಾಗಬೇಕಾದ ಅವಶ್ಯಕತೆ ಇದೆ. ಮಹಿಳೆಯರಿಗೆ ತಮ್ಮ ಸ್ತನಗಳನ್ನು ಕಾಣದಂತೆ ಮುಚ್ಚಿಕೊಳ್ಳುವ ಹಕ್ಕಿರಲಿಲ್ಲ ಎಂಬ ವಿಷಯ ಎಲ್ಲರಿಗೂ ತಿಳಿದಿರುವ ವಿಚಾರ. ಸ್ತನಗಳು ಕಾಣಿಸದಂತೆ ಮುಚ್ಚಿಕೊಳ್ಳುವ ಮಹಿಳೆಯರು ತೆರಿಗೆ ಪಾವತಿಸಬೇಕಾಗಿತ್ತು. ಟಿಪ್ಪು ಸುಲ್ತಾನ್ ಕೇರಳವನ್ನು ಆಕ್ರಮಿಸಿಕೊಂಡ ನಂತರ ಸ್ತನ ತೆರಿಗೆಯನ್ನು ರದ್ದುಗೊಳಿಸಿದನು. ಆ  ರೀತಿಯಲ್ಲಿ ಮಹಿಳೆಯರು ತಮ್ಮ ಗೌರವವನ್ನು ಕಾಪಾಡಿಕೊಂಡರು.

ದೇವಾಲಯಗಳು ನಮ್ಮ ಸಾಮಾಜಿಕ ಜೀವನದ ಒಂದು ಭಾಗ. ಉಡುಪು ಧರಿಸುವುದರಲ್ಲಿನ ಬದಲಾವಣೆಗಳು ಸಾಮಾಜಿಕ ರೂಢಿಗಳಲ್ಲಿನ ಬದಲಾವಣೆಗಳ ಜೊತೆಗೂಡುವ ಅಗತ್ಯವಿದೆ. ಇದಕ್ಕೆ ಯಾವುದೇ ವಿರೋಧ ಬಂದರೂ ಅದು ಹಿಮ್ಮುಖ ಚಲನೆಯಾಗಲಿದೆ. ಅನೇಕ ಸ್ಥಳಗಳಲ್ಲಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದು ಸಾಮಾಜಿಕ ಬದಲಾವಣೆ ಮತ್ತು ರಾಜಕೀಯ ಮೌಲ್ಯಗಳಲ್ಲಿನ ಬದಲಾವಣೆಗೆ ವಿರುದ್ಧವಾಗಿದೆ.

ಸಾಂಪ್ರದಾಯಿಕ “ಯಥಾಸ್ಥಿತಿ” ಸಾಮಾಜಿಕ ಪ್ರಗತಿಗೆ ಅಡ್ಡಿ

ಕೇರಳವು ವಿವಿಧ ಕ್ಷೇತ್ರಗಳಲ್ಲಿ ಹಲವು ವೈರುಧ್ಯಗಳನ್ನು ಹೊಂದಿದೆ. ಇಲ್ಲಿಯೇ ಶಂಕರಾಚಾರ್ಯರು, ವಾದ ಪ್ರತಿವಾದಗಳಲ್ಲಿ ಬೌದ್ಧರನ್ನು ಎದುರಿಸಿದರು. ಬೌದ್ಧರು ಲೌಕಿಕ ಸಮಸ್ಯೆಗಳ ಮೇಲೆ ಗಮನ ಕೇಂದ್ರೀಕರಿಸಲು ಭೌತಿಕವಾದದ ಆಧಾರದ ಮೇಲೆ ವಾದಿಸಿದರು. ಅದೇ ರೀತಿ, ಶಂಕರರು ಇಡೀ ಜಗತ್ತು ಒಂದು ಭ್ರಮೆ ಎಂದು ವಾದಿಸಲು ಪ್ರಯತ್ನಿಸುವ ಮೂಲಕ ಆದರ್ಶವಾದಿ ತತ್ತ್ವಶಾಸ್ತ್ರವನ್ನು ಪ್ರತಿಪಾದಿಸಿದರು.

ಇಂದಿನ ಭಾರತದಲ್ಲಿ ಕೇರಳವೂ ಸೇರಿದಂತೆ ನಾರಾಯಣ ಗುರು, ಕಬೀರ್ ಅವರಂತಹ ಸಂತರ ಮಾರ್ಗವನ್ನು ಅನುಸರಿಸುವ ಅವಶ್ಯಕತೆಯಿದೆ. ಅವರ ಮಾನವೀಯ ಮೌಲ್ಯಗಳು ಸಮಾಜದಲ್ಲಿ ಸೌಹಾರ್ದ ಸಂಬಂಧಗಳ ಹಾದಿಗೆ ಮಾರ್ಗದರ್ಶನ ನೀಡಿವೆ. ಅನೇಕ ವಿಷಯಗಳಲ್ಲಿ, ಸಾಂಪ್ರದಾಯಿಕ “ಯಥಾಸ್ಥಿತಿ” ಸಾಮಾಜಿಕ ಪ್ರಗತಿಗೆ ಅಡ್ಡಿಯಾಗುತ್ತದೆ.

ಇದನ್ನೂ ನೋಡಿ: ಮಕ್ಕಳ ಬಹುರೂಪಿ ಬೆಳೆಯಲಿ – ಪ್ರಕಾಶ್‌ ರಾಜ್‌ Janashakthi Media

Donate Janashakthi Media

Leave a Reply

Your email address will not be published. Required fields are marked *