ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ನಾವು ಇದುವರೆಗೆಕಂಡಿರುವ “ಜಾಗತೀಕರಣ”ವು ದೇಶ ದೇಶಗಳು ಪರಸ್ಪರ ಹೆಚ್ಚು ಅವಲಂಬಿತವಾಗುವ ಸ್ವಯಂಪ್ರೇರಣೆಯಿಂದಒಗ್ಗೂಡಿ ಪರಸ್ಪರರಿಗೆ ಪ್ರಯೋಜನವಾಗುವ ರೀತಿಯಲ್ಲಿ ಸ್ಥಾಪಿಸಿಕೊಂಡ ಒಂದುಜಾಗತಿಕ ವಿದ್ಯಮಾನವನ್ನುಎಂದೂಸೂಚಿಸಿರಲಿಲ್ಲ. ಈ “ಜಾಗತೀಕರಣ”ವು ಮೂಲಭೂತವಾಗಿಪ್ರಾಬಲ್ಯದ ಸಂಬಂಧಗಳನ್ನು ಸೂಚಿಸಿದೆ. ಈ ಪ್ರಾಬಲ್ಯದ ಬಳಸುವಿಕೆಯೇ ಸಾಮ್ರಾಜ್ಯಶಾಹಿಯ ಹೆಗ್ಗುರುತು. ಹೇಗೆ “ಆರ್ಥಿಕನಿರ್ಬಂಧಗಳು” ಸಾಮ್ರಾಜ್ಯಶಾಹಿಯ ನಿರ್ದಯತೆಯ ಲಕ್ಷಣವಾಗಿವೆಯೋ ಹಾಗೆಯೇ ಜಾಗತೀಕರಣವೂ ಸಹ ಜಾಗತೀಕರಣಗೊಂಡ ಬಂಡವಾಳದ ಪ್ರಾಬಲ್ಯಕ್ಕೆ ಅಗತ್ಯ. ಆದ್ದರಿಂದ ‘ನಿರ್ಜಾಗತೀಕರಣ” ಎಂಬುದು ವಾಸ್ತವವಾಗಿ “ಜಾಗತೀಕರಣ”ದ ನಿರಾಕರಣೆಯಲ್ಲ, ಬದಲಿಗೆಅದಕ್ಕೆ ಪೂರಕವೇ. ಜಾಗತೀಕರಣಗೊಂಡ ಬಂಡವಾಳದ ಪ್ರಾಬಲ್ಯವನ್ನುಎದುರಿಸುವ ವಾಸ್ತವಿಕ ಅಗತ್ಯಈಗಲೂ ಇದೆ. ಏಕೆಂದರೆ, ಜಾಗತೀಕರಣದ ಹಿಂದೆಪಾಶ್ಚಾತ್ಯಬಂಡವಾಳಶಾಹಿ ದೇಶಗಳ ವ್ಯೂಹವೇ ನಿಂತಿದೆ.
“ಜಾಗತೀಕರಣ”ವು ಕಳಚಿಹೋಗುವ ‘ನಿರ್ಜಾಗತೀಕರಣ’ ಪ್ರಕ್ರಿಯೆ ಆರಂಭವಾಗಿದೆ ಎಂಬ ಅಭಿಪ್ರಾಯವನ್ನು ಅನೇಕ ಅರ್ಥಶಾಸ್ತ್ರಜ್ಞರು ಇತ್ತೀಚಿನ ದಿನಗಳಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ನೆನ್ನೆ ಮೊನ್ನೆಯವರೆಗೂ ಆಳ್ವಿಕೆ ನಡೆಸುತ್ತಿದ್ದ ನವ ಉದಾರವಾದ ರೀತಿ-ನೀತಿಗಳು ಈಗ ಉಳಿದಿಲ್ಲ ಎಂದು ಹೇಳುತ್ತಿದ್ದಾರೆ. ಇದು ಸಹಜವೇ. ಏಕೆಂದರೆ, ಯಾವುದೂ ಒಂದೇ ರೂಪದಲ್ಲಿ ಶಾಶ್ವತವಾಗಿ ಉಳಿಯುವುದಿಲ. ಗ್ರೀಕ್‌ತ ತ್ವಜ್ಞಾನಿ ಹೆರಾಕ್ಲಿಟಸ್ ಹೇಳಿರುವಂತೆ “ನೀವು ಅದೇ ನದಿಯಲ್ಲಿಎರಡು ಬಾರಿಕಾಲಿಡುವುದು ಸಾಧ್ಯವಿಲ್ಲ”. ಹಾಗಾಗಿ, ದಿನಗಳೆದಂತೆ ನವ ಉದಾರವಾದಿ ವ್ಯವಸ್ಥೆಯಲ್ಲಿಯೂ ಕೆಲವು ಬದಲಾವಣೆಗಳು ಅನಿವಾರ್ಯವಾಗುತ್ತವೆ. ಆದರೆ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ: ಸಮಕಾಲೀನ ಜಗತ್ತಿನ ಆರ್ಥಿಕ ವಾಸ್ತವತೆಗಳನ್ನು, ಅವುಗಳನ್ನು ಬದಲಾಯಿಸಲೆಂದು ಅರ್ಥಮಾಡಿಕೊಳ್ಳಲು ಬಳಸುವ ವಿಶ್ಲೇಷಣಾತ್ಮಕ ಚೌಕಟ್ಟುತೀರಾ ಹಳೆಯದಾಗಿದೆಯೇ, ಅದರಿಂದಾಗಿ ಅದನ್ನು ಗಂಭೀರ ಪರಿಷ್ಕರಣೆಗೆ ಒಳಪಡಿಸುವ ಅಗತ್ಯವಿದೆಯೇ ಎಂಬುದು.
“ಜಾಗತೀಕರಣ” ಎಂದರೆ, ವಿಶ್ವದ ಬೇರೆ ಬೇರೆ ದೇಶಗಳು ಸ್ವಯಂಪ್ರೇರಣೆಯಿಂದ ಒಗ್ಗೂಡಿ ಪರಸ್ಪರರಿಗೆ ಪ್ರಯೋಜನವಾಗುವರೀತಿಯಲ್ಲಿ ಸ್ಥಾಪಿಸಿಕೊಂಡ ಒಂದುಜಾಗತಿಕ ವ್ಯವಸ್ಥೆಯೆಂಬುದು ಎಂದೂ ಆಗಿರಲಿಲ್ಲ ಎಂಬುದನ್ನು ನೆನಪಿನಲ್ಲಿಟ್ಟು ಕೊಳ್ಳಬೇಕಾಗುತ್ತದೆ. ವಿಶ್ವದ ಸುಮಾರು 50 ದೇಶಗಳು ಇಂದು ಬೇರೆ ಬೇರೆ ರೀತಿಯ “ನಿರ್ಬಂಧಗಳನ್ನು” ಎದುರಿಸುತ್ತಿವೆ. ಜನರಜೀವ ಉಳಿಸುವ ಔಷಧಿಗಳೂ ಸೇರಿದಂತೆ ಈ ದೇಶಗಳಿಗೆ ಬೇಕಾದ ಕೆಲವು ಅಗತ್ಯ ವಸ್ತುಗಳನ್ನು ಅವರುಜಾಗತಿಕ ಮಾರುಕಟ್ಟೆಯಿಂದ ಪಡೆಯದಂತೆ ಅಡ್ಡಿಪಡಿಸಲಾಗಿದೆ. “ಜಾಗತೀಕರಣ”ವು ಅತ್ಯಂತ ಭರದಿಂದ ಸಾಗುತ್ತಿದೆ ಎಂದು ಸಾರ್ವತ್ರಿಕವಾಗಿ ಒಂದು ದಶಕದ ಹಿಂದೆ ಗುರುತಿಸಲ್ಪಡುತ್ತಿದ್ದ ದಿನಗಳಲ್ಲೂ ಸಹ, ಇಂತಹ ನಿರ್ಬಂಧಗಳಿಗೆ ಒಳಗಾದ ದೇಶಗಳ ಸಂಖ್ಯೆಯೇನೂ ತುಂಬಾ ಸಣ್ಣದಿರಲಿಲ್ಲ.
ಆದಕಾರಣ, “ಜಾಗತೀಕರಣ” ಎಂದರೆ ಅದು ಸಾಮಾನ್ಯವಾಗಿ ಕಲ್ಪಿಸಿಕೊಳ್ಳುವ ಅರ್ಥಕ್ಕಿಂತ ಭಿನ್ನವಾದ ಅರ್ಥವನ್ನು ಹೊಮ್ಮಿಸುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ಹಣಕಾಸು ಬಂಡವಾಳವನ್ನೂ ಒಳಗೊಂಡ ಬಂಡವಾಳದ ಚಲನೆಗೆ ಅನಿರ್ಬಂಧಿತ ಅವಕಾಶವನ್ನು ಒದಗಿಸಿಕೊಡುವ ಸಲುವಾಗಿ ದೇಶ ದೇಶಗಳ ಅರ್ಥವ್ಯವಸ್ಥೆಗಳನ್ನು ತೆರೆದಿಟ್ಟ ಸನ್ನಿವೇಶದಲ್ಲಿ ಅಸ್ತಿತ್ವಕ್ಕೆ ಬಂದ,ಬಂಡವಾಳವು ಜಾಗತೀಕರಣಗೊಂಡ, ಬಂಡವಾಳಶಾಹಿ ವ್ಯವಸ್ಥೆಯ ಒಂದು ಹಂತ ಎಂಬುದೇ ಜಾಗತೀಕರಣದ ನಿಜ ಅರ್ಥ. ಹೀಗೆ ಜಾಗತೀಕರಣಗೊಂಡ
ಹಣಕಾಸು ಬಂಡವಾಳವು, ತನ್ನಅನುಮೋದನೆ ಇಲ್ಲದೆ, ರಾಷ್ಟ್ರ-ಪ್ರಭುತ್ವವು ಅರ್ಥವ್ಯವಸ್ಥೆಯಲ್ಲಿ ಮಧ್ಯಪ್ರವೇಶಿಸಲು ಹೊಂದಿದ್ದ ಸಾಮರ್ಥ್ಯವನ್ನು ನಿಗ್ರಹಿಸಿತು. ಈ ಜಾಗತೀಕರಣಗೊಂಡ ಹಣಕಾಸು ಬಂಡವಾಳವು ತನ್ನಜಾಗತಿಕ ಕಾರ್ಯಾಚರಣೆಗಳಲ್ಲಿ, ಎಲ್ಲಕ್ಕಿಂತ ಮಿಗಿಲಾಗಿ ಮೆಟ್ರೋಪಾಲಿಟನ್ ದೇಶಗಳ ಪ್ರಭುತ್ವಗಳ ಬೆಂಬಲವನ್ನು ಪಡೆದಿತ್ತು. ಈ ಮೆಟ್ರೋಪಾಲಿಟನ್ ದೇಶಗಳ ಪ್ರಭುತ್ವಗಳು, ವಿಶೇಷವಾಗಿ ಅಮೆರಿಕಾ, ಯಾವ ದೇಶಗಳ ಮೇಲೆ ನಿರ್ಬಂಧಗಳನ್ನು ವಿಧಿಸಬೇಕು ಎಂಬುದನ್ನು ನಿರ್ಧರಿಸುತ್ತವೆ. ಉಳಿದ ಬಂಡವಾಳಶಾಹಿ ದೇಶಗಳು ಈ ನಿರ್ಬಂಧಗಳ ಹೇರಿಕೆಯನ್ನು ಅನುಮೋದಿಸುತ್ತವೆ.
ಈ “ಜಾಗತೀಕರಣ”ವು, ಸಮಾಜವಾದಿ ದೇಶಗಳನ್ನು ಹೊರತುಪಡಿಸಿ, ಇಪ್ಪತ್ತನೇ ಶತಮಾನದ ಮಧ್ಯ ಭಾಗದಲ್ಲಿ ವಸಾಹತು ಶಾಹಿಯಿಂದ ವಿಮೋಚನೆಗೊಂಡ ಮತ್ತು ಬಂಡವಾಳಶಾಹಿ ಅಭಿವೃದ್ಧಿಯನ್ನು ಉತ್ತೇಜಿಸುತ್ತಿದ್ದ ಮತ್ತು ವಿವಿಧರೀತಿಯ ನೇರ ನಿಯಂತ್ರಣ-ನೀತಿ ಕಾರ್ಯತಂತ್ರಗಳನ್ನು ಅಳವಡಿಸಿಕೊಂಡ ದೇಶಗಳನ್ನೂ ಒಳಗೊಂಡಿದೆ. ಜಾಗತೀಕರಣದ ಈ ವಿದ್ಯಮಾನವುಇಡೀ ವಿಶ್ವದ ಮೇಲೆ ಮತ್ತೊಮ್ಮೆ ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿಯು ಪ್ರಾಬಲ್ಯ ಹೊಂದುವ ಬಯಕೆಯನ್ನು ಪ್ರತಿನಿಧಿಸುತ್ತದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಸಮಾಜವಾದಿ ದೇಶಗಳನ್ನು ಹೊರತುಪಡಿಸಿ, ಮೂರನೆ ಜಗತ್ತಿನ ದೇಶಗಳು ಸಾಮ್ರಾಜ್ಯ ಶಾಹಿಗೆ ಎದುರಾಗಿ ಹೊಂದಿರುವ ಯಾವುದೇ ಸಾಪೇಕ್ಷ ಸ್ವಾಯತ್ತತೆಯನ್ನು ನಾಶಪಡಿಸುವುದು ಇದರ ಅರ್ಥ. “ಜಾಗತೀಕರಣ” ವೆಂದರೆ ಬಂಡವಾಳದ ಅನಿರ್ಬಂಧಿತ ಚಲನೆಗೆ ಪೂರಕವಾಗಿ, ಅದಕ್ಕ ನುಗುಣವಾಗಿ ದೇಶ ದೇಶಗಳ ನಡುವೆ ಅನಿರ್ಬಂಧಿತವಾಗಿ ಸರಕುಗಳು ಮತ್ತುಸೇವೆಗಳ ಚಲನೆ ಎಂದೂ ಅರ್ಥ(ನಿಜ, “ನಿರ್ಬಂಧ”ಗಳನ್ನು ಎದುರಿಸುತ್ತಿರುವ ದೇಶಗಳನ್ನು ಹೊರತುಪಡಿಸಿ).
ಇದನ್ನೂ ಓದಿ : ಅಮೆರಿಕದ ಸಾಲ ಮಿತಿಏರಿಕೆಯ ಬಿಕ್ಕಟ್ಟು ಮತ್ತು ಬೈಡನ್ ಆಡಳಿತದ ಎರಡು ದೋಣಿಗಳ ಸವಾರಿ
ಹೊಸ ಶಕ್ತಿಗಳ ಉದಯ-ಹೊಸ ಬೆದರಿಕೆಗಳ ಭೀತಿ
ಜಾಗತೀಕರಣದ ಈ ಅವಧಿಯಲ್ಲಿಆದದ್ದೇನೆಂದರೆ, ಹೊಸ ಹೊಸ ಆರ್ಥಿಕ ಶಕ್ತಿಗಳು ಹೊರ ಹೊಮ್ಮಿದವು ಮತ್ತು ಇವು ತಮಗೆ ಬೆದರಿಕೆ ಯೊಡ್ಡುತ್ತವೆ ಎಂದು ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿ ಶಕ್ತಿಗಳು ಭಾವಿಸುವಂತಾಯಿತು. ಈ ಹೊಸ ಆರ್ಥಿಕ ಶಕ್ತಿಗಳ ಪೈಕಿ ಸೋವಿಯತ್ ಒಕ್ಕೂಟವು ನಿರ್ಮಿಸಿದ ಬೃಹತ್ ಉತ್ಪಾದನಾ ನೆಲೆಯನ್ನುಉತ್ತರಾಧಿಕಾರದಿಂದ ಪಡೆದ ರಷ್ಯಾವೂ ಸೇರಿತ್ತು, ಅದನ್ನು ಈಗ ಅಧೀನಗೊಳಿಸಿ ಕೊಂಡಿದ್ದೇವೆ ಎಂದು ಪಾಶ್ಚ್ಯಾತ್ಯಶಕ್ತಿಗಳು ಭಾವಿಸಿದ್ದವು. ಆದರೆ, ಬೋರಿಸ್‌ಯೆಲ್ಟ್ಸಿನ್ ಅಧಿಕಾರದಿಂದ ಕೆಳಗಿಳಿದ ನಂತರ ಅದುತನ್ನ ಹಿಂದಿನ ಶಕ್ತಿ-ಸಾಮರ್ಥ್ಯಗಳನ್ನು ಮತ್ತೆ ತೋರಿಸಲಾರಂಭಿಸಿತು. ಇನ್ನು ಚೀನಾದ ಬಗ್ಗೆ ಹೇಳುವುದಾದರೆ, ಪಾಶ್ಚ್ಯಾತ್ಯ ಶಕ್ತಿಗಳ ನಿರ್ದೇಶನಗಳನ್ನು ಒಪ್ಪಿಕೊಳ್ಳುವುದರ ಬದಲಾಗಿ ತನ್ನದೇ ಷರತ್ತುಗಳ ಮೇಲೆ “ಜಾಗತೀಕರಣ”ಕ್ಕೆತನ್ನನ್ನುಅದು ಹೊಂದಿಸಿಕೊಂಡಿತು ಮತ್ತು ಇತರ ಕಾರಣಗಳೊಂದಿಗೆ, ಮೆಟ್ರೋಪಾಲಿಟನ್ ಬಂಡವಾಳಶಾಹಿ ಜಗತ್ತಿನ ಮಾರುಕಟ್ಟೆಗಳಿಗೆ ಪ್ರವೇಶ ಪಡೆದುದರಿಂದಾಗಿ ಯೂಕ್ಷಿಪ್ರ ಆರ್ಥಿಕ ಬೆಳವಣಿಗೆಯನ್ನು ಸಾಧಿಸಿತು.
ಈಗ, ಉಕ್ರೇನ್ ಯುದ್ಧದ ಸನ್ನಿವೇಶದಲ್ಲಿರ ಷ್ಯಾದೇಶವೂ “ನಿರ್ಬಂಧ”ಗಳ ಅಡಿಯಲ್ಲಿ ಬಂದಿದೆ. ಚೀನಾದೊಂದಿಗಿನ ಪಾಶ್ಚಾತ್ಯ ದೇಶಗಳ ವ್ಯಾಪಾರ ವೂಚೀನಾದ ಉದ್ದೇಶ ಪೂರ್ವಕವಾದ ರಾಜಕೀಯ ಪ್ರಯತ್ನಗಳ ಭಾಗವಾಗಿಸ್ವಲ್ಪ ಮಟ್ಟಿಗೆ ಕುಸಿದಿದೆ. ಅಮೆರಿಕಾದ ವಿಷಯದಲ್ಲಿ ಅಂತಹ ಪ್ರಯತ್ನಗಳು ಹಲವು ಉದ್ದೇಶಗಳಿಂದ ಪ್ರೇರಿತವಾಗಿವೆ-ದೇಶೀಯ ಉದ್ಯೋಗಗಳನ್ನು ರಕ್ಷಿಸಿಕೊಳ್ಳುವುದ ರಿಂದ ಹಿಡಿದು ರಕ್ಷಣೆಯಿಂದ ಹಿಡಿದು (ಚೀನಾ ದಿಂದ ಅಮೆರಿಕಾಕ್ಕೆ ಬರುವಬರುವ ಬಹಳಷ್ಟು ಆಮದುಗಳನ್ನು ಅಲ್ಲಿಅಮೆರಿಕಾದ ನೇರ ಹೂಡಿಕೆಯಿಂದ ಉತ್ಪಾದಿಸಿದರೂ ಸಹ) ಚೀನಾದ ಮೇಲೆ ಹೆಚ್ಚು ಅವಲಂಬಿತವಾಗಬಾರದು ಎಂಬ ಉತ್ಕಟ ಬಯಕೆಯವರೆಗಿನ ಹಲವಾರು ಅಂಶಗಳಿಂದ ಪ್ರೇರೇಪಿಸಲ್ಪಟ್ಟಿವೆ. ಈ ಸಂಬಂಧವಾಗಿ ಇತರ ಮೆಟ್ರೋಪಾಲಿಟನ್ ದೇಶಗಳಿಗೆ ಸಂಬಂಧಪಟ್ಟಂತೆ, ಈ ಅಂಶಗಳಲ್ಲದೆ, ಅಮೆರಿಕಾದ ಒತ್ತಡವೂ ಸೇರಿದೆ.. ಈ ಎಲ್ಲ ಅಂಶಗಳ ಪೈಕಿ ಹೆಚ್ಚು ನಿರ್ಣಾಯಕ ಅಂಶವೆಂದರೆ, ಚೀನಾದ ಮೇಲೆ ಹೆಚ್ಚು ಅವಲಂಬಿತವಾಗಬಾರದು ಎಂಬ ಬಯಕೆಯೇ.
ಚೀನಾದಿಂದ ಆಮದುಗಳು ವೇಗವಾಗಿ ವೃದ್ಧಿಸುತ್ತಿರುವಬಗ್ಗೆ ಅಮೆರಿಕಾದ ಆತಂಕವು ಜಾರ್ಜ್ ಬುಷ್ (ಕಿರಿಯ) ಅವರ ಅವಧಿಯಲ್ಲೇ ಕಾಣಿಸಿಕೊಂಡಿತು. ಅವರು, ಡಾಲರ್‌ಗೆ ಎದುರಾಗಿ ಚೀನಾದ ಯುವಾನ್ ಕರೆನ್ಸಿಯ ವಿನಿಮಯ ಮೌಲ್ಯವನ್ನು ಏರಿಕೆ ಮಾಡುವಂತೆ ಚೀನೀಯರ ಮನವೊಲಿಸುವ ಪ್ರಯತ್ನ ಮಾಡಿದರು. ಈ ಪ್ರಯತ್ನವನ್ನು ಮುಂದುವರಿಸಿದ ಒಬಾಮಾ ಆಡಳಿತವು, ತಮ್ಮಉತ್ಪಾದನೆಯನ್ನು ವಿದೇಶಕ್ಕೆ ಸ್ಥಳಾಂತರಿಸುವ ಅಮೆರಿಕಾದ ಸಂಸ್ಥೆಗಳಿಗೆ ದಂಡ ವಿಧಿಸಿತು. ಆದರೆ, ದೇಶೀಯ ಉತ್ಪಾದನೆಯನ್ನು ರಕ್ಷಿಸುವ ಉದ್ದೇಶದಿಂದ, ಡೊನಾಲ್ಡ್ಟ್ರಂಪ್, ವಿದೇಶದಿಂದ ಆಮದಾಗುವ ವಸ್ತುಗಳ ಮೇಲೆ ಆಮದು ಸುಂಕವನ್ನು ವಿಧಿಸಿದರು. ಈ ಆಮದು ಸುಂಕಗಳ ಪ್ರಮುಖಗುರಿ ಚೀನಾವೇ.
ತಾರತಮ್ಯದ ಹೊಸ ಪ್ರವೃತ್ತಿ
ಪಶ್ಚಿಮದ ದೇಶಗಳು ಚೀನಾ ದೊಂದಿಗಿನ ವ್ಯಾಪಾರವನ್ನು ತಗ್ಗಿಸುವ ಉದ್ದೇಶದ ಹಿಂದಿರುವ ಅಗಾಧ ರಾಜಕೀಯ ಪ್ರೇರಣೆಯನ್ನು ಎರಡು ಉದಾಹರಣೆಗಳು ಸ್ಪಷ್ಟಪಡಿಸುತ್ತವೆ. ಯುರೋಪಿನ ಅಪ-ಇಂಗಾಲೀಕರಣ (decarbonisation-ಅಂದರೆ, ಕಲ್ಲಿದ್ದಲು ಬಳಕೆಯನ್ನು ನಿಲ್ಲಿಸುವುದು) ಉದ್ದೇಶಕ್ಕಾಗಿ ಬಳಸುವ ಸೌರ ಫಲಕಗಳನ್ನು ವಿಶ್ವ ಮಾರುಕಟ್ಟೆಯಲ್ಲಿ ಶೇ. 85ಕ್ಕಿಂತ ಹೆಚ್ಚು ಪಾಲು ಹೊಂದಿರುವ ಯಾವುದೇ ದೇಶದಿಂದ ಆಮದು ಮಾಡಿಕೊಳ್ಳಬಾರದು ಎಂಬ ನಿಯಮವನ್ನು ಪಾಲಿಸಬೇಕೆಂದು ಯುರೋಪಿಯನ್ ಯೂನಿಯನ್ ಹೇಳುತ್ತದೆ. ಈ ನಿಯಮವು, ವಿಶ್ವ ಮಾರುಕಟ್ಟೆಯಲ್ಲಿ ಶೇ. 85ರಷ್ಟು ಪಾಲು ಹೊಂದಿರುವ ಚೀನಾವನ್ನು ಹೊರಗಿಡುವ ಉದ್ದೇಶ ಹೊಂದಿದೆ. ಏಕೆಂದರೆ, ಅತ್ಯಂತಕಡಿಮೆ ಬೆಲೆಯಲ್ಲಿ ಸೌರ ಫಲಕಗಳನ್ನು ಚೀನಾ ಸರಬರಾಜು ಮಾಡುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಚೀನಾವನ್ನು ಹೊರಗಿಡುವ ಉದ್ದೇಶಕ್ಕಾಗಿ ಸೌರ ಫಲಕಗಳಿಗೆ ಹೆಚ್ಚಿನ ಬೆಲೆ ತೆರಲು ಯುರೋಪ್ ಸಿದ್ಧವಿದೆ. ಈ ನಿರ್ಧಾರವು ಸಂಪೂರ್ಣವಾಗಿ ಭೌಗೋಳಿಕ-ರಾಜಕೀಯ ಪರಿಗಣನೆಗಳಿಂದ ಪ್ರೇರಿತವಾಗಿದೆ.
ಅಂತೆಯೇ, ಬೈಡನ್ ಆಡಳಿತವು ಚೀನಾಕ್ಕೆ ಅರೆ-ವಾಹಕಗಳ (semi-conductor) ರಫ್ತನ್ನು ನಿಷೇಧಿಸಿದೆ. ಅರೆ-ವಾಹಕಗಳನ್ನು ತಯಾರಿಸುವ ಅಮೆರಿಕಾದ ಕಾರ್ಪೊರೇಟ್‌ಗಳ ಇಚ್ಛೆಗಳಿಗೆ ವಿರುದ್ಧವಾಗಿ ಈ ನಿಷೇಧವನ್ನು ಹೇರಲಾಗಿದೆ. ಚೀನಾದ ಮಿಲಿಟರಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ(ಎಐ)ಯೂ ಸೇರಿದಂತೆ ಚೀನಾದ ಹೈಟೆಕ್ ಉದ್ಯಮಗಳಿಗೆ ಭಾರೀ ಬೆದರಿಕೆಯನ್ನು ಒಡ್ಡಿರುವ ಅರೆ-ವಾಹಕಗಳ ಈ ರಫ್ತು ನಿಷೇಧವು ಚೀನಾವನ್ನು ಆರ್ಥಿಕವಾಗಿ ಮತ್ತು ತಾಂತ್ರಿಕವಾಗಿ ಸಂಪೂರ್ಣವಾಗಿ ದುರ್ಬಲಗೊಳಿಸುವ ಬಯಕೆಯಿಂದ ಪ್ರೇರಿತವಾಗಿದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಚೀನಾದ ವಿರುದ್ಧ ಈಗ ಯಾವುದೇ ಸ್ಪಷ್ಟ ನಿರ್ಬಂಧಗಳಿಲ್ಲದಿದ್ದರೂ, ಭವಿಷ್ಯದಲ್ಲಿ ಹೇರಬಹುದಾದ ನಿರ್ಬಂಧಗಳಿಗೆ ಪೂರ್ವ ಸಿದ್ಧತೆಯಾಗಿ ಅಥವಾ ಚೀನಾವನ್ನು ದುರ್ಬಲಗೊಳಿಸುವ ಬಯಕೆಯಿಂದ ನಿರ್ಬಂಧಗಳನ್ನು ಈಗಾಗಲೇ ಸೂಚ್ಯವಾಗಿ ಹೇರಿರುವುದನ್ನು ನಾವು ನೋಡುತ್ತಿದ್ದೇವೆ.
“ನಿರ್ಜಾಗತೀಕರಣ” (“de-globalisation”)ಎಂದು ಏನನ್ನು ಕರೆಯಲಾಗುತ್ತದೆಯೋ ಅದು ಪಾಶ್ಚ್ಯಾತ್ಯ ಶಕ್ತಿಗಳು ಚೀನಾದ ವಿರುದ್ಧ ಮಾಡುತ್ತಿರುವ ತಾರತಮ್ಯದ ಈ ಇಡೀ ಹೊಸ ಪ್ರವೃತ್ತಿಯನ್ನು ಮತ್ತು ಚೀನಾದ ಮೇಲೆ ಹೆಚ್ಚು ಅವಲಂಬಿತವಾಗ ಬಾರದು ಎಂಬ ಅವರ ಅದಮ್ಯ ಬಯಕೆಯನ್ನು ಸೂಚಿಸುತ್ತದೆ. ಇದರ ಪರಿಣಾಮವನ್ನು ಚೀನಾದೊಂದಿಗಿನ ವ್ಯಾಪಾರದಲ್ಲಿಅಮೆರಿಕಾದ ವಹಿವಾಟುಗಳು ಇತ್ತೀಚಿನ ದಿನಗಳ ಕುಸಿತದಲ್ಲಿ ಕಾಣಬಹುದು. ಪಾಶ್ಚ್ಯಾತ್ಯರ ಪ್ರಯತ್ನವು ಮೂಲತಃ ಚೀನಾದಿಂದ ದೂರ ಸರಿದು ತಮ್ಮ ವ್ಯಾಪಾರ ಸಂಬಂಧಗಳನ್ನು ಇತರ ದೇಶಗಳೊಂದಿಗೆ ಏರ್ಪಡಿಸಿಕೊಳ್ಳುವ ಉದ್ದೇಶ ಹೊಂದಿದೆ – ಈ ಪ್ರಯತ್ನವು ಹೆಚ್ಚು ದುಬಾರಿಯಾಗಿ ಪರಿಣಮಿಸಿದರೂ ಸಹ. ಇದರಿಂದಪಾಶ್ಚ್ಯಾತ್ಯ ನಿರ್ಬಂಧಗಳಿಗೆ ಒಳಪಟ್ಟ ದೇಶಗಳ ಪಟ್ಟಿಗೆಚೀನಾವನ್ನು ಸೇರಿಸಿದಂತೆಕಾಣುತ್ತದೆ.
ಕುತೂಹಲಕರ ಅಂಶವೆಂದರೆ, “ಜಾಗತೀಕರಣ”ದ ವ್ಯಾಪ್ತಿಯನ್ನು ಅಳೆಯಲು ಕೆಲವು ಅರ್ಥಶಾಸ್ತ್ರಜ್ಞರು ಬಳಸುವ, ವಿಶ್ವಜಿಡಿಪಿ ಮತ್ತುಒಟ್ಟುಜಾಗತಿಕ ಆಮದುಗಳ ಅನುಪಾತ ಮುಂತಾದಬದಲಿ ಮಾನದಂಡಗಳಲ್ಲಿ ಯಾವುದೇ ಕುಸಿತ ಕಂಡುಬಂದಿಲ್ಲ. ಇಂತಹ ಬದಲಿ ಅಳತೆಗಳ ಮೂಲಕ ಈ ಅರ್ಥಶಾಸ್ತ್ರಜ್ಞರು, “ಜಾಗತೀಕರಣ”ದ ಪ್ರಕ್ರಿಯೆಯು ನಿಧಾನಗೊಳ್ಳುತ್ತಿದೆಯೇ ಹೊರತು ಅದನ್ನು ಹಿಂತೆಗೆದು ಕೊಳ್ಳಲಾಗುತ್ತಿಲ್ಲ ಎಂಬುದನ್ನು ಕಂಡುಕೊಂಡಿದ್ದಾರೆ.
ಹಣಕಾಸು ಬಂಡವಾಳದ ಪ್ರಾಬಲ್ಯ
ಮತ್ತು ಪ್ರಗತಿಪರ ಸರಕಾರದ ಮಧ್ಯಪ್ರವೇಶ..
ನಾವು ಈ ಹಿಂದೆ ಹೇಳಿದಂತೆ, ನಮ್ಮ ಗ್ರಹಿಕೆಯಲ್ಲಿ “ಜಾಗತೀಕರಣ”ವು ದೇಶ ದೇಶಗಳು ಪರಸ್ಪರ ಹೆಚ್ಚು ಅವಲಂಬಿತವಾಗುವ ವಿದ್ಯಮಾನವನ್ನು ಸೂಚಿಸುವುದಿಲ್ಲ. ಈ “ಜಾಗತೀಕರಣ”ವು ಮೂಲಭೂತವಾಗಿ ಅಧಿಕಾರ- ಸಂಬಂಧಗಳನ್ನು ಸೂಚಿಸುತ್ತದೆ. ನಿರ್ದಿಷ್ಟ ದೇಶಗಳ ವಿರುದ್ಧ ವಿಧಿಸಿದ “ನಿರ್ಬಂಧ”ಗಳ ಮೂಲಕ ಈ ಅಧಿಕಾರವು ಬಳಕೆಯಾದ ರೀತಿಯಲ್ಲೇ ದೇಶ ದೇಶಗಳನ್ನು “ಜಾಗತೀಕರಣ”ದ ಸುಳಿಗೆ ಎಳೆಯುವ ಮೂಲಕವೂ ಬಳಸಲಾಗುತ್ತದೆ. ಈ ಅಧಿಕಾರದ ಬಳಸುವಿಕೆಯೇ ಸಾಮ್ರಾಜ್ಯಶಾಹಿಯ ಹೆಗ್ಗುರುತು. ಹೇಗೆ “ನಿರ್ಬಂಧಗಳು” ಸಾಮ್ರಾಜ್ಯಶಾಹಿಯ ನಿರ್ದಯತೆಯ ಲಕ್ಷಣವಾಗಿವೆಯೋ ಹಾಗೆಯೇ ಜಾಗತೀಕರಣವೂ ಸಹ ಜಾಗತೀಕರಣಗೊಂಡ ಬಂಡವಾಳದ ಪ್ರಾಬಲ್ಯಕ್ಕೆ ಅಗತ್ಯವಾಗುತ್ತವೆ. ವಿಷಯವನ್ನು ಬೇರೆರೀತಿಯಲ್ಲಿ ಹೇಳುವುದಾದರೆ, ‘ಅಪ-ಜಾಗತೀಕರಣ” ಎಂಬುದು ವಾಸ್ತವವಾಗಿ “ಜಾಗತೀಕರಣ”ದ ನಿರಾಕರಣೆಯಲ್ಲ, ಬದಲಿಗೆ ಅದಕ್ಕೆ ಪೂರಕವೇ.
ಜಾಗತೀಕರಣಗೊಂಡ ಬಂಡವಾಳವು ಮಹಾನಗರಗಳಿಂದ (metropolis) ಬರುತ್ತದೆ ಮತ್ತು ಅದು ಮಹಾನಗರೀಯ (ಮೆಟ್ರೋಪಾಲಿಟನ್) ದೇಶಗಳ ಕಾರ್ಯಾಚರಣೆ ಯೊಂದಿಗೆ ತೊಡರಿಕೊಂಡಿದೆ. ಈ ಕಾರಣದಿಂದಾಗಿ ಜಾಗತೀಕರಣಗೊಂಡ ಬಂಡವಾಳದ ಪ್ರಾಬಲ್ಯವು ನಿಜಕ್ಕೂ ಮೆಟ್ರೋಪಾಲಿಟನ್ ಅಥವ ಪಾಶ್ಚಾತ್ಯ ಬಂಡವಾಳಶಾಹಿ ದೇಶಗಳ ಪ್ರಾಬಲ್ಯವೇ ಆಗುತ್ತದೆ. ಈ ಪ್ರಾಬಲ್ಯವು ವಿಶ್ವದ ಜನರ ಮೇಲೆ ಅದರಲ್ಲೂ ವಿಶೇಷವಾಗಿ ಮೂರನೇ ಜಗತ್ತಿನ ಜನರ ಮೇಲೆ ಚಲಾಯಿಸಲ್ಪಡುತ್ತದೆ. ಮೂರನೇ ಜಗತ್ತಿನ ದೊಡ್ಡ ಬಂಡವಾಳಗಾರರು, ವೇತನದಾರರು ಮತ್ತು ವೃತ್ತಿಪರರುಮುಂತಾದ ವರ್ಗಗಳ ಮೇಲಿನ ಸ್ತರಗಳ ಬೆಂಬಲವನ್ನು ಹೊಂದಿರುವ “ಜಾಗತೀಕರಣ”ವು ಅನಿವಾರ್ಯವಾಗಿ ಮೂರನೇ ಜಗತ್ತಿನ ಕಾರ್ಮಿಕರು, ರೈತರು ಮತ್ತು ಸಣ್ಣ ಉತ್ಪಾದಕರನ್ನು ದಮನಿಸುತ್ತದೆ.
ಬಂಡವಾಳಶಾಹಿ ಗುಲಾಮಗಿರಿಯಿಂದ ಹೊರಬರಲು ದುಡಿಯುವ ಜನರು ಒಂದು ದಶಕದ ಹಿಂದೆ ನಡೆಸುತ್ತಿದ್ದ ತಾಲೀಮಿಗೆ ಹೋಲಿಸಿದರೆ ಅವರ ಇಂದಿನ ಪರಿಸ್ಥಿತಿ ಭಿನ್ನವೇನಿಲ್ಲ. ದುಡಿಯುವ ಜನರ ಜೀವನ ಮಟ್ಟದಲ್ಲಿ ಯಾವುದೇ ಸುಧಾರಣೆಗೆ ಸರ್ಕಾರವು ಮಧ್ಯಪ್ರವೇಶ ಮಾಡ ಬೇಕಾದ ಅಗತ್ಯವಿದೆ. ಈ ಉದ್ದೇಶಕ್ಕಾಗಿ ತಾನು ಮಧ್ಯಪ್ರವೇಶ ಮಾಡಿದರೆ ಬಂಡವಾಳವು ಪಲಾಯನ ಮಾಡುತ್ತದೆ ಎಂಬ ಭಯದಿಂದ ಸರ್ಕಾರದ ಕೈ-ಕಾಲುಗಳು ಸೆಟೆದುಕೊಳ್ಳುತ್ತವೆ. ಆದ್ದರಿಂದ ಸರ್ಕಾರವು ತನ್ನ ಕೈ-ಕಾಲಾಡಿಸುವಷ್ಟಾದರೂ ಜಾಗವನ್ನು ತನಗಾಗಿ ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಆದರೆ, ಎಲ್ಲಿಯವರೆಗೆ ದೇಶವು ಅನಿರ್ಬಂಧಿತ ಬಂಡವಾಳ ಹರಿವಿನ ಸುಳಿಯಲ್ಲಿ ಸಿಲುಕಿಕೊಳ್ಳುತ್ತದೋ ಅಲ್ಲಿಯವರೆಗೂ ಸರ್ಕಾರವು ಕೈ-ಕಾಲಾಡಿಸುವಷ್ಟು ಜಾಗವನ್ನೂ ಸೃಷ್ಟಿಸಿ ಕೊಳ್ಳುವುದು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರದ ಯಾವುದೇ ಪ್ರಗತಿಪರ ಮಧ್ಯಪ್ರವೇಶಕ್ಕಾಗಿ ಬಂಡವಾಳದ ಹರಿವಿನ ಮೇಲೆ ನಿಯಂತ್ರಣ ಹೇರುವುದು ಅನಿವಾರ್ಯವಾಗುತ್ತದೆ.
ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಜನರ ಲೌಕಿಕ ಸ್ಥಿತಿ-ಗತಿಯ ಸುಧಾರಣೆಗಾಗಿ, ಕೇವಲ ಪ್ರಭುತ್ವದ ಸ್ವರೂಪದ ಬದಲಾವಣೆ – ಅಂದರೆ, ಕಾರ್ಮಿಕರು ಮತ್ತು ರೈತರ ಬೆಂಬಲ ಹೊಂದಿದ ಸರ್ಕಾರ ಅಗತ್ಯವಾಗಿದೆ, ಮಾತ್ರವಲ್ಲ, ಅದರೊಂದಿಗೇ, ಅನಿರ್ಬಂಧಿತ ಬಂಡವಾಳ ಹರಿವಿನ ಬ್ರಹ್ಮಾಂಡದಿಂದ ಕಳಚಿಕೊಳ್ಳುವುದು ಕೂಡ ಅಗತ್ಯವಾಗುತ್ತದೆ. ಜನಪರ ನೀತಿಗಳನ್ನು ಅಳವಡಿಸಿ ಕೊಳ್ಳಬೇಕಾದರೆ, ದುಡಿಯುವ ಜನರ ಬೆಂಬಲ ಮಾತ್ರವೇ ಸಾಕಾಗುವುದಿಲ್ಲ. ಬಂಡವಾಳದ ಹರಿವಿನ ಮೇಲೆ ನಿಯಂತ್ರಣ ಹೇರುವುದು ಕೂಡ, ಅಂತಹ ನಿಯಂತ್ರಣವು ಸಾಮ್ರಾಜ್ಯಶಾಹಿ “ನಿರ್ಬಂಧ” ಗಳನ್ನು ಆಕರ್ಷಿಸ ಬಹುದಾದರೂ, ಅನಿವಾರ್ಯವಾಗುತ್ತದೆ.
ಈ ಮಾತು ಒಂದು ದಶಕದ ಹಿಂದಿನಷ್ಟೇ ಇಂದಿಗೂ ಸಹದಿಟ. ಕೆಲವು ಅರ್ಥ ಶಾಸ್ತ್ರಜ್ಞರು ಹೇಳುವ “ನಿರ್ಜಾಗತೀಕರಣ” (“de-globalisation”) ಎಂಬುದು ಜಾಗತೀಕರಣಗೊಂಡ ಬಂಡವಾಳದ ಪ್ರಾಬಲ್ಯವನ್ನು ಎದುರಿಸುವ ವಾಸ್ತವಿಕ ಅಗತ್ಯಕ್ಕೆ ಕೊಂಚವೂ ವ್ಯತ್ಯಾಸವನ್ನು ಉಟುಮಾಡುವುದಿಲ್ಲ. ಏಕೆಂದರೆ, ಜಾಗತೀಕರಣದ ಹಿಂದೆ ಮೆಟ್ರೋಪಾಲಿಟನ್ ಪ್ರಭುತ್ವಗಳ ವ್ಯೂಹವೇ ನಿಂತಿವೆ.