ಎತ್ತ ಸಾಗಿದೆ ರಾಜ್ಯದಲ್ಲಿ ಪ್ರಜಾಪ್ರಭುತ್ವ? ಜಾಗೃತ ನಾಗರಿಕರು ಕರ್ನಾಟಕ ಆಕ್ರೋಶ

ಕಾರ್ಮಿಕ ಸಂಘಟನೆಯ ಕಛೇರಿಯಲ್ಲಿ ನಡೆಸುವ ಸಭೆಗೂ ನಿಷೇಧ ಹೇರುತ್ತಿರುವ ಬೆಂಗಳೂರು ‌ ಪೋಲಿಸರು!! ಜಾಗೃತ ನಾಗರಿಕರು ಕರ್ನಾಟಕ ಖಂಡಿಸಿದೆ.

ಬೆಂಗಳೂರು: ಪ್ರಜಾಪ್ರಭುತ್ವ ದಲ್ಲಿ ಪ್ರತಿಭಟನೆ ಜನರ ಹಕ್ಕು. ಅದರೆ ಕರ್ನಾಟಕ ರಾಜ್ಯದಲ್ಲಿ ಪ್ರತಿಭಟನೆ ಇರಲಿ ಸಭಾಂಗಣಗಳ ಒಳಗೆ ಸಭೆ ನಡೆಸಲೂ ಪೋಲಿಸರು ‌ನಿಷೇಧ ಹೊರಡಿಸುತ್ತಿರುವ‌ ಖಂಡನೀಯ ಘಟನೆಗಳು ನಡೆಯುತ್ತಿವೆ ಎಂದು ಜಾಗೃತ ನಾಗರಿಕರು ಕರ್ನಾಟಕ ತಿಳಿಸಿದೆ.

ತನ್ನ ದಮನಕಾರಿ ನಡೆಗಳಿಗೆ ರಾಜ್ಯದ ಉಚ್ಛ ನ್ಯಾಯಾಲಯವನ್ನು ತಪ್ಪಾಗಿ ಉಲ್ಲೇಖಿಸಿ ಸಮರ್ಥನೆ ಕೊಟ್ಟುಕೊಳ್ಳುವ ಪೋಲೀಸ್ ಇಲಾಖೆ ಮಹಿಳೆಯರ ಮೇಲಿನ ದೌರ್ಜನ್ಯಗಳ ಪ್ರಕರಣಗಳಲ್ಲಿ ಮಾಡಿದ ನಿರ್ಲಕ್ಷ್ಯ ದಿಂದ, ತನಿಖಾಧಿಕಾರಿಗಳು ಮಾಡಿದ ತಪ್ಪಿನಿಂದ ನಿರಪರಾಧಿಯೊಬ್ಬ 12 ವರ್ಷ ಜೈಲಿನಲ್ಲಿ ಕೊಳೆಯುವ‌ ಹಾಗಾಯಿತು. ಮತ್ತು ಸಾಕ್ಷಿ ಆಧಾರಗಳ ನಾಶದಿಂದ ನಿಜವಾದ ಅಪರಾಧಿಗಳು ‌ತಪ್ಪಿಸಿಕೊಳ್ಳುವಂತಾದ ಸಂಗತಿಯನ್ನು ಸಿ.ಬಿ.ಐ. ಕೋರ್ಟ್ ಸೌಜನ್ಯ ಪ್ರಕರಣದಲ್ಲಿ ಎತ್ತಿ‌ ತೋರಿಸಿದೆ ಎಂದಿದೆ.

ಇದನ್ನೂ ಓದಿ: ಖೋಟಾನೋಟು ದಂಧೆಯ ಅಡ್ಡೆ ಮೇಲೆ ಪೊಲೀಸರು ದಾಳಿ; ನಾಲ್ವರ ಬಂಧನ

ಇಂತಹ ಅನ್ಯಾಯಗಳನ್ನು ಸರಿಪಡಿಸಲು ಪ್ರಜಾಸತ್ತಾತ್ಮಕ ನೆಲೆಯಲ್ಲಿ ಕೇಳಲು ಸಭೆ ಸೇರಲೂ ಅಡ್ಡಿ‌ಪಡಿಸುತ್ತಿರುವುದು ಸರಿಯಾದ ನಡೆಯಲ್ಲ. ಇದನ್ನು ಜಾಗೃತ ನಾಗರಿಕರು ಕರ್ನಾಟಕ ವೇದಿಕೆ ತೀವ್ರವಾಗಿ ಖಂಡಿಸಿದೆ.

ಪ್ರತಿಭಟನೆ ಒತ್ತಟ್ಟಿಗಿರಲಿ ಸಮಾಲೋಚನೆಗೂ ಅವಕಾಶಕೊಡದ ಪೋಲೀಸರ ನಡೆಯನ್ನು ಗೃಹ ಇಲಾಖೆ ಮತ್ತು ಸರಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ‌ ಕ್ರಮ ಕೈಗೊಳ್ಳಬೇಕು.‌ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದೆಂದರೆ ಜನರ ಪ್ರಾಥಮಿಕ ಹಕ್ಕುಗಳನ್ನು ದಮನ ಮಾಡುವುದಲ್ಲ ಎಂದು ಇಲಾಖೆಯ ಮುಖ್ಯಸ್ಥ ರಿಗೆ ಅರ್ಥ ಮಾಡಿಸಬೇಕೆಂದು ಆಗ್ರಹಿಸಿದೆ.

ಡಾ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಡಾ.ವಿಜಯಾ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ವಿಮಲಾ.ಕೆ.ಎಸ್., ಬಿ.ಶ್ರೀಪಾದ ಭಟ್, ಟಿ.ಸುರೇಂದ್ರ ರಾವ್, ಡಾ.ಬಂಜಗೆರೆ ಜಯಪ್ರಕಾಶ್, ಡಾ.ವಸುಂಧರಾ ಭೂಪತಿ, ಡಾ.ಎನ್.ಗಾಯತ್ರಿ, ಡಾ.ಮೀನಾಕ್ಷಿ ಬಾಳಿ, ಜಾಣಗೆರೆ ವೆಂಕಟರಾಮಯ್ಯ, ರುದ್ರಪ್ಪ‌ ಹುನಗವಾಡಿ,
ಇಂದಿರಾ ಕೃಷ್ಣಪ್ಪ, ಎನ್.ಕೆ.ವಸಂತ್ ರಾಜ್, ವಾಸುದೇವ ಉಚ್ಚಿಲ ಜಂಟಿ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

ಇದನ್ನೂ ನೋಡಿ: Karnataka Legislative Assembly Live Day 10 | ವಿಧಾನಸಭೆ ಬಜೆಟ್ ಅಧಿವೇಶನದ ನೇರ ಪ್ರಸಾರ ದಿನ 10

Donate Janashakthi Media

Leave a Reply

Your email address will not be published. Required fields are marked *