ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮದ ಘೋಷಣೆಯ ನಂತರ, ಬಿಸಿಸಿಐ (ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ) ಐಪಿಎಲ್ 2025 ಟೂರ್ನಿಯನ್ನು ಮುಂದಿನ ವಾರದಿಂದ ಪುನರಾರಂಭಿಸಲು ಯೋಜನೆ ರೂಪಿಸಿದೆ. ಮೇ 25 ರಿಂದ 30ರೊಳಗೆ ಟೂರ್ನಿಯನ್ನು ಮುಕ್ತಾಯಗೊಳಿಸಲು ಉದ್ದೇಶಿಸಿರುವ ಬಿಸಿಸಿಐ, ಮೇ 16ರಿಂದ ಪಂದ್ಯಗಳನ್ನು ಪುನರಾರಂಭಿಸಲು ಚಿಂತನೆ ನಡೆಸುತ್ತಿದೆ.
ಇದನ್ನು ಓದಿ :-ಶಾಸಕ ಮಾನಪ್ಪ ವಜ್ಜಲ್‌ಗೆ ಮುದಗಲ್ ಪಟ್ಟಣದ ಜನರಿಂದ ಗೇರಾವ್
ಭದ್ರತಾ ಕಾರಣಗಳಿಂದಾಗಿ ಸ್ಥಗಿತಗೊಂಡಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಸೇರಿದಂತೆ 58 ಪಂದ್ಯಗಳು ಈಗಾಗಲೇ ನಡೆದಿದ್ದು, ಇನ್ನೂ ನಾಲ್ಕು ಪ್ಲೇಆಫ್ ಪಂದ್ಯಗಳನ್ನು ಸೇರಿಸಿ 16 ಪಂದ್ಯಗಳು ಬಾಕಿ ಉಳಿದಿವೆ.
ಇದನ್ನು ಓದಿ :-ಭಾರಿ ಪ್ರಮಾಣದ ನಗದು ಹೊಂದಿದ್ದರೆ ಅದು ಅಪರಾಧವಲ್ಲ: ಹೈಕೋರ್ಟ್
ಆಟಗಾರರು ಮತ್ತು ಪ್ರೇಕ್ಷಕರ ಸುರಕ್ಷತೆಗೆ ಆದ್ಯತೆ ನೀಡಿದ ಬಿಸಿಸಿಐ, ಉದ್ವಿಗ್ನತೆ ಶಮನವಾದ ನಂತರ ಹೊಸ ದಿನಾಂಕಗಳನ್ನು ಪ್ರಕಟಿಸಲು ಸಿದ್ಧವಾಗಿದೆ. ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ನಗರಗಳಲ್ಲಿ ಪಂದ್ಯಗಳನ್ನು ಮುಂದುವರಿಸಲು ಯೋಜನೆ ರೂಪಿಸಲಾಗಿದ್ದು, ಕೇಂದ್ರ ಸರ್ಕಾರದ ಅನುಮತಿ ಸಿಕ್ಕರೆ ಐಪಿಎಲ್ ಟೂರ್ನಿ ಇನ್ನು ಕೆಲವೇ ದಿನಗಳಲ್ಲಿ ಪುನರಾರಂಭವಾಗಲಿದೆ.