ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಯುಎಸ್ ದಂಪತಿಯಿಂದ ಅಪಾರ ಮೊತ್ತದ 207 ಐಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ರಸ್ತೆ ಮೂಲಕ ಹೈದರಾಬಾದ್‌ಗೆ ಸಾಗಿಸಲು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಕಾರನ್ನು ಸಹ ಗುಪ್ತಚರ ಅಧಿಕಾರಿಗಳು ವಶಪಡಿಸಿಕೊಂಡಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಪ್ಯಾರಿಸ್ ನಿಂದ ಏರ್ ಫ್ರಾನ್ಸ್ ವಿಮಾನದ (ಎಎಫ್ 194) ಮೂಲಕ ಮುಂಜಾನೆ 3.30 ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದ ದಂಪತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅವರನ್ನು ಮಾರ್ಚ್ 12 ರವರೆಗೆ ನ್ಯಾಯಾಂಗ ಬಂಧನದಲ್ಲಿಡಲಾಗಿದೆ.
ಇದುವರೆಗೂ ಮಾಡಿದ ಫೋನ್‌ಗಳ ಅತಿದೊಡ್ಡ ಸೀಜ್ ಇದಾಗಿದೆ, ಇದರಲ್ಲಿ . ಫೋನ್‌ಗಳು ಐಫೋನ್ 12 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾದರಿಗಳಾಗಿದ್ದವು ಮತ್ತು ಅವುಗಳ ಒಟ್ಟು ಮೌಲ್ಯ 2, 74,19,400 ರೂ.
ಖರೀದಿಗಾಗಿ ಬಳಸಿದ ಒಟ್ಟು 37 ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊೂಬ್ಬರು ತಿಳಿಸಿದ್ದಾರೆ.
ಬಂಧಿಸಿದ ದಂಪತಿಯ ಹೆಸರು ಬಹಿರಂಗ ಪಡಿಸದ ಅಧಿಕಾರಿಗಳು, ಈ ದಂಪತಿ ಫೆಬ್ರವರಿ 13 ರಂದು ಮುಂಬಯಿಯಿಂದ ಯುಎಸ್ ಗೆ ತೆರಳಿದ್ದರು ಎಂದು ಹೇಳಿದ್ದಾರೆ.
ಫೋನ್ ಗಳನ್ನು ಹೈದರಾಬಾದ್‌ಗೆ ಸಾಗಿಸಲು ವಿಮಾನ ನಿಲ್ದಾಣ ಪಾರ್ಕಿಂಗ್ ಪ್ರದೇಶದಲ್ಲಿ ಕಾಯುತ್ತಿದ್ದ ಮಾರುತಿ ಎರ್ಟಿಗಾವನ್ನು ಭಾರತೀಯ ಕಸ್ಟಮ್ಸ್ ಕಾಯ್ದೆ 1962 ರ ಸೆಕ್ಷನ್ 115 ರ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.