ನವದಹಲಿ| ಆದಾಯ ತೆರಿಗೆ ಮಸೂದೆ-2025 ಮಂಡನೆ

ನವದಹಲಿ: ನೆನ್ನೆ ಫೆಬ್ರುವರಿ 13ರಂದು ಲೋಕಸಭೆಯಲ್ಲಿ ಆದಾಯ ತೆರಿಗೆ ಮಸೂದೆ-2025ಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು. ಬಹು ನಿರೀಕ್ಷಿತ ಹೊಸ ಮಸೂದೆಯಲ್ಲಿ ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾದ ಪರಿಭಾಷೆಯನ್ನು ಬಳಸಲಾಗಿದೆ. ನವದಹಲಿ

ಈ ಮಸೂದೆಯು 622 ಪುಟಗಳಷ್ಟಿದ್ದು, 536 ವಿಭಾಗಗಳು, 23 ಅಧ್ಯಾಯಗಳು ಹಾಗೂ 16 ಶೆಡ್ಯೂಲ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಹೊಸ ತೆರಿಗೆಗಳನ್ನು ಪರಿಚಯಿಸುವುದಿಲ್ಲ. ಆದರೆ ಈಗ ಅಸ್ತಿತ್ವದಲ್ಲಿರುವ 1961ರ ಆದಾಯ ತೆರಿಗೆ ಕಾಯ್ದೆಯ ಭಾಷೆಯನ್ನು ಸರಳಗೊಳಿಸಲಾಗುತ್ತದೆ. ನವದಹಲಿ

ಹೊಸ ಆದಾಯ ತೆರಿಗೆ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಈ ಕುರಿತು ನೀವು ತಿಳಿಯಬೇಕಾದ ಪ್ರಮುಖ 10 ಅಂಶಗಳಿವು. ನವದಹಲಿ

ಇದನ್ನೂ ಓದಿ: ಹುಡುಕುತ್ತಿರುವೆ……

1. ಮಸೂದೆಯ ಸರಳ ಭಾಷೆಯು ಟ್ಯಾಕ್ಸ್‌ ಲಿಟಿಗೇಷನ್‌ (ತೆರಿಗೆದಾರರು ಮತ್ತು ತೆರಿಗೆ ಅಧಿಕಾರಿಗಳ ನಡುವಿನ ತೆರಿಗೆ ಮೌಲ್ಯಮಾಪನ, ಸಂಗ್ರಹಣೆ ಮತ್ತು ಜಾರಿಗೊಳಿಸುವಿಕೆಗೆ ಸಂಬಂಧಿಸಿದ ವಿವಾದಗಳನ್ನು ಪರಿಹರಿಸುವ ಕಾನೂನು ಪ್ರಕ್ರಿಯೆ) ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ತೆರಿಗೆದಾರರು ಮತ್ತು ತೆರಿಗೆ ಇಲಾಖೆಗೆ ಸುಲಭವಾಗುತ್ತದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಕಾಯ್ದೆಗಳಿಗೆ ಹೋಲಿಸಿದರೆ ಮಸೂದೆಯಲ್ಲಿ ಬಳಸಲಾದ ಭಾಷೆ ಸರಳವಾಗಿದೆ. ಹಾಲಿ ಕಾಯ್ದೆಯು ಕೆಲವೊಮ್ಮೆ ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ ಎಂದು ಮುಂಬೈ ಮೂಲದ ಹೂಡಿಕೆ ಮತ್ತು ತೆರಿಗೆ ತಜ್ಞ ಬಲ್ವಂತ್ ಜೈನ್ ಹೇಳಿದ್ದಾರೆ.

2. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಂಡಿಸಿದ ಈ ಹೊಸ ಮಸೂದೆಯು ವ್ಯಕ್ತಿ, ವ್ಯವಹಾರಗಳು ಮತ್ತು ಲಾಭರಹಿತ ಸಂಸ್ಥೆಗಳು ಸೇರಿದಂತೆ ವಿವಿಧ ವರ್ಗದ ತೆರಿಗೆದಾರರ ಮೇಲೆ ಪರಿಣಾಮ ಬೀರುವ ಬದಲಾವಣೆಗಳನ್ನು ಪರಿಚಯಿಸಲು ಪ್ರಯತ್ನಿಸುತ್ತದೆ. ನವದಹಲಿ

3. ಅಸ್ತಿತ್ವದಲ್ಲಿರುವ ಆದಾಯ ತೆರಿಗೆ ಕಾಯ್ದೆಯು ಬರೋಬ್ಬರಿ 1647 ಪುಟಗಳನ್ನು ಹೊಂದಿದೆ. ಇದೀಗ ಹೊಸ ಮಸೂದೆಯು 622 ಪುಟಗಳಷ್ಟೇ ಇದೆ. ಇದು ಸರಳೀಕರಣದ ಪ್ರಯತ್ನವನ್ನು ತೋರಿಸುತ್ತದೆ.

4. ಪರಿಷ್ಕೃತ ಆದಾಯ ತೆರಿಗೆ ಸ್ಲ್ಯಾಬ್‌ಗಳು

12 ಲಕ್ಷ ರೂ.ವರೆಗೆ ಆದಾಯ ಹೊಂದಿರುವವರು ಈಗ ತೆರಿಗೆ ಪಾವತಿಸಬೇಕಿಲ್ಲ. 75,000 ರೂ. ಸ್ಟ್ಯಾಂಡರ್ಡ್ ಡಿಡಕ್ಷನ್‌ ಜೊತೆಗೆ, ಸಂಬಳ ಪಡೆಯುವ ಜನರು 12.75 ಲಕ್ಷ ರೂ.ವರೆಗಗೆ ಆದಾಯ ತೆರಿಗೆ ವಿನಾಯಿತಿ ಪಡೆಯಲಿದ್ದಾರೆ. ಪರಿಷ್ಕೃತ ತೆರಿಗೆ ಸ್ಲ್ಯಾಬ್‌ಗಳು ಮತ್ತು ಹೆಚ್ಚಿನ ವಿನಾಯಿತಿ ಮಿತಿಗಳು ಮಧ್ಯಮ ವರ್ಗಕ್ಕೆ ಅನುಕೂಲಕರವಾಗಲಿದೆ.

5. ತೆರಿಗೆ ಕಾನೂನುಗಳ ಸರಳೀಕರಣ

ಹೊಸ ಮಸೂದೆಯು ವಿಭಾಗಗಳ ಸಂಖ್ಯೆಯನ್ನು ಶೇಕಡಾ 25-30ರಷ್ಟು ಕಡಿಮೆ ಮಾಡುವ ಗುರಿ ಹೊಂದಿದೆ. ತೆರಿಗೆ ಸಂಹಿತೆಯನ್ನು ಹೆಚ್ಚು ನೇರ ಮತ್ತು ಬಳಕೆದಾರ ಸ್ನೇಹಿಯನ್ನಾಗಿ ಮಾಡುತ್ತದೆ. ಈ ಸರಳೀಕರಣವು ವಿವಾದಗಳನ್ನು ಕಡಿಮೆ ಮಾಡುವ ನಿರೀಕ್ಷೆ ಇದೆ.

6. ನವೀಕರಿಸಿದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸಮಯ ಮಿತಿ

ಅಪ್ಡೇಟೆಡ್ ರಿಟರ್ನ್ಸ್ ಸಲ್ಲಿಸುವ ಸಮಯವನ್ನು ಎರಡರಿಂದ ನಾಲ್ಕು ವರ್ಷಗಳವರೆಗೆ ವಿಸ್ತರಿಸಲಾಗಿದೆ. ಇದು ಯಾವುದೇ ಲೋಪಗಳು ಅಥವಾ ದೋಷಗಳಾಗಿದ್ದರೆ ಅದನ್ನು ತೆರಿಗೆದಾರರಿಗೆ ಸರಿಪಡಿಸಲು ಸುದೀರ್ಘ ಸಮಯಾವಕಾಶ ಒದಗಿಸುತ್ತದೆ. ಈ ಬದಲಾವಣೆಗಳು ತೆರಿಗೆ ಅನುಸರಣೆಯನ್ನು ಸುಲಭಗೊಳಿಸುತ್ತವೆ. ಅಲ್ಲದೆ ಎಲ್ಲಾ ವರ್ಗದ ತೆರಿಗೆದಾರರಿಗೆ ನ್ಯಾಯಯುತ ತೆರಿಗೆ ವ್ಯವಸ್ಥೆಯನ್ನು ಖಚಿತಪಡಿಸುತ್ತವೆ ಎಂದು ಸರ್ಕಾರ ಭಾವಿಸಿದೆ.

7. ‘ತೆರಿಗೆ ವರ್ಷ’ದ ಪರಿಚಯ (tax year)

ಹೊಸ ಮಸೂದೆಯು ಅಸ್ತಿತ್ವದಲ್ಲಿರುವ ಪರಿಭಾಷೆಗಳಾದ ಹಣಕಾಸು ವರ್ಷ ಮತ್ತು ಮೌಲ್ಯಮಾಪನ ವರ್ಷದ ಬದಲು “ತೆರಿಗೆ ವರ್ಷ” ಎಂಬ ಪದವನ್ನು ಪರಿಚಯಿಸುತ್ತದೆ. ಇದು ಭಾಷೆಯನ್ನು ಸರಳಗೊಳಿಸುವ ಕ್ರಮದ ಭಾಗವಾಗಿದೆ.

8. ಹೊಸ ಆದಾಯ ತೆರಿಗೆ ಮಸೂದೆಯ ಕಲಂ 67ರಿಂದ 91ರಲ್ಲಿ, ವರ್ಚುವಲ್ ಡಿಜಿಟಲ್ ಸ್ವತ್ತುಗಳಿಗೆ ಸ್ಪಷ್ಟ ನಿಬಂಧನೆಗಳನ್ನು ಪರಿಚಯಿಸುತ್ತದೆ. ಅಲ್ಲದೆ ಪ್ರಯೋಜನಕಾರಿ ತೆರಿಗೆ ದರಗಳನ್ನು ನವೀಕರಿಸುತ್ತದೆ. ಕ್ರಿಪ್ಟೋಕರೆನ್ಸಿಯಂತಹ ಡಿಜಿಟಲ್ ಸ್ವತ್ತುಗಳು ಸರಿಯಾದ ತೆರಿಗೆ ಚೌಕಟ್ಟಿನ ಅಡಿಯಲ್ಲಿ ಬರುತ್ತವೆ ಎಂಬುದನ್ನು ಈ ಕಲಂ ಖಚಿತಪಡಿಸುತ್ತದೆ.

9. ಲಾಭರಹಿತ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಈ ಹಿಂದಿನ ಕಾನೂನಿನಲ್ಲಿ ಸೆಕ್ಷನ್ 11ರಿಂದ 13ರ ಅಡಿಯಲ್ಲಿ, ಕೆಲವು ದತ್ತಿ ಉದ್ದೇಶಗಳಿಗಾಗಿ ಆದಾಯ ತೆರಿಗೆ ವಿನಾಯಿತಿಗಳನ್ನು ನೀಡಿತು. ಆದರೆ ಸೀಮಿತ ಮಾರ್ಗಸೂಚಿಗಳನ್ನು ಹೊಂದಿತ್ತು. ಈಗ ಹೊಸ ಮಸೂದೆಯು, ಕಲಂ 332ರಿಂದ 355ರವರೆಗೆ ಹೆಚ್ಚು ವಿವರವಾದವಾದ ಚೌಕಟ್ಟನ್ನು ನೀಡಿದೆ. ತೆರಿಗೆ ಪಾವತಿಸಬೇಕಾದ ಆದಾಯ ಮತ್ತು ವಾಣಿಜ್ಯ ಚಟುವಟಿಕೆಗಳ ಮೇಲಿನ ನಿರ್ಬಂಧಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ.

10. ಹೊಸ ಮಸೂದೆ ಕಲಂ 11ರಿಂದ 154ರ ಅಡಿಯಲ್ಲಿ, ಸ್ಟಾರ್ಟ್‌ಅಪ್‌ಗಳು, ಡಿಜಿಟಲ್ ವ್ಯವಹಾರಗಳು ಮತ್ತು ನವೀಕರಿಸಬಹುದಾದ ಇಂಧನ ಹೂಡಿಕೆಗಳನ್ನು ಬೆಂಬಲಿಸಲು ಹೊಸ ನಿಬಂಧನೆಗಳನ್ನು ಪರಿಚಯಿಸುತ್ತದೆ.

ಇದನ್ನೂ ನೋಡಿ: ಎಲ್‌ಐಸಿಯಲ್ಲಿ ವಿದೇಶ ನೇರ ಬಂಡವಾಳ : ವಿಮಾ ಉದ್ದಿಮೆಯ ಮೇಲೆ ಯಾವ ಪರೀಣಾಮ ಬೀರಬಹುದು? Janashakthi Media

Donate Janashakthi Media

Leave a Reply

Your email address will not be published. Required fields are marked *