ಕೃಷಿ ಸಾಲ ಮತ್ತು ಬೆಳೆ ವಿಮೆ ಮೇಲೆ ಕೇಂದ್ರೀಕರಿಸಿದ ಉಪಕ್ರಮಗಳನ್ನು ಅನಾವರಣಗೊಳಿಸಿದ ಕೇಂದ್ರ ಸರ್ಕಾರ

ಹೊಸದಿಲ್ಲಿ: ಕೃಷಿ ಸಾಲ (ಕೆಸಿಸಿ-ಎಂಐಎಸ್‌ಎಸ್‌) ಮತ್ತು ಬೆಳೆ ವಿಮೆ (ಪಿಎಂಎಫ್‌ಬಿವೈ / ಆರ್‌ಡಬ್ಲ್ಯೂಬಿಸಿಐಎಸ್‌) ಮೇಲೆ ಕೇಂದ್ರೀಕರಿಸಿದ ಉಪಕ್ರಮಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಗುರುವಾರ ಸೆ-21 ಅನಾವರಣಗೊಳಿಸಿದ್ದಾರೆ.

ಇದನ್ನೂ ಓದಿ:ಕಾವೇರಿ ನದಿ ನೀರು ಹಂಚಿಕೆ: ಸಿಎಂ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವರ, ಸಂಸದರ ಸಭೆ

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಕಿಸಾನ್‌ ರಿನ್‌ ಪೋರ್ಟಲ್‌ (ಕೆಆರ್‌ಪಿ), ಕೆಸಿಸಿ (ಕಿಸಾನ್‌ ಕ್ರೆಡಿಟ್‌ ಕಾರ್ಡ್‌) ಘರ್‌ಘರ್‌ ಅಭಿಯಾನ್‌ ಮತ್ತು ಹವಾಮಾನ ಮಾಹಿತಿ ಜಾಲದ ಡೇಟಾ ಸಿಸ್ಟಮ್ಸ್‌ (ಡಬ್ಲ್ಯೂಐಎನ್‌ಡಿಎಸ್‌) ಎಂಬ ಮೂರು ಉಪಕ್ರಮಗಳನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಕಿಸಾನ್‌ ಕ್ರೆಡಿಟ್‌ ಕಾರ್ಡ್‌ (ಕೆಸಿಸಿ) ಯೋಜನೆಯ ಪ್ರಯೋಜನಗಳನ್ನು ರಾಷ್ಟ್ರದಾದ್ಯಂತದ ಪ್ರತಿಯೊಬ್ಬ ರೈತರಿಗೆ ವಿಸ್ತರಿಸುವ ಉದ್ದೇಶದಿಂದ ಮಹತ್ವಾಕಾಂಕ್ಷೆಯ ಅಭಿಯಾನ ಮತ್ತು ಈ ಉಪಕ್ರಮಗಳನ್ನು ಜಾರಿಗೊಳಿಸಲಾಗಿದೆ. ಕೃಷಿಯಲ್ಲಿ ಕ್ರಾಂತಿಯನ್ನು ಉಂಟುಮಾಡಲು, ಹಣಕಾಸಿನ ಸೌಲಭ್ಯ ಹೆಚ್ಚಿಸಲು, ಡೇಟಾ ಬಳಕೆಯನ್ನು ಉತ್ತಮಗೊಳಿಸಲು ಕೇಂದ್ರ ಸರಕಾರವು ಈ ಕ್ರಮಗಳನ್ನು ಕೈಗೊಂಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್‌, ಆರ್‌ಆರ್‌ಬಿಗಳು ಮತ್ತು ಸಹಕಾರಿ ಬ್ಯಾಂಕ್‌ಗಳನ್ನು ಡಿಜಿಟಲೀಕರಣಗೊಳಿಸುವಲ್ಲಿ ಇನ್ನೂ ಸಾಕಷ್ಟು ಕೆಲಸಗಳಿವೆ ಎಂದು ಹೇಳಿದ್ದು, ಸಹಕಾರಿ ಬ್ಯಾಂಕ್‌ಗಳು ಸಮಾನ ಪ್ರಮಾಣದಲ್ಲಿ ಹಣಕಾಸನ್ನು ಹೊಂದಿಲ್ಲ. ಅವುಗಳ ಆರ್ಥಿಕ ಆರೋಗ್ಯವು ಒಂದೇ ರೀತಿ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ:ದಿಲ್ಲಿಯಲ್ಲಿ ರೈತರು ಮತ್ತು ಕಾರ್ಮಿಕರ ಬೃಹತ್‍ ಸಮಾವೇಶ

ಸಹಕಾರಿ ಬ್ಯಾಂಕ್‌ ಡಿಜಿಟಲೀಕರಣ ಅಗತ್ಯ ವೇಗದಲ್ಲಿ ನಡೆಯಲಿದೆ ಎಂದು ಅವರು ಭರವಸೆ ನೀಡಿದ್ದಾರೆ. ಘರ್‌ ಘರ್‌ ಕೆಸಿಸಿ ಅಭಿಯಾನದ ಯಶಸ್ಸಿಗೆ ಬ್ಯಾಂಕ್‌ಗಳ ಸಂಪೂರ್ಣ ಸಹಕಾರವನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಎಂದಿರುವ ಅವರು, 1,40,000 ಕೋಟಿ ರೂ.ಗೂ ಹೆಚ್ಚಿನ ವಿಮಾ ಮೊತ್ತವನ್ನು ಇದುವರೆಗೆ ರೈತರಿಗೆ ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಮಾತನಾಡಿ, ನೈಜ ಹವಾಮಾನವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನೂತನ ವ್ಯವಸ್ಥೆಯು ರೈತರಿಗೆ ನೆರವಾಗಲಿದೆ. ರೈತರು ತಮ್ಮ ಬೆಳೆಗಳಿಗೆ ಸರಿಯಾದ ಸಮಯದಲ್ಲಿ ಸರಿಯಾದ ಮುನ್ನೆಚ್ಚರಿಕೆ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.

ಪ್ರಧಾಮ ಮಂತ್ರಿ ಫಸಲ್‌ ಭೀಮಾ ಯೋಜನೆ (ಪಿಎಂಎಫ್‌ಬಿವೈ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿತೇಶ್‌ ಚೌಹಾಣ್‌, ಕೃಷಿ ಖಾತೆ ರಾಜ್ಯ ಸಚಿವರಾದ ಶೋಭ ಕರಾಂದ್ಲಾಜೆ ಮತ್ತು ಕೈಲಾಶ್‌ ಚೌಧರಿ, ಕೃಷಿ ಕಾರ್ಯದರ್ಶಿ ಎಸ್‌.ಮನೋಜ್‌ ಅಹುಜಾ, ಡಿಎಫ್‌ಎಸ್‌ ಕಾರ್ಯದರ್ಶಿ ವಿವೇಕ್‌ ಜೋಶಿ ಮತ್ತಿರರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅನಾವರಣಗೊಳಿಸಿದ ಕೇಂದ್ರ ಸರ್ಕಾರ

ವಿಡಿಯೋ ನೋಡಿ:“ಒಂದು ದೇಶ ಒಂದು ಚುನಾವಣೆ” ಒಕ್ಕೂಟ ವ್ಯವಸ್ಥೆಯನ್ನು ಒಡೆಯುವ ಕೆಲಸ – ಆರ್, ಸುನಂದಮ್ಮ, ನಿವೃತ್ತ ಕುಲಸಚಿವರು

Donate Janashakthi Media

Leave a Reply

Your email address will not be published. Required fields are marked *