ಬೆಳಗಾವಿ : ಕೇಂದ್ರ ಸರ್ಕಾರ ರೈತರ ಬಗ್ಗೆ ಹೆಚ್ಚು ಗಮನಹರಿಸಬೇಕು. ಉತ್ತರ ಕರ್ನಾಟಕ ಅಭಿವೃದ್ಧಿಗೆ ಔದ್ಯೋಗಿಕ ಕ್ರಾಂತಿ ಆಗಬೇಕು ಎಂದು ಶಾಸಕ ಲಕ್ಷ್ಮಣ್ ಸವದಿ ಒತ್ತಾಯಿಸಿದ್ದಾರೆ.
ಕಳಸ ಬಂಡೂರಿಗೆ ಮಾಜಿ ಸಿಎಂ ಬೊಮ್ಮಯಿ ಪಾದಯಾತ್ರೆ ನಡೆಸಿದ್ದರು. ಈಗ ಕೇಂದ್ರದಿಂದ ಎನ್‌ಓಸಿ ಪಡೆದುಕೊಳ್ಳಬಹುದು. ಈ ಬಗ್ಗೆ ಪ್ರಯತ್ನಪಡಬೇಕು. ಕೇಂದ್ರ ಸರ್ಕಾರದ ನೀತಿ ಬಗ್ಗೆ ಸುದೀರ್ಘ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು. ಕೃಷ್ಣ ಮೇಲ್ದಂಡೆ ಯೋಜನೆ ಸಂಬಂಧ ಪ್ರತಿಭಟನೆ ನಡೆಯುತ್ತಿದೆ.ಅಭಿವೃದ್ಧಿ
ಇದನ್ನೂ ಓದಿ : ವಿಧಾನಸಭೆ ಕಲಾಪಕ್ಕೆ ‘ಗೃಹಲಕ್ಷ್ಮಿ’ ಫಲಾನುಭವಿಗಳ ಜೊತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಗಮನ
ಬಿಜೆಪಿ ಅವಧಿಯಲ್ಲಿ ಯಾವ ಪ್ರಯತ್ನವು ನಡೆದಿಲ್ಲ.ಸಿಎಂ ಹಾಗೂ ಡಿಸಿಎಂ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು. ಇಡೀ ದೇಶದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಕರ್ನಾಟಕ 3ನೇ ಸ್ನಾನದಲ್ಲಿದೆ. ಈ ಭಾಗದಲ್ಲಿ ಕ್ರಾಂತಿ ಆಗಿದೆ. ಕೋಟ್ಯಂತರ ಟನ್ ಮೌಲ್ಯದ ಕಬ್ಬನ್ನ ಬೆಳೆಯಲಾಗುತ್ತಿದೆ. ಕಬ್ಬು ಬೆಳೆಗಾರರ ಹಿತ ಕಾಪಾಡಬೇಕು. ಕೇಂದ್ರ ಸರ್ಕಾರಕ್ಕೆ ಬರೀ ಸಕ್ಕರೆಯಿಂದ ವಾರ್ಷಿಕ 9800ಕೋಟಿ ಜಿಎಸ್ಟಿ ಕಟ್ಟುತ್ತಿದ್ದೇವೆ. ಕೇಂದ್ರದ ಈಥೆನಾಲ್ ಪಾಲಿಸಿ ಕಂಟಕವಾಗಿದೆ. ಕೇಂದ್ರ ಇ ಬಗ್ಗೆ ಗಮನ ಹರಿಸಬೇಕು ಎಂದು ಸವದಿ ಕಿಡಿಕಾರಿದರು. ದ್ರಾಕ್ಷಿಗೂ ಬೆಂಬಲ ಬೆಲೆಯನ್ನು ಕೇಂದ್ರ ನಿರ್ಧಾರಿಸಬೇಕು. ಅಂಗನವಾಡಿ ಮಕ್ಕಳಿಗೆ ಒಣದ್ರಾಕ್ಷಿ ಕೊಡಬೇಕು ಇದ್ರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದರು.
ರೈತರಿಗೆ ಸೂಕ್ತ ಪ್ರಮಾಣದಲ್ಲಿ ಸಾಲ ಸಿಗುತ್ತಿಲ್ಲ. ನಬಾರ್ಡ್ ನೀತಿಯಿಂದ ಅನ್ನದಾತರು ಸಾಲ ವಂಚಿತರಾಗುತ್ತಿದ್ದಾರೆ. ಇದೆಲ್ಲದರ ಬಗ್ಗೆ ಕೇಂದ್ರ ಗಮನ ಹರಿಸಬೇಕು ಎಂದು ಲಕ್ಷ್ಮಣ ಸವದಿ ಮನವಿ ಮಾಡಿದರು.
ಇದನ್ನೂ ನೋಡಿ : ಅಂಗನವಾಡಿ ಕೇಂದ್ರಗಳನ್ನು ಬಲಪಡಿಸಿ : ಅಹೋರಾತ್ರಿ ಧರಣಿ ಕುಳಿತ ಅಂಗನವಾಡಿ ಅಕ್ಕಂದಿರು Janashakthi Media