ಸಮಾಜವು ನಮ್ಮ ಅಸ್ತಿತ್ವವನ್ನು ಒಪ್ಪಿಕೊಳ್ಳುವಂತೆ ಮಾಡಲು ನಾವು ಸಾಧ್ಯವಾದಷ್ಟು ಗಟ್ಟಿಯಾಗಿ ಕೂಗಬೇಕು: ಜೈಸನ್

ಮಮತ.ಜಿ

ಭಾರತದಲ್ಲಿ ಸಮಸ್ಯೆಗಳಿರುವುದು ಒಂದೆರಡಲ್ಲ. ರಾಮಾಯಣದಲ್ಲಿ ಲಂಕೆ ಸುಟ್ಟ ಹನುಮನ ಬಾಲವಿದ್ದಂತೆ ಬೆಳೆಯುತ್ತಲೇ ಇವೆ. ಕೋಮುವಾದ, ಸಲಿಂಗ ಪ್ರೇಮಿಗಳ ಸಮಸ್ಯೆ, ಭ್ರಷ್ಟಚಾರ, ಟ್ರಾನ್ಸಜೆಂಡರ್ ಸಮುದಾಯದವರಿಗಿರುವ  ಸಮಸ್ಯೆ, ಅತ್ಯಚಾರ, ಉಫ್!!!!!!!!!!!!!! ಹೇಳ್ತಾ ಹೋದ್ರೆ ಇನ್ನು ತುಂಬಾ… (ಲಿಂಗತ್ವ ಅಲ್ಪಸಂಖ್ಯಾತರೊಬ್ಬರ ವಿಶೇಷ ಸಾಧನೆ, ರೋಚಕ ಕಥೆ)

ಸಮುದಾಯದ ಮೇಲಿನ ಕಳಂಕ, ತಾರತಮ್ಯ ಮತ್ತು ಹಕ್ಕುಗಳ ಉಲ್ಲಂಘನೆಯನ್ನು ಹೋಗಲಾಡಿಸಲು ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಅಲ್ಪಪ್ರಮಾಣದಲ್ಲಿ ಮಾಡುತ್ತಿರುವ ಕಾರಣದಿಂದ ಭಾರತದಲ್ಲಿ ಟ್ರಾನ್ಸ್‌ಜೆಂಡರ್‌ಗಳು ಯಾವಾಗಲೂ ದೂರವಿರುತ್ತಾರೆ.

ಲಿಂಗತ್ವ ಅಲ್ಪಸಂಖ್ಯಾತರು ಮೂಲಭೂತ ಸೌಕರ್ಯಗಳ ಸಮಸ್ಯೆಯ ಮಧ್ಯೆಯು ತಲೆಯೆತ್ತಿ ಹೋರಾಡಿ ಜಯಿಸಿದ್ದು ಬೆರಳೆಣಿಕೆ ಮಾತ್ರ. ಅದೇ ಸಾಲಿನಲ್ಲಿ ಲಾಯ ಮರಿಯಾ ಜೈಸನ್ ಎಂಬ ಟ್ರಾನ್ಸ್‌ಜೆಂಡರ್ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌(ಡಿವೈಎಫ್‌ಐ) ಕೇರಳ ರಾಜ್ಯ ಸಮಿತಿಗೆ ಚುನಾಯಿತರಾಗಿದ್ದಾರೆ.

ಮೊದಲ ಟ್ರಾನ್ಸ್‌ಜೆಂಡರ್ ಮಹಿಳೆ ಲಯಾ ಮರಿಯಾ ಜೈಸನ್ ಅವರ ಸಮುದಾಯವು ಈಗ ಭರವಸೆಯ ಕಿರಣವನ್ನು ಪಡೆದುಕೊಂಡಿದೆ. ಕೊಟ್ಟಾಯಂನ ಚಂಗನಾಚೆರಿ ಮೂಲದ ಜೈಸನ್ ಎಡಪಂಥೀಯ ಯುವ ಸಂಘಟನೆಗೆ ಏಪ್ರಿಲ್ 27 ರಿಂದ 30ರವರೆಗೆ ಪತ್ತನಂತಿಟ್ಟದಲ್ಲಿ ನಡೆದ ರಾಜ್ಯ ಸಮ್ಮೇಳನದಲ್ಲಿ ಆಯ್ಕೆಯಾದರು.

2015ರಲ್ಲಿ ಟ್ರಾನ್ಸ್‌ಜೆಂಡರ್‌ಗಳ ಏಳಿಗೆಗೆ ತಿರುವನಂತಪುರದಲ್ಲಿ ಡಿವೈಎಫ್ಐ ಟ್ರಾನ್ಸಜೆಂಡರ್ ಸಮಿತಿಯನ್ನು ರಚಿಸಿತು. ಇದೊಂದು ನಿಜವಾದ ಮಹತ್ ಕಾರ್ಯ ಎಂದೆನ್ನುತ್ತಾರೆ ಜೈಸನ್. ಟ್ರಾನ್ಸ್‌ಜೆಂಡರ್ ಜನರನ್ನು ಸೇರಿಸುವುದನ್ನು ಮುಖ್ಯವಾಹಿನಿಯ ಯುವ ಸಂಘಟನೆ ರಾಜ್ಯದಲ್ಲಿ ಇದೇ  ಮೊದಲನೆಯದು. ಇದು ನನ್ನಲ್ಲದೇ ನನ್ನ ಸಮುದಾಯದ ಎಲ್ಲರನ್ನು ಚಕಿತ ಅಥವಾ ಅಚ್ಚರಿ ಪಡುವಂತೆ ಮಾಡಿದೆ. ಜೈಸನ್ ರ ಹಾಗೆ ಅವರ ಅನೇಕ ಸ್ನೇಹಿತರು ಈ ಸಂಘಟನೆಗಾಗಿ ಹಾಗು ಟ್ರಾನ್ಸ್‌ಜೆಂಡರ್ ಸಮುದಾಯದವರಿಗಾಗಿ ಹೋರಾಡುತ್ತಿರುವುದು, ಕೆಲಸ ಮಾಡುತ್ತಿರುವುದು ಖುಷಿಕೊಟ್ಟಿದೆ ಎಂದು ಹೇಳಿದ್ದಾರೆ.

ಜೈಸನ್ ಸಂಸ್ಥೆಯೊಂದಿಗೆ ಪರಿಚಯವಾದ ಮೇಲೆ ಸ್ಥಳೀಯ ಚಂಗನಾಚೆರಿಯಿಂದ ಡಿವೈಎಫ್‌ಐನ ಸಂಘಟನಾ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಯೋಚಿಸಿದರು. ಇಥಿತಾನಂ-ತುರುತ್ತಿ ಸ್ಥಳೀಯ ಸಮಿತಿಯಲ್ಲಿ ಸದಸ್ಯತ್ವ ಅಭಿಯಾನವನ್ನು ಉದ್ಘಾಟಿಸಿ ಸದಸ್ಯರಾಗಿದ್ದಾರೆ. ನಂತರ, ಅವರು ಡಿವೈಎಫ್‌ಐನ ಚಂಗನಾಚೆರಿ ಬ್ಲಾಕ್ ಸಮಿತಿ ಮತ್ತು ಕೊಟ್ಟಾಯಂ ಜಿಲ್ಲಾ ಸಮಿತಿಗೆ ಆಯ್ಕೆಯಾಗಿದ್ದಾರೆ.

ಕೊಟ್ಟಾಯಂ ಜಿಲ್ಲೆಯಲ್ಲಿ ಅವರೊಂದಿಗೆ ಮೂವರು ಟ್ರಾನ್ಸಜೆಂಡರ್‌ ಪ್ರತಿನಿಧಿಗಳು ಜಿಲ್ಲಾ ಸಭೆಗೆ ಆಯ್ಕೆಯಾಗಿದ್ದಾರೆ. ಕೊಟ್ಟಾಯಂ ಜಿಲ್ಲೆಯಿಂದ ಪ್ರತಿನಿಧಿಸಿದ ಸದಸ್ಯರುಗಳು ಡಿವೈಎಫ್‌ಐ ರಾಜ್ಯ ಸಮ್ಮೇಳನದಲ್ಲಿ ಸಾಮಾನ್ಯ ಚರ್ಚೆಯಲ್ಲಿ ಭಾಗವಹಿಸಿದರು.

ಪ್ರತಿನಿಧಿಗಳ ಮುಂದೆ ರಾಜ್ಯ ಸಮ್ಮೇಳನದ ಚರ್ಚೆಯಲ್ಲಿ ಟ್ರಾನ್ಸ್‌ಜೆಂಡರ್ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಸಂಘಟನೆಯಿಂದ ನಮಗೆ ಸಿಗುತ್ತಿರುವ ಬೆಂಬಲ ಮತ್ತು ಒಗ್ಗಟ್ಟು ಶ್ಲಾಘನೀಯ. ಸಂಘವು ಯಾವಾಗಲೂ ಟ್ರಾನ್ಸ್‌ಜೆಂಡರ್ ಸಮುದಾಯದ ಸಮಸ್ಯೆಗಳನ್ನು ಪರಿಹರಿಸಲು ಬದ್ಧವಾಗಿದೆ ಮತ್ತು ಸಾಮಾನ್ಯ ಸಮಸ್ಯೆಗಳು ಪರಿಹರಿಸಲು ಹೆಚ್ಚು ಆಸಕ್ತಿ ಹೊಂದಿದೆ ಎಂದೇಳುತ್ತಾರೆ ಜೈಸನ್.

ಭಾರತದಲ್ಲಿ ಟ್ರಾನ್ಸ್‌ಜೆಂಡರ್ ಗಳಿಗಾಗುತ್ತಿರುವ ಸಮಸ್ಯೆ ,ಅನ್ಯಾಯ ಇನ್ನು ಪೂರ್ತಿಯಾಗಿ ನಾಶವಾಗಿಲ್ಲ, ಎಲ್ಲದರ ವಿರುದ್ಧ ದನಿಯೆತ್ತಬೇಕು. ಆದರೆ ಡಿವೈಎಫ್‌ಐ ನಂತಹ ಸಂಘಟನೆಯ ಮುಖ್ಯವಾಹಿನಿಗಳು ನಮಗೆ ದೊರೆತ ಪ್ರಾತಿನಿಧ್ಯದಂತೆ ಸಮಾಜದೆಲ್ಲೆಡೆ ಅವಕಾಶ ಸಿಕ್ಕರೆ ಸಮಸ್ಯೆಗಳ ಮೈಲಿಗಲ್ಲನ್ನು ಹೋಗಲಾಡಿಸಬಹುದು.

ಜೈಸನ್ ಪ್ರಕಾರ, 2018ರಲ್ಲಿ ಕೇರಳದ ಸಾಮಾಜಿಕ ನ್ಯಾಯ ಇಲಾಖೆಯ ಅಡಿಯಲ್ಲಿ ಟ್ರಾನ್ಸ್‌ಜಂಡರ್ ಸೆಲ್ ರಚನೆಯು ಸಮುದಾಯದ ಸಮಸ್ಯೆಗಳಿಗೆ ಉತ್ತಮ ಪರಿಹಾರವನ್ನು ಖಚಿತಪಡಿಸಿದೆ. ಶಿಕ್ಷಣ ವಿದ್ಯಾರ್ಥಿ ವೇತನ, ಹಾಸ್ಟೆಲ್ ಸೌಲಭ್ಯಗಳಿಗೆ ನೆರವು ಮತ್ತು ಲಿಂಗ ಪುನರ್ವಿತರಣೆ, ಶಸ್ತ್ರಚಿಕಿತ್ಸೆಗೆ ಹಣಕಾಸಿನ ನೆರವು ಸೇರಿದಂತೆ ಅನೇಕ ಕಲ್ಯಾಣ ಯೋಜನೆಗಳನ್ನು ಟ್ರಾನ್ಸ್‌ಜೆಂಡರ್‌ಗಳಿಗಾಗಿ ಚಾಲನೆಗೆ ತರಲಾಯಿತು.

ಸರ್ಕಾರವು ದಲಿತರ ವಿದ್ಯಭ್ಯಾಸಕ್ಕಾಗಿ ತಿಂಗಳಿಗೆ 2000 ವಿದ್ಯಾರ್ಥಿ ವೇತನವನ್ನು ನೀಡುತ್ತದೆ. ಹಾಗಯೇ ವಿದ್ಯಾರ್ಥಿ ನಿಲಯಕ್ಕಾಗಿ  ತಿಂಗಳಿಗೆ 4000 ಒದಗಿಸುತ್ತಿದೆ. ಲೈಂಗಿಕ ಪುನರ್ವಿತರಣೆಗಾಗಿ ಸರ್ಕಾರವು ಮಹಿಳೆಯರಿಗೆ 2.5 ಲಕ್ಷ ಮತ್ತು ಗಂಡಸರಿಗೆ 5 ಲಕ್ಷ ನೀಡಬೇಕೆಂದು ತಮ್ಮ ಮಾತಿನೊಂದಿಗೆ ಸೇರಿಸಿದರು.

ಟ್ರಾನ್ಸ್‌ಜೆಂಡರ್‌ಗಳಿಗೆ ಉದ್ಯೋಗ ದೊರಕದಿರಲು ಸಮಾಜದಲ್ಲಿ ಟ್ರಾನ್ಸ್‌ಜೆಂಡರ್‌ ಗಳಿಗೆ ನೀಡುತ್ತಿರುವ ಸ್ಥಾನವು ಒಂದು. ಸರ್ಕಾರವು ಉದ್ಯೋಗವನ್ನು ಹೆಚ್ಚಾಗಿ ಟ್ರಾನ್ಸ್‌ಜೆಂಡರ್ ಗಳಿಗೂ ಸಿಗುವ ಹಾಗೇ ಮಾಡಿದರೇ ಅದೆಷ್ಟೋ ಸಮಸ್ಯೆಗಳು ಬದಲಾಗುತ್ತವೆ. ಸಮಾಜದಲ್ಲಿ ಬದಕಲು ಒಂದೊಳ್ಳೆ ಸ್ಥಾನ ದೊರೆಯುತ್ತದೆ. ಈಗಾಗಲೇ ವೃತ್ತಿಪರ ಕಾಲೇಜುಗಳಲ್ಲಿ ಮೀಸಲಾತಿಗಳಿವೆ. ಅದೇ ರೀತಿ ಉದ್ಯೋಗಗಳಲ್ಲಿಯೂ ಸಹ ಟ್ರಾನ್ಸ್‌ಜೆಂಡರ್‌ಗಳಿಗೆ ಅವಕಾಶ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳತೇನೆಂದರು. ಹಾಗೆಯೇ ಮತ್ತಷ್ಟು ಬೇಡಿಕೆಗೆ ಡಿವೈಎಫ್‌ಐ ಬೆಂಬಲವನ್ನು ಗಳಿಸುವ ನಿರೀಕ್ಷೆಯಿದೆ ಎಂದು ಜೈಸನ್ ಹೇಳುತ್ತಾರೆ.

ರಾಜ್ಯದಲ್ಲಿ ಲಿಂಗ ಪುನರ್ವಿತರಣೆ ಶಸ್ತ್ರಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಮಾಡಲಾಗುತ್ತದೆ. ಅಂತಹ ಶಸ್ತ್ರಚಿಕಿತ್ಸೆಗಳಿಗೆ ಸರ್ಕಾರವು ಹಣಕಾಸಿನ ನೆರವು ನೀಡುತ್ತಿದ್ದರೂ, ಅನೇಕ ಲಿಂಗಾಯತರು ಖಾಸಗಿಯವರಿಂದ ಶೋಷಣೆಗೆ ಒಳಗಾಗುತ್ತಾರೆ. ಕೇರಳಕ್ಕೆ ಸಾರ್ವಜನಿಕ ವಲಯದಲ್ಲಿ ಲಿಂಗ ಮರುಹೊಂದಾಣಿಕೆ ಸೌಲಭ್ಯದ ಅಗತ್ಯವಿದೆ.

ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ, ಜೈಸನ್‌ ಇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಅದು ಮನೆ ಮನೆಗೆ ಪ್ರಚಾರ, ನಿಧಿ ಸಂಗ್ರಹಣೆ ಅಥವಾ ಸಾರ್ವಜನಿಕ ಸಭೆ. ಹೊಸ ಹೆಚ್ಚುವರಿ ಜವಾಬ್ದಾರಿಯೊಂದಿಗೆ, ಹೆಚ್ಚು ಟ್ರಾನ್ಸ್‌ಜೆಂಡರ್‌ ಗಳನ್ನು ಡಿವೈಎಫ್‌ಐನ ಅಡಿಯಲ್ಲಿ ತರುವ ಉದ್ದೇಶವನ್ನು ಜೈಸನ್ ಹೊಂದಿದ್ದಾರೆ.

ನಾನು ನನ್ನದು ಎಂದು ಬದುಕುತ್ತಿರುವ ಈ ಕಾಲದಲ್ಲಿ ನಾನಲ್ಲದೆ ನನ್ನಂತೆಯೇ ಸಂಕಷ್ಟಗಳನ್ನೆದುರಿಸುತ್ತಿದ್ದಾರೆ. ಅವರು ನನ್ನಂತೆ ಏಳಿಗೆ ಹೊಂದಬೇಕು.ನಾವು ಕೂಡ ನಿಮ್ಮಂತೆಯೇ ಮನುಷ್ಯರೆಂದು ಜೈಸನ್ ರ ಕೂಗು ಇಂದು ಎಲ್ಲರಿಗೂ ಮುಟ್ಟುವಂತಾಗಿದೆ.

Donate Janashakthi Media

Leave a Reply

Your email address will not be published. Required fields are marked *