ನವದೆಹಲಿ: ಭಾರತೀಯ ಬಂದರುಗಳಲ್ಲಿ ಅಕ್ಕಿ ಲೋಡ್ ಮಾಡುವುದನ್ನು ನಿಲ್ಲಿಸಲಾಗಿದೆ. ಖರೀದಿದಾರರು ಒಪ್ಪಿದ ಒಪ್ಪಂದದ ಬೆಲೆಯ ಮೇಲೆ ಸರ್ಕಾರದ ಹೊಸದಾಗಿ ಹೇರಿರುವ ಶೇ. 20 ರಫ್ತು ತೆರಿಗೆಯನ್ನು ಪಾವತಿಸಲು ನಿರಾಕರಿಸಿದ್ದರಿಂದ, ಎರಡು ಪ್ರಮುಖ ಬಂದರುಗಳಾದ ಕಾಕಿನಾಡ ಮತ್ತು ವಿಶಾಖಪಟ್ಟಣಂನಂತರ ಪೂರ್ವ ಬಂದರುಗಳಲ್ಲಿ ಅಕ್ಕಿಇ ರಫ್ತಾಗದೇ ಉಳಿದುಕೊಂಡಿದೆ.
ಸುಂಕ ಏರಿಕೆಯು ಜಾರಿಗೆ ಬಂದಿದ್ದು, ಖರೀದಿದಾರರು ಸುಂಕವನ್ನು ಪಾವತಿಸಲು ಸಿದ್ಧರಿಲ್ಲ. ನಾವು ಹಡಗುಗಳನ್ನು ಲೋಡ್ ಮಾಡುವುದನ್ನು ನಿಲ್ಲಿಸಿದ್ದೇವೆ ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘದ (ಎಐಆರ್‌ಇಎ) ಅಧ್ಯಕ್ಷ ಬಿ.ವಿ.ಕೃಷ್ಣರಾವ್ ಹೇಳಿದ್ದಾರೆ. ಭಾರತವು ಪ್ರತಿ ತಿಂಗಳು ಸುಮಾರು ಎರಡು ಮಿಲಿಯನ್ ಟನ್ ಅಕ್ಕಿಯನ್ನು ಸಾಗಿಸುತ್ತದೆ. ಆಂಧ್ರಪ್ರದೇಶ ರಾಜ್ಯದ ಕಾಕಿನಾಡ ಮತ್ತು ವಿಶಾಖಪಟ್ಟಣಂನಂತಹ ಪೂರ್ವ ಬಂದರುಗಳಿಂದ ದೊಡ್ಡ ಪ್ರಮಾಣದಲ್ಲಿ ಲೋಡ್ ಆಗುತ್ತದೆ.
ಆದರೆ ಈಗ ಅಕ್ಕಿಯನ್ನು ಸಾಗಿಸದೆ ಹಾಗೆ ನಿಲ್ಲಿಸಲಾಗಿದೆ. ಸರ್ಕಾರವು ನಿಯಮವನ್ನು ಬದಲಾಯಿಸುವ ದಿನದವರೆಗೆ ನೀಡಲಾದ ಕ್ರೆಡಿಟ್ ಪತ್ರಗಳು (ಎಲ್‌ಸಿ) ಅಥವಾ ಪಾವತಿ ಗ್ಯಾರಂಟಿಗಳಿಂದ ಮಾಡಿಕೊಳ್ಳಲಾದ ಒಪ್ಪಂದಗಳಿಗೆ ಹಿಂದೆ ವಿನಾಯಿತಿಗಳನ್ನು ಒದಗಿಸಿದೆ. ಆದರೆ ಈಗ ಇಲ್ಲ ಎಂದು ಭಾರತದ ಅತಿದೊಡ್ಡ ಅಕ್ಕಿ ರಫ್ತುದಾರ ಸಂಸ್ಥೆ ಸತ್ಯಂ ಬಾಲಾಜಿಯ ಕಾರ್ಯನಿರ್ವಾಹಕ ನಿರ್ದೇಶಕ ಹಿಮಾಂಶು ಅಗರ್ವಾಲ್ ಹೇಳಿದ್ದಾರೆ.
ಅಕ್ಕಿ ವ್ಯಾಪಾರ ಒಂದೇ ಸಮನೇ ನಿರ್ದಿಷ್ಟವಾಗಿರುವುದಿಲ್ಲ. ರಫ್ತುದಾರರು ಶೇ. 20 ಸುಂಕವನ್ನು ಪಾವತಿಸಲು ಶಕ್ತರಾಗಿರುವುದಿಲ್ಲ. ಸರ್ಕಾರ ನೀಡಿರುವ ಸಾಲದ ಪತ್ರಗಳ ವಿರುದ್ಧ ರಫ್ತು ಮಾಡಲು ಅನುಮತಿಸಬೇಕು. ಸರ್ಕಾರವು ಈ ವರ್ಷದ ಆರಂಭದಲ್ಲಿ ಗೋಧಿ ರಫ್ತುಗಳನ್ನು ನಿಷೇಧಿಸಿದಾಗ ಈಗಾಗಲೇ ನೀಡಲಾದ ಕ್ರೆಡಿಟ್ ಪತ್ರಗಳ ವಿರುದ್ಧ ರಫ್ತು ಮಾಡಲು ಅವಕಾಶ ಮಾಡಿಕೊಟ್ಟಿತ್ತು ಎಂದು ಅಗರ್ವಾಲ್ ಹೇಳಿದರು.
ಹುಳು ತಿನ್ನುತ್ತಿದೆ 7,50,000 ಟನ್ ಬಿಳಿ ಅಕ್ಕಿ
ಶುಕ್ರವಾರದಿಂದಲೇ ಜಾರಿಗೆ ಬಂದಿರುವ ನುಚ್ಚಕ್ಕಿಯ ರಫ್ತು ನಿಷೇಧಿದಿಂದಾಗಿ 7,50,000 ಟನ್ ಬಿಳಿ ಅಕ್ಕಿ ಬಂದರುಗಳಲ್ಲಿ ಹುಳು ತಿನ್ನುತ್ತಿದೆ ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ. ನುಚ್ಚಕ್ಕಿ ರಫ್ತು ನಿಷೇಧಕ್ಕೆ ಸಂಬಂಧಿಸಿದಂತೆ ಕಸ್ಟಮ್ಸ್‌ಗೆ ಹಸ್ತಾಂತರಿಸಲಾದ ಸರಕುಗಳನ್ನು ಲೋಡ್ ಮಾಡಲು ಅಥವಾ ಗುರುವಾರದ ಅಧಿಸೂಚನೆಯ ಮೊದಲು ಹಡಗು ಲಂಗರು ಹಾಕಲು ಭಾರತ ಅನುಮತಿಸಿದೆ. ಆದರೆ ಸೆಪ್ಟಂಬರ್ 15ರೊಳಗೆ ಲೋಡಿಂಗ್ ಪೂರ್ಣಗೊಳಿಸಬೇಕಾಗಿದೆ.
ನುಚ್ಚಕ್ಕಿಯ ಸಾಗಣೆಗಳು ಚೀನಾ, ಸೆನೆಗಲ್, ಸೆನೆಗಲ್ ಮತ್ತು ಜಿಬೌಟಿಗೆ ಹೋಗುತ್ತಿವೆ. ಆದರೆ ಇತರ ದರ್ಜೆಯ ಬಿಳಿ ಅಕ್ಕಿಯನ್ನು ಬೆನಿನ್, ಶ್ರೀಲಂಕಾ, ಟರ್ಕಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಹೋಗುತ್ತವೆ. ವಿವಿಧ ಬಂದರುಗಳಲ್ಲಿ ಬಿದ್ದಿರುವ 3,50,000 ಟನ್‌ಗಳಷ್ಟು ನುಚ್ಚಕ್ಕಿ ಸರ್ಕಾರದ ಮಾನದಂಡಗಳನ್ನು ಪೂರೈಸುವುದಿಲ್ಲ ಮತ್ತು ಸರಕುಗಳನ್ನು ಒಳನಾಡಿಗೆ ಹಿಂತಿರುಗಿಸಲು ಸಾಧ್ಯವಿಲ್ಲ ಎಂದು ಜಾಗತಿಕ ವ್ಯಾಪಾರ ಸಂಸ್ಥೆಯೊಂದರ ಹೊಸ ದೆಹಲಿ ಮೂಲದ ಡೀಲರ್ ಹೇಳಿದ್ದಾರೆ.
ವಾಣಿಜ್ಯ ಸಚಿವಾಲಯ ಪ್ರತಿಕ್ರಿಯೆ ಇಲ್ಲ
7,50,000 ಟನ್ ಬಿಳಿ ಅಕ್ಕಿ ಮತ್ತು 5,00,000 ಟನ್ ನುಚ್ಚಕ್ಕಿಯ ಮೇಲಿನ ಹೊಸ ನಿಯಮಗಳನ್ನು ಸಡಿಲಿಸಲು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘ ಸರ್ಕಾರವನ್ನು ಕೇಳಿಕೊಂಡಿದೆ. ಆದರೆ ಸಂಘವು ಮಾಡಿದ ವಿನಂತಿಗೆ ವಾಣಿಜ್ಯ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಭಾರತ 150ಕ್ಕೂ ಹೆಚ್ಚು ದೇಶಗಳಿಗೆ ಅಕ್ಕಿಯನ್ನು ರಫ್ತು ಮಾಡುತ್ತದೆ. ಸಾಗಣೆಯಲ್ಲಿನ ಕಡಿತವು ಆಹಾರದ ಬೆಲೆಗಳ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ. ಇದು ಬರ ಮತ್ತು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದಿಂದಾಗಿ ಈಗಾಗಲೇ ಏರುತ್ತಿದೆ.