ಭಾರತದ ಬದಲಾವಣೆ ಚುನಾವಣೆಯಲ್ಲಿ ಮುಗಿದು ಹೋಗುವಂತಹದ್ದಲ್ಲ: ಪ್ರೋ ಕೆ.ಫಣಿರಾಜ್

ಮಂಗಳೂರು: ಭಾರತದ ಬದಲಾವಣೆ ಚುನಾವಣೆಯಲ್ಲಿ ಮುಗಿದು ಹೋಗುವಂತಹದ್ದಲ್ಲ ಇಲ್ಲಿನ ಸಾಮಾಜಿಕ ಸ್ಥಿತಿಯ ಬದಲಾವಣೆಗೆ ಸಾಮಾಜಿಕ ಹೋರಾಟವೊಂದೇ ದಾರಿ ಎಂದು  ಹಿರಿಯ ಸಾಹಿತಿ, ವಿಮರ್ಶಕರಾದ ಕೆ ಫಣಿರಾಜ್ ಹೇಳಿದ್ದಾರೆ. ಚುನಾವಣೆ

ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (DYFI)  ಕರ್ನಾಟಕ ರಾಜ್ಯ ಸಮ್ಮೇಳನವು 25,26,27 ಫೆಬ್ರವರಿ 2024 ರಂದು ಮಂಗಳೂರಿನಲ್ಲಿ ನಡೆಯಲಿದ್ದು, ಇದರ ಸ್ವಾಗತ ಸಮಿತಿ ರಚನಾ ಸಭೆಯು ನಗರದ ಖಾಸಗೀ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಈ ಸಭೆಯನ್ನು ಉದ್ದೇಶಿಸಿ  ಮಾತನಾಡಿದ ಅವರು, ಭಾರತದ ಯುವಜನ ಚಳುವಳಿಗೆ ಒಂದು ಇತಿಹಾಸವಿದೆ. ಭಾರತದಲ್ಲಿ ಭೂಮಿಗಾಗಿ, ಸ್ವಾತಂತ್ರ್ಯಕ್ಕಾಗಿ ಮತ್ತು ಅಭಿವ್ಯಕ್ತಿಗಾಗಿ ನಡೆದಿರುವ ಹೋರಾಟದಲ್ಲಿ ಯುವಜನರ ಪಾತ್ರ ದೊಡ್ಡದಿದೆ. ಭಾರತದ ಪ್ರಜೆಗಳಿಗೆ ಹಕ್ಕುಗಳನ್ನು ಸಮಾನವಾಗಿ ನೀಡಿದ ಸಂವಿಧಾನವು ಕೂಡ ಈ ದೇಶದ ಚಳುವಳಿಗಳ ಕೊಡುಗೆ. ಅಂತಹ ಸಮಾನತೆ, ಸ್ವಾತಂತ್ರ್ಯ, ಅಭಿವ್ಯಕ್ತಿಯ ರಕ್ಷಣೆಯ ಹೋರಾಟದ ಪರಂಪರೆಯನ್ನು ಡಿವೈಎಫ್ಐ ಹೊಂದಿದೆ ಎಂದರು. ಚುನಾವಣೆ

ಡಿವೈಎಫ್ಐ ನ ರಾಜ್ಯ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳ ಮಾತನಾಡುತ್ತಾ ಡಿವೈಎಫ್ಐ ತನ್ನ ಆರಂಭದ ಕಾಲದಿಂದಲೂ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಬದುಕಿನ ಜೊತೆಗೆ ನಿಂತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯಲ್ಲಿ ಡಿವೈಎಫ್ಐ ಹೋರಾಟದ ಪಾಲು ಇದೆ. ಇಲ್ಲಿನ ಜನತೆಗೆ ಸಮಸ್ಯೆಗಳು ಎದುರಾದಾಗ ಡಿವೈಎಫ್ಐ ಅವರ ಜೊತೆ ಗಟ್ಟಿಯಾಗಿ ನಿಂತಿದೆ ಎಂದರು.

ವೇದಿಕೆಯಲ್ಲಿ ಡಿವೈಎಫ್ಐ ಜಿಲ್ಲಾ ಮುಖಂಡರಾದ ಡಾ ಜೀವನ್ ರಾಜ್ ಕುತ್ತಾರ್, ರಜಾಕ್ ಮೊಂಟೆಪದವು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಡಿವೈಎಫ್ಐನ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ವಹಿಸಿದ್ದರು. ಡಿವೈಎಫ್ಐ ನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಸಭೆಯನ್ನು ಸ್ವಾಗತಿಸಿದರು ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು.‌ ಚುನಾವಣೆ

ಇದನ್ನೂ ಓದಿ: ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗಾಗಿ 100 ಹೊಸ ಹಾಸ್ಟೆಲ್‌ಗಳನ್ನು ತೆರೆಯಲು ಸರ್ಕಾರ ಚಿಂತನೆ

ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ನಿವೃತ್ತ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಆಯ್ಕೆ 

ಸಮ್ಮೇಳನದ ಯಶಸ್ವಿಗಾಗಿ ಸುಮಾರು 300ರಷ್ಟು ಜಿಲ್ಲೆಯ ಸಾಹಿತಿಗಳು, ಬುದ್ದಿ ಜೀವಿಗಳು, ಬರಹಗಾರರು, ಎಲ್ಲಾ ಕ್ಷೇತ್ರಗಳ ಸಾಧಕರು, ಉದ್ಯಮಿಗಳು, ಜನಪರ ಚಿಂತಕರನ್ನೊಳಗೊಂಡ ಸ್ವಾಗತ ಸಮಿತಿಯ ಪಟ್ಟಿಯನ್ನು ಡಿವೈಎಫ್ಐನ ಮಾಜಿ ರಾಜ್ಯಾಧ್ಯಕ್ಷರಾದ ಸುನೀಲ್‌ ಕುಮಾರ್ ಬಜಾಲ್ ಬಿಡುಗಡೆಗೊಳಿಸಿದರು. ಗೌರವಾಧ್ಯಕ್ಷರಾಗಿ ನಿವೃತ್ತ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಅವರು ಆಯ್ಕೆಗೊಂಡರೆ, ಕಾರ್ಯಾಧ್ಯಕ್ಷರಾಗಿ ಡಾ ಕೃಷ್ಣಪ್ಪ ಕೊಂಚಾಡಿ, ಅಧ್ಯಕ್ಷರಾಗಿ ಮುನೀರ್ ಕಾಟಿಪಳ್ಳ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಬಜಾಲ್ , ಸಂಘಟನಾ ಕಾರ್ಯದರ್ಶಿಯಾಗಿ ಸುನೀಲ್ ಕುಮಾರ್ ಬಜಾಲ್, ಕೋಶಾಧಿಕಾರಿಯಾಗಿ ಬಿ.ಕೆ ಇಮ್ತಿಯಾಜ್ ರವರು ಸರ್ವಾನುಮತದಿಂದ ಆಯ್ಕೆಗೊಂಡರು.

ಸಭೆಯಲ್ಲಿ ಹಿರಿಯ ವಿಚಾರವಾದಿ ಪ್ರೋ ನರೇಂದ್ರ ನಾಯಕ್, ಪ್ರೋ ಶಿವರಾಮ್ ಶೆಟ್ಟಿ, ಪ್ರೋ ಜೋಸ್ಲಿನ್ ಲೋಬೋ, ಡಾ ವಸಂತ ಕುಮಾರ್, ಬಿ.ಎಮ್ ಮಾಧವ, ಕೆ ಯಾದವ ಶೆಟ್ಟಿ, ಸುಕುಮಾರ್ ತೊಕ್ಕೊಟ್ಟು, ಡಾ‌ ಕೃಷ್ಣಪ್ಪ ಕೊಂಚಾಡಿ, ಸುನೀಲ್ ಕುಮಾರ್ ಬಜಾಲ್, ವಸಂತ ಆಚಾರಿ, ಜೆ ಬಾಲಕೃಷ್ಣ ಶೆಟ್ಟಿ, ಸಂಜೀವ ಬಳ್ಕೂರು, ಬಿ.ಎನ್ ದೇವಾಡಿಗ, ಶ್ಯಾಮ್‌ಸುಂದರ್ ರಾವ್, ಪ್ರಭಾಕರ್ ಕಾಪಿಕಾಡ್, ವಾಸುದೇವ ಉಚ್ಚಿಲ,‌ ಯೋಗೀಶ್ ನಾಯಕ್, ಬಿ.ಎಮ್ ಭಟ್,‌ ಪ್ಲೇವಿ ಕ್ರಾಸ್ತಾ ಅತ್ತಾವರ,‌ ಮರ್ಲಿನ್ ರೇಗೋ, ಡಯಾನಾ ಡಿಸೋಜ ಪ್ಲೋರಿನ್ ಡಿಸೋಜ, ಸಿಲ್ವಿಯಾ ಸಿಕ್ವೇರಾ, ಮೆಲ್ವಿನ್ ಪಾಯಸ್, ಎನ್ ಇ ಮಹಮ್ಮದ್, ಅಹಮ್ಮದ್ ಸಾಲಿ ಬಜಪೆ, ಸುನಂದ ಕೊಂಚಾಡಿ, ತಾರನಾಥ್ ಗಟ್ಟಿ ಕಾಪಿಕಾಡ್, ಸುರೇಶ್ ಭಂಡಾರಿ, ಪುರುಷೋತ್ತಮ ಪೂಜಾರಿ, ಅಸುಂತ ಡಿಸೋಜ, ಪ್ರಮೀಳಾ ದೇವಾಡಿಗ, ಭಾರತೀ ಬೋಳಾರ, ರೇವಂತ್ ಕದ್ರಿ, ವಿನಿತ್ ದೇವಾಡಿಗ, ವಿನುಶ ರಮಣ ಭಟ್ , ಮುಂತಾದವರು ಉಪಸ್ಥಿತರಿದ್ದರು.

 

ವಿಡಿಯೋ ನೋಡಿ: ಮಹಾಧರಣಿ| ಸರ್ವಾಧಿಕಾರಿ ಮನೋಭಾವದ ಸರಕಾರಗಳಿಗೆ ದೇಶದ ಜನ ಪಾಠ ಕಲಿಸಿದ್ದಾರೆ – ಪ್ರೊ. ರವಿವರ್ಮಕುಮಾರ್‌

Donate Janashakthi Media

Leave a Reply

Your email address will not be published. Required fields are marked *