- ಚಹಾ ಬೇಡಿಕೆ ಸ್ಥಗಿತ
- ಭಾರತ ಇಡೀ ವಿಶ್ವದಲ್ಲಿಯೇ ಉತ್ತಮ ಚಹಾ ಮಾರುಕಟ್ಟೆ ದೇಶ
- ಅಧಿಕ ರಾಸಾಯನಿಕ ಸಿಂಪಡೆಯಿಂದಾಗಿ ಭಾರತದ ಚಹಾಗೆ ತಡೆ
ನವದೆಹಲಿ: ಭಾರತವು ಇಡೀ ವಿಶ್ವದಲ್ಲಿಯೇ ಉತ್ತಮ ಚಹಾ ಮಾರುಕಟ್ಟೆಯನ್ನು ಹೊಂದಿದೆ. ಆದರೆ ಭಾರತದ ಚಹಾ ಬೆಳೆಗಾರಿಕೆಯಲ್ಲಿ ಕೀಟನಾಶಕ ಬಳಕೆ ಮತ್ತು ರಾಸಾಯನಿಕ ಪ್ರಮಾಣ ಅಧಿಕವಾಗುತ್ತಿರುವುದು ಕಂಡುಬಂದಿರುವುದರಿಂದ ಚಹಾ ರಫ್ತುನ್ನು ಅಂತರಾಷ್ಟ್ರೀಯ ಮತ್ತು ದೇಶಿಯ ಮಾರುಕಟ್ಟೆಯು ಭಾರತಕ್ಕೆ ಚಹಾವನ್ನು ಹಿಂದಿರುಗಿಸಿದೆ. ಈ ಮಾಹಿತಿಯನ್ನು ಭಾರತೀಯ ಚಹಾ ರಫ್ತುದಾರರ ಸಂಘದ (ಐಟಿಇಎ) ಅಧ್ಯಕ್ಷ ಅಂಶುಮಾನ್ ಕನೋರಿಯಾ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ, ಭಾರತೀಯ ಚಹಾ ಉದ್ಯಮವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನ ವ್ಯಾಪಾರವನ್ನು ಹೆಚ್ಚಿಸಲು ದೊಡ್ಡ ಅವಕಾಶವನ್ನು ಪಡೆದುಕೊಂಡಿತ್ತು. ಆದರೆ ಮಿತಿ ಮೀರಿದ ಕೀಟನಾಶಕ ಸಿಂಪಡನೆ ಮತ್ತು ರಾಸಾಯನಿಕಗಳ ಬಳಕೆಯಿಂದಾಗಿ ದೊಡ್ಡ ಹೊಡೆತವನ್ನು ತಂದೊಡ್ಡಿದೆ ಎಂದು ವರದಿಯಾಗಿದೆ.
ಚಹಾ ಸಾಗಣೆಯಲ್ಲಿ ಕುಸಿತ, ಟೀ ಬೋರ್ಡ್ ಮಂಡಳಿಯು ರಫ್ತು ವೇಗಗೊಳಿಸಲು ಪರಿಶ್ರಮಿಸುತ್ತಿದೆ. ಆದರೆ ಸರಕುಗಳ ಮರಳುವಿಕೆಯಿಂದಾಗಿ, ಸಾಗಣೆಯಲ್ಲಿ ಸ್ಥಿರವಾದ ಇಳಿಕೆ ಕಂಡುಬರುತ್ತದೆ. ದೇಶದಲ್ಲಿ ಮಾರಾಟವಾಗುವ ಎಲ್ಲಾ ಚಹಾಗಳು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಮಾನದಂಡಗಳಿಗೆ ಅನುಗುಣವಾಗಿರಬೇಕು. ಸಾಮಾನ್ಯವಾಗಿ ಹೆಚ್ಚಿನ ರಾಸಾಯನಿಕ ಅಂಶವನ್ನು ಹೊಂದಿದೆ ಎಂಬುವುದು ತಿಳಿದು ಬಂದಿದೆ.
2021 ರಲ್ಲಿ ಭಾರತವು 195.90 ದಶಲಕ್ಷ ಕೆ.ಜಿ. ಚಹಾವನ್ನು ರಫ್ತು ಮಾಡಿದೆ. ಭಾರತದ ಚಹಾಕ್ಕೆ ಕಾಮನ್ವೆಲ್ತ್ ರಾಷ್ಟ್ರಗಳು ಮತ್ತು ಇರಾನ್ ಪ್ರಮುಖ ಗ್ರಾಹಕ. ಈ ವರ್ಷ 300 ದಶಲಕ್ಷ ಕೆ.ಜಿ ಚಹಾವನ್ನು ರಫ್ತು ಮಾಡುವ ಗುರಿಯನ್ನು ‘ಟೀ ಮಂಡಳಿ’ ಹೊಂದಿತ್ತು.
ಕೀಟನಾಶಕ ಮತ್ತು ರಾಸಾಯನಿಕದ ಬಗ್ಗೆ ಟೀ ಪ್ಯಾಕರ್ಗಳು ಮತ್ತು ರಫ್ತುದಾರರಿಂದ ದೂರುಗಳು ಬಂದಿವೆ ಎಂದು ಟೀ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ .‘ಉತ್ಪಾದಕರು ಎಫ್ಎಸ್ಎಸ್ಎಐ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪುನರುಚ್ಚರಿಸಲಾಗಿದೆ. ರಫ್ತಾಗುವ ನಮ್ಮ ವಸ್ತುಗಳು ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಅಸ್ತಿತ್ವದಲ್ಲಿರುವ ಮಾನದಂಡಗಳಿಗೆ ಬದ್ಧವಾಗಿರಬೇಕು ಎಂಬುದು ಸ್ಪಷ್ಟ’ ಎಂದು ಹೇಳಿದ್ದಾರೆ.
ವರದಿಗಳ ಪ್ರಕಾರ, ಕೀಟನಾಶಕ ಬಳಕೆ ಮುಗಿದ ನಂತರ ಕೆಲವೇ ದಿನಗಳಲ್ಲಿ ಎಲೆಗಳನ್ನು ಹೆಚ್ಚಾಗಿ ಕೀಳುತ್ತಿರುವುದರಿಂದ ಎಲೆಗಳ ಮೇಲೆ ಕೀಟನಾಶಕದ ಕುರುಹುಗಳು ಉಳಿದಿರುತ್ತವೆ. ಕೀಟನಾಶಕವನ್ನು ಸಿಂಪಡಿಸಿದ ನಂತರ ಸುಮಾರು 10 ರಿಂದ 20 ದಿನಗಳ ನಂತರ ಎಲೆಗಳನ್ನು ಸಾಮಾನ್ಯವಾಗಿ ಕೀಳಬೇಕಾಗುತ್ತದೆ. ಈ ರೀತಿಯಲ್ಲಿ ಅನುಸರಿಸದಿದ್ದರೆ ಹೆಚ್ಚಿನ ಕೀಟನಾಶಕದ ಪ್ರಮಾಣ ಎಲೆಗಳ ಮೇಲೆ ಹಾಗೇ ಉಳಿದಿರುವ ಸಾಧ್ಯತೆ ಇರುತ್ತದೆ ಎಂದು ತಿಳಿದುಬಂದಿದೆ.