ಟಿ20 ವಿಶ್ವಕಪ್ : ಭಾರತಕ್ಕೆ ಮತ್ತೊಂದು ಸೋಲು

ದುಬೈ : ದುಬೈನಲ್ಲಿ ನಡೆದ ಟಿ20 ವಿಶ್ವಕಪ್​ನ 28ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ದ ಹೀನಾಯ ಸೋಲುಂಡಿದೆ.

ಇದಕ್ಕೂ ಮುನ್ನ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಬೌಲಿಂಗ್ ಆಯ್ದುಕೊಂಡರು. ಆದರೆ ಇನಿಂಗ್ಸ್​ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ತಂಡದ ಮೊತ್ತ 11 ಆಗಿದ್ದ ವೇಳೆ ಆರಂಭಿಕ ಇಶಾನ್ ಕಿಶನ್ ಔಟಾದರೆ, 18 ರನ್​ಗಳಿಸಿದ ಕೆಎಲ್ ರಾಹುಲ್ ಕೂಡ ವಿಕೆಟ್ ಒಪ್ಪಿಸಿದರು. ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರೋಹಿತ್ ಶರ್ಮಾ 14 ರನ್ ಬಾರಿಸಿ ಹೊರನಡೆದರೆ, ನಾಯಕ ವಿರಾಟ್ ಕೊಹ್ಲಿ 9 ರನ್​ಗಳಿಸಿ ನಿರ್ಗಮಿಸಿದರು.

ಪಂತ್ 19 ಎಸೆತಗಳಲ್ಲಿ 12 ರನ್ ಗಳಿಸಿದರು. ಪಾಂಡ್ಯ 23 ಮತ್ತು ಜಡೇಜಾ ಅಜೇಯ 26 ರನ್ ಗಳಿಸಿ ಟೀಂ ಇಂಡಿಯಾವನ್ನು 100ರ ಗಡಿ ದಾಟಿಸಿದರು ಆದರೆ ದುಬೈ ಪಿಚ್‌ನಲ್ಲಿ ಈ ಸ್ಕೋರ್ ತುಂಬಾ ಕಡಿಮೆಯಾಗಿತ್ತು.

ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್ ಕೇವಲ 20 ರನ್ ನೀಡಿ 3 ವಿಕೆಟ್ ಪಡೆದರು. ಇಶ್ ಸೋಧಿ ಕೂಡ 17 ರನ್ ನೀಡಿ 2 ವಿಕೆಟ್ ಪಡೆದರು. ಸೌದಿ ಮತ್ತು ಮಿಲನ್ 1-1 ವಿಕೆಟ್ ಪಡೆದರು. ನ್ಯೂಜಿಲೆಂಡ್ 14.3 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವನ್ನು ದಾಖಲಿಸಿತು.

Donate Janashakthi Media

Leave a Reply

Your email address will not be published. Required fields are marked *