ದುಬೈ: 41 ವರ್ಷಗಳ ಇತಿಹಾಸವಿರುವ ಏಷ್ಯಾ ಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಇದೇ ಮೊದಲ ಬಾರಿಗೆ ಸೆಪ್ಟೆಂಬರ್ 28ರಂದು ಮುಖಾಮುಖಿಯಾಗಲಿದೆ.
ಸೆಪ್ಟೆಂಬರ್ 25ರಂದು ದುಬೈನಲ್ಲಿ ನಡೆದ ಸೂಪರ್-4 ಸುತ್ತಿನ ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾ ಪಡೆಯನ್ನು ಮಣಿಸುವ ಮೂಲಕ ಪಾಕ್ ತಂಡ, ಏಷ್ಯಾಕಪ್ ಟೂರ್ನಿಗಳಲ್ಲಿ 6ನೇ ಸಲ ಅಂತಿಮ ಸುತ್ತಿಗೆ ತಲುಪಿದ ಸಾಧನೆ ಮಾಡಿದೆ. ಏಷ್ಯಾ ಕಪ್
3ನೇ ಮುಖಾಮುಖಿ
ಪ್ರಸ್ತುತ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನಕ್ಕೆ ಇದು ಮೂರನೇ ಮುಖಾಮುಖಿಯಾಗಲಿದೆ. ಗುಂಪು ಹಂತ, ಸೂಪರ್-4 ಹಂತದ ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿತ್ತು. ಹೀಗಾಗಿ, ಫೈನಲ್‌ನಲ್ಲಿ ಗೆಲುವು ಯಾರಿಗೆ ಎಂಬುದು ಕುತೂಹಲ ಕೆರಳಿಸಿದೆ. ಏಷ್ಯಾ ಕಪ್
ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಟೂರ್ನಿಯಲ್ಲಿ ಆಡಿರುವ ಐದೂ ಪಂದ್ಯಗಳಲ್ಲಿ ಗೆದ್ದು, ಅಜೇಯಿಯಾಗಿ ಫೈನಲ್ ತಲುಪಿದೆ. 6 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಪಾಕ್ ಪಡೆ, ಭಾರತ ವಿರುದ್ಧದ ಎರಡು ಪಂದ್ಯಗಳನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಜಯಿಸಿ ಅಂತಿಮ ಸುತ್ತಿಗೆ ಲಗ್ಗೆ ಇಟ್ಟಿದೆ.
ಇದನ್ನೂ ಓದಿ: ಕಾವೇರಿ ಆರತಿ ಕೈ ಬಿಡಲು ಆಗ್ರಹಿಸಿ ಪ್ರಗತಿಪರ ಸಂಘಟನೆ ಪ್ರತಿಭಟನೆ
ಭಾರತ ಜಯದ ಓಟ ಮುಂದುವರಿಸುವ ಲೆಕ್ಕಾಚಾರದಲ್ಲಿದ್ದರೆ, ಪಾಕಿಸ್ತಾನ ತಿರುಗೇಟು ನೀಡುವ ಯೋಜನೆಯಲ್ಲಿದೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಸೆಪ್ಟೆಂಬರ್ 28ರಂದು ಫೈನಲ್ ನಡೆಯಲಿದೆ. ಏಷ್ಯಾ ಕಪ್
ಸದ್ಯ ನಡೆಯುತ್ತಿರುವ ಟೂರ್ನಿಯನ್ನು ಹೊರತುಪಡಿಸಿ ಏಷ್ಯಾಕಪ್‌ನ 16 ಆವೃತ್ತಿಗಳು ಈವರೆಗೆ ನಡೆದಿವೆ. ಅದರಲ್ಲಿ, ಭಾರತ 8 ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಉಳಿದಂತೆ ಶ್ರೀಲಂಕಾ 6 ಸಲ, ಪಾಕಿಸ್ತಾನ ಎರಡು ಸಲ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಭಾರತ vs ಪಾಕಿಸ್ತಾನ: 6ನೇ ಫೈನಲ್
ಭಾರತ ಹಾಗೂ ಪಾಕಿಸ್ತಾನ ತಂಡಗಳು ಬಹುರಾಷ್ಟ್ರೀಯ ತಂಡಗಳ ಟೂರ್ನಿಗಳಲ್ಲಿ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ಇದು 6ನೇ ಬಾರಿ.
ಇದಕ್ಕೂ ಮೊದಲು 5 ಸಲ ಮುಖಾಮುಖಿಯಾದಾಗ ಭಾರತ ಎರಡು ಸಲ ಮತ್ತು ಪಾಕಿಸ್ತಾನ ಮೂರು ಬಾರಿ ಮೇಲುಗೈ ಸಾಧಿಸಿದೆ.
1985ರಲ್ಲಿ ವಿಶ್ವ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಮೊದಲ ಬಾರಿ ಸೆಣಸಾಟ ನಡೆಸಿದ್ದಾಗ ಭಾರತ ಗೆದ್ದಿತ್ತು. ಆದರೆ, ಕೊನೇ ಸಲ ಮುಖಾಮುಖಿಯಾಗಿದ್ದಾಗ ಅಂದರೆ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನ ಜಯದ ನಗೆ ಬೀರಿತ್ತು.
ಈ ಪಂದ್ಯಗಳೂ ಸೇರಿದಂತೆ ಐದೂ ಫೈನಲ್‌ಗಳ ಫಲಿತಾಂಶ ಏನಾಗಿತ್ತು ಎಂಬ ಮಾಹಿತಿ ಇಲ್ಲಿದೆ;
1. ವರ್ಲ್ಡ್ ಚಾಂಪಿಯನ್‌ಷಿಪ್: 1984
ಉಭಯ ತಂಡಗಳು ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಯ ಫೈನಲ್‌ವೊಂದರಲ್ಲಿ ಮೊದಲ ಸಲ ಮುಖಾಮುಖಿಯಾದದ್ದು 1985ರಲ್ಲಿ. ಮೆಲ್ಬರ್ನ್‌ನಲ್ಲಿ ನಡೆದ ವರ್ಲ್ಡ್ ಚಾಂಪಿಯನ್‌ಷಿಪ್ ಏಕದಿನ ಟೂರ್ನಿಯ ಫೈನಲ್‌ನಲ್ಲಿ ಭಾರತ, 8 ವಿಕೆಟ್‌ಗಳ ಜಯ ಸಾಧಿಸಿತ್ತು.
ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್, ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 176 ರನ್ ಗಳಿಸಿತ್ತು. ಈ ಗುರಿಯನ್ನು ಭಾರತ 47.1 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ತಲುಪಿತ್ತು.
2. ಆಸ್ಟ್ರಲ್ – ಏಷ್ಯಾಕಪ್: 1986
ಯುಎಇಯಲ್ಲಿ ನಡೆದ ಈ ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಶ್ರೀಲಂಕಾ, ಪಾಕಿಸ್ತಾನ ಪಾಲ್ಗೊಂಡಿದ್ದವು. ಫೈನಲ್‌ನಲ್ಲಿ ಭಾರತ ತಂಡ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 245 ರನ್ ಕಲೆಹಾಕಿತ್ತು. ಗುರಿ ಬೆನ್ನತ್ತಿದ ಪಾಕ್, ಕೊನೇ ಎಸೆತದಲ್ಲಿ ಗೆಲುವಿನ ರನ್ ಹೊಡೆದಿತ್ತು. 9 ವಿಕೆಟ್‌ಗೆ 248 ರನ್ ಗಳಿಸಿ ಟ್ರೋಫಿ ಗೆದ್ದಿತ್ತು.
3. ಆಸ್ಟ್ರಲ್ – ಏಷ್ಯಾಕಪ್: 1994
ಈ ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಶ್ರೀಲಂಕಾ, ಪಾಕಿಸ್ತಾನ ಜೊತೆಗೆ ಆತಿಥೇಯ ಯುಎಇ ಕೂಡ ಕಣಕ್ಕಿಳಿದಿತ್ತು. ಫೈನಲ್‌ನಲ್ಲಿ ಭಾರತದ ಎದುರು ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್, 50 ಓವರ್‌ಗಳಲ್ಲಿ 6 ವಿಕೆಟ್‌ಗೆ 250 ರನ್ ಕಲೆಹಾಕಿತ್ತು. ಭಾರತ 47.4 ಓವರ್‌ಗಳಲ್ಲಿ 211 ರನ್ ಗಳಿಸಿ ಸರ್ವಪತನ ಕಂಡಿತ್ತು.
4. ಟಿ20 ವಿಶ್ವಕಪ್: 2007
ಟಿ20 ಕ್ರಿಕೆಟ್‌ನ ಚೊಚ್ಚಲ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಏಷ್ಯಾದ ಈ ತಂಡಗಳೇ ಪ್ರಶಸ್ತಿಗಾಗಿ ಸೆಣಸಾಟ ನಡೆಸಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 5 ವಿಕೆಟ್‌ಗೆ 157 ರನ್ ಕಲೆಹಾಕಿತ್ತು.
ಇದನ್ನೂ ನೋಡಿ: ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ಹೋರಾಟ ತಾರ್ಕಿಕ ಅಂತ್ಯಕ್ಕೆ ಬರಲಿದೆ – ಮೀನಾಕ್ಷಿ ಬಾಳಿJanashakthi Media
