ನವದೆಹಲಿ: ’ಇಂಡಿಯಾ’ ಮೈತ್ರಿಕೂಟವು ಸಂಘರ್ಷ ಪೀಡಿತ ಮಣಿಪುರ ವಿಚಾರದ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಲಿದೆ. ಹಿಂಸಾಚಾರದಿಂದ ನಲುಗಿರುವ ಮಣಿಪುರದಲ್ಲಿ ಶಾಂತಿ ನೆಲೆಸಲು ಸಂಪೂರ್ಣವಾಗಿ ಪ್ರಯತ್ನಿಸುವುದಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ. ಇಂಡಿಯಾ
ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಖುದ್ದು ಭೇಟಿ ನೀಡಿ, ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಶಾಂತಿ ಕಾಪಾಡುವಂತೆ ಮನವಿ ಮಾಡಬೇಕೆಂದು ಎಂದು ಪುನರುಚ್ಚರಿಸಿದರು.
ರಾಹುಲ್ ಮಣಿಪುರಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದರು. ಅಲ್ಲಿನ ಜನರ ಜತೆ ಸಂವಾದ ನಡೆಸಿದ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ, ಶಿಬಿರಗಳಲ್ಲಿ ವಾಸಿಸುತ್ತಿರುವ ಕುಟುಂಬಗಳೊಂದಿಗೆ ಹಾಗೂ ಮೈತೇಯಿ ಹಾಗೂ ಕುಕಿ ಸಮುದಾಯಗಳ ಜನರೊಂದಿಗೂ ಸಂವಾದ ನಡೆಸಿದ್ದಾರೆ.
ಇದನ್ನು ಓದಿ : ಆಪರೇಷನ್ ಕಮಲ | ಎಎಪಿ ಶಾಸಕ ಕರ್ತಾರ್ ಸಿಂಗ್, ಮಾಜಿ ಸಚಿವ ರಾಜ್‌ಕುಮಾರ್ ಬಿಜೆಪಿ ಸೇರ್ಪಡೆ
‘ಮಣಿಪುರದಲ್ಲಿ ಹಿಂಸಾಚಾರ ಪ್ರಾರಂಭವಾದಾಗಿಂದಲೂ ನಾನು ಮೂರು ಬಾರಿ ಭೇಟಿ ನೀಡಿದ್ದಾನೆ. ಆದರೆ ಇಲ್ಲಿನ ಪರಿಸ್ಥಿತಿ ಸುಧಾರಣೆಯಾಗಿಲ್ಲ. ಇಂದಿಗೂ ರಾಜ್ಯವು ಎರಡು ಭಾಗವಾದಂತೆ ಕಂಡು ಬಂದಿದೆ. ಇಲ್ಲಿನ ಮನೆಗಳು ಸುಟ್ಟು ಹೋಗಿವೆ. ಅಮಾಯಕ ಜೀವಗಳು ಅಪಾಯದಲ್ಲಿದೆ. ಸಾವಿರಾರೂ ಕುಟುಂಬಗಳು ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ‘ ಎಂದು ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಅಲ್ಲಿನ ಸಮುದಾಯಗಳೊಂದಿಗೆ ಸಂವಾದ ನಡೆಸಿದ ರಾಹುಲ್ ಮುಂಬರುವ ದಿನಗಳಲ್ಲಿ ಸಂಸತ್ತಿನಲ್ಲಿ ಪರಿಣಾಮಕಾರಿಯಾಗಿ ಮಣಿಪುರ ವಿಚಾರವನ್ನು ಪ‍್ರಸ್ತಾಪಿಸುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಮಣಿಪುರದಲ್ಲಿ ಕಳೆದ ವರ್ಷ ಮೇ ತಿಂಗಳಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ನಡೆದ ಜನಾಂಗೀಯ ಘರ್ಷಣೆಯಲ್ಲಿ ಸುಮಾರು 200 ಮಂದಿ ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.
ಇದನ್ನು ನೋಡಿ : ಅಯೋಧ್ಯೆಯಲ್ಲಿ ಬಿಜೆಪಿಯನ್ನುಸೋಲಿಸಿದಂತೆ ಗುಜರಾತ್‌ನಲ್ಲೂ ಸೋಲಿಸುತ್ತೇವೆ – ರಾಹುಲ್ ಗಾಂಧಿJanashakthi Media