ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್‌ಗೆ ಇಂಡೆಕ್ಸ್‌ ಅವಾರ್ಡ್‌-2023

ಲಂಡನ್: ಇಂಗ್ಲೇಂಡ್‌ ಮೂಲದ ಸಂಸ್ಥೆಯಾದ ”ಇಂಡೆಕ್ಸ್ ಆನ್ ಸೆನ್ಸಾರ್‌ಶಿಪ್‌” ನೀಡುವ “ಸೆನ್ಸಾರ್‌ಶಿಪ್ ಆಫ್ ಫ್ರೀಡಂ ಆಫ್‌ ಎಕ್ಸ್‌ಪ್ರೆಷನ್ ಅವಾರ್ಡ್‌”ಗೆ ಆಲ್ಟ್ ನ್ಯೂಸ್‌ನ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್‌ ಅವರು ಭಾಜನರಾಗಿದ್ದಾರೆ. ಭಾರತದ ಆಡಳಿತರೂಢ ಪಕ್ಷದ ಪ್ರಭಾವಿ ನಾಯಕರು ಹರಡುವ ತಪ್ಪು ಮಾಹಿತಿ ಎತ್ತಿತೋರಿಸಿದ ಜುಬೇರ್ ಅವರ ಬದ್ಧತೆಗೆ ಪ್ರತಿಷ್ಠಿತ ಪುರಸ್ಕಾರ ದಕ್ಕಿದೆ.

ಜಾಗತಿಕವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ “ಇಂಡೆಕ್ಸ್‌ ಆನ್ ಸೆನ್ಸಾರ್‌ಶಿಪ್‌” ಸಂಸ್ಥೆಯು, ಭಾರಿ ಬೆದರಿಕೆಗಳಿದ್ದರೂ ತನ್ನ ಕರ್ತವ್ಯವನ್ನು ನಿರ್ವಹಿಸುವ ಜುಬೈರ್ ಅವರ ಬದ್ದತೆಯನ್ನು ಶ್ಲಾಘಿಸಿದೆ. ಸೆನ್ಸಾರ್ಶಿಪ್ ವಿರುದ್ಧದ ಹೋರಾಟದಲ್ಲಿ ದೊಡ್ಡ ಕೊಡುಗೆಗಳನ್ನು ಗುರುತಿಸಿರುವ ಸಂಸ್ಥೆಯು ಪತ್ರಿಕೋದ್ಯಮ ವಿಭಾಗದಲ್ಲಿ ಜುಬೈರ್‌ ಅವರಿಗೆ ಪ್ರಶಸ್ತಿಯನ್ನು ಘೋಷಿಸಿದೆ.

ಇದನ್ನೂ ಓದಿ: ‘ನನ್ನ ತಂಗಿಯನ್ನು ಕೊಂದಿದ್ದಾರೆ’ | ನ್ಯಾಯಕ್ಕಾಗಿ ಸಿಎಂ ಆದಿತ್ಯನಾಥ್ ಮುಂದೆ ದಯನೀಯವಾಗಿ ಮೊರೆ ಇಟ್ಟ ಮಹಿಳೆ

ಬಿಜೆಪಿ ಮತ್ತು ಸಂಘಪರಿವಾರ ಹರಡುವ ಸುಳ್ಳು ಮತ್ತು ತಪ್ಪು ಮಾಹಿತಿಗಳನ್ನು ಎತ್ತಿತೋರಿಸಿದ್ದಕ್ಕಾಗಿ ಜುಬೈರ್‌ ಅವರು ಕಳೆದ ವರ್ಷ 24 ದಿನಗಳ ಜೈಲು ಶಿಕ್ಷೆಯನ್ನು ಎದುರಿಸಿದ್ದರು. ಪುರಸ್ಕಾರದ ಬಗ್ಗೆ ಪ್ರತಿಕ್ರಿಯಿಸಿರುವ ಜುಬೈರ್ ಅವರು, “ಭಾರತದಲ್ಲಿ ನಕಲಿ ಸುದ್ದಿ ಮತ್ತು ತಪ್ಪು ಮಾಹಿತಿಯ ಸವಾಲುಗಳನ್ನು ಎದುರಿಸುತ್ತಿರುವ ನನ್ನ ಯುವ ಸಹೋದ್ಯೋಗಿಗಳಿಗೆ ಈ ಪ್ರಶಸ್ತಿಯು ಭರವಸೆಯ ಬೆಳಕಾಗಿ ಕಾರ್ಯನಿರ್ವಹಿಸುತ್ತದೆ” ಎಂದು ಹೇಳಿದ್ದಾರೆ.

ಇಂಡೆಕ್ಸ್ ಆನ್ ಸೆನ್ಸಾರ್‌ಶಿಪ್‌ ಸಂಸ್ಥೆಯು ಜುಬೈರ್ ಅವರನ್ನು ಸೆಪ್ಟೆಂಬರ್‌ನಲ್ಲಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿತ್ತು. ಈ ವೇಳೆ ಕೋಮು ಹಿಂಸಾಚಾರ, ಅನೈತಿಕ ಪೊಲೀಸ್ ಚಟುವಟಿಕೆಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹರಡುವ ದ್ವೇಷದ ಭಾಷಣದ ಬಗ್ಗೆ ಜುಬೈರ್ ಅವರು ಮಾಡಿರುವ ವರದಿಯನ್ನು ಅದು ಉಲ್ಲೇಖಿಸಿತ್ತು.

ಇಂಡೆಕ್ಸ್ ಆನ್ ಸೆನ್ಸಾರ್‌ಶಿಪ್‌ ಸಂಸ್ಥೆಯು ನೀಡುವ ಪತ್ರಿಕೋದ್ಯಮ ವಿಭಾಗದ ಪ್ರಶಸ್ತಿಗೆ ಫ್ರಾಂಕೋ ಆಫ್ಘಾನ್ ಪತ್ರಕರ್ತ ಮೊರ್ತಜಾ ಬೆಹಬೌಡಿ ಮತ್ತು ಸೊಮಾಲಿಯಾದ ಮೊದಲ ಮಹಿಳಾ ಮಾಧ್ಯಮ ಸಂಸ್ಥೆಯಾದ ಬಿಲಾನ್ ಮೀಡಿಯಾ ಕೂಡಾ ನಾಮನಿರ್ದೇಶನಗೊಂಡಿತ್ತು.

ಪ್ರತಿಷ್ಠಿತ ಪ್ರಶಸ್ತಿ ಗೆದ್ದಿರುವ ಜುಬೇರ್ ಅವರು ಪ್ರಸ್ತುತ ಕಾನೂನು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅವರ ವಿರುದ್ಧ ಉತ್ತರ ಪ್ರದೇಶದಲ್ಲಿ ಆರು ಪ್ರಕರಣಗಳು ಮತ್ತು ದೆಹಲಿಯಲ್ಲಿ ಒಂದು ಪ್ರಕರಣ ದಾಖಲಾಗಿದೆ.

ವಿಡಿಯೊ ನೋಡಿ: “ಇಸ್ರೇಲ್ ಪ್ಯಾಲಿಸ್ಟೈನ್ ಯುದ್ಧ”ದ ಹಿನ್ನೆಲೆ ಏನು? Janashakthi Media

Donate Janashakthi Media

Leave a Reply

Your email address will not be published. Required fields are marked *