ನವದೆಹಲಿ: ಕಳೆದ ಕೆಲವು ವರ್ಷಗಳಿಂದ, ಅಧಿಕಾರಿಗಳು ನಾಗರಿಕ ಸಮಾಜದ ಪರಿಶೀಲನೆಯನ್ನು ಹೆಚ್ಚಿಸಿದ್ದಾರೆ ಎಂಬ ಗ್ರಹಿಕೆ ಭಾರತದಲ್ಲಿ ಬೆಳೆದಿದೆ ಎಂದು ಇತ್ತಿಚೆಗೆ ಬಿಡುಗಡೆಯಾದ ಹೊಸ ಅಧ್ಯಯನವೊಂದು ಸೂಚಿಸಿದೆ. ಸೆಂಟರ್ ಫಾರ್ ಅಡ್ವಾನ್ಸ್‌ಮೆಂಟ್ ಆಫ್ ಫಿಲಾಂತ್ರಪಿ ಫಾರ್ ಪ್ರಾಫಿಟ್ ಲಾ ಫಾರ್ ಇಂಟರ್‌ನ್ಯಾಶನಲ್ ಸೆಂಟರ್‌ನ ನೋಶಿರ್ ದಾದ್ರಾವಾಲಾ ಅವರ ವರದಿಯು ಈ ಮಾಹಿತಿಯನ್ನು ಬಹಿರಂಗಪಡಿಸಿದೆ.
ನಾಗರಿಕೆ ಸಂಸ್ಥೆಗಳ ಮೇಲೆ ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆ-2010 ಮತ್ತು ಮನಿ ಲಾಂಡರಿಂಗ್ ತಡೆಗಟ್ಟುವಿಕೆ ಕಾಯಿದೆ-2002 ಯಂತಹ ಕಾನೂನುಗಳ ಅಡಿಯಲ್ಲಿ ದಾಖಲಾದ ಪ್ರಕರಣಗಳ ಹೆಚ್ಚಳ ಹಾಗೂ ಜಾರಿ ನಿರ್ದೇಶನಾಲಯ(ಇಡಿ) ಮತ್ತು ಕೇಂದ್ರೀಯ ತನಿಖಾ ದಳ(ಸಿಬಿಐ)ದ ತನಿಖಾ ಸಂಸ್ಥೆಗಳ ಒತ್ತಡದ ಕಾರಣಕ್ಕೆ ಈ ಗ್ರಹಿಕೆಯು ಭಾರತದಲ್ಲಿ ಹೆಚ್ಚಳವಾಗಿದೆ ಎಂದು ವರದಿಯು ಉಲ್ಲೇಖಿಸಿದೆ. ನಾಗರಿಕ ಸಮಾಜ
ಇದನ್ನೂ ಓದಿ: ಇಸ್ರೇಲ್ ಪರ ಬೇಹುಗಾರಿಕೆ | ಭಾರತೀಯ ನೌಕಾಪಡೆಯ 8 ಮಾಜಿ ಅಧಿಕಾರಿಗಳಿಗೆ ಕತಾರ್‌ನಲ್ಲಿ ಮರಣದಂಡನೆ
2016 ರಲ್ಲಿ ಗೃಹ ಸಚಿವಾಲಯವು ಎಫ್‌ಸಿಆರ್‌ಎಯ ನಿಬಂಧನೆಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಒಟ್ಟು 33,000 ಲಾಭೋದ್ಧೇಶವಿಲ್ಲ ಸಂಸ್ಥೆ(NPOs)ಗಳಲ್ಲಿ ಸುಮಾರು 20,000 ಎನ್‌ಪಿಒಗಳ ಪರವಾನಗಿಗಳನ್ನು ರದ್ದುಗೊಳಿಸಿತ್ತು. ವರದಿಯ ಪ್ರಕಾರ, ಗೃಹ ಸಚಿವಾಲಯವು ಕಳೆದ ಐದು ವರ್ಷಗಳಲ್ಲಿ 6,600 ಕ್ಕೂ ಹೆಚ್ಚು ಲಾಭರಹಿತ ಸಂಸ್ಥೆಗಳ ಪರವಾನಗಿಯನ್ನು ರದ್ದುಗೊಳಿಸಿದೆ.
ಎಫ್‌ಸಿಆರ್‌ಎ ಅಡಿಯಲ್ಲಿ ನೋಂದಾಯಿಸಲಾದ ಎನ್‌ಪಿಒಗಳನ್ನು ನಿಯಂತ್ರಿಸುವ ಗೃಹ ವ್ಯವಹಾರಗಳ ಸಚಿವಾಲಯವು ಮಾರ್ಚ್ 2016 ರಲ್ಲಿ ಗ್ರೀನ್‌ಪೀಸ್ ಇಂಡಿಯಾ ಸಂಸ್ಥೆಯ ನೋಂದಣಿಯನ್ನು ರದ್ದುಗೊಳಿಸಿತ್ತು. ಈ ಸಂಸ್ಥೆಯು “ಸಾರ್ವಜನಿಕ ಹಿತಾಸಕ್ತಿ ಮತ್ತು ದೇಶದ ಹಿತಾಸಕ್ತಿಗಳ ಮೇಲೆ ಪೂರ್ವಾಗ್ರಹ ಪೀಡಿತವಾಗಿ ಪರಿಣಾಮ ಬೀರುತ್ತಿದೆ” ಎಂಬ ಆರೋಪದ ಮೇಲೆ ಅಧಿಕಾರಿಗಳು ಈ ನಿರ್ಧಾರವನ್ನು ತೆಗೆದುಕೊಂಡಿದ್ದರು.
ಅಕ್ರಮ ವಿಧಾನಗಳ ಮೂಲಕ ವಿದೇಶಿ ಹಣವನ್ನು ಸ್ವೀಕರಿಸಿದ ಆರೋಪದ ಮೇಲೆ ಮಾನವ ಹಕ್ಕುಗಳಿಗಾಗಿ ಕೆಲಸ ಮಾಡುವ NPO ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಖಾತೆಯನ್ನು 2020 ರಲ್ಲಿ ED ಸ್ಥಗಿತಗೊಳಿಸಿತ್ತು. ತನ್ನ ಖಾತೆಯನ್ನು ಸ್ಥಗಿತಗೊಳಿಸಿದ ನಂತರ ಈ ಸಂಸ್ಥೆಯು ಭಾರತದಲ್ಲಿ ತನ್ನ ಕೆಲಸವನ್ನು ನಿಲ್ಲಿಸಿತ್ತು.
ಇದನ್ನೂ ಓದಿ: ರಾಜಸ್ಥಾನ | ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋವಿಂದ ಸಿಂಗ್ ದೋಸ್ತಾರಾ ಮನೆಗಳ ಮೇಲೆ ಇ.ಡಿ. ದಾಳಿ
ಮಕ್ಕಳ ಶಿಕ್ಷಣವನ್ನು ಉತ್ತೇಜಿಸಲು, ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ಭಾರತದಲ್ಲಿನ ಅನ್ಯಾಯದ ವಿರುದ್ಧ ಹೋರಾಡಲು ಕೆಲಸ ಮಾಡುವ ಆಕ್ಸ್‌ಫ್ಯಾಮ್‌ನ FCRA ಪರವಾನಗಿಯನ್ನು ಸಚಿವಾಲಯವು 2021 ಅಮಾನ್ಯಗೊಳಿಸಿತು.
ಈ ವರ್ಷದ ಮಾರ್ಚ್‌ನಲ್ಲಿ ವಕೀಲ ರಿತ್ವಿಕ್ ದತ್ತಾ ಅವರು ಸ್ಥಾಪಿಸಿದ “ಅರಣ್ಯ ಮತ್ತು ಪರಿಸರದ ಕಾನೂನು ಉಪಕ್ರಮ” ಎಂಬ ಸಂಸ್ಥೆಯ FCRA ಪರವಾನಗಿಯನ್ನು ರದ್ದುಗೊಳಿಸಲಾಯಿತು. “ಸರ್ಕಾರದ ನೀತಿಯನ್ನು ಟೀಕಿಸುವ ಹಾಗೂ ಸರ್ಕಾರದ ಕೈಗಾರಿಕೋದ್ಯಮಿ ಮತ್ತು ಕೈಗಾರಿಕಾ ನೀತಿಯ ವಿರುದ್ಧ ರೈತರನ್ನು ಎತ್ತಿಕಟ್ಟುವ ಕೆಲಸವನ್ನು” ಸಂಸ್ಥೆಯು ಮಾಡುತ್ತಿದೆ ಎಂಬ ಆರೋಪದ ಮೇಲೆ ದತ್ತಾ ವಿರುದ್ಧ ಸಿಬಿಐ ತನಿಖೆಗೆ ನಿರ್ದೇಶಿಸಲಾಯಿತು.
ಅಧ್ಯಯನವು, NPO ಗಳಿಗೆ ಹೆಚ್ಚುವರಿ ಕಾನೂನುಗಳು ಅಥವಾ ಅನುಸರಣೆ ಅಗತ್ಯತೆಗಳನ್ನು ಪರಿಚಯಿಸದಂತೆ ಸೂಚಿಸಿದೆ. ಎನ್‌ಪಿಒಗಳು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತವೆ ಎಂಬುದನ್ನು ಸರ್ಕಾರ ಗ್ರಹಿಸಬೇಕಾಗಿದ್ದು ಎಂದು ತಿಳಿಸಿದೆ.
ಇದನ್ನೂ ಓದಿ: ರಾಮನಗರ ಜಿಲ್ಲೆ ತೆಗೆಯಲು ಬಂದಾಗ ಮಾತಾಡ್ತೇನೆ | ಡಿಸಿಎಂ ಡಿಕೆಶಿಗೆ ರೇವಣ್ಣ ಸವಾಲು
ನಂಬಿಕೆ, ಸೇವೆ ಮತ್ತು ಸಾಮೂಹಿಕ ಒಳಿತಿನ ಪ್ರಮುಖ ಮೌಲ್ಯಗಳನ್ನು ಆಧರಿಸಿ ನಾಗರಿಕ ಸಮಾಜದ ಈ ಸಂಸ್ಥೆಗಳು ಸಾಮಾಜಿಕ ಸವಾಲುಗಳಿಗೆ ಪರಿಹಾರಗಳನ್ನು ರೂಪಿಸುವಲ್ಲಿ ಪ್ರಬಲ ಪಾತ್ರವನ್ನು ವಹಿಸುತ್ತದೆ ಎಂದು ವರದಿಯು ಹೇಳಿದೆ. ಎಫ್‌ಸಿಆರ್‌ಎ ಸಂಬಂಧಿತ ಕುಂದುಕೊರತೆಗಳನ್ನು ಪರಿಹರಿಸಲು ಗೃಹ ಸಚಿವಾಲಯವು ಮೇಲ್ಮನವಿ ಸಂಸ್ಥೆಯನ್ನು ರಚಿಸಬೇಕೆಂದು ವರದಿಯು ಶಿಫಾರಸು ಮಾಡಿದೆ.
“ಪರಸ್ಪರ ನಂಬಿಕೆ ಮತ್ತು ಹಂಚಿಕೆಯ ದೃಷ್ಟಿಯ ಆಧಾರದ ಮೇಲೆ ಸಾಂಸ್ಥಿಕ ಸಂಬಂಧಗಳನ್ನು ನಿರ್ಮಿಸಲು” ಕೇಂದ್ರ ಸರ್ಕಾರ ಮತ್ತು ನಾಗರಿಕ ಸಮಾಜದ ಈ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುವ ತುರ್ತು ಅಗತ್ಯವನ್ನು ವರದಿಯು ಎತ್ತಿ ತೋರಿಸಿದೆ.
ವಿಡಿಯೊ ನೋಡಿ: ರಸ್ತೆ ಸಾರಿಗೆ ಕಾರ್ಮಿಕರನ್ನು ಶೋಷಿಸುವ ಮೋಟಾರು ತಿದ್ದುಪಡಿ ಕಾಯ್ದೆ ವಾಪಸ್ಸಾಗಲಿ