ನವದೆಹಲಿ: ಆದಾಯ ತೆರಿಗೆದಾರರು ತೆರಿಗೆಯನ್ನು ಕಟ್ಟಲು ಹೊಸ ವೆಬ್ ತಾಣದ ಮೂಲಕ ಆದಾಯ ತೆರಿಗೆ ಪಾವತಿಗೆ ಹೊಸ ವೆಬ್ತಾಣವನ್ನು ಇಂದಿನಿಂದ ಪರಿಚಯಿಸಿದೆ. ಆದರೆ, ಜೂನ್ ತಿಂಗಳಲ್ಲಿ ಆರಂಭವಾದ ಹೊಸ ವೆಬ್ತಾಣ ಇನ್ನೂ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಪದೇಪದೇ ದೂರುಗಳು ಕೇಳಿಬರುತ್ತಿವೆ. ಆದರೂ ಸಮಪರ್ಕಪವಾಗಿ ಕೆಲಸ ಮಾಡುತ್ತಿಲ್ಲ.
ಕೋವಿಡ್ ಸಾಂಕ್ರಾಮಿಕದ ಪರಿಣಾಮ ಹಾಗೂ ವಿವಿಧ ಕಾರಣಗಳಿಂದಾಗಿ ವೈಯಕ್ತಿಕ ಆದಾಯ ತೆರಿಗೆ ಹಾಗೂ ಸಂಸ್ಥೆಗಳ ಐಟಿ ರಿಟರ್ನ್ಸ್ ಕಟ್ಟಲು ಕೇಂದ್ರ ಸರ್ಕಾರ ಅನೇಕ ಬಾರಿ ಕೊನೆಯ ನಿಗದಿತ ದಿನಾಂಕವನ್ನು ವಿಸ್ತರಿಸುತ್ತ ಬಂದಿತು.
ವೆಬ್ತಾಣದಲ್ಲಿ ಆಗುತ್ತಿರುವ ತಾಂತ್ರಿಕ ದೋಷಗಳನ್ನು ಸರಿಪಡಿಸದಿರುವ ಇನ್ಫೋಸಿಸ್ ಸಂಸ್ಥೆ ಕಾರಣ ನೀಡಬೇಕೆಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸ್ಥೆಯ ಸಿಇಒ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಪರೇಖ್ ಗೆ ಸಮನ್ಸ್ ನೀಡಿದ್ದಾರೆ.
ಯಾವುದೇ ತೆರಿಗೆದಾರರಿಗಾಗುವ ಅನಾನುಕೂಲತೆಯನ್ನು ತಪ್ಪಿಸಲು ಮುಂಗಡ ತೆರಿಗೆ ಕಂತು ಪಾವತಿ ದಿನಾಂಕದ ನಂತರ ಹೊಸ ಆದಾಯ ತೆರಿಗೆ ಪಾವತಿ ವಿಧಾನವನ್ನು 2021ರ ಜೂನ್ 18 ರಂದು ಹೊಸ ತೆರಿಗೆ ಪಾವತಿ ವ್ಯವಸ್ಥೆಯನ್ನು ಸಿಬಿಡಿಟಿ ಪ್ರಾರಂಭಿಸಿದೆ. ಆದರೆ, ಆಗಸ್ಟ್ 21ರಂದು ವೆಬ್ತಾಣ ಕಾರ್ಯನಿರ್ವಹಣೆ ಸ್ಥಗಿತಗೊಂಡಿದೆ.
ತೆರಿಗೆದಾರ ಸ್ನೇಹಿಯಾಗಿ ರೂಪಿಸುವ ನಿಟ್ಟಿನಲ್ಲಿ ಒಂದೇ ಡ್ಯಾಶ್ಬೋರ್ಡ್ನಲ್ಲಿ ಪ್ರದರ್ಶಿಸಲಾಗುತ್ತದೆ. ಆದಾಯ ತೆರಿಗೆ ನಮೂನೆಗಳನ್ನು ಭರ್ತಿ ಮಾಡುವ ಕಾರ್ಯಗಳು, ತೆರಿಗೆ ವೃತ್ತಿಪರರ ಸೇರ್ಪಡೆ, ನೋಟಿಸ್ ಗಳಿಗೆ ಸ್ಪಂದನೆಯ ಸಲ್ಲಿಕೆಯಲ್ಲಿ ಮುಖಾಮುಖಿರಹಿತ ಪರಿಶೀಲನೆ ಅಥವಾ ಮೇಲ್ಮನವಿ ಲಭ್ಯವಿರುತ್ತದೆ ಎಂದು ಹೇಳಲಾಗಿತ್ತು. ಆದರೆ, ಐಟಿ ರಿಟರ್ನ್ಸ್ ಸಲ್ಲಿಕೆಯೇ ಸಾಧ್ಯವಾಗದೆ ಅನೇಕರು ಕಿರಿಕಿರಿ ಅನುಭವಸಿದ್ದಾರೆ ಹಾಗೂ ಇ ರಸೀತಿ ಸಿಗದೆ ಇನ್ನೂ ಹಲವರು ಸಮಸ್ಯೆಗಳನ್ನು ಎದುರಿಸುವ ಹಂತಕ್ಕೆ ಬಂದಿದೆ.
ವೆಬ್ ತಾಣವು ತುಂಬಾ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರೊಫೈಲ್ ಅಪ್ ಡೇಟಿಂಗ್, ಪಾಸ್ ವರ್ಡ್ಸ್ ಬದಲಾವಣೆಗೂ ತುಂಬಾ ಸಮಯ ತೆಗೆದುಕೊಳ್ಳಲಿದೆ ಎಂದು ಬಳಕೆದಾರರು ದೂರಿದ್ದರು. ಅದರಲ್ಲಿ ಟಿಡಿಎಸ್ ರಿಟರ್ನ್ಸ್ ಫೈಲ್ ಮಾಡಲು ಆಗುತ್ತಿಲ್ಲ, ‘ಪಾರ್ಗಟ್ ಪಾಸ್ ವರ್ಡ್ ‘ ಆಪ್ಸನ್ ಕೆಲಸ ಮಾಡುತ್ತಿಲ್ಲ ಎಂದು ಕೆಲವು ಬಳಕೆದಾರರು ಹೇಳಿಕೊಂಡಿದ್ದರು.
2019ರಲ್ಲಿ ಆದಾಯ ತೆರಿಗೆ ಇಲಾಖೆಯು ವೆಬ್ ತಾಣ ನವೀಕರಣ ಯೋಜನೆಯನ್ನು ಇನ್ಫೋಸಿಸ್ ಸಂಸ್ಥೆಗೆ ವಹಿಸಿತು. ಈ ಹಿಂದಿನ 63 ದಿನಗಳ ತೆರಿಗೆ ಮರುಪಾವತಿ ಪ್ರಕ್ರಿಯೆ ಅವಧಿಯನ್ನು ಕಡಿಮೆಗೊಳಿಸಲು ಸೂಕ್ತ ವ್ಯವಸ್ಥೆ ಒದಗಿಸುವ ಭರವಸೆಯನ್ನು ಇನ್ಫೋಸಿಸ್ ನೀಡಿತ್ತು. ಜೂನ್ 2021ರಂದು ಕೇಂದ್ರ ಸರ್ಕಾರದಿಂದ ಇನ್ಫೋಸಿಸ್ ಸಂಸ್ಥೆ 164.5 ಕೋಟಿ ರೂಪಾಯಿ ಸಲ್ಲಿಕೆಯಾಗಿದೆ.
ಪೋರ್ಟಲ್ ನಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಹಣಕಾಸು ಸಚಿವರು ಜೂನ್ ತಿಂಗಳಲ್ಲಿ ಇನ್ಫೋಸಿಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ಈ ವಿಚಾರದ ಬಗ್ಗೆ ಗಮನ ಹರಿಸಲು ಏಳು ಸದಸ್ಯರನ್ನೊಳಗೊಂಡ ಕಾರ್ಯಪಡೆ ರಚನೆಗೆ ಐಸಿಎಐಗೆ ಹಣಕಾಸು ಸಚಿವಾಲಯ ಹೇಳಿತ್ತು.
ಈ ಹಿಂದೆಯೂ ಜಿಎಸ್ಟಿ ಪೋರ್ಟಲ್ ನಿರ್ವಹಣೆ ಹೊಣೆ ಹೊತ್ತು ಸರಿಯಾದ ಸೇವೆ ಒದಗಿಸುವಲ್ಲಿ ಇನ್ಫೋಸಿಸ್ ವಿಫಲವಾಗಿತ್ತು. ಕಡಿಮೆ ಮೊತ್ತದ ಬಿಡ್ ಮಾಡುವ ಮೂಲಕ ಸರ್ಕಾರಿ ಟೆಂಡರ್ ತನ್ನದಾಗಿಸಿಕೊಂಡು ಕಳಪೆ ಸೇವೆ ಒದಗಿಸುತ್ತಿದೆ ಎಂದು ಮಾಹಿತಿ ಮತ್ತು ಪ್ರಸರಣ ಇಲಾಖೆ ಹಿರಿಯ ಸಲಹೆಗಾರ ಕಂಚನ್ ಗುಪ್ತ ಕಿಡಿಕಾರಿದ್ದಾರೆ.