“ಬುರುಡೆ, ಅಸ್ತಿಪಂಜರ, ಕೊಲೆಗಾರರು ಅಂತೆಲ್ಲಾ ಮಾತಾಡಿದ್ದೀರಲ್ವಾ. ಈಗ ಕೇಸ್ ಅನುಭವಿಸಿ”, “ಇಲ್ಲಿಯವರೆಗೆ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ರಿ. ಈಗ ಆರೋಪಿಯಾಗಿ ಕಟಕಟೆಯಲ್ಲಿ ನಿಂತು ನೀವು ಮಾಡಿದ ಆರೋಪ ಪ್ರೂವ್ ಮಾಡಿ”, “ಹೋರಾಟ, ಹೋರಾಟ ಅನ್ನುತ್ತಿದ್ದವರೆಲ್ಲಾ ಈಗ ಆರೋಪಿಯಾಗಿ ಕಟಕಟೆಯಲ್ಲಿ ನಿಲ್ಲಿ” ತಾನೇ
ನವೀನ್ ಸೂರಿಂಜೆ – ಪತ್ರಕರ್ತರು
ದೌರ್ಜನ್ಯ, ಅತ್ಯಾಚಾರ, ಕೊಲೆ ವಿರುದ್ದ ಬರೆದ, ಮಾತಾಡಿದ, ಹೋರಾಡಿದ 339 ಜನರ ವಿರುದ್ದ ದೌರ್ಜನ್ಯಕಾರರು ಕೇಸು ದಾಖಲಿಸಿದ್ದಾರೆ. ಈ ಕೇಸು ದಾಖಲಾದ ಬಳಿಕ ಈ ಮೇಲ್ಕಂಡ ಮಾತುಗಳನ್ನು ದೌರ್ಜನ್ಯಕಾರರ ಪರ ಇರುವವರು ಹೇಳುತ್ತಿದ್ದಾರೆ/ ಬೆದರಿಸುತ್ತಿದ್ದಾರೆ. ಆದರೆ ಇದೊಂದು ಕಾನೂನು ಅಜ್ಞಾನಿಗಳ ಮಾತುಗಳಷ್ಟೆ. ತಾನೇ
1. ದೌರ್ಜನ್ಯದ ವಿರುದ್ದದ ಮಾತನಾಡಿದವರ ವಿರುದ್ದ ದಾಖಲಾಗಿರುವ ಪ್ರಕರಣವನ್ನು ಒಎಸ್ ಕೇಸ್ (OS : Original Suit) ಎನ್ನುತ್ತಾರೆ. ಇದರಲ್ಲಿ ಆರೋಪಿಗಳು ಇರುವುದಿಲ್ಲ. ಕೇವಲ ಅರ್ಜಿದಾರರು ಮತ್ತು ಪ್ರತಿವಾದಿಗಳಿರುತ್ತಾರೆ. 339 ಜನರು ಪ್ರತಿವಾದಿಗಳೇ ಹೊರತು ಆರೋಪಿಗಳಲ್ಲ. ತಾನೇ
ಇದನ್ನೂ ಓದಿ: ಧರ್ಮಸ್ಥಳ ಕೊಲೆ ಪ್ರಕರಣ : ಎಸ್‌ಐಟಿ ನೇಮಕಕ್ಕೆ ಸ್ವಾಗತ ಪ್ರಾಮಾಣಿಕ ತನಿಖೆ ಅಗತ್ಯ
2. ಅದಕ್ಕಿಂತ ಮುಖ್ಯವಾಗಿ, ದೌರ್ಜನ್ಯದ ವಿರುದ್ದ, ನ್ಯಾಯಕ್ಕಾಗಿ ಮಾತನಾಡಿದ 339 ಜನರು ಕಟಕಟೆ ಹತ್ತಬೇಕಿಲ್ಲ. ಮಾಡಿರುವ ಆರೋಪಗಳನ್ನು ಪ್ರೂವ್ ಮಾಡಬೇಕಿಲ್ಲ. ಕೇಸು ಹಾಕಿರುವ ಅರ್ಜಿದಾರ ‘ಚಿಕ್ಕಧಣಿ’ ಕಟಕಟೆ ಹತ್ತಬೇಕು. ತನ್ನ ಮಾನ ಹೋಗಿದೆ, ತನಗೆ ಲಾಸ್ ಆಗಿದೆ, ತನ್ನ ಮಾನ ಕಳೆದಿದ್ದು ಇವರೇ ಎಂಬುದನ್ನು ಚಿಕ್ಕಧಣಿ ಕಟಕಟೆಯಲ್ಲಿ ನಿಂತು ಪ್ರೂವ್ ಮಾಡಬೇಕು. ತಾನೇ
3. ಮಜಾ ಬರೋದು ಇನ್ಮುಂದೆ, 339 ಪ್ರತಿವಾದಿಗಳ ಪೈಕಿ ಸುಮಾರು 139 ಟಿವಿ, ಪತ್ರಿಕೆಯವರು ಅಂದ್ಕೊಂಡರೆ, ಅವರು ಈ ಕೇಸ್ ಎದುರಿಸಲ್ಲ ಎಂದುಕೊಳ್ಳೋಣಾ. ಉಳಿದ 200 ಪ್ರತಿವಾದಿಗಳ ಪೈಕಿ 100 ಜನರನ್ನು ಸುಮ್ಮನೆ ಬದಿಗಿಡೋಣಾ. ಉಳಿದ 100 ಜನ ಪ್ರತಿವಾದಿಗಳ ನೂರು ಲಾಯರ್ ಗಳು ಕೇಸ್ ಹಾಕಿದ’ಚಿಕ್ಕಧಣಿ’ಯನ್ನು ಪಾಟಿ ಸವಾಲಿ(Cross examination, witness cross)ಗೆ ಒಳಪಡಿಸುತ್ತಾರೆ. ನೂರು ಜನ ಹೋರಾಟಗಾರ, ಪತ್ರಕರ್ತ, ಸಾಹಿತಿಗಳ ಘಟಾನುಘಟಿ ಲಾಯರ್ ಗಳ ಕ್ರಾಸ್ ಎಕ್ಸಾಮಿನೇಷನ್ ಗೆ ಚಿಕ್ಕಧಣಿ ಹಣ್ಣುಗಾಯಿ ನೀರುಗಾಯಿ ಆಗುತ್ತಾರೆ. ಆಸ್ತಿ, ಹಣಕಾಸು, ಕೆಲವೇ ಎಕರೆ ನೂರಾರು ಎಕರೆಯಾದ ಭೂ ಅಕ್ರಮಗಳು, 75 ಸಾವಿರ ಉದ್ಯೋಗಿಗಳು, ಅದರ ಆದಾಯದ ಮೂಲ, ಅಕ್ರಮ, ಹುಂಡಿ ಕಾಸಿನ ಲೆಕ್ಕ, ದಲಿತರ ಮೇಲಿನ ದೌರ್ಜನ್ಯ, ಒಂದೊಂದು ಕೊಲೆಯ ಬಗ್ಗೆಯೂ ಕನಿಷ್ಟ ನೂರು ವಕೀಲರಿಗೆ ಪ್ರತ್ಯೇಕ ಉತ್ತರ ಕೊಡಬೇಕಾಗುತ್ತದೆ. ತಾನೇ

4. ಅಗತ್ಯ ಬಿದ್ದರೆ ಚಿಕ್ಕಧಣಿ ಜೊತೆಗೆ ‘ದೊಡ್ಡ ಧಣಿ’ಯನ್ನು ಪ್ರತಿವಾದಿಗಳ ನೂರು ವಕೀಲರು ಸಮನ್ಸ್ ಹೊರಡಿಸಿ ಕೋರ್ಟ್ ಗೆ ಕರೆಸಬಹುದು. ಆಗ ದೊಡ್ಡಧಣಿಯೂ ಕಟಕಟೆಯಲ್ಲಿ ನಿಂತು ಉತ್ತರ ಕೊಡಬೇಕಾಗುತ್ತದೆ. ನೂರಾರು ವಕೀಲರಿಂದ ‘ಅರೆಯುವಿಕೆ’ಗೆ ಒಳಗಾಗಬೇಕಾಗುತ್ತದೆ.
5. ಚಿಕ್ಕಧಣಿಗಳು ಪೊಲೀಸ್ ವಿಚಾರಣೆಯಿಂದ ಪ್ರಭಾವ ಬಳಸಿ ತಪ್ಪಿಸಿಕೊಳ್ಳಬಹುದು. ಆದರೆ ಅವರೇ ದಾಖಲಿಸಿದ ಒಎಸ್ ಕೇಸ್ ವಿಚಾರಣೆಯಿಂದ ಅವರೇ ತಪ್ಪಿಸಿಕೊಳ್ಳುವಂತಿಲ್ಲ. ಅವರು ಹೆಣೆದ ಬಲೆಯಲ್ಲಿ ಅವರೇ ಸಿಲುಕುವುದೆಂದರೆ ಇದು. ಗುಂಡಿ ತೋಡಿದವನು ಮೇಲೆ ಬರಲು ಏಣಿ ಇಳಿಸಿರಬೇಕು. 339 ಜನರಿಗೆ ಗುಂಡಿ ತೋಡೋಣಾ ಅಂತ ಚಿಕ್ಕಧಣಿಯನ್ನು ನಂಬಿಸಿದವರು ಏಣಿ ತಂದೇ ಇಲ್ಲ. ಚಿಕ್ಕಧಣಿ ತಾವೇ ತೋಡಿದ ಗುಂಡಿಗೆ ಬಿದ್ದಿದ್ದಾರೆ.
ಇದನ್ನೂ ನೋಡಿ: ವಿಶ್ವ ಹಾವುಗಳ ದಿನ | ಆತಂಕ ಬಿಡಿ ಜೀವವೈವಿಧ್ಯತೆ ಕಾಪಾಡಿ Janashakthi Media #WorldSnakeDay
