ಮಕ್ಕಳ ಹೆಸರು ಬದಲಾವಣೆ‌ ನೋಂದಣಿಗೆ ಮಾರ್ಗಸೂಚಿ ರೂಪಿಸಿ ಹೈಕೋರ್ಟ್ ಮಹತ್ವದ ಆದೇಶ

ಕರ್ನಾಟಕ c ಮಕ್ಕಳ ಹೆಸರು ಬದಲಾವಣೆಗೆ ಹೊಸ ಮಾರ್ಗಸೂಚಿಗಳನ್ನು ರೂಪಿಸಿದೆ. ತಂದೆ-ತಾಯಿಗಳ ಪ್ರಮಾಣಪತ್ರದೊಂದಿಗೆ ಹೆಸರು ಬದಲಾವಣೆಗೆ ಅವಕಾಶ ನೀಡಲಾಗಿದೆ. ಹೊಸ ಹೆಸರಿನೊಂದಿಗೆ ಹಳೆಯ ಹೆಸರನ್ನೂ ದಾಖಲಿಸಬೇಕು ಎಂದು ಆದೇಶಿಸಲಾಗಿದೆ. ವಯಸ್ಕರ ಹೆಸರು ಬದಲಾವಣೆಗೂ ಈ ನಿಯಮಗಳು ಅನ್ವಯಿಸುತ್ತವೆ ಎಂದು ಹೈಕೋರ್ಟ್ ತಿಳಿಸಿದೆ.

 ಮಕ್ಕಳ ಹೆಸರು ಬದಲಾವಣೆಗೆ ಕಾನೂನಿನಲ್ಲಿ ಅವಕಾಶವಿಲ್ಲದ‌ ಹಿನ್ನೆಲೆ ಕರ್ನಾಟಕ ಹೈಕೋರ್ಟ್ ಮಕ್ಕಳ ಹೆಸರು ಬದಲಾವಣೆಗೆ ಹೊಸ ಮಾರ್ಗಸೂಚಿಯನ್ನು ರೂಪಿಸಿದೆ. 1969ರ ಜನನ ಮತ್ತು ಮರಣ ನೋಂದಣಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಜನನ ನೋಂದಣಿಯಲ್ಲಿ ಹೆಸರು ಬದಲಾವಣೆಗೆ ಅವಕಾಶ ಕಲ್ಪಿಸುವಂತೆ ಹೈಕೋರ್ಟ್ ಶಾಸಕಾಂಗಕ್ಕೆ ಸೂಚಿಸಿದೆ. ನ್ಯಾ.ಎನ್.ಎಸ್.ಸಂಜಯ್ ಗೌಡ ಅವರಿದ್ದ ಹೈಕೋರ್ಟ್ ಪೀಠ ಶುಕ್ರವಾರ ಆದೇಶ ಹೊರಡಿಸಿದೆ.

ಇದನ್ನು ಓದಿ:ರೌಡಿ ಬಾಗಪ್ಪ ಹರಿಜನ ಹತ್ಯೆ ಪ್ರಕರಣ: ನಾಲ್ವರ ಬಂಧನ

ಅದ್ರಿತ್ ಭಟ್ ಹೆಸರನ್ನು ಶ್ರೀಜಿತ್ ಭಟ್ ಎಂದು ಬದಲಿಸಲು ಕೋರಲಾಗಿತ್ತು. ಆದರೆ ಉಡುಪಿ ಜನನ ನೋಂದಣಾಧಿಕಾರಿಗಳು ನಿರಾಕರಿಸಿದ ಹಿನ್ನೆಲೆ ರಿಟ್ ಸಲ್ಲಿಕೆ ಮಾಡಲಾಗಿತ್ತು. ಇಂದು ವಿಚಾರಣೆ ಮಾಡಿದ ಹೈಕೋರ್ಟ್, ಮಗುವಿನ ಹೆಸರು ಬದಲಾವಣೆಗೆ ತಂದೆ ತಾಯಿ ಪ್ರಮಾಣಪತ್ರ ಸಲ್ಲಿಸಬೇಕು. ತಂದೆ ತಾಯಿಯ ಗುರುತು ಧೃಡಪಟ್ಟ ನಂತರ ಹೆಸರು ಬದಲಾವಣೆ ಮಾಡಬಹುದಾಗಿದೆ. ಆದರೆ ಹೊಸ ಹೆಸರಿನೊಂದಿಗೆ, ಹಳೆಯ ಹೆಸರೂ ದಾಖಲೆಯಲ್ಲಿರಬೇಕು. ಇದರಿಂದ ದುರುದ್ದೇಶದ ಹೆಸರು ಬದಲಾವಣೆ ತಪ್ಪಿಸಬಹುದಾಗಿದೆ ಎಂದು ತಿಳಿಸಿದೆ.

ಓರ್ವ ವ್ಯಕ್ತಿಗೆ ಹೊಸ ಹೆಸರನ್ನು ನೀಡಲು ನಿರ್ಧರಿಸುವುದು ಅಥವಾ ಈಗಾಗಲೇ ಹೆಸರನ್ನು ನೀಡಿದ್ದರೂ ಹೆಸರನ್ನು ಬದಲಾಯಿಸಲು ನಿರ್ಧರಿಸುವುದು ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಹೋಗಿದೆ. ವಾಸ್ತವವಾಗಿ, ನಮ್ಮ ದೇಶದಲ್ಲಿ ಒಬ್ಬರಿಗೆ ಅನೇಕ ಹೆಸರುಗಳನ್ನು ನೀಡುವುದು ಪರಿಪಾಠವಾಗಿದೆ. ಆದರೆ ದಾಖಲೆಗಳಲ್ಲಿ ಒಂದು ಹೆಸರನ್ನು ನಮೂದಿಸಲಾಗುತ್ತದೆ. ಇದು ಕೆಲವೊಮ್ಮೆ ವ್ಯಕ್ತಿಯನ್ನು ಗುರುತಿಸುವುದಕ್ಕೆ ಗೊಂದಲ ಉಂಟು ಮಾಡುತ್ತದೆ ಎಂದು ನ್ಯಾ.ಎನ್.ಎಸ್.ಸಂಜಯ್ ಗೌಡ ಅಭಿಪ್ರಾಯಪಟ್ಟಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *