ಕೊಡೈನ್ ಮಿಶ್ರಿತ ಕೆಮ್ಮಿನ ಸಿರಪ್‌ ಅಕ್ರಮ ವ್ಯಾಪಾರ: 6 ಮಂದಿ ಬಂಧನ

ಎಟಾ: ಉತ್ತರಪ್ರದೇಶ ಪೊಲೀಸರು ಕೊಡೈನ್ ಮಿಶ್ರಿತ ಕೆಮ್ಮಿನ ಸಿರಪ್‌ ಅಕ್ರಮ ವ್ಯಾಪಾರದ ವಿರುದ್ಧ ತಮ್ಮ ಕಾರ್ಯಾಚರಣೆ ಚುರುಕುಗೊಳಿಸಿದ್ದೂ, ಎಟ ಹಾಗೂ ಮಿರ್ಝಾಪುರ ಜಿಲ್ಲೆಗಳಲ್ಲಿ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಒಟ್ಟು 6 ಮಂದಿಯನ್ನು ಬಂಧಿಸಿದ್ದಾರೆ ಎಂದು ಡಿಸೆಂಬರ್‌ 22ರಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗ್ರಾ ಮಾದಕ ದ್ರವ್ಯ ವಿರೋಧಿ ಘಟಕ ಹಾಗೂ ಅಲಿಗಂಜ್ ಪೊಲೀಸ್‌ನ ಜಂಟಿ ತಂಡ ಎಟಾದ ಅಲಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ತಂಬಾಕು ಗೋದಾಮಿನಿಂದ ಅಂದಾಜು ಸುಮಾರು 50 ಲಕ್ಷ ರೂ. ಮೌಲ್ಯದ ಕೊಡೈನ್ ಮಿಶ್ರಿತ ಕೆಮ್ಮಿನ ಸಿರಪ್‌ನ 47 ಪೆಟ್ಟಿಗೆಗಳನ್ನು ರವಿವಾರ ರಾತ್ರಿ ವಶಪಡಿಸಿಕೊಂಡಿದೆ ಹಾಗೂ ನಾಲ್ವರನ್ನು ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕೋಳಿ ಅಂಕ ನಡೆಸುವವರ ಪರ ಪ್ರಚೋದನೆ; ಬಿಜೆಪಿ ಮುಖಂಡರ ವಿರುದ್ಧ ಪ್ರಕರಣ ದಾಖಲು

ಪ್ರತ್ಯೇಕ ಬೆಳವಣಿಗೆಯೊಂದರಲ್ಲಿ ಮಿರ್ಝಾಪುರ ಪೊಲೀಸರು ಅದಾಲತ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಕೊಡೈನ್ ಮಿಶ್ರಿತ ಕೆಮ್ಮಿನ ಸಿರಪ್ ಅನ್ನು ಅಕ್ರಮವಾಗಿ ಪೂರೈಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳಾದ ಅಜಿತ್ ಯಾದವ್ ಹಾಗೂ ಅಕ್ಷತ್ ಯಾದವ್‌ನನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ನೋಡಿ: ₹ 36 ಸಾವಿರ ವೇತನಕ್ಕೆ ಆಗ್ರಹ: ಗ್ರಾ.ಪಂ. ನೌಕರರ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *