ಕೂಡಲಸಂಗಮ: ಪಂಚಮಸಾಲಿ ಪೀಠದೊಳಗೆ ಅಕ್ರಮವಾಗಿ ಪ್ರವೇಶ; ದೂರು ದಾಖಲು

ಬಾಗಲಕೋಟೆ: ಕೂಡಲಸಂಗಮ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಪೀಠದ ಟ್ರಸ್ಟ್‌ಗೆ ಸೇರಿದ ಕಟ್ಟಡವನ್ನು ಕೆಲವರು ಅಕ್ರಮವಾಗಿ ಪ್ರವೇಶಿಸಿ, ಗೇಟ್‌ ಹಾಗೂ ಮಠದ ಕಟ್ಟಿಗೆ ಬಾಗಿಲುಗಳ ಕೀಲಿ ಮುರಿದಿದ್ದಾರೆ ಎಂದು ಹುನಗುಂದ ಪೊಲೀಸ್ ಠಾಣೆಯಲ್ಲಿ ಚಂದ್ರಶೇಖರ ಚಿತ್ತರಗಿ ಎಂಬುವವರು ಜುಲೈ 14ರಂದು ದೂರು ನೀಡಿದ್ದಾರೆ. ಕೂಡಲಸಂಗಮ

ಜುಲೈ 13 ಭಾನುವಾರ ರಾತ್ರಿ ಮನೆಗೆ ಬಂದಿದ್ದ ಮಲ್ಲನಗೌಡ ಪಾಟೀಲ ಹಾಗೂ ಬಾಬುಗೌಡ ಪಾಟೀಲ ಪೀಠದ ಕೀಲಿ ನೀಡುವಂತೆ ಒತ್ತಾಯಿಸಿ ಜೀವ ಬೆದರಿಕೆ ಹಾಕಿದ್ದರು.

ಇದನ್ನೂ ಓದಿ: ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ದ್ವೇಷ ಭಾಷಣ ನಿಯಂತ್ರಿಸಿ: ಸುಪ್ರೀಂ ಕೋರ್ಟ್

ಜೇವರ್ಗಿ ತಾಲ್ಲೂಕಿನ ಕುಳಗೇರಿಯ ಮಲ್ಲನಗೌಡ ಪಾಟೀಲ, ಯಡ್ರಾಮಿಯ ಬಾಬುಗೌಡ ಪಾಟೀಲ, ಚಂದ್ರಶೇಖರ ದೇವಲಾಪುರ, ಸುರೇಶ ಹೊಸಪೇಟೆ, ಚೌಗಲಸಾ ಇನ್ನಿತರರು ಸೇರಿ ಪೀಠದ ಒಳಗಡೆ ಹೋಗಿ, ಮುಖ್ಯ ಗೇಟ್‌, ಮಠದ ಕಟ್ಟಿಗೆ ಬಾಗಿಲು ಕೀಲಿ ಮುರಿದು ಅತಿಕ್ರಮವಾಗಿ ಒಳ ಪ್ರವೇಶಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ನೋಡಿ: 17 ಕೋಟಿ ಜನಸಂಖ್ಯೆ ಬಡತನದಿಂದ ಹೊರ ಬಂದಿರುವ ವರದಿಯ‌ ನೈಜತೆಯೇನು?

Donate Janashakthi Media

Leave a Reply

Your email address will not be published. Required fields are marked *