ಗಾಜಿಯಾಬಾದ್: ಸಾಮಾಜಿಕ ಜಾಲತಾಣಗಳಲ್ಲಿ ಉತ್ತರ ಪ್ರದೇಶದಲ್ಲಿನ ‘ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.)ʼ ಕಚೇರಿಯ ಒಂದು ವಿಡಿಯೋ ಹರಿದಾಡುತ್ತಿದೆ. ಇದರಲ್ಲಿ ಒಬ್ಬ ಉದ್ಯಮಿಯು ತನ್ನ ಬಟ್ಟೆಗಳನ್ನು ಕಳಚಿ ಕಚೇರಿಯಲ್ಲಿ ಕುಳಿತಿರುವುದು ಕಾಣಿಸುತ್ತಿದೆ. ಅವನಿಗೆ ಲಂಚವನ್ನು ಕೇಳಿದ್ದರಿಂದ ಅವನು ಹತಾಶನಾಗಿ, ನನ್ನ ಬಳಿ ಹಣವಿಲ್ಲ. ನನ್ನನ್ನು ಜೈಲಿಗೆ ಅಟ್ಟಿರಿ. ಜಿ.ಎಸ್.ಟಿ. ಅಧಿಕಾರಿಯು ಅವನ ಬಳಿ 2 ಲಕ್ಷ ರೂಪಾಯಿ ಲಂಚವನ್ನು ಕೇಳಿದ್ದನು. ಆದರೆ ಅವನು ಅದನ್ನು ನೀಡಿರಲಿಲ್ಲ; ಇದರಿಂದ ಅಧಿಕಾರಿಯು ಅವನಿಗೆ ತೊಂದರೆ ಕೊಡುತ್ತಿದ್ದಾನೆಂದು ಉದ್ಯಮಿಯು ಆರೋಪಿಸಿದ್ದಾನೆ. ನಾನು
ವೀಡಿಯೊದಲ್ಲಿ, ಅಕ್ಷಯ ಜೈನ್ ಹೆಸರಿನ ಉದ್ಯಮಿಯು ಕಾಣಿಸುತ್ತಿದ್ದು, ಅವನು ಮೊದಲು ತನ್ನ ಶರ್ಟ ಮತ್ತು ನಂತರ ಪ್ಯಾಂಟ್ ತೆಗೆಯುತ್ತಿರುವುದು ಕಾಣಿಸುತ್ತಿದೆ. ತದನಂತರ ಅವನು ಕೇವಲ ಒಳ ಉಡುಪಿನಲ್ಲಿ ಧ್ಯಾನಭಂಗಿಯಲ್ಲಿ ಕುಳಿತಿದ್ದಾನೆ.
ಇದನ್ನೂ ಓದಿ: ಪ್ರಾಣಿಗಳ ಕೊಬ್ಬು ಸಂಸ್ಕರಣಾ ಘಟಕದಲ್ಲಿ ಸ್ಫೋಟ; ಓರ್ವ ಕಾರ್ಮಿಕ ಸಾವು
‘ಮೇರಠನಿಂದ ನನ್ನ ಸಂಸ್ಥೆಯು ಆಮದು ಮಾಡಿಕೊಂಡ ಕಬ್ಬಿಣವನ್ನು ತರುವ ರೈಲು ನಿಲ್ಲಿಸಲಾಗಿತ್ತು. ಮತ್ತು ನನ್ನ ಮೇಲೆ ತೆರಿಗೆ ವಂಚನೆಯ ಆರೋಪ ಮಾಡಲಾಗಿತ್ತು. ನಾನು ಯಾವುದೇ ತೆರಿಗೆಯನ್ನು ವಂಚಿಸಿಲ್ಲ ಆದರೆ ಅಧಿಕಾರಿಯು ನನ್ನ ಮೇಲೆ ದಂಡ ಹೇರಿದರು’ ಎಂದು ಜೈನ್ ಹೇಳಿದರು. ಈ ಕಾರಣದಿಂದ ಅವರು ಜಿ.ಎಸ್.ಟಿ. ಕಾರ್ಯಾಲಯಕ್ಕೆ ಬಂದು ಬಟ್ಟೆಯನ್ನು ತೆಗೆದು ಕೆಳಗೆ ಕುಳಿತರು.
‘ಈ ಘಟನೆಯ ಬಳಿಕ ಜಿ.ಎಸ್.ಟಿ. ಇಲಾಖೆಯು ಈ ಪ್ರಕರಣದ ತನಿಖೆ ಪ್ರಾರಂಭಿಸಿದೆ. ಈ ಘಟನೆ ಕೇವಲ ವೈಯಕ್ತಿಕ ಘಟನೆಯನ್ನು ಪ್ರತಿಬಿಂಬಿಸುವುದಿಲ್ಲ, ಬದಲಾಗಿ ಭ್ರಷ್ಟ ಆಡಳಿತದ ಕಾರ್ಯವೈಖರಿಯ ಬಗ್ಗೆಯೂ ಪ್ರಮುಖ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ’ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ನೋಡಿ: ಪ್ಯಾಲೆಸ್ಟೀನ್ ಪರವಾಗಿ ಧ್ವನಿಯೆತ್ತುವುದು ಅಪರಾಧವೇ? ಪ್ರತಿಭಟನೆಕಾರರ ಪ್ರಶ್ನೆ Janashakthi Media