ಶಿಕ್ಷಕರ ಸಮಸ್ಯೆ ಬಗೆಹರಿಸದಿದ್ರೆ ನಮ್ಮಂತಹ ವಿಫಲವಾದಂತಹ ರಾಜಕಾರಣಿಗಳು ಯಾರು ಇಲ್ಲ: ಶ್ರೇಯಸ್ ಎಂ. ಪಟೇಲ್

ಹಾಸನ: ಶಿಕ್ಷಕರ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಬಗೆಹರಿಸುವ ಕೆಲಸ ಮಾಡಲಾಗುವುದು. ಬಗೆಹರಿಸದಿದ್ದರೇ ನಮ್ಮಂತಹ ವಿಫಲವಾದಂತಹ ರಾಜಕಾರಣಿಗಳು ಯಾರು ಇಲ್ಲ ಎಂದು ಲೋಕಸಭಾ ಸದಸ್ಯರಾದ ಶ್ರೇಯಸ್ ಪಟೇಲ್ ಭರವಸೆ ನೀಡಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರದಂದು ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಶೈಕ್ಷಣಿಕ ಕಾರ್ಯಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂದೆ ತಾಯಿ ಜನ್ಮ ಕೊಟ್ಟಿರುವುದಕ್ಕೆ ನಾವು ಈ ಭೂಮಿ ಮೇಲೆ ಕಾಲಿಟ್ಟಿದ್ದೇವೆ. ನಾವು ಈ ಮಟ್ಟದಲ್ಲಿ ಸಂಸದರಾಗಿರುವುದಕ್ಕೆ ಶಿಕ್ಷಣವೇ ಕಾರಣ. ಮನೆಯಲ್ಲಿ ಪೋಷಕರು ಉತ್ತಮ ದಾರಿ ತೋರಿಸುತ್ತಾರೆ.

ಪಾಠ ಮಾಡುವ ಗುರುಗಳು ನಾವು ತಪ್ಪು ಮಾಡಿದಾಗ ತಿದ್ದುವರು ಶಿಕ್ಷಕರು. ನಾನು ಶಿಕ್ಷಣ ಪಡೆಯುವಾಗ ಶಿಕ್ಷಕರು ಹೊಡೆದಿರುವುದಕ್ಕೆ ನಾನು ಇಂದು ಸಂಸದನಾಗಿದ್ದೇನೆ. ಶಿಕ್ಷಕರು ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿತ್ತಾರೆ. ಇಂತಹ ಕಾರ್ಯಗಾರವು ಆಗಾಗ್ಗೆ ಆಗುತ್ತಿರಬೇಕು. ಶಿಕ್ಷಕರ ಜೊತೆ ನಾವು ಇರುತ್ತೇವೆ. ನಿಮ್ಮ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡಿದ್ದು, ಸ್ಪಂದಿಸುವ ಕೆಲಸ ಮಾಡಲಾಗುವುದು ಎಂದರು.

ಇದನ್ನೂ ಓದಿ: ಭ್ರಷ್ಟ ನೌಕರರಿಗೆ ಕಾನೂನಿನ ಕುಣಿಕೆ: ಸುಪ್ರೀಂ ಕೋರ್ಟ್ ತೀರ್ಪು

ಶಿಕ್ಷಣ ವ್ಯವಸ್ಥೆ ಇದ್ದರೇ ಮಾತ್ರ ದೇಶ ಮುನ್ನೇಡೆಸಲು ಸಾಧ್ಯ. ನಿಮ್ಮ ಸಮಸ್ಯೆ ಬಗೆಹರಿಸದಿದ್ದರೇ ನಮ್ಮಂತಹ ವಿಫಲವಾದಂತಹ ರಾಜಕಾರಣಿಗಳು ಯಾರು ಇಲ್ಲ. ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಪ್ರಾಮಾಣಿಕವಾಗಿ ಮಾಡಲಾಗುವುದು ಎಂದು ವಿಶ್ವಾಸವ್ಯಕ್ತಪಡಿಸಿದರು.

ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಮಾತನಾಡಿ, ಇಂದು ಹಲವಾರು ಶಾಲೆಗಳು ಬಹಳ ದುಸ್ತಿತಿಯಲ್ಲಿ ಇರುವುದನ್ನು ಕಾಣುತ್ತಿದ್ದೇವೆ. ಸರಕಾರದಿಂದ ಯಾವುದೇ ಅನುದಾನ ಬಾರದಿದ್ದರೂ ಕೂಡ ಅವರ ಒಂದು ಸ್ವಯಿಚ್ಚಯಿಂದ ಆರ್ಥಿಕವಾಗಿ ಉತ್ತಮವಾಗಿರುವವರಿಂದ ಹಣಕಾಸು ಸಹಾಯ ಪಡೆದು ಶಾಲಾ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸವನ್ನು ಶಿಕ್ಷಕರು ಮಾಡುತ್ತಿದ್ದಾರೆ.

ಪ್ರತಿನಿತ್ಯವು ಹಲವಾರು ಶಿಕ್ಷಕರ ಸಮಸ್ಯೆ ನೋಡಿದ್ದು, ಗ್ರಾಮೀಣ ಭಾಗದ ಶಿಕ್ಷಕರು ದುಸ್ಥಿತಿ ಯಲ್ಲಿ ಇರುವ ತಮ್ಮ ಶಾಲೆಯನ್ನು ಅಭಿವೃದ್ದಿ ಪಡಿಸಲು ಶ್ರಮ ಪಡು ತ್ತಾರೆ. ಕ್ಷೇತ್ರದ ಶಾಸಕರಿಗೆ ಮನವಿ ಕೊಟ್ಟು ಶಾಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ. ಶಿಕ್ಷಕರ ಪರವಾಗಿ ಸದನದಲ್ಲಿ ಪ್ರಸ್ತಾಪ ಮಾಡುವ ಮೂಲಕ ಸಮಸ್ಯೆ ಪರಿಹರಿಸೋ ಕೆಲಸ ಮಾಡಲಾಗುವುದು.

ಚುನಾವಣೆ ವೇಳೆ ಅನ ಗತ್ಯ ಕೆಲಸ ಸೇರಿದಂತೆ ಬಿಎಲ್‌ಒ ಅವರನ್ನು ಕಂದಾಯ ಇಲಾಖೆ ಯಿಂದ ನೇಮಕ ಮಾಡಿ ಸಿಕ್ಷಕರಿಗೆ ಹೊರೆ ತಪ್ಪಿಸಲು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು. ಶಿಕ್ಷಕರು ಪ್ರಾಮಣಿಕವಾಗಿ ಕೆಲಸ ಮಾಡುತ್ತಿದ್ದು ಅವರೊಂದಿಗೆ ಸದಾಇದ್ದು ಸಮಸ್ಯೆ ಬಗಹರಿಸೊ ನಿಟ್ಟಿನಲ್ಲಿ ಕೆಲಸಮಾಡಮಾಗುವುದು ಎಂದು ವಿಶ್ವಾಸವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ ಅವರು ಮಾತನಾಡಿ, ಶಿಕ್ಷಕರು ಇಂದು ಒತ್ತಡದಿಂದ ಕೆಲಸ ಮಾಡುವುದು ಶಾಲೆಗಳಲ್ಲಿ ನಿಮಾಣ ಮಾಡಿದೆ. ರಾಜ್ಯದ ಶಿಕ್ಷಕರು ಕೊರೊನಾ ಹಾವಳಿ ಸಮಯದಲ್ಲೂ ಗುಡಿಯಲ್ಲಿ ಪಾಠ ಮಾಡಿದ್ದಾರೆ.  ಆನ್‌ಲೈನ್ ಮೂಲಕ ಪಾಠ ಮಾಡುತ್ತಿರುವುದು ಇಡೀ ಶಿಕ್ಷಕರಿಗೆ ಒತ್ತಡ ತಂದಿದೆ. ಶಾಲೆ ನಡೆಸಿದ ರಾಜ್ಯ ಕರ್ನಾಟಕ ಎಂದು ಹೆಮ್ಮೆ ಇದೆ.ಬಡವರ ಮಕ್ಕಳು ವಿದ್ಯೆಯಿಂದ ವಂಚಿತರಾಗ ಬಾರದು ಎಂದು ಮನೆಮನೆ ಹೋಗಿ ಶಿಕ್ಷಣ ನೀಡಿದರು. ರಾಜ್ಯದಲ್ಲಿ 58 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದೆ. ಶಿಕ್ಷಕರು ಕೇವಲ ವೇತನಕ್ಕೆ ಕೆಲಸ ಮಾಡದೆ ಸೇವೆಯಾಗಿ ತಿಳಿದು ಕೆಲಸ ಮಾಡುತ್ತಿದ್ದಾರೆ. ಶಿಕ್ಷಕರ ಸಮಸ್ಯೆ ಬಗ್ಗೆ ಗಮನಹರಿ ಸಬೇಕಿದೆ. ಹಲವಾರು ಸಮಸ್ಯೆ ನಾವು ಅನುಭವಿಸುತ್ತಿದ್ದೇವೆ.

ಹಲವಾರು ವರ್ಷದಿಂದ ದುಡಿಯುತ್ತಿರುವ ಶಿಕ್ಷಕರಿಗೆ ಬಡ್ತಿ ನೀಡುವಂತೆ ಆಗ್ರಹಿಸಿದರು. ಸರ್ಕಾರಿ ಶಿಕ್ಷಕರು ಶಾಲೆಯಲ್ಲಿ ಕಲಿಸುವುದು ಬಿಟ್ಟು ಇತರೆ ಕೆಲಸಕ್ಕೆ ಸರ್ಕಾರ ಬಳಸಿಕೊಳ್ಳಲಾಗುತ್ತಿದೆ ಆದರೂ ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ಒದಗಿಸಲಾಗುತ್ತಿದೆ. ಆರನೇ ವೇತನದಲ್ಲಿ ಸುಮಾರು ಶೇಕಡ 57 ರಷ್ಟು ಬೆನಿಫಿಟ್ ಕೊಟ್ಟ ಸಿಎಂ ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ಕೊಟ್ಟಿರುವುದಕ್ಕೆ ಧನ್ಯವಾದ ಅರ್ಪಿಸುತ್ತೆವೆ. ‌

ರಾಜ್ಯದ ಶಿಕ್ಷಕರು ಗಂಭೀರ ಸಮಸ್ಯೆ ಇದೆ.30-35 ವರ್ಷ ಸರ್ಕಾರಿ ನೌಕರ ಸರ್ಕಾರಿ ಸೇವೆ ಯಿಂದ ನಿವೃತ್ತಿವರೆಗೆ ಸರ್ಕಾರಿ ನೌಕರರೆಂದು ಗುರುತಿಸಲಾಗುತ್ತದೆ ಆದರೆ ಪಿಂಚಣಿ ವ್ಯವಸ್ಥೆಯಲ್ಲಿ ಸಾಕಷ್ಟು ತೊಂದರೆಯಾಗುತ್ತಿದೆ. ಶಿಕ್ಷಕರ ಸಮಸ್ಯೆ ಗಮನಿಸಬೇಕು. ಶಿಕ್ಷಕರೆಂದರೇ ಕಲಿಸುವುದಕ್ಕಾಗಿ ಇರುವವರು. ನಲಿಕಲಿಯನ್ನು ಸರಕಾರಿ ಶಾಲೆಯಲ್ಲಿ ಮಾತ್ರ ತರಲಾಗಿದೆ. ಸಂಸದರು, ಶಾಸಕರು ಸರಕಾರಿ ಶಾಲೆಯಲ್ಲೆ ಕಲಿಯಬೇಕು ಎಂಬುದು ನಮ್ಮ ಉದ್ದೇಶ.

ಹಾಸನ ಜಿಲ್ಲೆಯ ಮಣ್ಣಿನ ಬಗ್ಗೆ ಇಡೀ ದೇಶಕ್ಕೆ ಗೊತ್ತಿದೆ. ಶಾಸಕ, ಸಂಸದರು ಒಂದು ಬಾರಿ ಹುದ್ದೆ ಪಡೆದರೇ ಫೆನ್ಷನ್ ಸಿಗುತ್ತದೆ. ಮುವತೈದು ವರ್ಷ ಕರ್ತವ್ಯ ನಿರ್ವಹಿಸಿದರೂ ಶಿಕ್ಷಕರಿಗೆ ಪೆನ್ಷನ್ ಸಿಗುತ್ತಿಲ್ಲ. ಎನ್.ಪಿ.ಎಸ್ ವನ್ನು ನಿಷೇಧ ಮಾಡಿ ಹಳೆ ಪಿಂಚಣಿ ಪದ್ಧತೆ ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಸಭಾ ಕಾರ್ಯಕ್ರಮ ನಡೆಯುವುದಕ್ಕೂ ಮೊದಲು ಶೈಕ್ಷಣಿಕ ಅಧಿವೇಶನದಡಿ ಸಾಲ ಶಿಕ್ಷಣದಲ್ಲಿ ವೈಜ್ಞಾನಿಕ ಮನೋಭಾವದ ಪರಿಕಲ್ಪನೆ ವಿಷಯದ ಕುರಿತು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಹುಲಿಕಲ್ ನಟರಾಜ್ ಸಮಾಜದಲ್ಲಿ ಮೂಡನಂಬಿಕೆ ವಾಮಾಚಾರ ಮೂಲಕ ಜನರನ್ನು ಯಾವ ರೀತಿ ಮೋಸ ಮಾಡಲಾಗುತ್ತದೆ ಇದನ್ನು ಕಂಡುಹಿಡಿಯುವುದು ಹೇಗೆ ಸೇರಿದಂತೆ ಪ್ರಾಯೋಗಿಕವಾಗಿ ಪ್ರದರ್ಶಿಸಿ ಪ್ರಾತ್ಯಕ್ಷಿಕೆ ಮೂಲಕ ಮನದಟ್ಟು ಮಾಡಿದರು.

ಕಾರ್ಯಕ್ರಮದಲ್ಲಿ ಬೇಲೂರು ಕ್ಷೇತ್ರದ ಶಾಸಕರಾದ ಎಚ್.ಕೆ. ಸುರೇಶ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಕೆ. ನಾಗೇಶ್, ಸಹ ಕಾರ್ಯದರ್ಶಿ ಎಚ್.ಎಸ್. ಚೇತನ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಾಗೂರು ಕೃಷ್ಣಗೌಡ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಎಸ್. ಚಂದ್ರಶೇಖರ್, ಪ್ರಾಂಶುಪಾಲ ರಂಗನಾಥ್ ಸ್ವಾಮಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಸಿ. ಬಸವರಾಜ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚಕ್ರಪಾಣಿ, ಮಹೇಶಪ್ಪ, ಜಿಲ್ಲಾ ಎಸ್.ಸಿ, ಎಸ್.ಟಿ. ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರಾಜೇಂದ್ರ ದೊಡ್ಡಮಗ್ಗೆ, ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಬೊಮ್ಮೇಗೌಡ, ಕಸಾಪ ಮಾಜಿ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಇತರರು ಪಾಲ್ಗೊಂಡಿದ್ದರು.

ಇದನ್ನೂ ನೋಡಿ: ಎಲ್‌ಐಸಿಯಲ್ಲಿ ವಿದೇಶ ನೇರ ಬಂಡವಾಳ : ವಿಮಾ ಉದ್ದಿಮೆಯ ಮೇಲೆ ಯಾವ ಪರೀಣಾಮ ಬೀರಬಹುದು? Janashakthi Media

Donate Janashakthi Media

Leave a Reply

Your email address will not be published. Required fields are marked *