ಪಹಲ್ಗಾಮ್ ದಾಳಿಗೆ ಭಾರತದ ಪ್ರತಿಕ್ರಿಯೆ ಹೇಗಿರಬೇಕು? ಲಕ್ಷ್ಯ ಸ್ಪಷ್ಟವಾಗಿ ನಮ್ಮ ಮುಂದಿದೆ. ನರಮೇಧದ ಅಪರಾಧಿಗಳನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪಾಕಿಸ್ತಾನಿ ಆಳುವವ್ಯವಸ್ಥೆಯ ಮೇಲೆ ಇನ್ನಷ್ಟು ರಾಜತಾಂತ್ರಿಕ ಮತ್ತು ರಾಜಕೀಯ ಒತ್ತಡವನ್ನು ಹೇರಲು, ಭವಿಷ್ಯದಲ್ಲಿ ಈ ರೀತಿಯ ಭಯೋತ್ಪಾದನಾ ದಾಳಿಗಳು ನಡೆಯುವುದನ್ನು ತಡೆಯಲುಭಾರತ ಇನ್ನಷ್ಟು ಹೆಚ್ಚು ವಿಶ್ವಾಸಾರ್ಹವಾದ ಪುರಾವೆಗಳನ್ನು ರಾಶಿಹಾಕಬೇಕು, ನಮ್ಮ ಜನರ ಒಗ್ಗಟ್ಟನ್ನು ಛಿದ್ರಗೊಳಿಸುವ ಮತ್ತು ಹಾಗೂ ದುರ್ಬಲಗೊಳಿಸುವ ಯಾವುದೇ ಕ್ರಮಗಳಿಗೆ ಯಾರೂ ಕೈ ಹಾಕಬಾರದು. ಅಸ್ಮಿತೆ ಆಧಾರಿತ ದ್ವೇಷದಿಂದ ಎಲ್ಲರೂ ದೂರವಿರಬೇಕು.
–ಪ್ರಕಾಶ್ ಕಾರತ್
–ಅನು: ವಿಶ್ವ
ಮೇ 7ರ ಮುಂಜಾನೆ ಭಾರತೀಯ ಸಶಸ್ತ್ರಪಡೆಗಳು ಪಿಒಕೆ(ಪಾಕ್ ಆಕ್ರಮಿತ ಕಾಶ್ಮೀರ) ಮತ್ತು ಪಾಕಿಸ್ತಾನಿ ಪ್ರದೇಶಗಳ ಒಳಗೆ ಒಂಬತ್ತು ನೆಲೆಗಳನ್ನು ಗುರಿಯಾಗಿಸಿ ಆಪರೇಷನ್ ಸಿಂಧೂರ ಹೆಸರಿನ ಮಿಲಿಟರಿ ಕಾರ್ಯಾಚರಣೆ ನಡೆಸಿದವು. ಪಹಲ್ಗಾಮ್‌ನಲ್ಲಿ ನಡೆದ ಭಾರತೀಯ ಪ್ರವಾಸಿಗರ ಬರ್ಬರ ಹತ್ಯೆಗಳಿಗೆ ಪ್ರತಿಕ್ರಿಯಿಸುವ ಅಗತ್ಯದ ಬಗ್ಗೆ ರಾಜಕೀಯ ವಲಯದಾದ್ಯಂತಒಮ್ಮತವಿತ್ತು. ಭಾರತ ಸರಕಾರ ಮತ್ತು ಸಶಸ್ತ್ರಪಡೆಗಳ ಪ್ರತಿನಿಧಿಗಳು ದಾಖಲಿಸಿದ ಪುರಾವೆಗಳು ನರಮೇಧದಲ್ಲಿ ಪಾಕಿಸ್ತಾನಿ ಸರಕಾರವು ನೇರವಾಗಿ ಸಂಭಾಳಿಸುವಲಷ್ಕರ್-ಎ-ತಯ್ಬಾ (ಎಲ್‌ಇಟಿ) ಸಂಘಟನೆ ಒಳಗೊಂಡಿರುವುದನ್ನು ಸಾಬೀತುಪಡಿಸುತ್ತವೆ. ಎಲ್‌ಇಟಿ ಈಗಾಗಲೇ ವಿಶ್ವಸಂಸ್ಥೆಯ ನಿಯೋಜಿತ ಭಯೋತ್ಪಾದಕ ಸಂಘಟನೆಗಳ ಪಟ್ಟಿಯಲ್ಲಿದೆ. ಅಸ್ಮಿತೆ
ಕೋಮು ಧ್ರುವೀಕರಣ ಸೃಷ್ಟಿಸುವುದು ಪಹಲ್ಗಾಮ್‌ನಲ್ಲಿ ನಡೆಸಿದ ದಾಳಿಯ ಉದ್ದೇಶವಾಗಿತ್ತು ಎಂದು ಮಿಲಿಟರಿ ಕಾರ್ಯಾಚರಣೆಗಳ ನಂತರ ಮಾಧ್ಯಮ ಗೋಷ್ಠಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ಹೇಳಿದರು. ಅದು ನಿಜವಾದರೂ ಭಾರತೀಯ ಮುಖ್ಯವಾಹಿನಿ ಮಾಧ್ಯಮ ಮತ್ತು ವಿಶೇಷವಾಗಿ ಸಾಮಾಜಿಕ ಮಾಧ್ಯಮವು ಈ ಸಂಚನ್ನು ಗಣನೆಗೆ ತೆಗೆದುಕೊಂಡಿದೆಯೇ ಎಂಬ ಪ್ರಶ್ನೆಯನ್ನೂ ಎತ್ತುತ್ತದೆ. ಅದಕ್ಕೆ ಉತ್ತರ ಸ್ವಯಂ-ವೇದ್ಯವಾಗಿದೆ. ಅಸ್ಮಿತೆ
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿವೇಳೆ ಗುಡ್ಡ ಕುಸಿತ; ಓರ್ವ ಕಾರ್ಮಿಕ ಸಾವು
ಬಲಪಂಥೀಯ ಹ್ಯಾಂಡಲ್‌ಗಳ ಬಹುತೇಕ ವಿಭಾಗ ಮತ್ತು ಪೋಸ್ಟ್ ಗಳು ಕಾರುತ್ತಲೇ ಇರುವ ವಿಷಕೂಡ ಕಡಿಮೆ ಅಪರಾಧವಲ್ಲ ಎನ್ನುವುದನ್ನು ಮನಗಾಣಬೇಕು. ನಿಜಹೇಳಬೇಕೆಂದರೆ, ಅವರುಕೂಡ ಇದೇ ಧೋರಣೆಯನ್ನು ಅಳವಡಿಸಿಕೊಂಡಿದ್ದಾರೆ, ಮಾತ್ರವಲ್ಲದೆ ಪಹಲ್ಗಾಮ್‌ನಲ್ಲಿ ಭಯೋತ್ಪಾದನೆ ಹರಡಿದವರ ರೀತಿಯಲ್ಲೇ ಜನರ ಒಗ್ಗಟ್ಟನ್ನು ಮುರಿಯಲು ಅವರು ಕೂಡ ಅಷ್ಟೇ ಸಂಕಲ್ಪ ತೊಟ್ಟಿರುವಂತೆ ಕಾಣುತ್ತದೆ. ಆದ್ದರಿಂದ ಮೇಲ್ನೋಟದಲ್ಲಿಮಾತ್ರವಲ್ಲ, ಮಾಧ್ಯಮಕ್ಷೇತ್ರದಲ್ಲಿನ ಈ ವಿಷ-ನಿವಾರಣೆಗೆದೃಢವಾದ ಬ್ಯಾಕ್‌ಅಪ್ ಕಾರ್ಯಾಚರಣೆಯನ್ನು ಹೊಂದುವುದು ಕೂಡ ಅಷ್ಟೇ ಅಗತ್ಯವಾಗುತ್ತದೆ. ಈ ಉದ್ದೇಶವನ್ನು ಸಾಧಿಸಲು ಸಂವಿಧಾನ ಹಾಗೂ ಭಾರತದ ಕಾನೂನುಗಳಲ್ಲಿ ಸಾಕಷ್ಟು ಅವಕಾಶಗಳಿವೆ.
ಮಿಲಿಟರಿ ಕಾರ್ಯಾಚರಣೆಯು ನಿಖರವಾಗಿತ್ತು ಹಾಗೂ ಪರಿಸ್ಥಿತಿ ಉಲ್ಬಣಗೊಳ್ಳದಂತೆ ಗುರಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ. ಸಮಕಾಲೀನ ಜಗತ್ತಿನಲ್ಲಿ, ಪೂರ್ಣಪ್ರಮಾಣದ ಮಿಲಿಟರಿ ಸಂಘರ್ಷದ ಪರಿಣಾಮವು ನಿಸ್ಸಂಶಯವಾಗಿಯೂ ವಿನಾಶಕಾರಿಯಾಗುತ್ತದೆ ಎನ್ನುವುದು ತುಂಬಾ ಸ್ಪಷ್ಟವಾಗಿದೆ. ಆದ್ದರಿಂದ, ಇಂಥ ಕಾರ್ಯಾಚರಣೆಗಳು ಯಾವಾಗಲೂ ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಸಾಧ್ಯತೆ ಹೊಂದಿರುವುದರಿಂದ ನಾವು ಆದಷ್ಟೂ ಹೆಚ್ಚು ಜಾಗರೂಕರಾಗಿರಬೇಕು. ಅಂಥ ಸನ್ನಿವೇಶವನ್ನುತಪ್ಪಿಸಬೇಕು.
ಇದನ್ನೂ ನೋಡಿ: 25 ಕೋಟಿ ಜನಸಂಖ್ಯೆಯನ್ನು ಬಡತನದಿಂದ ಹೊರ ತಂದಿರುವುದಾಗಿ ಹೇಳುತ್ತಿರುವ ಮೋದಿ ಸರ್ಕಾರ ? ವಾಸ್ತವವೇನು?
ಲಕ್ಷ್ಯಸ್ಪಷ್ಟವಾಗಿನಮ್ಮಮುಂದಿದೆ. ಭಾರತ ಇನ್ನಷ್ಟು ಹೆಚ್ಚು ವಿಶ್ವಾಸಾರ್ಹವಾದ ಪುರಾವೆಗಳನ್ನು ರಾಶಿಹಾಕಬೇಕು, ಪಹಲ್ಗಾಮ್ ನರಮೇಧದ ಅಪರಾಧಿಗಳನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪಾಕಿಸ್ತಾನಿ ಆಳುವವ್ಯವಸ್ಥೆಯ ಮೇಲೆ ಇನ್ನಷ್ಟು ರಾಜತಾಂತ್ರಿಕ ಮತ್ತು ರಾಜಕೀಯ ಒತ್ತಡವನ್ನು ಹೇರಲು, ಭವಿಷ್ಯದಲ್ಲಿ ಈ ರೀತಿಯ ಭಯೋತ್ಪಾದನಾ ದಾಳಿಗಳು ನಡೆಯುವುದನ್ನು ತಡೆಯಲು ಇದು ಅಗತ್ಯ. ಸಮೃದ್ಧಿ ಮತ್ತು ಪ್ರಗತಿಗಾಗಿ ಉಭಯ ದೇಶಗಳ ಜನರು ಎಲ್ಲಕ್ಕೂಮಿಗಿಲಾಗಿಶಾಂತಿ ಮತ್ತು ಸ್ಥಿರತೆಗೆ ಅರ್ಹರಾಗಿದ್ದಾರೆ. ಭಾರತ ಒಂದು ವೈವಿಧ್ಯತೆಯ ಸಮಾಜವಾಗಿದೆ ಹಾಗೂ ವಿವಿಧತೆಯಲ್ಲಿ ಏಕತೆಯೇ ಅದರ ದೊಡ್ಡ ಶಕ್ತಿಯಾಗಿದೆ. ಅದು ಹಾಗೆಯೇ ಇರಬೇಕು ಕೂಡ. ನಮ್ಮ ಜನರ ಒಗ್ಗಟ್ಟನ್ನು ಛಿದ್ರಗೊಳಿಸುವಮತ್ತು ಹಾಗೂ ದುರ್ಬಲಗೊಳಿಸುವ ಯಾವುದೇ ಕ್ರಮಗಳಿಗೆ ಯಾರೂ ಕೈ ಹಾಕಬಾರದು. ಅಸ್ಮಿತೆ ಆಧಾರಿತ ದ್ವೇಷದಿಂದದೂರವಿರಬೇಕು.
ವ್ಯಂಗ್ಯಚಿತ್ರ ಕೃಪೆ:
ಪಿ.ಮಹಮ್ಮದ್,
ವಾರ್ತಾಭಾರತಿ