ICC World Cup 2023: ಇಂದಿನಿಂದ ಕ್ರಿಕೆಟ್ ವಿಶ್ವಕಪ್‌‌ ಆರಂಭ

ಅಭಿಮಾನಿಗಳು ತೀವ್ರ ಕುತೂಹಲದಿಂದ ಕಾಯುತ್ತಿರುವ ಏಕದಿನ ವಿಶ್ವಕಪ್ ಟೂರ್ನಿ ಇಂದಿನಿಂದಲೇ ಆರಂಭವಾಗುತ್ತಿದೆ. 2019ರ ವಿಶ್ವಕಪ್‌ನ ಫೈನಲಿಸ್ಟ್‌ಗಳಾದ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಅಹ್ಮದಾಬಾದ್‌ನಲ್ಲಿ ಮುಖಾಮುಖಿಯಾಗುವ ಮೂಲಕ ಈ ಮೆಗಾ ಟೂರ್ನಿಗೆ ಚಾಲನೆ ದೊರೆಯಲಿದೆ.

ಪ್ರಶಸ್ತಿಗಾಗಿ 10 ತಂಡಗಳು ಸೆಣಸಾಡಲಿದ್ದು, ಇಂದಿನಿಂದ ನವೆಂಬರ್ 19 ರ ವರೆಗೆ ವಿಶ್ವಕಪ್ ಕದನ ನಡೆಯಲಿದೆ. 6 ಬಾರಿ ವಿಶ್ವಕಪ್ ಪ್ರತಿನಿಧಿಸಿರುವ ಭಾರತದ ಮಾಜಿ ಕ್ರಿಕೆಟರ್, ಸಚಿನ್ ತೆಂಡೂಲ್ಕರ್ 2023ರ ವಿಶ್ವಕಪ್ ಟ್ರೋಫಿಯೊಂದಿಗೆ ಕ್ರೀಡಾಂಗಣಕ್ಕೆ ಎಂಟ್ರಿ ಕೊಡಲಿದ್ದಾರೆ. ಈ ವೇಳೆ ಎಲ್ಲಾ 10 ತಂಡದ ನಾಯಕರು ಉಪಸ್ಥಿತರಿಲಿದ್ದಾರೆ. ಈ ಮೂಲಕ ವಿಶ್ವಕಪ್ ಸಮರಕ್ಕೆ ಅಧಿಕೃತ ಚಾಲನೆ ಸಿಗಲಿದೆ.

ಸಾಕಷ್ಟು ನಿರೀಕ್ಷೆಗಳು, ಪ್ರಶಸ್ತಿ ಗೆಲ್ಲುವ ಹಾಟ್ ಫೇವರೇಟ್ ತಂಡವಾಗಿರೋ ಟೀಂ ಇಂಡಿಯಾ, ಅಕ್ಟೋಬರ್ 8 ರಂದು ವಿಶ್ವಕಪ್‌ನ ಮೊದಲ ಪಂದ್ಯವನ್ನ ಆಸೀಸ್ ವಿರುದ್ಧ ಆಡಲಿದೆ. ಯುವ ಹಾಗೂ ಅನುಭವಿ ಆಟಗಾರರನ್ನೇ ಹೊಂದಿರುವ ಭಾರತ, ಎಲ್ಲಾ ವಿಭಾಗಗಳಲ್ಲೂ ಸಮರ್ಥ ಆಟಗಾರರನ್ನ ಹೊಂದಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕನ್ನಡಿಗ ಕೆಎಲ್ ರಾಹುಲ್, ಶುಭಮನ್ ಗಿಲ್, ಪಾಂಡ್ಯ, ಜಡೇಜಾ, ಬೂಮ್ರಾ, ಸಿರಾಜ್, ಇಶಾನ್ ಕಿಶನ್, ಶಮಿ, ಅಶ್ವಿನ್, ಸೂರ್ಯಕುಮಾರ್ ಯಾದವ್ ಸೇರಿದಂತೆ 15 ಜನರ ತಂಡವನ್ನ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ :  ಏಕದಿನ ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿ ಬಿಡುಗಡೆ

2013ರ ಬಳಿಕ ಭಾರತ ಒಂದೇ ಒಂದು ಐಸಿಸಿ ಟ್ರೋಫಿಯನ್ನ ಗೆದ್ದಿಲ್ಲ. ದಶಕಗಳ ಬಳಿಕ ಆ ಕೊರಗನ್ನ ನೀಗಿಸುವ ತವಕದಲ್ಲಿ ಟೀಂ ಇಂಡಿಯಾವಿದೆ. ರೋಹಿತ್ ಶರ್ಮಾ, ಕೊಹ್ಲಿ, ಅಶ್ವಿನ್‌ಗೆ ಇದೇ ಕೊನೆಯ ವಿಶ್ವಕಪ್ ಎನ್ನಲಾಗ್ತಿದ್ದು, ಅವರ ಆಟ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ 10 ತಂಡಗಳ ಸಂಪೂರ್ಣ ಆಟಗಾರರ ಪಟ್ಟಿ ಹಾಗೂ ನಾಯಕರ ವಿವರ ಇಲ್ಲಿದೆ. 

ಭಾರತ ತಂಡ : ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪ ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್.

ಆಸ್ಟ್ರೇಲಿಯಾ ತಂಡ : ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಶಾನ್ ಅಬಾಟ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಮಾರ್ನಸ್ ಲ್ಯಾಬುಶೇನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆಡಮ್ ಝಂಪಾ, ಮಿಚೆಲ್ ಸ್ಟಾರ್ಕ್.

ಅಫ್ಘಾನಿಸ್ತಾನ ತಂಡ : ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ರಿಯಾಜ್ ಹಸನ್, ರಹಮತ್ ಷಾ, ನಜೀಬುಲ್ಲಾ ಜದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್, ಫಜಲ್ಹಕ್ ಫಾರೂಕಿ, ಅಬ್ದುಲ್ ರಹಮಾನ್, ನವೀನ್ ಉಲ್ ಹಕ್

ಇಂಗ್ಲೆಂಡ್ ತಂಡ : ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಗಸ್ ಅಟ್ಕಿನ್ಸನ್, ಜಾನಿ ಬೈರ್‌ಸ್ಟೋವ್, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟನ್, ಡೇವಿಡ್ ಮಲನ್, ಆದಿಲ್ ರಶೀದ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಮಾರ್ಕ್ ವುಡ್, ಕ್ರಿಸ್ ವೋಕ್ಸ್

ಬಾಂಗ್ಲಾದೇಶ ತಂಡ : ಶಕೀಬ್ ಅಲ್ ಹಸನ್ (ನಾಯಕ), ಲಿಟನ್ ಕುಮಾರ್ ದಾಸ್, ತಂಝಿದ್ ಹಸನ್ ತಮೀಮ್, ನಜ್ಮುಲ್ ಹೊಸೈನ್ ಶಾಂಟೊ (ಉಪನಾಯಕ), ತೌಹಿದ್ ಹೃದಯ್, ಮುಶ್ಫಿಕುರ್ ರಹೀಮ್, ಮಹ್ಮುದುಲ್ಲಾ ರಿಯಾದ್, ಮೆಹಿದಿ ಹಸನ್ ಮಿರಾಜ್, ನಸುಮ್ ಅಹ್ಮದ್, ಶಾಕ್ ಮಹೇದಿ ಹಸನ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಹಸನ್ ಮಹಮೂದ್, ಶೋರಿಫುಲ್ ಇಸ್ಲಾಂ, ತಂಝಿಮ್ ಹಸನ್ ಸಾಕಿಬ್.

ನೆದರ್ಲೆಂಡ್ಸ್ ತಂಡ: ಸ್ಕಾಟ್ ಎಡ್ವರ್ಡ್ಸ್ (ನಾಯಕ), ಮ್ಯಾಕ್ಸ್ ಒ’ಡೌಡ್, ಬಾಸ್ ಡಿ ಲೀಡೆ, ವಿಕ್ರಮ್ ಸಿಂಗ್, ತೇಜ ನಿಡಮನೂರು, ಪಾಲ್ ವ್ಯಾನ್ ಮೀಕೆರೆನ್, ಕಾಲಿನ್ ಅಕರ್ಮನ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್, ರಯಾನ್ ಕ್ಲೈನ್, ವೆಸ್ಲಿ ಬ್ಯಾರೆಸಿ, ಸಾಕಿಬ್ ಜುಲ್ಫಿಕರ್, ಶರೀಜ್ ಅಹ್ಮದ್, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್.

ಪಾಕಿಸ್ತಾನ ತಂಡ :ಬಾಬರ್ ಅಜಮ್ (ನಾಯಕ),ಶದಾಬ್ ಖಾನ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಸಲ್ಮಾನ್ ಅಲಿ ಅಘಾ, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹ್ಯಾರಿಸ್ ರೌಫ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಮ್.

ನ್ಯೂಜಿಲೆಂಡ್ ತಂಡ : ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ವಿಲ್ ಯಂಗ್.

ಶ್ರೀಲಂಕಾ ತಂಡ : ದಸುನ್ ಶನಕ (ನಾಯಕ), ಕುಸಲ್ ಮೆಂಡಿಸ್ (ಉಪನಾಯಕ), ಕುಸಲ್ ಪೆರೆರಾ, ಪಾತುಮ್ ನಿಸ್ಸಾಂಕ, ಲಹಿರು ಕುಮಾರ, ದಿಮುತ್ ಕರುಣಾರತ್ನ, ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ಮಹೇಶ್ ತೀಕ್ಷಣ, ದುನಿತ್ ವೆಲ್ಲಲಗೆ, ಕಸುನ್ ರಜಿತ, ಮಥೀಶ ಪತಿರಣ, ದಿಲ್ಶನ್ ಮಧುಶಂಕ, ದುಶನ್ ಹೇಮಂತ

ದಕ್ಷಿಣ ಆಫ್ರಿಕಾ ತಂಡ : ಟೆಂಬಾ ಬವುಮಾ (ನಾಯಕ), ಜೆರಾಲ್ಡ್ ಕೊಯೆಟ್ಜಿ, ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಆಂಡಿಲೆ ಫೆಹ್ಲುಕ್ವಾಯೊ, ಕಗಿಸೊ ರಬಾಡ, ತಬ್ರೈಜ್ ಶಮ್ಸಿ, ರಾಸ್ಸಿ ವಾನ್ ಡೆರ್ ಡುಸ್ಸೆನ್, ಲಿಜಾದ್ ವಿಲಿಯಮ್ಸ್.

ಇದನ್ನೂ ನೀಡಿ : ಕ್ರೀಡಾ ಬದ್ಧತೆ ಮೆರೆದ ಮೊಹಮ್ಮದ್‌ ಸಿರಾಜ್‌

 

Donate Janashakthi Media

Leave a Reply

Your email address will not be published. Required fields are marked *