ಬೆಂಗಳೂರು: ‘ಎ ಸಿಂಬಲ್ ಆಫ್ ಲಾಯಲ್ಟಿ ಡಿಕೆ ಶಿವಕುಮಾರ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, “ಈ ಹಿಂದೆ ನನಗೆ ಬಿಜೆಪಿಯಿಂದ ಡಿಸಿಎಂ ಹುದ್ದೆಯ ಆಫರ್ ಬಂದಿತ್ತು. ಆದರೆ ನಾನು ಜೈಲು ಆಯ್ಕೆ ಮಾಡಿಕೊಂಡೆ” ಎಂದು ಹೇಳಿದ್ದಾರೆ.
ನಾನು ಈ ಹಿಂದೆ ಜೈಲಿಗೆ ಹೋಗುವ ಸಂದರ್ಭ ಬಂದಾಗ ಬಿಜೆಪಿ ಹೈಕಮಾಂಡ್ ನನಗೆ ಡಿಸಿಎಂ ಆಗ್ತೀರೋ ಜೈಲಿಗೆ ಹೋಗ್ತೀರೋ ಎಂದು ಪ್ರಶ್ನೆ ಮಾಡಿತ್ತು. ನಾನು ನನ್ನ ಪಕ್ಷಕ್ಕೆ ನಿಷ್ಠ. ಹೀಗಾಗಿ ಜೈಲನ್ನೇ ಆಯ್ಕೆ ಮಾಡಿಕೊಂಡೆ ಎಂದಿದ್ದಾರೆ.
ಇದನ್ನೂ ಓದಿ: ಪಿಎಸ್‌ಐ ಪಾಸ್ ದುರುಪಯೋಗ; ಗುತ್ತಿಗೆದಾರ ಅಶೋಕ್ ವಿರುದ್ದ ಪ್ರಕರಣ ದಾಖಲು
ನಾನು ಬೆಳೆಯಲು ನನ್ನ ಕಾರ್ಯಕರ್ತರು ಕಾರಣ. ನನ್ನ ಪಕ್ಷವನ್ನು ಅಪಾರ ಗೌರವಿಸುತ್ತೇನೆ. ನನ್ನ ಪಕ್ಷಕ್ಕೆ ಯಾವತ್ತೂ ನಿಷ್ಠನಾಗಿಯೇ ಇರುತ್ತೇನೆ. ಇನ್ನೊಂದು 8-10 ವರ್ಷ ರಾಜಕೀಯದಲ್ಲಿರುತ್ತೇನೆ. ನಂತರ ಯುವಕರಿಗೆ ದಾರಿ ಮಾಡಿಕೊಡುತ್ತೇನೆ ಎಂದಿದ್ದಾರೆ.
ಇಷ್ಟು ವರ್ಷದ ರಾಜಕೀಯ ಜೀವನದ ನನಗೆ ತೃಪ್ತಿ ತಂದಿದೆ. ರಾಜಕೀಯದಲ್ಲಿ ತಮ್ಮ ನಂತರ ಮುಂದಿನ ನಾಯಕರನ್ನು ಬೆಳೆಸುತ್ತಾ ಹೋಗುವುದೇ ನಿಜವಾದ ನಾಯಕನ ಲಕ್ಷಣ ಎಂದು ಈ ಹಿಂದೆ ಒಮ್ಮೆ ರಾಜೀವ್ ಗಾಂಧಿಯವರು ನನಗೆ ಹೇಳಿದ್ದರು. ಅದನ್ನು ನಾನು ಪಾಲಿಸಿಕೊಂಡು ಬಂದಿದ್ದೇನೆ. ನನ್ನ ಕುರಿತ ಈ ಪುಸ್ತಕ ಹಲವು ಜನರಿಗೆ ಪ್ರೇರಣೆಯಾಗಲಿ ಎಂಬುದೇ ನನ್ನ ಆಶಯ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ನೋಡಿ: ನಿರ್ಮಾಣ ಕಂಪನಿ ನಿರ್ಲಕ್ಷ್ಯಕ್ಕೆ ಮೂರು ವಲಸೆ ಕಾರ್ಮಿಕರ ಸಾವು: 25 ಲಕ್ಷ ಪರಿಹಾರಕ್ಕೆ CWFI ಆಗ್ರಹ Janashakthi
