– ರಮೇಶ್ ಗುಲ್ವಾಡಿ
ನೂರು ಗ್ರಾಮ್ ಎಂದರೆ ಎಷ್ಟು ಪಪ್ಪಾ?
ಮಗಳು ಮೌನದ ಕದವೊಡೆದಳು….
ನಿರೀಕ್ಷೆಗಳನ್ನು ತೂಕ ಮಾಡಬಾರದು ಪುಟ್ಟಾ
ಎದೆಯೊಳಗಿನ ಹತಾಶೆ
ತುಟಿಗೆ ಬಂದಂತೆ ತಣ್ಣನೆಯ ನಡುಕ!
ಅರ್ಹತೆ ಎಂದರೇನು ಮತ್ತೆ?
ಮರುಪ್ರಶ್ನೆಯೊಳಗೆ ಆಕ್ರೋಶದ ತುಣುಕು.
ಆಕಾಶವನ್ನು ಅಳೆಯಲಾಗದು ಚಿನ್ನಾ …
ಹುಸಿಯುತ್ತರಕೆ ತೊದಲಿತು
ನಾಲಿಗೆ
ನಿವೃತ್ತಿ ಎಂದರೆ ಮುಕ್ತಾಯವಂತೆ,ಹೌದೇ?
ತೂಕದ ಜೊತೆಗೆ ಎತ್ತರವೂ ಹೆಚ್ಚಾಗುವುದೇ ನಿವೃತ್ತಿಯಂತೆ ಬಂಗಾರಿ…..
ನಿನಗೆ ಗೊತ್ತೇ…
ಬಾನು ತುಂಬಾ ಕೋಟಿ ತಾರೆಗಳಿರುವಂತೆ ಭೂಮಿಯ ಮೇಲೂ ಒಂದೆರಡು ತಾರೆಗಳಿರುತ್ತವೆ,
ಅವುಗಳ ತೂಕ ನೂರು ಗ್ರಾಮ್ ಹೆಚ್ಚೇ ಇರುತ್ತದೆ!