ಕುಂದಾಪುರ: ಸಮಾಜದಲ್ಲಿ ಬದುಕುವ ಪ್ರತಿಯೊಬ್ಬ ಮನುಷ್ಯನೂ ಅವಕಾಶ ವಂಚಿತರಾಗದೇ ಸಮಾನತೆಯಿಂದ ಬದುಕುವ ಹಕ್ಕು ಇರಬೇಕು ಎಂದು ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ. ಪ್ರಕಾಶ್ ಕೆ ಹೇಳಿದರು. ಮನುಷ್ಯ
ಅವರು ಉಪ್ಪುಂದ ಶಾಲೆಬಾಗಿಲು ಮಾತ್ರಶ್ರೀ ಸಭಾಭವನದಲ್ಲಿ ನಡೆದ ಸಿಪಿಎಂ ಪಕ್ಷದ 4 ನೇ ಬೈಂದೂರು ವಲಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಸಿಪಿಎಂ ಪಕ್ಷವು ಸಮಾನತೆಯನ್ನು ಪ್ರತಿಪಾದಿಸುತ್ತದೆ. ವಸತಿ, ಆಹಾರ, ಉದ್ಯೋಗ, ಶಿಕ್ಷಣದ ಹಕ್ಕುಗಳಿಂದ ಯಾವ ವ್ಯಕ್ತಿಯೂ ವಂಚಿತರಾಗದಂತೆ ಸಿಪಿಎಂ ಪಕ್ಷ ಹೋರಾಡುತ್ತದೆ ಈ ಹೋರಾಟವನ್ನು ನಿರಂತರವಾಗಿ ಮುನ್ನೆಡೆಸಬೇಕು ಎಂದು ಅವರು ಹೇಳಿದರು.
ಸಂಘ ಕಟ್ಟಿ ಹೋರಾಟ ಮಾಡುವ ಕಾರ್ಮಿಕ, ಆಹಾರಕ್ಕಾಗಿ ಬೆಳೆಯುವ ರೈತನ ಹೋರಾಟ ಕೂಲಿ ಹೆಚ್ಚಳಕ್ಕಾಗಿ ಕೂಲಿಕಾರರನ ಹೋರಾಟದ ಉದ್ದೇಶವೂ ಕೂಡ ಸಮಾನತೆಯ ಆಶಯದ್ದಾಗಿದ್ದು ಪಕ್ಷದ ಕಾರ್ಯಕರ್ತರು ಸಮಾನತೆಯ ಹೋರಾಟದಲ್ಲಿ ಸಕ್ರೀಯರಾಗಬೇಕೆಂದು ಎಂದು ಅವರು ಕರೆ ನೀಡಿದರು.
ಇದನ್ನೂ ಓದಿ: ಚಂಡಮಾರುತದ ಭೀತಿ! ಕರ್ನಾಟಕದಲ್ಲಿ ಭಾರೀ ಮಳೆ, ಪ್ರವಾಹ ಸಾಧ್ಯತೆ! ಹವಾಮಾನ ತಜ್ಞರು ಹೇಳೋದೇನು?
ಸಮ್ಮೇಳನದ ಧ್ವಜಾರೋಹಣ ಪಕ್ಷದ ಹಿರಿಯ ಸದಸ್ಯ ಮಾಧವ ದೇವಾಡಿಗ ನೆರವೇರಿಸಿದರು. ಉಧ್ಟಾಟನಾ ಸಮಾರಂಭದ ಅಧ್ಯಕ್ಷತೆ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವೆಂಕಟೇಶ್ ಕೋಣಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಎಚ್ ನರಸಿಂಹ,ಕೆ ಶಂಕರ್ ಮಾತನಾಡಿದರು.
ಅನಂತರ ಪ್ರತಿನಿಧಿ ಅಧಿವೇಶನ ಆರಂಭಗೊಂಡು ಕಳೆದ ಮೂರು ವರ್ಷಗಳ ಕರಡು ವರದಿಯನ್ನು ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಂಡಿಸಿದರು. ವರದಿ ಮೇಲೆ ಚರ್ಚೆ ನಡೆಸಿ ಅಂಗೀಕಾರ ಮಾಡಲಾಯಿತು. ಸಮ್ಮೇಳನ ಬೈಂದೂರು ವಲಯವನ್ನು ಬೈಂದೂರು ತಾಲೂಕು ಸಮಿತಿಯಾಗಿ ರಚಸಿತು. ನೂತನ ಕಾರ್ಯದರ್ಶಿಯಾಗಿ ಗಣೇಶ್ ತೊಂಡೆ ಮಕ್ಕಿ ಆಯ್ಕೆಯಾದರು. ವೇದಿಕೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯೆ ನಾಗರತ್ನ ನಾಡ, ಜಿಲ್ಲಾ ಸಮಿತಿ ಸದಸ್ಯ ಜಿ.ಡಿ ಪಂಜು ಪೂಜಾರಿ, ಲೀಲಾವತಿ ಪಡುಕೋಣೆ ಉಪಸ್ಥಿತರಿದ್ದರು.
ಸಮ್ಮೇಳನ ನಿರ್ಣಯಗಳು
ಬೈಂದೂರು ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆ ಯಾಗಿ ಘೋಷಿಸುವಂತೆ ಆಗ್ರಹ, ಬಹುಕೋಟಿ ಕುಡಿಯುವ ನೀರು ಸಮರ್ಪಕವಾಗಿ ಜಾರಿ ಮಾಡಲು ಆಗ್ರಹ, ಸೇನಾ ಪುರದಲ್ಲಿ ಎಲ್ಲಾ ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಒತ್ತಾಯ, ಬಿಪಿಎಲ್ ಪಡಿತರ ಚೀಟಿ ರದ್ದತಿಗೆ ಅವೈಜ್ಞಾನಿಕ ಮಾನದಂಡಗಳನ್ನು ಅಳವಡಿಸುವ ಕ್ರಮವನ್ನು ಖಂಡಿಸಿ ನಿರ್ಣಯ, ಬೈಂದೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಕಾಮಗಾರಿ ಶೀಘ್ರ ಪೂರ್ಣಗೊಳಿಸಲುಅಪಾಯವಿಲ್ಲದ ಸ್ಥಳಗಳಲ್ಲಿ ಕೆಂಪು ಕಲ್ಲು, ಮರಳುಗಾರಿಕೆಗೆ ಅನುಮತಿ ನೀಡಲು ಆಗ್ರಹಿಸಿ, ಗಂಗೊಳ್ಳಿ , ಕುಂದಾಪುರ ಸಂಪರ್ಕ ಸೇತುವೆಗೆ ಆಗ್ರಹಿಸಿ ನಿರ್ಣಯ ಅಂಗೀಕರಿಸಲಾಯಿತು.
ಇದನ್ನೂ ನೋಡಿ: ಮರಕುಂಬಿ ಪ್ರಕರಣದ ತೀರ್ಪು :ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಉಳಿಸಿದೆ – ಆರ್ ಕೆ ದೇಸಾಯಿ Janashakthi Media