ಹುಬ್ಬಳ್ಳಿ : ಹುಬ್ಬಳ್ಳಿಯ ಕಂಚಗಾರ ಗಲ್ಲಿಯಲ್ಲಿ ಗ್ರಾಹಕರಿಗೆ ಬಟ್ಟೆ ತೋರಿಸುವಾಗಲೇ ಕುಸಿದು ಬಿದ್ದು ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಇದನ್ನು ಓದಿ: ರಾಜ್ಯದ 9 ವಿಶ್ವವಿದ್ಯಾನಿಲಯ ಮುಚ್ಚುವುದು ಸುಲಭದ ಕೆಲಸವಲ್ಲ: ಅಶ್ವಥ್ ನಾರಾಯಣ್
ಇತ್ತೀಚೆಗೆ ದೇಶದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಮೃತರನ್ನು ರಾಜಸ್ಥಾನ ಮೂಲದ ಭವರ್ ಸಿಂಗ್ (43) ಎಂದು ಗುರುತಿಸಲಾಗಿದೆ. ನಗರದ ಕಂಚಗಾರ ಗಲ್ಲಿಯಲ್ಲಿರುವ ಎನ್ಆರ್ ಸಾರಿ ಸೆಂಟರ್ನಲ್ಲಿ ಗ್ರಾಹಕರಿಗೆ ಬಟ್ಟೆ ತೋರಿಸುವಾಗ ಏಕಾಏಕಿ ಕೂತಲ್ಲೇ ಕುಸಿದು ಬಿದ್ದಿದ್ದಾರೆ.
ಕೂಡಲೇ ಗ್ರಾಹಕರು ಉಳಿದ ಸಿಬ್ಬಂದಿಯನ್ನು ಕರೆದಿದ್ದಾರೆ. ಈ ವೇಳೆ ಬಂದು ನೋಡಿದಾಗ ಭವರ್ ಕೊನೆಯುಸಿರು ಎಳೆದಿದ್ದರು. ಸದ್ಯ ಹೃದಯಘಾತದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.