ಬೆಂಗಳೂರು: ದಕ್ಷಿಣ ವಲಯದ ಸಿಐಟಿಯು ನೇತೃತ್ವದಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಜ್ಯೋತಿ ಬಸವ ಭವನದಲ್ಲಿ ಪ್ರಬಂಧ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಸಮಾಜದಲ್ಲಿರುವ ಮೂಢನಂಬಿಕೆಗಳು ದೇಶದ ಅಭಿವೃದ್ಧಿಗೆ ಹೇಗೆ ಮಾರಕ? ಎನ್ನುವ ವಿಷಯದ ಮೇಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬಿ.ಎನ್.ಮಂಜುನಾಥ್ ಅವರು ಉದ್ಘಾಟನೆ ಮಾಡಿ, ಈ ಸ್ಪರ್ಧೆಯಲ್ಲಿ ನಗರದ ವಿವಿಧ ಕಾಲೇಜುಗಳಿಂದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿರುವುದು ಒಳ್ಳೆಯ ಬೆಳವಣಿಗೆ. ಮೇ 1ನೇ ರಂದು ವಿಶ್ವ ಕಾರ್ಮಿಕರ ದಿನಾಚರಣೆಯ ಭಾಗವಾಗಿ ಈ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ. ದುಡಿಯುವ ಜನರನ್ನು ಮೂಢನಂಬಿಕೆಗಳು ಹೇಗೆ ಕಾಡುತ್ತವೆ ಅವುಗಳಿಂದ ದೂರ ಉಳಿಯುವುದು ಹೇಗೆ? ಹಾಗೂ ದುಡಿಯುವ ವರ್ಗ ಮೂಡನಂಬಿಕೆಗಳಂತಹ ಸವಾಲುಗಳನ್ನು ಹೇಗೆ ಎದುರಿಸುತ್ತಿದ್ದಾರೆ? ಎನ್ನುವ ಪ್ರಶ್ನೆಗಳನ್ನು ಇಟ್ಟುಕೊಂಡು ಜಾಗೃತಿ ಮಾಡಿಸಬೇಕಿದೆ.
ಇದನ್ನು ಓದಿ :-ಆನ್ಲೈನ್ ಮೂಲಕ ಪೋಡಿ ದುರಸ್ತಿ: ಕೃಷ್ಣ ಬೈರೇಗೌಡ
ಇಂದು ದೇಶದಲ್ಲಿ ಶೇ.35ರಷ್ಟು ಜನ ಮೂಢನಂಬಿಕೆಗೆ ಬಲಿಯಾಗುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ಇನ್ನೂ ಮೂಢನಂಬಿಕೆಗಳು ಹಾವಳಿ ಹೆಚ್ಚಾಗುತ್ತಿದೆ. ಇದರಿಂದ ಅಮಾಯಕ ಜನರು ಬಲಿಯಾಗುವುದನ್ನು ತಡೆಯುವಂತಹ ವಿಚಾರವನ್ನು ಬೆಳೆಸಿಕೊಳ್ಳಬೇಕಾಗಿದೆ. ವೈಜ್ಞಾನಿಕ ದೃಷ್ಟಿಕೋನದಲ್ಲಿ ವಿದ್ಯಾರ್ಥಿಗಳು ಸಾಗಿ ತಂತ್ರಜ್ಞಾನ ಮತ್ತು ಬೌದ್ಧಿಕ ಶಕ್ತಿಯನ್ನು ಹೆಚ್ಚಿಸಿ ಕೊಂಡು ದೇಶದ ಅಭಿವೃದ್ಧಿಗೆ ವಿದ್ಯಾರ್ಥಿ ವರ್ಗ ದುಡಿಯಲು ಮುಂದಾಗಬೇಕು ಎನ್ನುವ ಆಶಯದ ಮಾತುಗಳನ್ನಾಡಿ ವಿದ್ಯಾರ್ಥಿಗಳಿಗೆ ಪ್ರಬಂಧ ಬರೆಯಲು ಉತ್ತರ ಪತ್ರಿಕೆ ನೀಡುವ ಮೂಲಕ ಉದ್ಘಾಟನೆ ಮಾಡಿದರು.
ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಕ್ಯಾಶ್ ಪ್ರೈಸ್ ನೀಡಲಾಗುವುದು ಎಂದು ಸಿಐಟಿಯುನ ನಾಯಕರಾದ ಕೆ.ಎಸ್.ಲಕ್ಷ್ಮಿ ಅವರು ಘೋಷಿಸಿದ್ದರು. ಹಾಗೂ ಸ್ಪರ್ಧೆ ಗೆಲವು ಸೋಲಿಗಲ್ಲ ವಿಚಾರಗಳನ್ನು ಗಟ್ಟಿಗೊಳಿಸಲು ಎಲ್ಲಾ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳಸಿಕೊಳ್ಳಿ ಆ ಮೂಲಕ ದೇಶದ ಅಭಿವೃದ್ಧಿಗೆ ದುಡಿಯಬೇಕು ಎಂದರು.
ಇದನ್ನು ಓದಿ :-ಮೇ 25 ರಿಂದ ತತ್ಕಾಲ್ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆ
ಪ್ರಬಂಧ ಸ್ಪರ್ಧೆಯ ನಿರ್ವಹಣೆಯನ್ನು ದೇವಿಕಾ ಬಿ.ಆರ್, ಶ್ರೀಮತಿ ಅರುಣ, ಸೇರಿದಂತೆ ಎಸ್ಎಫ್ಐನ ರಾಜ್ಯ ಉಪಾಧ್ಯಕ್ಷರಾದ ಡಾ. ದೊಡ್ಡಬಸವರಾಜ್ ಹಾಗೂ ವೆಂಕಟೇಶ್, ಪ್ರಭು ಅವರು ನಿರ್ವಹಿಸಿದರು.