ನಮ್ಮ ಆರ್ಥಿಕತೆಯಲ್ಲಿ ಎಷ್ಟು ಉದ್ಯೋಗಗಳ ಸೃಷ್ಟಿ ಆಗಬೇಕು?

ಅರುಣ್ ಕುಮಾರ್ ಅವರ ದಿ ಹಿಂದೂ ಲೇಖನದ

ಸಂಗ್ರಹಾನುವಾದ : ಜಿ.ಎಸ್.ಮಣಿ

ಜನಸಂಖ್ಯೆಯ ಬೆಳವವಣಿಗೆ ಶೇ 1.5 ರಿಂದ ಶೇ 0.8 ಕ್ಕೆ ಇಳಿದಿದೆ. ಆದ್ದರಿಂದ ಭಾರತ ಪ್ರತಿ ವರ್ಷದಲ್ಲಿ ಎಷ್ಟು ಉದ್ಯೋಗಗಳನ್ನು ಸೃಷ್ಟಿಸಬೇಕು ಎಂಬ  ಪ್ರಶ್ನೆ ಎತ್ತಿ  “2003-4 ರ ಲೆಕ್ಕಾಚಾರದಲ್ಲಿ 10 ರಿಂದ 12 ದಶಲಕ್ಷಗಳ ಬದಲು ಇದು 5 ರಿಂದ 8 ದಶಲಕ್ಷಗಳಿಗೆ ಇಳಿದಿದೆ ಎನ್ನುತ್ತಾರೆ, ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷರಾದ ಬಿಬೇಕ ದೇಬ್ ರಾಯ್. ಇಲ್ಲಿ ಜನನ ಸಂಖ್ಯೆ ಮುಖ್ಯವೇ ಹೊರತು ಜನಸಂಖ್ಯೆ ಬೆಳವಣಿಗೆ ದರ ಅಲ್ಲ. ಜನನ ಸಂಖ್ಯೆಯಲ್ಲಿ ಐದು ವರ್ಷಗಳೊಳಗಿನವರ ಸಾವಿನ ಸಂಖ್ಯೆ ಕಳೆದರೆ ಉದ್ಯೋಗ ಬೇಡಿಕೆ ಪ್ರಮಾಣ ಸಿಗುತ್ತದೆ. ಹೀಗೆ ಲೆಕ್ಕ ಹಾಕಿದಾಗ ಶ್ರಮ ಶಕ್ತಿಯ ಅಥವಾ  ಉದ್ಯೋಗ ಬೇಡಿಕೆ ಹೆಚ್ಚಳ ಒಟ್ಟು ಇದು 27.51 ದಶಲಕ್ಷ ಆಗುತ್ತದೆ.

ಸರ್ಕಾರಿ ಅರ್ಥಶಾಸ್ತ್ರಜ್ಙರು ನಿರುದ್ಯೊಗದ ಬಗೆಗೆ ಬಗೆ ಬಗೆಯ ವಾದಗಳನ್ನು ಮಂಡಿಸುತ್ತಾರೆ.  ಸಾಕಷ್ಟು ಉದ್ಯೋಗಗಳ ಸೃಷ್ಟಿ ಆಗುತ್ತಿರುವುದರಿಂದ ದೇಶದಲ್ಲಿ ನೀರುದ್ಯೋಗವಿಲ್ಲ ಎಂಬುದು ಅಂತಹ ಒಂದು ವಾದ. ಅವರ ವಿವರಣೆ ಏನಂದರೆ  ಜನಸಂಖ್ಯೆಯ ಬೆಳವಣಿಗೆ ಕಡಿಮೆ ಆಗಿರುವುದರಿಂದ ಉದ್ಯೋಗಗಳ ಬೇಡಿಕೆ ಹೆಚ್ಚಿಲ್ಲ ಆದ್ದರಿಂದ ನಿರುದ್ಯೋಗ ಸಮಸ್ಯೆಯಲ್ಲ. ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷರಾದ ಬಿಬೇಕ ದೇಬ್ ರಾಯ್ ಅವರ ಪ್ರಕಾರ (ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಅವರು ಬರೆದ ಲೇಖನದಲ್ಲಿ ಅವರು ಹೇಳುವಂತೆ) ಜನಸಂಖ್ಯೆಯ ಬೆಳವವಣಿಗೆ ಶೇ 1.5 ರಿಂದ ಶೇ 0.8 ಕ್ಕೆ ಇಳಿದಿದೆ. ಆದ್ದರಿಂದ ಭಾರತ ಪ್ರತಿ ವರ್ಷದಲ್ಲಿ ಎಷ್ಟು ಉದ್ಯೋಗಗಳನ್ನು ಸೃಷ್ಟಿಸಬೇಕು ಎಂಬ  ಪ್ರಶ್ನೆ ಎತ್ತಿ  “2003-4 ರ ಲೆಕ್ಕಾಚಾರದಲ್ಲಿ 10 ರಿಂದ 12 ದಶಲಕ್ಷಗಳ ಬದಲು ಇದು 5 ರಿಂದ 8 ದಶಲಕ್ಷಗಳಿಗೆ ಇಳಿದಿದೆ ಎನ್ನುತ್ತಾರೆ.

ಈ ಮಾತು ಸರ್ಕಾರಿ ವಲಯದಲ್ಲಿ ಇರುವ ವಿಚಾರಗಳ ಅಭಿವ್ಯಕ್ತಿ. ಆದ್ದರಿಂದ ಇದರ ವಿಶ್ಲೇಷಣೆ ಅವಶ್ಯ . ಪ್ರಸಕ್ತ ಜನಸಂಖ್ಯೆ ಬೆಳವಣಿಗೆ ದರ ಇಂದಿನ ಶ್ರಮ ಶಕ್ತಿ ಹೆಚ್ಚಳಕ್ಕೆ ಯಾವ ರೀತಿ ಸಂಬಂದಿಸಿದೆ? ಶ್ರಮ ಶಕ್ತಿ ಎಂದರೆ 15-64 ವಯಸ್ಸಿನ ಕೆಲಸ ಬಯಸುವ ಜನರ ಒಟ್ಟು ಸಂಖ್ಯೆ  ಎಂಬುದು ಅಂತರರಾಷ್ಟ್ರೀಯ ಶ್ರಮಿಕರ ಸಂಸ್ಥೆ (ILO) ಯ ಮಾಪನ. ಈ ಮಾಪನದಲ್ಲಿ 2003-4 ರಲ್ಲಿ ಹುಟ್ಟಿದ ಜನ 2017-18 ರ ಹೊತ್ತಿಗೆ  ಕೆಲಸ ಕೇಳುವ ಹಂತಕ್ಕೆ ಬಂದಿರುತ್ತಾರೆ ಎಂದುಕೊಂಡರೆ, ಅದು ನೀರುದ್ಯೋಗದ ಪ್ರಮಾಣದ  ಸೂಚನೆಯಾಗುತ್ತದೆ. ಇವರಲ್ಲಿ ಕೆಲವರು ಹೆಚ್ಚಿನ ಓದಿಗೆ ಹೋಗಬಹುದು, ಬೇರೆ ಬೇರೆ ಪರೀಕ್ಷೆಗಳನ್ನು ಬರೆಯುತ್ತಿರಬಹುದು. ಆದರೂ ಇವರೆಲ್ಲ ಇಂದಲ್ಲ ನಾಳೆ ಉದ್ಯೋಗ ಅರಸತೊಡಗುತ್ತಾರೆ. ಎಲ್ಲರೂ ಉದ್ಯಮಿಗಳಾಗಲು ಸಾಧ್ಯವಿಲ್ಲ.

ಇಲ್ಲಿ ಜನನ ಸಂಖ್ಯೆ ಮುಖ್ಯವೇ ಹೊರತು ಜನಸಂಖ್ಯೆ ಬೆಳವಣಿಗೆ ದರ ಅಲ್ಲ. ಜನನ ಸಂಖ್ಯೆಯಲ್ಲಿ ಐದು ವರ್ಷಗಳೊಳಗಿನವರ ಸಾವಿನ ಸಂಖ್ಯೆ ಕಳೆದರೆ ಉದ್ಯೋಗ ಬೇಡಿಕೆ ಪ್ರಮಾಣ ಸಿಗುತ್ತದೆ.

 ಕೋಷ್ಟಕ 1

  1 2 3 4 5 7 8
ವರ್ಷ ಜನನ ಪ್ರಮಾಣ ಒಟ್ಟು  ಜನಸಂಖ್ಯೆ ಜನನ (ಕಲಂ 1*ಕಲಂ 2) 5 ಕ್ಕಿಂತ ಕೆಳಗಿನ ವಯಸ್ಸಿನ ವರ ಸಾವು ಸಾವಿರಕ್ಕೆ ಒಟ್ಟು  ಸಾವು ಯುವ ಜನಸಂಖ್ಯೆಯ ಹೆಚ್ಚಳ (ಕಲಂ 3-ಕಲಂ 5) ಶ್ರಮ ಶಕ್ತಿಗೆ ಯುವ ಜನತೆಯ ಸೇರ್ಪಡೆ
2022 17.2 1409963668 24199206 32 32000 24167206
2007 23.3 1181273943 27515414 59 59396 27456018 17928780
2005 24.3 1147609927 27847902 65 64671 27783231 2583840
2002 25.7 1091794636 28063489 73 73475 27990015 5598003
2000 26.6 1056575549 28141890 80 80000 28061890 1403095
ಒಟ್ಟು 27513718

ಹೀಗೆ ಲೆಕ್ಕ ಹಾಕಿದಾಗ ಶ್ರಮ ಶಕ್ತಿಯ ಹೆಚ್ಚಳ 2000 ದಲ್ಲಿ 28.06 ದಶಲಕ್ಷ ಆಗಿತ್ತು. 2002, 2005, 2007 ಮತ್ತು 2022 ರಲ್ಲಿ ಈ ಸಂಖ್ಯೆ ಅನುಕ್ರಮವಾಗಿ 27.99, 27.78, 27.45 ಮತ್ತು 24.16 ದಶಲಕ್ಷ ಆಗಿತ್ತು. ಕೋಷ್ಟಕ-1 ನೋಡಿ. ಈ ಅವಧಿಯಲ್ಲಿ ಯುವ ಜನತೆ 24 ದಶಲಕ್ಷ ಗಳಿಂದ 28 ದಶಲಕ್ಷಗಳ ಮಿತಿಯಲ್ಲಿ ಹೆಚ್ಚಳವಾಗಿದೆ ಎಂಬುದು ಗೊತ್ತಾಗುತ್ತದೆ.  ಬೇರೆ ಬೇರೆ ಶೈಕ್ಷಣಿಕ ಹಂತಗಳಿರುವುದರಿಂದ, ಹೈಸ್ಕೂಲ್ ಮುಗಿಸಿದವರು, ಇಂಟರ್ಮೀಡಿಯಟ್, ಪದವಿ ಕ್ಲಾಸುಗಳಲ್ಲಿ ಇರುವವರು ಮತ್ತು ಪದವಿ ಪಡೆದವರು ಎಂಬೆಲ್ಲ ವಿವಿಧ ಹಂತಗಳಲ್ಲಿರುವವರು ಶ್ರಮಿಕರ ಮಾರುಕಟ್ಟೆಗೆ ಬಂದು ಸೇರುತ್ತಾರೆ. ಈ ಸಂಖ್ಯೆಗಳನ್ನು ಶೈಕ್ಷಣಿಕ ದಾಖಲೆಗಳಿಂದ ಸಂಗ್ರಹಿಸಬೇಕು. ಈ ರೀತಿ ನೋಡಿದಾಗ ಸಂಭಾವ್ಯವಾಗಿ 2007 ರಲ್ಲಿ ಹುಟ್ಟಿದ 17.92 ದಶಲಕ್ಷ ಜನ ಶ್ರಮಿಕರ ಮಾರುಕಟ್ಟೆಗೆ 2022 ಸೇರುತ್ತಾರೆ. ಹಾಗೆಯೇ 2005 ರಲ್ಲಿ ಹುಟ್ಟಿದ 2.58, 2002 ರಲ್ಲಿ ಹುಟ್ಟಿದ 5.59 ಮತ್ತು 2000 ದಲ್ಲಿ ಹುಟ್ಟಿದ 1.40 ದಶಲಕ್ಷ ಜನ ಶ್ರಮಶಕ್ತಿಗೆ ಸೇರುತ್ತಾರೆ. ಒಟ್ಟು ಇದು 27.51 ದಶಲಕ್ಷ(ಕೋಷ್ಟಕ 2 ನೋಡಿ) ಆಗುತ್ತದೆ.


ವಿವಿಧ ವರ್ಷಗಳಲ್ಲಿ ಹುಟ್ಟಿದವರು 2022 ರಲ್ಲಿ ಯಾವ ಸಂಭಾವ್ಯ  ಪ್ರಮಾಣದಲ್ಲಿ ಶ್ರಮ ಶಕ್ತಿಗೆ ಸೇರುತ್ತಾರೆ ಎಂಬುದನ್ನು ಚಾರಿತ್ರಿಕವಾಗಿ ಲೆಕ್ಕ ಹಾಕಿದರೆ:

2007 ರಲ್ಲಿ ಹುಟ್ಟಿ ಬದುಕುಳಿದ ಶೇ 65.3 ರಷ್ಟು ಅಂದರೆ 1,79,28,780 ಯುವ ಜನತೆ

2007 ರಲ್ಲಿ ಹುಟ್ಟಿ ಬದುಕುಳಿದ  ಶೇ 9.3 ರಷ್ಟು ಅಂದರೆ 25,83,840 ಯುವ ಜನತೆ

2002 ರಲ್ಲಿ ಹುಟ್ಟಿ ಬದುಕುಳಿದ  ಶೇ 20 ರಷ್ಟು ಅಂದರೆ 55,98,003 ಯುವ ಜನತೆ

2000  ರಲ್ಲಿ ಹುಟ್ಟಿ ಬದುಕುಳಿದ  ಶೇ 5 ರಷ್ಟು ಅಂದರೆ  14,03095 ಯುವ ಜನತೆ

ಒಟ್ಟು 2,75,13,718 ಯುವ ಜನತೆ


ಕೋಷ್ಟಕ 2

ಹೀಗೆ ಸೇರುವವರಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಕಡಿಮೆ ಇರುತ್ತದೆ. 2022 ರ ಸಂಖ್ಯೆ ನೋಡಿದಾಗ 1000 ಮಹಿಳೆಯರು ಈ ಸಂಖ್ಯೆಗೆ ಸೇರುವಾಗ ಪುರುಷರ ಸಂಖ್ಯೆ 1068 ಇರುತ್ತದೆ. ಅಂದರೆ ಶೇ 48.35 ರಷ್ಟು ಮಹಿಳೆಯರ ಸೇರ್ಪಡೆ ಇರುತ್ತದೆ. ಮೇಲಿನ ಒಟ್ಟು ಸಂಖ್ಯೆಯಲ್ಲಿ 13.30 ದಶಲಕ್ಷದಷ್ಟು ಮಹಿಳೆಯರಿರುತ್ತಾರೆ. ಇದರಲ್ಲಿ ಶೇ 25 ರಷ್ಟು ಸಾಮಾಜಿಕ ಕಾರಣಕ್ಕೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದುಕೊಂಡರೆ, 24.19 ದಶಲಕ್ಷ ಯುವ ಜನತೆ 2022 ರಲ್ಲಿ ಶ್ರಮ ಶಕ್ತಿಗೆ ಸೇರುತ್ತಾರೆ ಎಂದು ಹೇಳಬಹುದು.

ಅಸಂಘಟಿತ ವಲಯ:

ಸಂಘಟಿತ ವಲಯ ಬಹುತೇಕ ಯಾಂತ್ರಿಕೃತವಾಗಿದ್ದು, ಹೆಚ್ಚು ಉದ್ಯೋಗಗಳನ್ನು ಹುಟ್ಟುಹಾಕುವುದಿಲ್ಲ. ಆದ್ದರಿಂದ ಶೇ 94 ರಷ್ಟು ಶ್ರಮ ಶಕ್ತಿ ಅಸಂಘಟಿತ ವಲಯದಲ್ಲೇ ಇದೆ. ಇವರು ಕಡಿಮೆ ಸಂಬಳಕ್ಕೆ ದುಡಿಯುವವರು. “ಈ ಶ್ರಮ’ ಪೊರ್ಟಲ್ ನಲ್ಲಿ ನವೆಂಬರ್ 2022 ರಲ್ಲಿ ನೋಂದಾಯಿತ ಶೇ 94 ರಷ್ಟು ಜನ ತಿಂಗಳಿಗೆ 10000 ರೂಪಾಯಿಗಳಿಗಿಂತ ಕಡಿಮೆ ಸಂಬಳ ಪಡೆಯುತ್ತಿದ್ದರು. ಅಸಂಘಟಿತ ವಲಯದ ಬೆಲೆಯಲ್ಲಿ ಬೆಳೆವ ಸಂಘಟಿತ ವಲಯ ಹೆಚ್ಚೆಚ್ಚು ನೀರುದ್ಯೋಗಕ್ಕೆ ಎಡೆ ಮಾಡಿಕೊಡುತ್ತದೆ. ನೀರುದ್ಯೋಗದಲ್ಲೂ ಬೇರೆ ಬೇರೆ ಸ್ತರಗಳಿವೆ. ನಿರುದ್ಯೋಗ, ಅರೆ  ನಿರುದ್ಯೋಗ, ಉದ್ಯೋಗದ ವೇಷದ ನಿರುದ್ಯೋಗ ಮತ್ತು ಉದ್ಯೋಗದ ಹುಡುಕಾಟವನ್ನೇ ಬಿಟ್ಟವರು, ಇತ್ಯಾದಿ.

ಸರಳ ಊಹೆಗಳನ್ನು ಮಾಡಿದರೆ 286 ದಶಲಕ್ಷ ಜನರಿಗೆ ಸರಿಯಾದ ಉದ್ಯೋಗದ ಅವಶ್ಯಕತೆಯಿದೆ. ಇವರೆಲ್ಲ ಅಸಂಘಟಿತ ವಲಯದಲ್ಲಿ ಇರುವವರು. 332 ದಶಲಕ್ಷ ಜನರಿಗೆ, ಇವರೆಲ್ಲ ಅಸಂಘಟಿತ ವಲಯದಲ್ಲಿ ಇದ್ದರೂ, ಸರಿಯಾದ ಉದ್ಯೋಗವಿದೆ. ನೀತಿ ನಿರೂಪಕರು ಬರೀ 5 ಅಥವಾ 8 ದಶಲಕ್ಷ ಉದ್ಯೋಗಗಳ ಮಾತನಾಡಿದರೆ ಅದು ನಿರುದ್ಯೋಗ ಸಮಸ್ಯೆಯ ತುದಿಯನ್ನು ಮಾತ್ರ ಮುಟ್ಟಿ ನೋಡಿದಂತೆ ಆಗುತ್ತದೆ ಅಷ್ಟೇ!!

Donate Janashakthi Media

Leave a Reply

Your email address will not be published. Required fields are marked *